ಮೂವರ ಸೆಂಚುರಿ.. 400+ ಟಾರ್ಗೆಟ್ – ಭಾರತದ ವಿರುದ್ಧ ಬ್ಯಾಟಿಂಗ್ ನಲ್ಲಿ ಧೂಳೆಬ್ಬಿಸಿದ ವಿಂಡೀಸ್!

ಮೂವರ ಸೆಂಚುರಿ.. 400+ ಟಾರ್ಗೆಟ್ – ಭಾರತದ ವಿರುದ್ಧ ಬ್ಯಾಟಿಂಗ್ ನಲ್ಲಿ ಧೂಳೆಬ್ಬಿಸಿದ ವಿಂಡೀಸ್!

ವೆಸ್ಟ್ ಇಂಡೀಸ್ ವಿರುದ್ಧದ ಫಸ್ಟ್ ಓಡಿಐ ಮ್ಯಾಚಲ್ಲಿ ಭಾರತದ ಬೌಲಿಂಗ್ ತುಂಬಾ ಚೆನ್ನಾಗಿತ್ತು. ಕುಲ್ದೀಪ್ ಯಾದವ್ ಮಿಡಲ್ ಓವರ್ಸ್ ಸ್ಪೆಲ್​ನಲ್ಲಿ ಮ್ಯಾಜಿಕ್ ಮಾಡಿದ್ರು. ಬಟ್ ಗುವಾಹಟಿಯಲ್ಲಿನ ಎರಡನೇ ಮ್ಯಾಚಲ್ಲಿ ಭಾರತದ ಬೌಲಿಂಗ್​ ವೀಕ್​ನೆಸ್ ಎಕ್ಸ್​ಪೋಸ್ ಆಗಿದೆ. ಬುಮ್ರಾ ಆಬ್ಸೆನ್ಸ್, ಅನುಭವಿಗಳಿಲ್ಲದ ಪ್ರೆಶರ್ ಎದ್ದು ಕಾಣ್ತಿತ್ತು.

ಇದನ್ನೂ ಓದಿ  : IND Vs SL ಪಂದ್ಯಕ್ಕೂ ಮಳೆ ಕಾಟ? – ಸೆಮೀಸ್ ರದ್ದಾದ್ರೆ ಫೈನಲ್ ಗೆ ಭಾರತ

ಗುವಾಹಟಿಯಲ್ಲಿ ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ನಾವು ಫಸ್ಟ್ ಬೌಲಿಂಗ್ ಮಾಡ್ತೀವಿ ಅಂತಾ ಫೀಲ್ಡಿಂಗ್ ಚೂಸ್ ಮಾಡಿಕೊಳ್ತಾರೆ. ಌಂಡ್ ಪ್ಲೇಯಿಂಗ್ 11ನಲ್ಲಿ ಭಾರತದ ಪರ ಒಂದು ಬದಲಾವಣೆ ಮಾಡಲಾಗಿತ್ತು. ಫಸ್ಟ್ ಮ್ಯಾಚಲ್ಲಿ ಬೌಲಿಂಗ್​ನಲ್ಲಿ ಎಕ್ಸ್​ಪೆನ್ಸಿವ್ ಆಗಿದ್ದ ನಿತೀಶ್ ರೆಡ್ಡಿಯನ್ನ ಹೊರಗಿಟ್ಟು ಜಮ್ಮು ವೇಗಿ ಆಕಿಬ್ ನಬಿಗೆ ಪ್ಲೇಯಿಂಗ್ 11ನಲ್ಲಿ ಡೆಬ್ಯೂಗೆ ಅವಕಾಶ ನೀಡಿದ್ರು. ಉಳಿದಂತೆ ಯಾವುದೇ ಬದಲಾವಣೆ ಇರ್ಲಿಲ್ಲ. ಮತ್ತೊಂದೆಡೆ ವೆಸ್ಟ್ ಇಂಡೀಸ್ ತಂಡದಲ್ಲಿ ಕಳೆದ ಪಂದ್ಯಕ್ಕೆ ಕಂಪೇರ್ ಮಾಡಿದ್ರೆ 4 ಚೇಂಜಸ್ ಮಾಡಿದ್ರು. ಈ ಬದಲಾವಣೆ ಚೆನ್ನಾಗಿ ವರ್ಕ್ ಔಟ್ ಕೂಡ ಆಯ್ತು.

ಬೌಲಿಂಗ್ ನಲ್ಲಿ ಬೆಂಡಾದ ಭಾರತ!

ಪಂದ್ಯದ ಆರಂಭದಿಂದಲೂ ಭಾರತದ ಬೌಲಿಂಗ್ ಕಡೆಯಿಂದ ರನ್ಸ್ ಲೀಕ್

ಡೆಬ್ಯೂ ಮ್ಯಾಚಲ್ಲೇ ನಬಿ ದುಬಾರಿ, 4ನೇ ಓವರ್ ಒಂದರಲ್ಲೇ 17 ರನ್ಸ್

ಪವರ್ ಪ್ಲೇನಲ್ಲೇ 96/1 ರನ್ಸ್ ಕಲೆ ಹಾಕಿದ ವಿಂಡೀಸ್ ಬ್ಯಾಟರ್ಸ್

ವಿಂಡೀಸ್ ಓಪನರ್ ಜಾನ್ ಕ್ಯಾಂಬೆಲ್ 65 ಎಸೆತಗಳಲ್ಲಿ ಸೆಂಚುರಿ

ಕ್ಯಾಂಬೆಲ್ & ಹೋಪ್ ಸೆಂಚುರಿ ಜೊತೆಯಾಟ ಮುರಿದ ಗುರ್ನೂರ್ ಬ್ರಾರ್

ಶಾಯ್ ಹೋಪ್ ಮತ್ತು ಅಮೀರ್ ಜಂಗೂ ನಡುವೆ 150+ ರನ್ಸ್ ಜೊತೆಯಾಟ

ವಿಂಡೀಸ್ ಪರ ಕ್ಯಾಂಬೆಲ್, ಶಾಯ್ ಹೋಪ್, ಜಂಗೂ ಮೂವರ ಸೆಂಚುರಿ

41ನೇ ಓವರ್ ನಲ್ಲೇ ತಂಡದ ಸ್ಕೋರ್ 330 ರನ್ಸ್ ಇದ್ದಾಗ ಮೂವರ ಸೆಂಚುರಿ

ವಿಂಡೀಸ್ ಬ್ಯಾಟರ್ಸ್ ಸಿಕ್ಸ್, ಫೋರ್ ಹೊಡೀತಿದ್ರೆ ಬೌಲರ್ಸ್ ಹತಾಶೆ

ಆಕಿಬ್ ನಮಿ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಎಕಾನಮಿ ದುಬಾರಿ

ಭಾರತದ ಫೀಲ್ಡಿಂಗ್ ಕೂಡ ಕಳಪೆ.. ಪ್ರಮುಖ ಕ್ಯಾಚ್ ಗಳನ್ನ ಬಿಟ್ಟ ಫೀಲ್ಡರ್ಸ್

ಹೀಗೆ ಭಾರತ ಫಸ್ಟ್ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ತುಂಬಾನೇ ದುಬಾರಿಯಾಯ್ತು. ಬಟ್ ಇಲ್ಲಿ ಕಾಡುವಂಥ ಪ್ರಶ್ನೆ ಅಂದ್ರೆ ಮೊಹಮ್ಮದ್ ಸಿರಾಜ್​ರಂಥ ಅನುಭವಿ ಬೌಲರ್ಸ್ ಇದ್ರೂ ಬೆಂಚ್ ಕಾಯಿಸಿ ಬೌಲಿಂಗ್ ಯುನಿಟ್ ಸೆಟ್ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ರನ್ನೂ ಕಾಡ್ತಿದೆ.

Shantha Kumari

Leave a Reply

Your email address will not be published. Required fields are marked *