ಚೇಸಿಂಗ್ ಶುರು ಮಾಡಿದ ಲಂಕೆಗೆ ಭಾರತದ ಬೌಲರ್ಸ್ ಲಗಾಮು – ಟೀಂ ಇಂಡಿಯಾ ಗೆಲುವು ಫಿಕ್ಸ್ ಆಯ್ತಾ?

ಚೇಸಿಂಗ್ ಶುರು ಮಾಡಿದ ಲಂಕೆಗೆ ಭಾರತದ ಬೌಲರ್ಸ್ ಲಗಾಮು – ಟೀಂ ಇಂಡಿಯಾ ಗೆಲುವು ಫಿಕ್ಸ್ ಆಯ್ತಾ?

ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್​ ಮ್ಯಾಚಲ್ಲಿ ಫಸ್ಟ್ ಇನ್ನಿಂಗ್ಸ್ ಕಂಪ್ಲೀಟ್ ಡಾಮಿನೇಷನ್ ಮಾಡಿದ್ದ ಭಾರತ ಎರಡನೇ ಇನ್ನಿಂಗ್ಸ್​ನಲ್ಲೂ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್​​ನಲ್ಲಿ ಭಾರತದ ಪರ ಒಬ್ರ ಹಿಂದೆ ಒಬ್ರು ಪೆವಿಲಿಯನ್ ಪರೇಡ್ ನಡೆಸಿದ್ರು. ಬಟ್ ಬೌಲಿಂಗ್​ನಲ್ಲಿ ಪಂದ್ಯವನ್ನ ಕಂಟ್ರೋಲ್ ಮಾಡಿದ್ದಾರೆ. ಈಗ ಕೊನೇ ದಿನದಾಟದಲ್ಲಿ ಹೇಗೆ ಫಿನಿಶ್ ಮಾಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

ಇದನ್ನೂ ಓದಿ : ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮುಗ್ಗರಿಸಿದ ಭಾರತ – 193ಕ್ಕೆ ಆಲ್‌ಔಟ್‌, ಲಂಕಾಕ್ಕೆ 372 ರನ್‌ ಟಾರ್ಗೆಟ್

ಭಾರತ ಮತ್ತು ಲಂಕಾ ನಡುವಿನ ಮೊದಲ ಟೆಸ್ಟ್ ಮ್ಯಾಚ್ ನಲ್ಲಿ ಕೊನೇ ದಿನದಾಟ ಮಾತ್ರ ಬಾಕಿ ಉಳಿದಿದೆ. ಇಡೀ ಪಂದ್ಯ ಭಾರತದ ಕಡೆಯೇ ಇದೆ. ಬಟ್ ಎಲ್ಲಾ ರೆಸ್ಪಾನ್ಸಿಬಿಲಿಟಿ ಬೌಲಿಂಗ್ ಯುನಿಟ್ ಹಾಗೇ ಫೀಲ್ಡಿಂಗ್ ಎಫರ್ಟ್ ಮೇಲೆ ನಿಂತಿದೆ. ಈ ಪಂದ್ಯದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 193 ರನ್‌ಗಳಿಸಿ ಆಲೌಟ್ ಆಯ್ತು. ಮೊದಲ ಇನ್ನಿಂಗ್ಸ್​ನಲ್ಲಿ 178 ರನ್​ಗಳ ಲೀಡ್ ಹಾಗೇ ಎರಡನೇ ಇನ್ನಿಂಗ್ಸ್​ ರನ್ಸ್ ಸೇರಿ ಶ್ರೀಲಂಕಾ ತಂಡಕ್ಕೆ 372 ರನ್‌ಗಳ ಟಾರ್ಗೆಟ್ ನೀಡಲಾಯ್ತು. ಫೈನಲ್ ಚೇಸ್ ಶುರು ಮಾಡಿದ್ದ ಲಂಕನ್ನರಿಗೆ ಮತ್ತೆ ನಮ್ಮ ಬೌಲರ್ಸ್ ನೀರು ಕುಡಿಸಿದ್ದಾರೆ. ಸದ್ಯಕ್ಕಿರೋ ಸಿಚುಯೇಷನ್ ನೋಡಿದ್ರೆ ಲಂಕನ್ನರು ಸೋಲಿನ ಹೊಸ್ತಿಲಲ್ಲಿ ಇದ್ದಾರೆ. ಅಟ್​ಲೀಸ್ಟ್ ಡ್ರಾ ಮಾಡಿಕೊಳ್ಳೋಕಾದ್ರೂ ಟ್ರೈ ಮಾಡ್ಬೋದು.

ಭಾರತಕ್ಕೆ ಈಗ ಅಸಲಿ ಚಾಲೆಂಜ್!

ಎರಡನೇ ಇನ್ನಿಂಗ್ಸ್ ನಲ್ಲಿ ಮೂವರು ಮಾತ್ರವೇ ಡಬಲ್ ಡಿಜಿಟ್ ರನ್ಸ್

ರಾಹುಲ್ (35), ಪಡಿಕ್ಕಲ್ (44), ಪಂತ್ 66 ರನ್ ಗಳಿಗೆ ಔಟ್

ಮೂವರು ಬ್ಯಾಟರ್ಸ್ 145 ರನ್.. ಉಳಿದವರಿಂದ ಕೇವಲ 48 ರನ್

ಮೊದಲ ಇನ್ನಿಂಗ್ಸ್ 178 ರನ್ಸ್ ಲೀಡ್ + 193 ರನ್ಸ್.. 372 ಟಾರ್ಗೆಟ್

ಚೇಸಿಂಗ್ ಶುರು ಮಾಡಿದ ಲಂಕಾ ಪರ ಆರಂಭಿಕ ಬ್ಯಾಟರ್ಸ್ ಬೇಗ ಔಟ್

ನಿಶಾನ್ (6), ಪಸಿಂದು (0), ಮೆಂಡಿಸ್ (2), ಲಹಿರು (14)ಕ್ಕೆ ಔಟ್

ದಿನೇಶ್ ಚಾಂಡಿಮಾಲ್ ಗೆ ಕನ್ಕುಶನ್ ಆಗಿ ಪಸಿಂದು ಪದಾರ್ಪಣೆ

ಐದನೇ ದಿನದಾಟವೂ ಮಳೆ ಬಂದ್ರೆ ಪಂದ್ಯದ ಫಲಿತಾಂಶಕ್ಕೆ ಎಫೆಕ್ಟ್

ಸದ್ಯಕ್ಕಂತೂ ಕಂಪ್ಲೀಟ್ ಮ್ಯಾಚ್ ಭಾರತದ ಕಡೆ ಟರ್ನ್ ಆಗಿದೆ. ನಾಲ್ಕನೇ ದಿನದಾಟ ಮುಗಿಯೋ ಹೊತ್ತಿಗೆ ಟಾಪ್ ಆರ್ಡರ್​ನ ಪ್ರಮುಖ ವಿಕೆಟ್​ಗಳನ್ನ ಬೇಟೆಯಾಡಿರೋದ್ರಿಂದ ಬುಧವಾರ ಅಂದ್ರೆ ಕೊನೇ ದಿನದಾಟದಲ್ಲಿ ಉಳಿದಿರೋ ವಿಕೆಟ್​ಗಳನ್ನ ತೆಗೆದ್ರೆ ಭಾರತ ಈ ಮ್ಯಾಚ್ ವಿನ್ ಆಗ್ಬೋದು. ಲಂಕಾಗೆ ಇನ್ನೂ 300+ ರನ್ಸ್ ಟಾರ್ಗೆಟ್ ಇರೋದ್ರಿಂದ ಒಂದು ಡಿಫೆನ್ಸಿವ್ ಆಗಿ ಆಡಿ ಡ್ರಾಗೆ ಯೋಚನೆ ಮಾಡ್ಬೇಕು.. ಇಲ್ಲ ಫಾಸ್ಟ್ ಆಗಿ ಆಡಿ ಚೇಸ್ ಮಾಡ್ತೀವಿ ಅಂತಾ ಧೈರ್ಯ ತೋರಿಸ್ಬೇಕು. ಇಂಥಾ ಟೈಮಲ್ಲಿ ಬೇಗ ಬೇಗ ವಿಕೆಟ್ಸ್ ಕಳ್ಕೊಳ್ಳೋ ಸಾಧ್ಯತೆಗಳೂ ಇರುತ್ತೆ. ಆದ್ರೆ ಭಾರತ ಸಿಕ್ಕಿರುವಂಥ ಬ್ರೇಕ್ ಥ್ರ್ಯೂನ ಬಿಟ್ಟುಕೊಡದೆ ಮೊದಲ ಎರಡು ಸೆಷನ್​ನಲ್ಲೇ ಆಲೌಟ್ ಮಾಡೋ ಟಾರ್ಗೆಟ್​ನಲ್ಲಿದೆ.

Shantha Kumari