ವಿಂಡೀಸ್ ಚೆಂಡಾಡಿದ ಚೇಟಾ – ಸಂಜು ಸಕ್ಸಸ್ ಸೀಕ್ರೆಟ್ RO-KO
ಭಾರತಕ್ಕೀಗ ಬ್ರಿಟಿಷರೇ ಟಾರ್ಗೆಟ್

ಭಾರತೀಯರ ಪಾಲಿಗೆ ಸೂಪರ್ ಸಂಡೇ. ಸಂಜೆ 7 ರಿಂದ ರಾತ್ರಿ 11 ರವರೆಗೆ ಕೋಟ್ಯಂತರ ಭಾರತೀಯರ ಎದೆಬಡಿತ ಅಕ್ಷರಶಃ ಹೆಚ್ಚಾಗಿತ್ತು. ಬಟ್ ಫೈನಲಿ ಎಲ್ರೂ ನೆಮ್ಮದಿಯಾಗಿ ನಿದ್ದೆಗೆ ಜಾರಿದ್ರು. ವೆಸ್ಟ್ ಇಂಡೀಸ್ ತಂಡವನ್ನ ಸೋಲಿಸಿ ಭಾರತ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಸಂಜು ಸ್ಯಾಮ್ಸನ್ ಅವ್ರ ಸೆನ್ಸಿಬಲ್ ಕ್ರಿಕೆಟ್ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.
ಇದನ್ನೂ ಓದಿ : ಅಂದು ಸಂಜು ಬ್ಯಾಟಿಂಗ್‌ಗೆ ಸೂರ್ಯ ವ್ಯಂಗ್ಯ – ಇಂದು ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ ಸೂರ್ಯ
ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಕಂಪ್ಲೀಟ್ ಆಗಿ ಬ್ಲ್ಯೂಇಶ್ ಆಗಿತ್ತು. ಭಾರತೀಯ ಅಭಿಮಾನಿಗಳ ದಂಡೇ ಸೇರಿತ್ತು. ಮಾಡು ಇಲ್ಲವೇ ಮಡಿ ಸ್ಟೇಜ್ನಲ್ಲಿದ್ದ ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ ನಡುವೆ ರಣರೋಚಕ ಫೈಟ್ ನಡೆದು ಅಂತಿಮವಾಗಿ ಭಾರತ ವಿನ್ ಆಯ್ತು. ಈ ಮೂಲಕ ಚಾಂಪಿಯನ್ ಟೀಂ ಮತ್ತೊಮ್ಮೆ ಚಾಂಪಿಯನ್ ಪ್ರದರ್ಶನ ನೀಡಿತು. ಅದ್ರಲ್ಲೂ ಚೇಟ್ಟಾ ಅಂಥಾನೇ ಕರೆಸಿಕೊಳ್ಳೋ ಸಂಜು ಸ್ಯಾಮ್ಸನ್ ಆಟ ಅಂತೂ ಬೊಂಬಾಟ್.
ಅಂದುಕೊಂಡಂತೆಯೇ ಆರಂಭ.. ಗೆಲುವಿನಲ್ಲಿ ಅಂತ್ಯ!
ಡು ಆರ್ ಡೈ ಫೈಟ್ನಲ್ಲಿ ಟಾಸ್ ಗೆದ್ದಂತ ಭಾರತ ಫಸ್ಟ್ ಫೀಲ್ಡಿಂಗ್ ಚೂಸ್ ಮಾಡಿಕೊಳ್ಳುತ್ತೆ. ಬೌಲಿಂಗ್ ಕೂಡ ಆರಂಭದಲ್ಲಿ ಚೆನ್ನಾಗೇ ಇತ್ತು. ಮೊದಲ 10 ಓವರ್ಗಳಲ್ಲಿ 82 ರನ್ಸ್ ಅಷ್ಟೇ ಕೊಟ್ಟಿದ್ರು. ಬಟ್ ಕೊನೆಯ ಓವರ್ಗಳಲ್ಲಿ ಅಬ್ಬರಿಸಿದ ವೆಸ್ಟ್ ಇಂಡೀಸ್ ಉಳಿದ 10 ಓವರ್ಗಳಲ್ಲಿ 113 ರನ್ ಕಲೆ ಹಾಕಿತು. ಈ ಮೂಲಕ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿದ್ರು. 196 ರನ್ಗಳ ಟಾರ್ಗೆಟ್ ನೋಡ್ದಾಗ ಟೀಂ ಇಂಡಿಯಾ ಗೆಲ್ಲುತ್ತೆ ಅನ್ಸಿದ್ರೆ ಟೆನ್ಷನ್ ಅಂತೂ ಇದ್ದೇ ಇತ್ತು. ಯಾಕಂದ್ರೆ ಟಿ-20 ವಿಶ್ವಕಪ್ ಅಂತಾ ಬಂದಾಗ ಭಾರತದ ಹೈಯೆಸ್ಟ್ ಚೇಸ್ ಇದ್ದದ್ದೇ 173 ರನ್ಸ್.. ಸೋ ಈ ಸ್ಕೋರ್ ಬೀಟ್ ಮಾಡ್ಬೇಕು ಅಂತಿದ್ರೆ ದಾಖಲೆಯೇ ಬರೀಬೇಕಿತ್ತು. ಕೊನೆಗೆ ಆ ದಾಖಲೆಯೂ ಕ್ರಿಯೇಟ್ ಆಯ್ತು. ಚೇಸಿಂಗ್ಗೆ ಇಳಿದ ಭಾರತ ಇನ್ನೂ 4 ಎಸೆತಗಳು ಬಾಕಿ ಇದ್ದಂತೆಯೇ 5 ವಿಕೆಟ್ ನಷ್ಟಕ್ಕೆ 199 ರನ್ ಸ್ಕೋರ್ ಮಾಡಿತು. ಌಂಡ್ ಈ ಪಂದ್ಯದಲ್ಲಿ ಭಾರತ ಗೆಲ್ಲೋಕೆ ಮುಖ್ಯ ಕಾರವಣೇ ಸಂಜುಸ್ಯಾಮ್ಸನ್ ಅವ್ರ ಸ್ಪೆಷಲ್ ಬ್ಯಾಟಿಂಗ್.
ಕ್ರೂಶಿಯಲ್ ಟೈಮಲ್ಲಿ ಸೆನ್ಸಿಬಲ್ ಕ್ರಿಕೆಟ್ ಆಡಿದ ಸಂಜು!
ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಅಭಿಷೇಕ್ ಶರ್ಮಾ ಕೈಕೊಟ್ರು. 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಇತ್ತ ಪಾಕೆಟ್ ಡೈನಮೋ ಇಶಾನ್ ಕಿಶನ್ ಕೂಡ 10 ರನ್ಗೆ ಔಟಾದ್ರು. ಇಂಥಾ ಟೈಮಲ್ಲಿ ಭಾರತಕ್ಕೆ ಸಣ್ಣದಾಗಿ ಆತಂಕ ಸ್ಟಾರ್ಟ್ ಆಗಿತ್ತು. ಆದ್ರೆ ಕ್ರೀಸ್ ಕಚ್ಚಿ ನಿಂತಿದ್ದ ಸಂಜು ಸ್ಯಾಮ್ಸನ್ ತಮ್ಮ ಅನುಭವವನ್ನೆಲ್ಲಾ ಧಾರೆ ಎರೆದ್ರು. ಒಂದ್ಕಡೆ ವಿಕೆಟ್ಸ್ ಬೀಳ್ತಿದ್ರೂ ಗಟ್ಟಿಯಾಗಿ ನಿಂತು ಸಂಜು ಕೊನೇ ಓವರ್ವರೆಗೂ ಬಿಟ್ಟುಕೊಡ್ಲೇ ಇಲ್ಲ. ಓಪನರ್ ಆಗಿ ಬಂದು ಫಿನಿಶರ್ ನಿಂತು ಗೇಮ್ ಫಿನಿಶ್ ಮಾಡಿದ್ರು. 50 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸೇರಿ 97 ರನ್ ಸಿಡಿಸಿ ಅಜೇಯರಾದ್ರು. ಭಾರತದ ಇನ್ನಿಂಗ್ಸ್ನಲ್ಲಿ ಅರ್ಧದಷ್ಟು ರನ್ಸ್ ಸಂಜು ಬ್ಯಾಟಿಂದಲೇ ಬಂದಿದ್ದು ಅವ್ರ ಸೆನ್ಸಿಬಲ್ ಕ್ರಿಕೆಟ್ಗೆ ಸಾಕ್ಷಿಯಾಗಿತ್ತು. ಚೆಟ್ಟಾನ ಆಟ ನೋಡಿ ಎಲ್ರೂ ರೋಹಿತ್ ಶರ್ಮಾ ಥರ ಸ್ಟಾರ್ಟ್ ವಿರಾಟ್ ಕೊಹ್ಲಿ ಥರ ಚೇಸ್ ಮಾಹಿ ಥರ ಫಿನಿಶಿನ್ ಅಂತಾ ಅಪ್ರಿಶಿಯೇಟ್ ಮಾಡ್ತಿದ್ದಾರೆ. ಇನ್ನು ಈ 97 ರನ್ಗಳೊಂದಿಗೆ ಟಿ20 ವಿಶ್ವಕಪ್ನಲ್ಲಿ ಚೇಸಿಂಗ್ ವೇಳೆ ಗರಿಷ್ಠ ಸ್ಕೋರ್ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಸಂಜು ಪ್ರದರ್ಶನಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ತಲೆಬಾಗಿ ಅಪ್ರಿಶಿಯೇಟ್ ಮಾಡಿದ್ದು ವಿಶೇಷವಾಗಿತ್ತು. ಚೆಟ್ಟಾ ಅಂದ್ರೆ ಮಲೆಯಾಳಂನಲ್ಲಿ ಬಿಗ್ ಬ್ರದರ್ ಅಂತಾ ಅರ್ಥ.
ವಿರಾಟ್-ರೋಹಿತ್ ಆಡೋದನ್ನ ನೋಡಿ ಕಲಿತಿದ್ದೇನೆ ಎಂದ ಸಂಜು!
ಇನ್ನು ಸಂಜು ಅವ್ರ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ್ರು. ಬಳಿಕ ಮಾತ್ನಾಡಿದ ಸಂಜು ತನ್ನ ಈ ಸ್ಪೆಷಲ್ ಬ್ಯಾಟಿಂಗ್‌ಗೆ ಕಾರಣ ಏನು ಅನ್ನೋದನ್ನೂ ರಿವೀಲ್ ಮಾಡಿದ್ರು. ನಾನು ಕ್ರಿಕೆಟ್ ಕರಿಯರ್ ಸ್ಟಾರ್ಟ್ ಮಾಡಿದಾಗ್ಲೇ ದೇಶಕ್ಕಾಗಿ ಆಡ್ಬೇಕು ಅನ್ನೋ ಕನಸು ಕಾಣ್ತಿದ್ದೆ. ಈಥರದ ಇನ್ನಿಂಗ್ಸ್ ಕನಸು ನನಸಾಗಿದೆ. ಹಾಗೇ ನನ್ನ ಕರಿಯರ್ನಲ್ಲಿ ಸಾಕಷ್ಟು ಅಪ್ಸ್ ಌಂಡ್ ಡೌನ್ಸ್ ನೋಡಿದ್ದೇನೆ. 10 ರಿಂದ 12 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ. ದೇಶಕ್ಕಾಗಿಯೂ ಆಡ್ತಿದ್ದಾನೆ. ಕೆಲವೊಮ್ಮೆ ತಂಡದಲ್ಲಿದ್ದರೂ ಆಡುವ ಅವಕಾಶ ಸಿಗದಿದ್ದಾಗ ಬೆಂಚ್ ಮೇಲೆ ಕುಳಿತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಪಂದ್ಯವನ್ನು ಹೇಗೆ ಫಿನಿಶ್ ಮಾಡ್ತಾರೆ ಅನ್ನೋದನ್ನ ನೋಡಿದ್ದೇನೆ. ನಾನು 50ರಿಂದ 60 ಮ್ಯಾಚ್ ಆಡಿದ್ರೂ 100 ಪಂದ್ಯಗಳನ್ನ ಡಗೌಟ್ನಲ್ಲಿ ಕುಳಿತು ನೋಡಿದ್ದೇನೆ. ಸಮಯಕ್ಕೆ ತಕ್ಕಂತೆ ಹೇಗೆ ಬ್ಯಾಟಿಂಗ್ ಮಾಡ್ಬೇಕು ಅನ್ನೋದನ್ನ ರೋಹಿತ್ ಕೊಹ್ಲಿಯಿಂದ ನೋಡಿ ಕಲಿತಿದ್ದೇನೆ ಅನ್ನೋ ಮೂಲಕ ತಮ್ಮ ಸಕ್ಸಸ್ಫುಲ್ ಇನ್ನಿಂಗ್ಸ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಌಕ್ಚುಲಿ ಕಳೆದ ನಾಲ್ಕೈದು ತಿಂಗಳಿಂದ ಸಂಜು ಕಡೆಯಿಂದ ಬಿಗ್ ಇನ್ನಿಂಗ್ಸ್ ಬಂದಿರ್ಲಿಲ್ಲ. ಸಾಕಷ್ಟು ಟ್ರೋಲ್ ಆಗಿದ್ರು. ಌಂಡ್ ಪ್ಲೇಯಿಂಗ್ 11ನಿಂದಲೂ ಹೊರಗಿದ್ರು. ಬಟ್ ಅಷ್ಟೂ ಪಂದ್ಯಗಳ ಎನರ್ಜಿಯನ್ನ ಇಲ್ಲಿ ಹಾಕಿ ಮ್ಯಾಚ್ ಗೆಲ್ಲಿಸಿದ್ದಾರೆ. 2024ರ ಟಿ-20 ವಿಶ್ವಕಪ್ನಲ್ಲೂ ವಿರಾಟ್ ಕೊಹ್ಲಿ ಆರಂಭದಲ್ಲಿ ಆಡಿರಲಿಲ್ಲ. ಆಗ ರೋಹಿತ್ ಒಂದು ಮಾತನ್ನ ಹೇಳಿದ್ರು. ಕೊಹ್ಲಿ ಫೈನಲ್ ಪಂದ್ಯಕ್ಕಾಗಿ ತಮ್ಮ ಎನರ್ಜಿ ಸೇವ್ ಮಾಡಿಕೊಂಡಿರಬಹುದು ಅಂತಾ. ಅದು ಹಾಗೇ ಆಗಿತ್ತು. ಕೊಹ್ಲಿ ಫೈನಲ್ ಮ್ಯಾಚಲ್ಲಿ ಏಕಾಂಗಿಯಾಗಿ ನಿಂತು ಭಾರತದ ಗೆಲುವಿಗೆ ಕಾರಣರಾಗಿದ್ರು. ಸಂಜು ಕೂಡ ಅದೇ ಥರ ಕೆರೆಬಿಯನ್ ಕಲಿಗಳನ್ನ ಚೆಂಡಾಡಿ ಭಾರತವನ್ನ ಗೆಲ್ಲಿಸಿದ್ದಾರೆ.
2016ರ ಸೋಲಿಗೆ 2026ರಲ್ಲಿ ಭಾರತ ತಿರುಗೇಟು!
ಇನ್ನು ವಿಂಡೀಸ್ ವಿರುದ್ಧದ ಈ ಗೆಲುವು ಭಾರತಕ್ಕೆ ನಿಜಕ್ಕೂ ತುಂಬಾನೇ ಸ್ಪೆಷಲ್. ಯಾಕಂದ್ರೆ 10 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದೆ. 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಸೆಮಿಫೈನಲ್ನಲ್ಲಿ ಮಣಿಸುವ ಮೂಲಕ ಕೆರಿಬಿಯನ್ ಫೈನಲ್ ತಲುಪಿತ್ತು. ಈಗ ಭಾರತ ವೆಸ್ಟ್ ಇಂಡೀಸ್ ಮಣಿಸಿ ಸೆಮಿಸ್ಗೆ ಎಂಟ್ರಿ ಕೊಟ್ಟಿದೆ. ಹಾಗೇ ಮಾರ್ಚ್ 5 ರಂದು ಅಂದ್ರೆ ಇದೇ ಗುರುವಾರ ನಡೆಯಲಿರುವ 2ನೇ ಸೆಮಿಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಈ ಮ್ಯಾಚ್ ಗೆದ್ರೆ ಸೀದಾ ಫೈನಲ್ಗೆ ಲಗ್ಗೆ ಇಡುತ್ತೆ. ಮಾರ್ಚ್ 8ರಂದು 10ನೇ ಆವೃತ್ತಿಯ ಚಾಂಪಿಯನ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತೆ.

ನೋಡಿರಿ

