INDಗೆ 2 ವಿಕೆಟ್.. SLಗೆ 39 ರನ್ಸ್ – Follow-On ಟಾಸ್ಕ್ ಗೆಲ್ಲೋದ್ಯಾರು?
ಬೌಲರ್ಸ್ ಕೈಯಲ್ಲಿ ಭಾರತದ ಗೆಲುವು!

INDಗೆ 2 ವಿಕೆಟ್.. SLಗೆ 39 ರನ್ಸ್ – Follow-On ಟಾಸ್ಕ್ ಗೆಲ್ಲೋದ್ಯಾರು?ಬೌಲರ್ಸ್ ಕೈಯಲ್ಲಿ ಭಾರತದ ಗೆಲುವು!

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವೇ ಕಂಪ್ಲೀಟ್ ಮೇಲುಗೈ ಸಾಧಿಸಿದೆ. ಮೊದಲ ಹಾಗೂ ಎರಡನೇ ದಿನ ಬ್ಯಾಟಿಂಗ್​ನಲ್ಲಿ ಬೆವರಿಳಿಸಿದ್ದ ಭಾರತದ ಆಟಗಾರರು ಮೂರನೇ ದಿನದಾಟದಲ್ಲಿ ಬೌಲಿಂಗ್​ನಲ್ಲಿ ಬೆಂಡೆತ್ತಿದ್ದಾರೆ. ಟೀಂ ಇಂಡಿಯಾದ ಸುನಾಮಿಗೆ ಧೂಳೀಪಟವಾಗಿರೋ ಲಂಕಾ ಈಗ ಚೇತರಿಸಿಕೊಳ್ಳೋದು ತುಂಬಾನೇ ಕಷ್ಟ.

ಇದನ್ನೂ ಓದಿ : 3 ಇನ್ನಿಂಗ್ಸ್.. 328 ರನ್ಸ್ – DDP ಫೈರ್ ಗೆ ಸಾಯಿ ಸುದರ್ಶನ್ ಸುಸ್ತು

ಆಗಸ್ಟ್ 23ರಿಂದ ಶುರುವಾಗಿರೋ ಎರಡನೇ ಟೆಸ್ಟ್ ಮ್ಯಾಚಲ್ಲಿ ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 9 ವಿಕೆಟ್ ನಷ್ಟಕ್ಕೆ 503 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಎರಡನೇ ದಿನದಾಟದ ಕೊನೆಗೆ ಫಸ್ಟ್ ಇನ್ನಿಂಗ್ಸ್ ಸ್ಟಾರ್ಟ್ ಮಾಡಿದ್ದ ಲಂಕಾ ಆರಂಭದಲ್ಲೇ ಆಘಾತ ಕಂಡಿತ್ತು. 8 ರನ್​ಗಳಿಗೆ 2 ವಿಕೆಟ್ ಕಳ್ಕೊಂಡಿದ್ರು. ಹೀಗೆ ಕಂಪ್ಲೀಟ್ ಫೇಲ್ಯೂರ್​ನೊಂದಿಗೆ ಮೂರನೇ ದಿನದಾಟ ಶುರು ಮಾಡಿದ್ದ ಲಂಕನ್ನರು ಇಡೀ ದಿನ ಬ್ಯಾಟಿಂಗ್ ಫೈಟ್ ಏನೋ ಕೊಟ್ರು. ಆದ್ರೂ ಫಾಲೋ ಆನ್ ಭೀತಿ ಮಾತ್ರ ತಪ್ಪಿಲ್ಲ.

ಲಂಕಾ ಬೆನ್ನು ಮುರಿದ ಭಾರತ!

ಟಾಪ್ 3 ವಿಕೆಟ್ಸ್ ಬೇಗ ಕಳ್ಕೊಂಡಿದ್ದ ಲಂಕಾಗೆ ಸೂರಿಯಬಂಡಾರ ಆಸರೆ

ಸೂರಿಯಬಂಡಾರ ಮತ್ತು ಕಾಮಿಂದು ಮೆಂಡಿಸ್ 87 ರನ್‌ ಗಳ ಜೊತೆಯಾಟ

ಸೂರಿಯಬಂಡಾರ 80 ರನ್ಸ್ ಕಲೆ ಹಾಕಿದ್ರೆ ಮೆಂಡಿಸ್ 32 ರನ್ಸ್ ದಾಖಲು

ಲಂಕಾ ಪರ ಸೋನಲ್ ಡಿನುಷ ಕಡೆಯಿಂದಲೂ ಜವಾಬ್ದಾರಿಯುತ ಬ್ಯಾಟಿಂಗ್

ಉಳಿದ ಯಾವುದೇ ಬ್ಯಾಟರ್ಸ್ ಕಡೆಯಿಂದಲೂ ಸಪೋರ್ಟ್ ಸಿಗಲಿಲ್ಲ

ಭಾರತದ ಪರ ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್ ಬೌಲಿಂಗ್ ಸೂಪರ್

3ನೇ ಸೆಷನ್ ಮುಗಿಯೋ ವೇಳೆಗೆ ಮತ್ತೆ ಮಳೆ ಕಾಟ.. ಪಂದ್ಯ ಸ್ಥಗಿತ

ಸದ್ಯಕ್ಕೆ ಇಡೀ ದಿನ ಶ್ರೀಲಂಕಾ ಆಟಗಾರರು ಭಾರತದ ವಿರುದ್ಧ ಬ್ಯಾಟಿಂಗ್​ನಲ್ಲಿ ಫೈಟ್​ಬ್ಯಾಕ್ ಕೊಟ್ಟಿದೆ. ಆದ್ರೆ   ಫಾಲೋ ಆನ್ ಭೀತಿ ಮಾತ್ರ ತಪ್ಪಿಲ್ಲ. ಪ್ರಸ್ತುತ ಮುರನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡ 8 ವಿಕೆಟ್​ಗಳ ನಷ್ಟಕ್ಕೆ 265 ರನ್ಸ್ ಕಲೆ ಹಾಕಿದೆ. ಹಾಗೇ ಮೊದಲ ಇನ್ನಿಂಗ್ಸ್​ನಲ್ಲಿ 238 ರನ್​ ಗಳ ಹಿನ್ನಡೆಯಲ್ಲಿದೆ. ಹೀಗಾಗಿ ನಾಲ್ಕನೇ ದಿನ ಶ್ರೀಲಂಕಾ ತಂಡಕ್ಕೆ ಅಸಲಿ ಸವಾಲು ಶುರುವಾಗುತ್ತೆ. ಇಲ್ಲಿ ಟಾರ್ಗೆಟ್ ರೀಚ್ ಆಗೋದಕ್ಕಿಂತ ಜಾಸ್ತಿ ಫಾಲೋ ಆನ್ ತಪ್ಪಿಸಿಕೊಳ್ಳೋದೇ ಲಂಕಾ ಮುಂದಿರೋ ಅತಿದೊಡ್ಡ ಟಾಸ್ಕ್. 238 ರನ್​ಗಳ ಹಿನ್ನಡೆಯಲ್ಲಿರೋ ಲಂಕಾ ನಾಲ್ಕನೇ ದಿನದಾಟದಲ್ಲಿ 200 ರನ್ಸ್ ಬಾಕಿ ಇದ್ದಂತೆಯೇ ಆಲ್​ಔಟ್ ಆದ್ರೆ ಆಗ ಭಾರತ ಫಾಲೋ ಆನ್ ಹೇರಬಹುದು. ಯಾಕಂದ್ರೆ ಇರೋದೇ ಇನ್ನ 2 ವಿಕೆಟ್. ಹಾಗೇನಾದ್ರೂ ಭಾರತ ಫಾಲೋ ಆನ್​ ಹೇರಿದ್ರೆ ಭಾರತವೇ ವಿನ್ ಆಗೋದು ಕನ್ಫರ್ಮ್ ಆಗಲಿದೆ.

ಫಾಲೋ ಆನ್ ಎಂದರೇನು?

ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ತಂಡ 200+ ರನ್ಸ್ ನಿಂದ ಲೀಡ್

ಸದ್ಯ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಲೀಡ್

238 ರನ್ಸ್ ಲೀಡ್.. 38 ರನ್ಸ್ ಒಳಗೆ ಆಲೌಟ್ ಮಾಡಬೇಕು ಭಾರತ

ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಬೆನ್ನಲ್ಲೇ ಶ್ರೀಲಂಕಾ ತಂಡ ಮತ್ತೆ ಬ್ಯಾಟಿಂಗ್

ಎಷ್ಟು ರನ್ಸ್ ಹಿಂದಿದ್ದಾರೋ ಅಷ್ಟು ರನ್ಸ್ ಮುಗಿಸಿ ಹೆಚ್ಚುವರಿಯಾಗಿ ರನ್ಸ್ ಕಲೆ

ಫಸ್ಟ್ ಇನ್ನಿಂಗ್ಸ್ ಲೀಡ್ ದಾಟೋ ಮೊದಲೇ ಭಾರತ ಆಲೌಟ್ ಮಾಡಬಹುದು

ಹೆಚ್ಚುವರಿಯಾಗಿ ಲಂಕಾ ಪಡೆ ಕಲೆ ಹಾಕಿದ ರನ್ಸ್ ಎರಡನೇ ಇನ್ನಿಂಗ್ಸ್ ನಲ್ಲಿ ಚೇಸ್

ಫಾಲೋ ಆನ್ ಹೇರಿದಾಗ ಯಾವುದೇ ತಂಡಕ್ಕೂ ಗೆಲುವಿನ ಚಾನ್ಸಸ್ ಜಾಸ್ತಿ

Shantha Kumari

Leave a Reply

Your email address will not be published. Required fields are marked *