ಪಂತ್, ಪಾಂಡ್ಯ ಔಟ್.. ಬುಮ್ರಾಗೆ ರೆಸ್ಟ್ – KLಗೆ ಒಲಿದ ODI ವೈಸ್ ಕ್ಯಾಪ್ಟನ್ಸಿ
ವಿಂಡೀಸ್ ಬೇಟೆಗೆ ಸಜ್ಜಾಯ್ತು ಭಾರತ

ಪಂತ್, ಪಾಂಡ್ಯ ಔಟ್.. ಬುಮ್ರಾಗೆ ರೆಸ್ಟ್ – KLಗೆ ಒಲಿದ ODI ವೈಸ್ ಕ್ಯಾಪ್ಟನ್ಸಿವಿಂಡೀಸ್ ಬೇಟೆಗೆ ಸಜ್ಜಾಯ್ತು ಭಾರತ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ವೈಟ್ ಬಾಲ್ ಸಿರೀಸ್​ಗೆ ಟೀಂ ಇಂಡಿಯಾ ಅನೌನ್ಸ್ ಆಗಿದೆ. ಏಷ್ಯನ್ ಗೇಮ್ಸ್​ ಕೂಡ ಇರೋದ್ರಿಂದ ಬ್ಯಾಲೆನ್ಸ್ ಮಾಡಿ ಟೀಂ ಫೈನಲ್ ಮಾಡಿದ್ದಾರೆ. ಸೆಪ್ಟೆಂಬರ್ 27ರಿಂದ ತವರಿನಲ್ಲೇ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಟೀಂ ಅನೌನ್ಸ್ ಮಾಡಿದೆ. ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಏಕದಿನ ದಿನ ತಂಡ ಅಖಾಡಕ್ಕಿಳಿದ್ರೆಟಿ-20ಐ ತಂಡವನ್ನು ಶ್ರೇಯಸ್ ಅಯ್ಯರ್ ಲೀಡ್ ಮಾಡಲಿದ್ದಾರೆ. ಈ ಪೈಕಿ ಏಕದಿನ ಸರಣಿಗೆ ಹಲವು ಆಟಗಾರರು ಕಂ ಬ್ಯಾಕ್ ಮಾಡಿದ್ರೆ ಇನ್ನೂ ಕೆಲವ್ರು ಚೊಚ್ಚಲ ಬಾರಿಗೆ ಸೆಲೆಕ್ಟ್ ಆಗಿದ್ದಾರೆ. ಇನ್ನು ಲೆಜೆಂಡರಿ ಪ್ಲೇಯರ್ಸ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ತಂಡದಲ್ಲಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಲಾಂಗ್ ಗ್ಯಾಪ್ ಬಳಿಕ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಏಷ್ಯನ್ ಗೇಮ್ಸ್‌ಗೆ ನಿತೀಶ್ ಔಟ್? – ವೆಸ್ಟ್ ಇಂಡೀಸ್ ಸರಣಿಗೆ ಹೊಸ ಪ್ಲ್ಯಾನ್!

3 ಪಂದ್ಯಗಳ ಏಕದಿನ ಸರಣಿ!

ಸೆಪ್ಟೆಂಬರ್ 27, 1ನೇ ಏಕದಿನ ಪಂದ್ಯ – ತಿರುವನಂತಪುರ

ಸೆಪ್ಟೆಂಬರ್ 30, 2ನೇ ಏಕದಿನ ಪಂದ್ಯ – ಗುವಾಹಟಿ

ಅಕ್ಟೋಬರ್ 3, 3ನೇ ಏಕದಿನ ಪಂದ್ಯ – ಮುಲ್ಲನ್ ಪುರ

 

5 ಪಂದ್ಯಗಳ ಟಿ-20ಐ ಸರಣಿ!

ಅಕ್ಟೋಬರ್ 6, 1ನೇ ಟಿ20 ಪಂದ್ಯ – ಲಕ್ನೋ

ಅಕ್ಟೋಬರ್ 9, 2ನೇ ಟಿ20 ಪಂದ್ಯ – ರಾಂಚಿ

ಅಕ್ಟೋಬರ್ 11, 3ನೇ ಟಿ20 ಪಂದ್ಯ – ಇಂದೋರ್

ಅಕ್ಟೋಬರ್ 14, 4ನೇ ಟಿ20 ಪಂದ್ಯ – ಹೈದರಾಬಾದ್

ಅಕ್ಟೋಬರ್ 17, 5ನೇ ಟಿ20 ಪಂದ್ಯ – ಬೆಂಗಳೂರು

 

ವಿಂಡೀಸ್ ಬೇಟೆಗೆ ಏಕದಿನ ತಂಡ!

ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ಧ್ರುವ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಪ್ರಸಿದ್ಧ ಕೃಷ್ಣ, ಗೂರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಔಕಿಬ್ ನಬಿ, ಯಶಸ್ವಿ ಜೈಸ್ವಾಲ್, ನಮನ್ ಧೀರ್

ಹೀಗೆ ಟೋಟಲ್ 15 ಜನರ ತಂಡವನ್ನ ಸೆಲೆಕ್ಟ್ ಮಾಡಲಾಗಿದೆ. ಪ್ರಸ್ತುತ ಅಫ್ಘಾನ್ ವಿರುದ್ಧ ಟಿ-20ಐ ಸರಣಿ ಆಡ್ತಿರೋರ ಪೈಕಿ ನಿತೀಶ್ ಕುಮಾರ್ ರೆಡ್ಡಿ ಬಿಟ್ರೆ ಉಳಿದವರ್ಯಾರು ಕೂಡ ಏಕದಿನ ತಂಡದಲ್ಲಿ ಕಾಣಿಸಿಕೊಂಡಿಲ್ಲ.

 ವಿಂಡೀಸ್ ಬೇಟೆಗೆ ಟಿ-20ಐ ತಂಡ!

ಶ್ರೇಯಸ್ ಅಯ್ಯರ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಶಿವಂ ದುಬೆ, ಕುಲದೀಪ್ ಯಾದವ್,  ಅಕ್ಷರ್ ಪಟೇಲ್,  ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್

ಹೀಗೆ ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ ಟಿ-20ಐ ಕಣಕ್ಕಿಳಿಯಲಿದೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಟ್ವಿಸ್ಟ್ ಇದೆ. ವಿಂಡೀಸ್ ವಿರುದ್ಧದ ಏಕದಿನ ಸರಣಿ ಹಿನ್ನೆಲೆ ಏಷ್ಯನ್ ಗೇಮ್ಸ್ ಗೆ ಸೆಲೆಕ್ಟ್ ಆಗಿದ್ದ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆರಂಭದಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026 ಕ್ಕಾಗಿ ಭಾರತದ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ನಿರ್ಣಾಯಕ ಏಕದಿನ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ನಿತೀಶ್ ರೆಡ್ಡಿಯನ್ನ ಏಷ್ಯನ್ ಗೇಮ್ಸ್​​ನಿಂದ ತೆಗೆದು ಏಕದಿನ ಸರಣಿಗೆ ಸೇರಿಸಲಾಗಿದೆ.ಇನ್ನು ತಂಡದಲ್ಲಿ ಖಾಯಂ ಆಲ್​ರೌಂಡರ್ ಆಗಿರೋ​ ಹಾರ್ದಿಕ್ ಪಾಂಡ್ಯ ಫಿಟ್​​ನೆಸ್​ ಸಾಧಿಸಲು ಸಾಧ್ಯವಾಗದ ಕಾರಣ ಅವ್ರನ್ನೂ ತಂಡದಿಂದ ಕೈಬಿಡಲಾಗಿದೆ. ಇನ್ನು ಜಸ್ಪ್ರೀತ್ ಬುಮ್ರಾರನ್ನ ಎರಡೂ ಸರಣಿಗಳಿಗೆ ಪಿಕ್ ಮಾಡದೆ ಮತ್ತೆ ರೆಸ್ಟ್ ನೀಡಿರೋದು ಇರೋದು ಚರ್ಚೆಗೆ ಕಾರಣವಾಗಿದೆ.

Shantha Kumari

Leave a Reply

Your email address will not be published. Required fields are marked *