ಗೆದ್ದಿದ್ದು 7 ರನ್.. ಸೋತಿದ್ದು 76 ರನ್ – ಸೆಮೀಸ್ ಟಿಕೆಟ್ ತಪ್ಪಿಸುತ್ತಾ ರನ್ ರೇಟ್?

ಗ್ರೂಪ್ ಸ್ಟೇಜ್ ಮ್ಯಾಚಸ್ಗೂ ಸೂಪರ್ 8 ಮ್ಯಾಚಸ್ಗೂ ಇರೋ ವ್ಯತ್ಯಾಸ ಇದೇ ನೋಡಿ. ಟಿ-20ಐ ಫಾರ್ಮೆಟ್ನಲ್ಲಿ ರೆಡ್ ಹಾಟ್ ಫಾರ್ಮ್ನಲ್ಲಿದ್ದ ಟೀಂ ಇಂಡಿಯಾ ಸೋಲೋದಿರ್ಲಿ ಇಷ್ಟು ಹೀನಾಯವಾಗಿ ಸೋಲುತ್ತೆ ಅಂತಾ ಯಾರೊಬ್ರೂ ಇಮ್ಯಾಜಿನ್ ಕೂಡ ಮಾಡಿರಲಿಲ್ಲ. ಸೌತ್ ಆಫ್ರಿಕಾ ವಿರುದ್ಧ ಫಸ್ಟ್ ಮ್ಯಾಚ್ನೇ ಕೈಚೆಲ್ಲಿರೋ ಭಾರತ ಈಗ ಅಕ್ಷರಶಃ ಡೇಂಜರ್ಝೋನ್ನಲ್ಲಿದೆ. 2024ರ ಫೈನಲ್ ಸೋಲಿನ ಸೇಡು ತೀರಿಸಿಕೊಂಡಿರೋ ಹರಿಣಪಡೆ ಈಗ 2026ರ ಸೆಮೀಸ್ ಟಿಕೆಟ್ನೂ ಕಿತ್ತುಕೊಳ್ಳೋ ಮಟ್ಟಕ್ಕೆ ಫರ್ಫಾಮ್ ಮಾಡಿದ್ದಾರೆ.
ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು! – 76 ರನ್‌ಗಳಿಂದ ಗೆದ್ದ ಸೌತ್ ಆಫ್ರಿಕಾ!
ಬೌಲಿಂಗ್ ಎಕ್ಸ್ಪೆನ್ಸಿವ್ ಆಯ್ತಾ.. ಮಿಸ್ ಫೀಲ್ಡ್ ಹೊಡೆತ ಕೊಡ್ತಾ.. ಬ್ಯಾಟಿಂಗ್ ಕೈಕೊಡ್ತಾ ಅಥವಾ ಕ್ಯಾಪ್ಟನ್ಸಿ ಮಿಸ್ ಹೊಡೀತಾ ಅಂದ್ರೆ ಎಲ್ಲವೂ ಅಂತಾ ಹೇಳ್ಬೇಕು. ಌಂಡ್ ಸೌತ್ ಆಫ್ರಿಕಾ ಪರ್ಫಾಮೆನ್ಸ್ನ ಅಪ್ರಿಶಿಯೇಟ್ ಮಾಡ್ಬೇಕು. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯದಲ್ಲಿ ಭಾರತ ಸೋತಿದೆ. ಅದೂ ಕೂಡ ಅತ್ಯಂತ ಹೀನಾಯವಾಗಿ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಸೌತ್ ಆಫ್ರಿಕಾ ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ರು. ಬೌಲಿಂಗ್ ಶುರು ಮಾಡಿದ ಭಾರತ ಪವರ್ ಪ್ಲೇನಲ್ಲಿ ಮೇನ್ ವಿಕೆಟ್ ಎಗರಿಸಿದ್ರು. ಈ ಆರಂಭ ನೋಡ್ದಾಗ ಇಲ್ಲೂ ಭಾರತ ಗೆಲ್ಲುತ್ತೆ ಅಂತಾನೇ ಅನ್ಸಿತ್ತು. ಬಟ್ ಅಸಲಿ ಆಟ ಆಮೇಲೆ ಶುರುವಾಯ್ತು.
ಕಿಲ್ಲರ್ ಆದ ಮಿಲ್ಲರ್.. ಭಾರತೀಯ ಬ್ಯಾಟರ್ ಗಳ ಪರೇಡ್!
ಬ್ಯಾಟಿಂಗ್ಗೆ ಇಳಿದ ಸೌತ್ ಆಫ್ರಿಕಾಗೆ ಆರಂಭ ಅಷ್ಟು ಚೆನ್ನಾಗಿ ಸಿಗ್ಲಿಲ್ಲ. ಬಟ್ ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್ ಪಾರ್ಟ್ನರ್ ಶಿಪ್ ವರ್ಕ್ ಆಯ್ತು. ಟ್ರಿಸ್ಟನ್ ಸ್ಟಬ್ಸ್ ಫಿನಿಶಿಂಗ್ ಸಖತ್ತಾಗಿತ್ತು. ಹೀಗಾಗಿ ಸೌತ್ ಆಫ್ರಿಕಾ 20 ಓವರಲ್ಲಿ 187 ರನ್ ಸ್ಕೋರ್ ಮಾಡಿತ್ತು. ಟಾರ್ಗೆಟ್ ಬೆನ್ನತ್ತಿದ ಭಾರತದ ಬ್ಯಾಟರ್ಗಳು ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದ್ರು. ಶಿವಂ ದುಬೆ 42 ರನ್ ಗಳಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಬಿಲೋ 20ಯಲ್ಲೇ ವಿಕೆಟ್ ಒಪ್ಪಿಸಿದ್ರು. ಪರಿಣಾಮ 18.5ನೇ ಓವರ್ನಲ್ಲೇ ಭಾರತ 111 ರನ್ಗಳಿಗೆ ಆಲೌಟ್ ಆಯ್ತು. ಬ್ಯಾಟಿಂಗ್ ಹಾಗೇ ಬೌಲಿಂಗ್ನಲ್ಲಿ ಸಾಲಿಡ್ ಪ್ರದರ್ಶನ ನೀಡಿದ ಸೌತ್ ಆಫ್ರಿಕಾ ಬರೋಬ್ಬರಿ 76 ರನ್ಗಳ ಬಿಗ್ ಮಾರ್ಜಿನ್ನಿಂದ ಪಂದ್ಯ ಗೆದ್ಕೊಂಡ್ರು. ಇದೇ ಮಾರ್ಜಿನ್ ಈಗ ಭಾರತದ ನೆಟ್ ರನ್ರೇಟ್ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಜೊತೆಗೆ ಸೆಮೀಸ್ ಟಿಕೆಟ್ ಫೈಟ್ಗೂ ಆತಂಕ ಶುರುವಾಗಿದೆ. ಗ್ರೂಪ್ 1ನಲ್ಲಿ ನಾಲ್ಕು ತಂಡಗಳಿದ್ದು ತಲಾ ಮೂರ್ಮೂರು ಪಂದ್ಯಗಳನ್ನ ಆಡ್ತಾರೆ. ಟಾಪ್ 2ನಲ್ಲಿ ಬಂದವ್ರು ಸೆಮೀಸ್ಗೆ ಹೋಗ್ತಾರೆ. ಆದ್ರೆ ಮೊದಲ ಪಂದ್ಯದಲ್ಲೇ ಭಾರತ ಬಿಗ್ ಮಾರ್ಜಿನ್ನಿಂದ ಸೋತಿರೋದ್ರಿಂದ ಉಳಿದ ಎರಡು ಪಂದ್ಯಗಳಲ್ಲಿ ಭಾರೀ ಅಂತರದಿಂದ ಗೆಲ್ಬೇಕು. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡವನ್ನ ಸೋಲಿಸ್ಬೇಕು. ಆದ್ರೆ ಈ ಎರಡೂ ತಂಡಗಳೂ ಡೇಂಜರಸ್ ಆಗಿವೆ. ಅಲ್ದೇ ಬೇರೆ ತಂಡಗಳು ನಾಲ್ಕು ಅಂತ ಗಳಿಸಿ ಭಾರತಕ್ಕಿಂತ ಬೆಟರ್ ರನ್ ರೇಟ್ ಇದ್ರೆ ಅವ್ರು ಸೆಮೀಸ್ ಟಿಕೆಟ್ ಪಡೀತಾರೆ. ಆಗ ಭಾರತ ಟೂರ್ನಿಯಿಂದ ಹೊರ ಬೀಳಬೇಕಾಗುತ್ತೆ.
7 ರನ್ ನಿಂದ ಸೋತು 76 ರನ್ ಗಳಿಂದ ಸೋಲಿಸಿದ ಸೌತ್ ಆಫ್ರಿಕಾ!
ಭಾನುವಾರ ಸೌತ್ ಆಫ್ರಿಕಾ ಅಕ್ಷರಶಃ ರಿವೇಂಜ್ ಮ್ಯಾಚ್ ಆಡಿದೆ. ಅದೂ ಕೂಡ 2024 ಟಿ-20 ವಿಶ್ವಕಪ್ ಫೈನಲ್ ಪಂದ್ಯದ ಸೇಡು. ಹಾಗೇ ನೋಡಿದ್ರೆ 2024ರ ಟಿ-20 ವಿಶ್ವಕಪ್ ಫೈನಲ್ ಹಾಗೇ 2026ರ ಸೂಪರ್ 8 ಮ್ಯಾಚಲ್ಲಿ ಸಿಮಿಲಾರಿಟೀಸ್ ಜಾಸ್ತಿ ಇದೆ. 2024ರ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಎರಡೂ ಇನ್ನಿಂಗ್ಸ್ಗಳಲ್ಲಿ ಆಲ್ಮೋಸ್ಟ್ 35 ಓವರ್ಸ್ ಡಾಮಿನೇಟ್ ಮಾಡಿದ್ರು. ಬಟ್ ಭಾರತ ಲಾಸ್ಟ್ 5 ಓವರ್ಗಳಲ್ಲಿ ಮ್ಯಾಚ್ನ ಕಂಟ್ರೋಲ್ ತಗೊಂಡು ಗೆದ್ರು. ಆ ಮ್ಯಾಚ್ ಕ್ಲೋಸ್ ಗೇಮ್ ಆಗಿತ್ತು. ಬಟ್ ಈ ಸಲ ಭಾರತ ಬೌಲಿಂಗ್ನಲ್ಲಿ ಮೊದಲ 5 ಓವರ್ ಅಷ್ಟೇ ಡಾಮಿನೇಟ್ ಮಾಡಿದ್ದು. ಉಳಿದ 35 ಓವರ್ಗಳಲ್ಲೂ ಅವ್ರೇ ಡಾಮಿನೇಟ್ ಮಾಡಿ ಏಕಪಕ್ಷೀಯವಾಗಿ ಗೆದ್ದಿದ್ದಾರೆ. ಸೋ ಕಳೆದ ಬಾರಿ 7 ರನ್‌ಗಳಿಂದ ಸೋತಿದ್ದಕ್ಕೆ ಈಗ 76 ರನ್‌ಗಳಿಂದ ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಶುರುವಾಗಿ 19 ವರ್ಷಗಳಾಗಿವೆ. ಈ ಹತ್ತೊಂಬತ್ತು ವರ್ಷಗಳಲ್ಲಿ 10 ಟಿ20 ವಿಶ್ವಕಪ್ ಟೂರ್ನಿ ನಡೆದಿದೆ. ಈ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ 50 ಕ್ಕಿಂತ ಹೆಚ್ಚಿನ ರನ್ ಗಳ ಅಂತರದಿಂದ ಸೋತಿರಲಿಲ್ಲ.

ನೋಡಿರಿ

