ರಾಜಾ ಬೇಟಾ ಶುಬ್ಮನ್ ಗಿಲ್​! – ಇನ್ನೆಷ್ಟು ದಿನ ಫ್ಲಾಪ್ ಶೋ?

ರಾಜಾ ಬೇಟಾ ಶುಬ್ಮನ್ ಗಿಲ್​! – ಇನ್ನೆಷ್ಟು ದಿನ ಫ್ಲಾಪ್ ಶೋ?

ಶುಬ್ಮನ್ ಗಿಲ್.. ಟೀಂ ಇಂಡಿಯಾದ ಫ್ಯೂಚರ್.. ವಿರಾಟ್ ಕೊಹ್ಲಿ ಬಳಿಕ ಭಾರತದ ಸ್ಟಾರ್.. ನೆಕ್ಸ್ಟ್ ಸಚಿನ್ ತೆಂಡೂಲ್ಕರ್.. ಹೀಗೆ ಶುಬ್ಮನ್ ಗಿಲ್​ಗೆ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಬರೀ ಬಿಲ್ಡಪ್ ಕೊಟ್ಟಿದ್ದೇ ಬಂತು. ಆದ್ರೀಗ ನೋಡಿದ್ರೆ ಅಣ್ಣ ಮೇಲಿಂದ ಮೇಲೆ ಫೇಲ್ ಆಗ್ತಾನೆ ಇದ್ದಾರೆ. ಕ್ರೂಶಿಯಲ್​​ ಮ್ಯಾಚ್​ಗಳಲ್ಲಿ ಗಿಲ್​ ಬ್ಯಾಟ್​ನಿಂದಲೂ ರನ್ ಬರ್ತಿಲ್ಲ. ಮ್ಯಾಚ್ ವಿನ್ನಿಂಗ್​ ಪರ್ಫಾಮೆನ್ಸ್​ಗಳು ಎಲ್ಲಿ ಮಾಯವಾಯ್ತೋ ಗೊತ್ತಿಲ್ಲ. ಆದ್ರೂ ಕೂಡ ಯಂಗ್ ಬ್ಯಾಟ್ಸ್​​ಮನ್​ಗೆ ನಿರಂತರವಾಗಿ ಮೇಲಿಂದ ಮೇಲೆ ಚಾನ್ಸ್ ಕೊಡ್ತಾನೆ ಇದ್ದಾರೆ. ಅಫ್​ಕೋಸ್​ ಟ್ಯಾಲೆಂಟೆಡ್ ಪ್ಲೇಯರ್​, ಬ್ಯಾಕ್​ಅಪ್ ಮಾಡಲೇಬೇಕು ಅನ್ನೋ ಕಾರಣಕ್ಕೆ ಶುಬ್ಮನ್​ಗಿಲ್​ರನ್ನ ಟೀಂನಲ್ಲಿ ಪಿಕ್ ಮಾಡಲಾಗ್ತಿದೆ. ಆದ್ರೆ ಈಗ ನೋಡಿದ್ರೆ, ಗಿಲ್​ಗೆ ಚಾನ್ಸ್​ ಕೊಟ್ಟಿರೋದು, ಹೈಪ್ ನೀಡಿರೋದು ಸ್ವಲ್ಪ ಜಾಸ್ತಿಯೇ ಆಗಿಲ್ವಾ ಅಂತಾ ಅನ್ಸಿರೋದು ಸುಳ್ಳಲ್ಲ.  ಯಾಕಂದ್ರೆ ಶುಬ್ಮನ್​​ ಗಿಲ್​​ ಹಿಟ್ ಪರ್ಫಾಮೆನ್ಸ್​ಗಿಂತ ಹೆಚ್ಚಾಗಿ ಫ್ಲಾಪ್ ಶೋಗಳನ್ನೇ ಕೊಡ್ತಾ ಇದ್ದಾರೆ.

ಇದನ್ನೂ ಓದಿ: ರಿಷಬ್ ಪಂತ್‌ಗೆ ಕೋಟಿ ನಾಮ – ನಕಲಿ ಕ್ರಿಕೆಟರ್ ಮೋಸದಾಟ ಹೇಗಿತ್ತು ಗೊತ್ತಾ?

ದಕ್ಷಿಣ ಆಫ್ರಿಕಾ ವಿರುದ್ಧ ಫಸ್ಟ್​ ಟೆಸ್ಟ್​ನ ಫಸ್ಟ್ ಇನ್ನಿಂಗ್ಸ್ 2 ರನ್.. ಸೆಕೆಂಡ್ ಇನ್ನಿಂಗ್ಸ್​ನಲ್ಲಿ 26 ರನ್.. ಇದು ಶುಬ್ಮನ್ ಗಿಲ್ ಸ್ಕೋರ್. ಕಂಪ್ಲೀಟ್ ಫ್ಲಾಪ್ ಶೋ.. ಇತ್ತೀಚಿನ ಪಂದ್ಯಗಳಲ್ಲಿ ಶುಬ್ಮನ್​​ ಗಿಲ್​​ ಹಿಟ್ ಪರ್ಫಾಮೆನ್ಸ್​ಗಿಂತ ಹೆಚ್ಚಾಗಿ ಫ್ಲಾಪ್ ಶೋಗಳನ್ನೇ ಕೊಡ್ತಾ ಇದ್ದಾರೆ. ವಂಡೇ ವರ್ಲ್ಡ್​ಕಪ್​ನಲ್ಲೂ ಅಷ್ಟೇ ಶುಬ್ಮನ್ ಗಿಲ್​ ಹೇಳಿಕೊಳ್ಳುವಂತಾ ಆಟ ಆಡಿರಲಿಲ್ಲ. ಫೈನಲ್​​ ಮ್ಯಾಚ್​​ನಲ್ಲಿ ಫಸ್ಟ್​ಗೆ ವಿಕೆಟ್ ಒಪ್ಪಿಸಿದ್ದೇ ಗಿಲ್. ಇಂಪಾರ್ಟೆಂಟ್ ಮ್ಯಾಚ್​ಗಳಲ್ಲಿ ಶುಬ್ಮನ್ ಗಿಲ್ ಆಡ್ತಾನೆ. ಇಲ್ಲ. ಆದ್ರೂ ಕೂಡ ಎಲ್ಲೋ ಒಂದು ಕಡೆ ರೋಹಿತ್ ಶರ್ಮಾ ಮತ್ತು ರಾಹುಲ್​ ದ್ರಾವಿಡ್ ಅವರು ಶುಬ್ಮನ್ ಗಿಲ್​ಗೆ ಲೆಕ್ಕಕ್ಕಿಂತ ಜಾಸ್ತಿಯೇ ಅವಕಾಶಗಳನ್ನ ನೀಡ್ತಾ ಇದ್ದಾರೆ ಅಂತಾ ಅನ್ನಿಸಿರೋದು ಸುಳ್ಳಲ್ಲ.

ಅದ್ರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಂತೂ ಶುಬ್ಮನ್ ಗಿಲ್ ದೊಡ್ಡ ಡಿಸೆಪಾಯಿಂಟ್​​ಮೆಂಟ್ ಆಗಿದ್ದಾರೆ. ​ಯಾಕಂದ್ರೆ ಶುಬ್ಮನ್ ಗಿಲ್​ ಇದುವರೆಗೆ 19 ಟೆಸ್ಟ್​ ಮ್ಯಾಚ್​ಗಳನ್ನ ಆಡಿದ್ದಾರೆ. ಅಂದ್ರೆ 35 ಇನ್ನಿಂಗ್ಸ್​​ಗಳು.. ಈ 19 ಮ್ಯಾಚ್ ​ಗಳಲ್ಲಿ, 35 ಇನ್ನಿಂಗ್ಸ್​ಗಳಲ್ಲಿ ಗಿಲ್ ಗಳಿಸಿರೋದು 994 ರನ್ ಮಾತ್ರ. ಎವರೇಜ್ 31.06. ನಿಮಗೆ ಗೊತ್ತಿರಲಿ, ಈವನ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ 19 ಟೆಸ್ಟ್​ ಮ್ಯಾಚ್​​ಗಳಲ್ಲಿ ಒಂದು ಸಾವಿರ ರನ್ ಕ್ರಾಸ್ ಮಾಡಿದ್ರು. ರವಿಚಂದ್ರನ್ ಅಶ್ವಿನ್​​.. ಬೇರೆ ಫುಲ್​​ಫ್ಲೆಡ್ಜ್ ಬ್ಯಾಟ್ಸ್​ಮನ್​​ಗಳ ಬಗ್ಗೆ ಮಾತನಾಡ್ತಾ ಇಲ್ಲ. ಬಟ್ ಒಬ್ಬ ಫುಲ್​ಟೈಮ್ ಬ್ಯಾಟ್ಸ್​ಮನ್ ಆಗಿ ಅದು ಕೂಡ ಓಪನಿಂಗ್​​ ಮತ್ತು 3ನೇ ಆರ್ಡರ್​​ನಲ್ಲಿ ಬ್ಯಾಟಿಂಗ್​ಗೆ ಇಳಿದ್ರೂ ಶುಬ್ಮನ್​ ಗಿಲ್​ಗೆ 19 ಟೆಸ್ಟ್​ ಮ್ಯಾಚ್​ಗಳಲ್ಲಿ ಒಂದು ಸಾವಿರ ರನ್ ಕಂಪ್ಲೀಟ್ ಮಾಡೋಕೆ ಆಗಿಲ್ಲ ಅಂದ್ರೆ ಏನರ್ಥ? ಆಡಿರೋ ಎಲ್ಲಾ 19 ಮ್ಯಾಚ್​ಗಳಲ್ಲೂ ಶುಬ್ಮನ್​ ಗಿಲ್​ಗೆ ಬ್ಯಾಟಿಂಗ್ ಮಾಡೋಕೆ ಅವಕಾಶ ಸಿಕ್ಕಿದೆ. ಗಿಲ್ ಏನು 5th, 6th ಆರ್ಡರ್​​​ನಲ್ಲಂತೂ ಬ್ಯಾಟಿಂಗ್​​ಗೆ ಬಂದಿಲ್ಲ. ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ ಆಗಿಯೇ ಇದ್ರು. ಅಲ್​ಮೋಸ್ಟ್​​ ಎಲ್ಲಾ ಮ್ಯಾಚ್​ಗಳಲ್ಲೂ ಓಪನರ್ ಆಗಿದ್ರು. ಈಗಷ್ಟೇ 3ನೇ ಆರ್ಡರ್​​ನಲ್ಲಿ ಕ್ರೀಸ್​ಗಿಳೀತಿದ್ದಾರೆ. ಆದ್ರೂ ಕೂಡ ಒಂದು ಸಾವಿರ ರನ್ ಕ್ರಾಸ್ ಮಾಡೋಕೆ ಆಗಿಲ್ಲ. ಈಗ ಗಳಿಸಿರೋ 994 ರನ್​ಗಳ ಪೈಕಿ ಆಲ್​​ಮೋಸ್ಟ್ ರನ್​ಗಳು ಬಂದಿರೋದು ಭಾರತದಲ್ಲಿ ಆಡೋವಾಗಲೇ. ಇಂಡಿಯನ್​​ ಪಿಚ್​ಗಳಲ್ಲಿ ಮಾತ್ರ. ನಮ್ಮಲ್ಲಿ ಆಡೋವಾಗ 58.15 ಬ್ಯಾಟಿಂಗ್​​ ಎವರೇಜ್​​ನ್ನ ಹೊಂದಿದ್ದಾರೆ.

ಆದ್ರೆ ಫಾರಿನ್​​ ಪಿಚ್​ಗಳಲ್ಲಿ ಮಾತ್ರ ಗಿಲ್ ಫುಲ್ ಫ್ಲಾಪ್. ಸೌತ್​ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಶುಬ್ಮನ್ ಗಿಲ್ ಬ್ಯಾಟಿಂಗ್ ಎವರೇಜ್ ಜಸ್ಟ್ 30-35 ಅಷ್ಟೇ ಇದೆ… ಟೋಟಲಿ ಅಟ್ಟರ್ ಫ್ಲಾಪ್.. ಇಂಗ್ಲೆಂಡ್ ವಿರುದ್ಧವಂತೂ 0, 15, 11, 14, 0 ಹೀಗೆ ದೊಡ್ಡ ಮೊತ್ತದ ಸ್ಕೋರ್ ಕಲೆ ಹಾಕುವಲ್ಲಿ ಫೇಲ್ ಆಗಿದ್ದಾರೆ. ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ವಿರುದ್ಧ ಸೆಂಚೂರಿ ಬಾರಿಸಿದ್ರು. ಅದು ಕೂಡ ಆಸ್ಟೇಲಿಯಾ ವಿರುದ್ಧ ಅಹ್ಮದಾಬಾದ್​ನಲ್ಲಿ ಸೆಂಚೂರಿ ಹೊಡೆದಿದ್ರು. ಉಳಿದಂತೆ ಆಸ್ಟ್ರೇಲಿಯಾ ವಿರುದ್ಧ ಹೋಮ್​​ ಗ್ರೌಂಡ್​​ಗಳಲ್ಲೂ ಅಷ್ಟೇ, 30, 5, 1, 18 ಇದು ಶುಬ್ಮನ್ ಗಿಲ್ ಟೆಸ್ಟ್​ ಮ್ಯಾಚ್​ಗಳು ಸ್ಕೋರ್. ಕಳೆದ ವೆಸ್ಟ್​ಇಂಡೀಸ್​ ಸೀರಿಸ್​ನಲ್ಲೂ ಫೇಲ್ ಆಗಿದ್ರು. ಸುಮಾರು 10 ಬಾರಿ ಸಿಂಗಲ್​ ಡಿಜಿಟ್​ಗೆ ಔಟಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಶುಬ್ಮನ್ ಗಿಲ್ ಸೂಪರ್ ಫ್ಲಾಪ್ ಆಗಿದ್ರೂ ಕೂಡ ನಿರಂತರವಾಗಿ ಟೆಸ್ಟ್​​ನಲ್ಲೂ ಆಡಿಸ್ತಾನೆ ಇದ್ದಾರೆ. ಎಲ್ಲರೂ ಶುಬ್ಮನ್ ಗಿಲ್​ರನ್ನ ತಲೆ ಮೇಲೆ ಹೊತ್ಕೊಂಡು ಮೆರಿಸ್ತಾನೆ ಇದ್ದಾರೆ. ಈಗಿನ ಜಮಾನದ ಪ್ಲೇಯರ್ಸ್​ಗಳನ್ನೇ ತಗೊಳ್ಳೋಣ. ವಿರಾಟ್ ಕೊಹ್ಲಿ, ಬಾಬರ್ ಆಜಂ ಇವ್ರೆಲ್ಲಾ 19, 20 ಟೆಸ್ಟ್​ ಮ್ಯಾಚ್​ಗಳನ್ನಾಡೋ ವೇಳೆ ರನ್ ಗುಡ್ಡೆಯನ್ನೇ ಹಾಕಿದ್ರು. ಬೆಸ್ಟ್ ಬ್ಯಾಟಿಂಗ್ ಎವರೇಜ್ ಹೊಂದಿದ್ರು. ಹೀಗಾಗಿಯೇ ವರ್ಲ್ಡ್​ಕ್ಲಾಸ್ ಪ್ಲೇಯರ್ ಅಂತಾ ಅನ್ನಿಸಿಕೊಂಡಿರೋದು. ಅದೇ ಶುಬ್ಮನ್ ಗಿಲ್​ಗೆ ವರ್ಲ್ಡ್​​ಕ್ಲಾಸ್ ಬ್ಯಾಟ್ಸ್​ಮನ್​​ ಪಟ್ಟ ಸಿಕ್ಕಿದ್ರೂ ಅದಕ್ಕೆ ತಕ್ಕಷ್ಟು ರನ್​ಗಳು ಗಿಲ್ ಬ್ಯಾಟ್​ನಿಂದ ಬಂದಿಲ್ಲ. ಅದು ಕೂಡ ಆರ್.ಅಶ್ವಿನ್ ಪರ್ಫಾಮೆನ್ಸ್ ಜೊತೆಗೆ ಶುಬ್ಮನ್ ಗಿಲ್​ರನ್ನ ಹೋಲಿಕೆ ಮಾಡುವಂತೆ ಆಗಿದೆ.

Shwetha M