ಸುಲಭ ಇಲ್ಲ ಸೌತ್ ಆಫ್ರಿಕಾ – ಪ್ರೆಶರ್ ನಲ್ಲಿದ್ಯಾ ಟೀಂ ಇಂಡಿಯಾ?
ಆಟಕ್ಕೂ ಮೊದಲು ಕೊಚ್ಚಿಕೊಂಡ ಕೋಚ್

ಸುಲಭ ಇಲ್ಲ ಸೌತ್ ಆಫ್ರಿಕಾ – ಪ್ರೆಶರ್ ನಲ್ಲಿದ್ಯಾ ಟೀಂ ಇಂಡಿಯಾ?ಆಟಕ್ಕೂ ಮೊದಲು ಕೊಚ್ಚಿಕೊಂಡ ಕೋಚ್

ಹತ್ತನೇ ಆವೃತ್ತಿಯ ಟಿ-20 ವಿಶ್ವಕಪ್​ನ ಅಸಲಿ ಆಟ ಈಗ ಸ್ಟಾರ್ಟ್ ಆಗ್ತಿದೆ. ಲೀಗ್ ಹಂತದ ಪಂದ್ಯಗಳೆಲ್ಲಾ ಮುಗಿದು ನಾಕೌಟ್​ ರೌಂಡ್ ಸ್ಟಾರ್ಟ್ ಆಗಿದೆ. ಒಂದ್ಕಡೆ ಸೋಲೇ ಕಾಣದ 4 ತಂಡಗಳು.. ಇನ್ನೊಂದ್ಕಡೆ ಒಂದೊಂದು ಪಂದ್ಯಗಳನ್ನ ಕೈಚೆಲ್ಲಿರೋ ಟೀಮ್​ಗಳು. 4 ಸೆಮಿಫೈನಲ್ ಟಿಕೆಟ್​ಗಾಗಿ  8 ತಂಡಗಳ ನಡುವೆ ನಡೆಯಲಿಯೋ ಜಿದ್ದಾಜಿದ್ದಿನ ಸಮರದಲ್ಲಿ ಭಾರತ ಭಾನುವಾರ ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಹರಿಣಪಡೆಯಂತೂ ಈ ಮ್ಯಾಚ್ ನಾವೇ ಗೆಲ್ಲೋದು ಅಂತಾ ಫುಲ್ ಕಾನ್ಫಿಡೆನ್ಸ್​ನಲ್ಲಿದ್ದಾರೆ. ಅದ್ರಲ್ಲೂ ಸೌತ್ ಆಫ್ರಿಕಾ ಕೋಚ್ ಅಂತೂ ಪಂದ್ಯಕ್ಕೂ ಮೊದ್ಲೇ ಜಂಭ ಕೊಚ್ಚಿಕೊಂಡಿದ್ದಾರೆ.

ಇದನ್ನೂ ಓದಿ : ಜಿಂಬಾಬ್ವೆ ಹೊಸ ಅವತಾರ – ಹೆಂಗಿದ್ದ ಟೀಂ ಹೆಂಗಾಯ್ತು?

ಟಿ-20ಐ ಮಾದರಿಯಲ್ಲಿ ಭಾರತ ತಂಡ ಅತ್ಯದ್ಬುತ ಫಾರ್ಮ್​ನಲ್ಲಿದೆ. 2024ರ ವಿಶ್ವಕಪ್ ಆವೃತ್ತಿಯಲ್ಲಿ  ಒಂದೇ ಒಂದು ಮ್ಯಾಚ್ ಸೋಲದೆ ಚಾಂಪಿಯನ್ಸ್ ಆಗಿದ್ರು. ಌಂಡ್ ನೆಕ್ಸ್ಟ್ ಯಾವ ಸರಣಿಯನ್ನೂ ಸೋತಿಲ್ಲ. ಈಗ 2026ರ ಟಿ-20 ವಿಶ್ವಕಪ್ ನಲ್ಲಿ ನಾಲ್ಕು ಪಂದ್ಯಗಳನ್ನ ಆಡಿದ್ದು ನಾಲ್ಕರಲ್ಲೂ ಗೆಲುವು ಕಂಡಿದೆ. ಸೋಲಿಲ್ಲದ ಸರದಾರರ ವಿಜಯಯಾತ್ರೆಯಲ್ಲಿ ಈಗ ಮತ್ತೊಂದು ಅಗ್ನಿಪರೀಕ್ಷೆ ಎದುರಾಗ್ತಿದೆ. ಸೌತ್ ಆಫ್ರಿಕಾ ವಿರುದ್ಧ ಭಾನುವಾರ ಸೂಪರ್ 8 ಸುತ್ತಿನ ತಮ್ಮ ಮೊದಲ ಪಂದ್ಯ ಆಡ್ಬೇಕಿದೆ. ಟಿ-20ಐ ಫಾರ್ಮೆಟ್​ನಲ್ಲೀ ಭಾರತ ನಂಬರ್ 1 ಆಗಿದ್ರೂ ಸೌತ್ ಆಫ್ರಿಕಾ ಕೋಚ್ ಮಾತ್ರ ಭಾರತವನ್ನು ಸೋಲಿಸೇ ತೀರುತ್ತೇವೆಂದು ಸವಾಲು ಹಾಕಿದ್ದಾರೆ.

ಭಾರತ ತಂಡ ಪ್ರೆಶರ್ ನಲ್ಲಿದೆ.. ಸೋಲಿಸುತ್ತೇವೆಂದ ಕಾನ್ರಾಡ್!

ಸೂಪರ್ -8 ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ಸಿದ್ಧತೆಯಲ್ಲಿರುವಾಗ್ಲೇ ಸೌತ್ ಆಫ್ರಿಕಾ ತಂಡದ ಕೋಚ್ ಶುಕ್ರಿ ಕಾನ್ರಾಡ್ ಭಾರತಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಈ ಮೂಲಕ ಮೈಂಡ್​ಗೇಮ್ ಸ್ಟಾರ್ಟ್ ಮಾಡಿದ್ದಾರೆ. ಪ್ರೆಸ್​ಮೀಟ್ ಮಾತನಾಡಿರೋ ಕಾನ್ರಾಡ್  ಭಾರತ ತಂಡವು ಗ್ರೂಪ್ ಸ್ಟೇಜ್​ನಲ್ಲಿ ಯಾವುದೇ ಬಲಿಷ್ಠ ತಂಡದ ವಿರುದ್ಧ ಕಣಕ್ಕಿಳಿದಿಲ್ಲ. ಈಗ ಅವರು ಸೌತ್ ಆಫ್ರಿಕಾ ತಂಡವನ್ನು ಎದುರಿಸಬೇಕಿದೆ. ಹೀಗಾಗಿ ಪ್ರೆಶರ್​ನಲ್ಲಿ ಇರ್ತಾರೆ. ಇದೇ ಪ್ರೆಶರ್​ನ ಎನ್​ಕ್ಯಾಚ್ ಮಾಡಿಕೊಂಡು ಭಾರತವನ್ನು ಹೆಲ್ಪ್​ಲೆಸ್ ಆಗುವಂತೆ ಮಾಡುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಕೆಲ ಆಟಗಾರರು ಕಂಟಿನ್ಯುಯಸ್ ಆಗಿ ಔಟ್ ಆಫ್ ಫಾರ್ಮ್ ಇದ್ದಾರೆ. ಈಗ ಪಂದ್ಯ ನಡೆಯಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರ್ತಾರೆ. ಫ್ಯಾನ್ಸ್ ಎದುರು ಆಡುವುದು ಭಾರತಕ್ಕೆ ಶಕ್ತಿಯೂ ಹೌದು ಹೊರೆಯೂ ಹೌದು. ಹೀಗಾಗಿ ಈ ಪಂದ್ಯದ ಮೂಲಕ ನಾವು ಭಾರತ ತಂಡದ ಬಂಡವಾಳ ಬಯಲು ಮಾಡುತ್ತೇವೆ ಅನ್ನೋ ಮೂಲಕ ನೇರಾನೇರ ಚಾಲೆಂಜ್ ಮಾಡಿದ್ದಾರೆ.

2025ರಲ್ಲಿ ಸರಣಿ ಸೋತ್ರೂ ಈ ಸಲ ನಾವೇ ವಿನ್!

ಇನ್ನು ಇಷ್ಟಕ್ಕೇ ಸುಮ್ಮನಾಗದ ಕಾನ್ರಾಡ್ 2025ರ ಸರಣಿ ಸೋಲನ್ನೂ ಸಮರ್ಥನೆ ಮಾಡ್ಕೊಂಡಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಕೂಡ ಭಾರತದ ಪ್ರವಾಸ ಮಾಡಿತ್ತು. ಇಲ್ಲಿ ಐದು ಪಂದ್ಯಗಳ T20I ಸರಣಿಯನ್ನು 3-1 ಅಂತರದಿಂದ ಸೋತಿದ್ರು. ಆದ್ರೆ  ಸರಣಿ ಸೋತ್ರೂ ಕೂಡ ನಮ್ಮ ತಂಡವನ್ನ ರೆಡಿ ಮಾಡೋಕೆ ಇದು ಒಳ್ಳೆಯ ಅವಕಾಶ ನೀಡಿದೆ. ಆ ಪ್ರವಾಸದಲ್ಲಿ ನಾವು ಏನನ್ನು ಫೇಸ್ ಮಾಡ್ಬೇಕು ಅನ್ನೋದನ್ನ ಕಲಿತಿದ್ದೇವೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಲಕ್ಷಕ್ಕೂ ಹೆಚ್ಚು ಜನ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿರ್ತಾರೆ. ಌಂಡ್ ಬ್ಲ್ಯೂ ಜೆರ್ಸಿಯಲ್ಲಿ ಬಂದಿರ್ತಾರೆ. ಹೀಗಿದ್ರೂ ಭಾನುವಾರ ನಾವು ಗೆಲ್ಲಬೇಕಾದ ಪಂದ್ಯಗಳಲ್ಲಿ ಅದೂ ಒಂದು. ನಾವು ಅದಕ್ಕೆ ಸಿದ್ಧವಾಗಿದ್ದೇವೆ ಎಂದಿದ್ದಾರೆ. ಇನ್ನು ವೈಟ್ ಬಾಲ್ ಫಾರ್ಮೆಟ್​ನಲ್ಲಿ ಕಾನ್ರಾಡ್​ಗೆ ಇದು ಮಹತ್ವದ ಟೂರ್ನಿಯಾಗಿದೆ.

ಕಳೆದ ವಿಶ್ವಕಪ್ ಫೈನಲಿಸ್ಟ್ ಗಳ ನಡುವೆ ಸೆಮೀಸ್ ಟಿಕೆಟ್ ಫೈಟ್!

2024 ರ ಐಸಿಸಿ ಮೆನ್ಸ್ ಟಿ-20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತ-ಸೌತ್ ಆಫ್ರಿಕಾ ತಂಡಗಳು ಮುಖಾಮುಖಿ ಆಗಿದ್ವು. ಜೂನ್ 29ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಗೆದ್ದು ಚಾಂಪಿಯನ್ ಆಗಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಅವತ್ತಿನ ಮ್ಯಾಚಲ್ಲಿ ಎರಡೂ ಇನ್ನಿಂಗ್ಸ್​ನಲ್ಲಿ ಡಾಮಿನೇಟಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದು ಸೌತ್ ಆಫ್ರಿಕಾ ತಂಡ. ಭಾರತದ ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿ ಮಾತ್ರವೇ 76 ರನ್ ಗಳಿಸಿದ್ದು. ಅಕ್ಷರ್ ಪಟೇಲ್ 47 ರನ್, ದುಬೆ 27 ರನ್ ಗಳಿಸಿದ್ದು ಬಿಟ್ರೆ ಮಿಕ್ಕವ್ರೆಲ್ಲಾ ಸಿಂಗಲ್ ಡಿಜಿಟ್​ಗೆ ವಿಕೆಟ್ ಕೊಟ್ಟಿದ್ರು. ಆ ಮಟ್ಟಿಗೆ ಆಫ್ರಿಕನ್ ಬೌಲರ್ಸ್ ಕಾಟ ಕೊಟ್ಟಿದ್ರು. ನೆಕ್ಸ್​ಟ್ ಬ್ಯಾಟಿಂಗ್​ಗೆ ಬಂದ ಸೌತ್ ಆಫ್ರಿಕಾ ಆಲ್ಮೋಸ್ಟ್ ಟಾರ್ಗೆಟ್ ಹತ್ತತ್ರ ಬಂದಿದ್ರು. ಆದ್ರೆ ಎರಡನೇ ಇನ್ನಿಂಗ್ಸ್​ನ ಕಡೆಯ 5 ಓವರ್​ಗಳಲ್ಲಿ ಭಾರತ ಪಂದ್ಯವನ್ನ ಕಂಟ್ರೋಲ್​ಗೆ ತಗೊಂಡಿತ್ತು. ಡೆತ್ ಔವರ್​ಗಳಲ್ಲಿ ಹರಿಣಪಡೆಯನ್ನ ಸೋಲಿಸಿ 7 ರನ್​ಗಳಿಂದ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ರು. ಸೋ ಗಾಯದ ನೋವಿನಲ್ಲಿರೋ ಸೌತ್ ಆಫ್ರಿಕನ್ಸ್ ಈಗ ಸೂಪರ್ 8ನಲ್ಲಿ ಭಾರತದ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳೋಕೆ ಕಾಯ್ತಿದ್ದಾರೆ.

2009ರ ಟೂರ್ನಿಯ ಸೂಪರ್ 8 ಸುತ್ತಿನಲ್ಲಿ ಸೋತಿದ್ದ ಭಾರತ!

ಟಿ-20 ವಿಶ್ವಕಪ್​ನ ಗ್ರೂಪ್ 1ನಲ್ಲಿರೋ ನಾಲ್ಕೂ ತಂಡಗಳು ಸೋಲಿಲ್ಲದೆ ಸೂಪರ್ 8ಗೆ ಬಂದಿರೋದ್ರಿಂದ ಈ ತಂಡಗಳನ್ನ ಡೆತ್ ಗ್ರೂಪ್ ಅಂತಾನೇ ಕರೆಯಲಾಗ್ತಿದೆ. ಭಾರತ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗೇ ಸೌತ್ ಆಫ್ರಿಕಾ ತಂಡಗಳು ಒಂದೇ ಗುಂಪಿನಲ್ಲಿದ್ದು ಭಾರತೀಯರ ನಿದ್ದೆಗೆಡಿಸಿದೆ. ಟಿ20 ಇತಿಹಾಸದಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಂದೇ ಸೂಪರ್-8 ಗುಂಪಿನಲ್ಲಿ ಇರೋದು ಇದೇ ಮೊದ್ಲೇನಲ್ಲ. ಆದ್ರೆ 2009ರಲ್ಲಿ, ಭಾರತ ಎಲ್ಲಾ ಮೂರು ಪಂದ್ಯಗಳನ್ನು ಸೋತು ಟೂರ್ನಮೆಂಟ್‌ನಿಂದ ಹೊರಬಿದ್ದಿತ್ತು. ಹೀಗಾಗಿ ಈ ಬಾರಿಯೂ ಭಾರತಕ್ಕೆ ಇಂಥಾದ್ದೊಂದು ಥ್ರೆಟ್ ಇದೆ. ಅದೂ ಅಲ್ದೇ ಜಿಂಬಾಬ್ವೆ ಟೀಂ ಕೂಡ ಈ ಸಲ ಮೋಸ್ಟ್ ಡೇಂಜರಸ್ ಆಗಿದ್ದು ಸಿಕಂದರ್ ರಾಜಾ ಕ್ಯಾಪ್ಟನ್ಸಿಯಲ್ಲಿ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡವನ್ನ ಸೋಲಿಸಿದ್ದಾರೆ.

ಸದ್ಯ ಈ ಬಾರಿಯ ಟೂರ್ನಿಯಲ್ಲಿ ಸೌತ್ ಆಫ್ರಿಕಾ ತಂಡ ಉತ್ತಮ ಫಾರ್ಮ್‌ನಲ್ಲಿದ್ದು, ಕೆನಡಾ ವಿರುದ್ಧ 57 ರನ್‌ಗಳ ಜಯ ಸಾಧಿಸಿದ್ರು. ನೆಕ್ಸ್​​​ಟ್ ಅಫ್ಘಾನಿಸ್ತಾನ ವಿರುದ್ಧ ಡಬಲ್ ಸೂಪರ್ ಓವರ್ ಗೆಲುವಿನೊಂದಿಗೆ ಕಂ ಬ್ಯಾಕ್ ಮಾಡಿದ್ರು. ನೆಕ್ಸ್​ಟ್ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ್ರು. ಕೊನೆಗೆ ಯುಎಇ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿದ್ದಾರೆ. ಇತ್ತ ಭಾರತ ಕೂಡ ನಾಲ್ಕಕ್ಕೆ ನಾಲ್ಕು ಪಂದ್ಯಗಳನ್ನ ಗೆದ್ದಿದೆ. ಗ್ರೂಪ್ ಸ್ಟೇಜ್​ಗಳಲ್ಲಿ ವೀಕ್ ಟೀಮ್​ಗಳೂ ಇದ್ದಿಂದ್ರಿಂದ ಎಲ್ಲಾ ಪಂದ್ಯಗಳನ್ನ ಗೆದ್ಕೊಂಡ್ ಬಂದಿದ್ದಾರೆ. ಬಟ್ ಅಸಲಿ ಪಿಕ್ಚರ್ ಈಗ ಸ್ಟಾರ್ಟ್ ಆಗುತ್ತೆ.

Shantha Kumari

Leave a Reply

Your email address will not be published. Required fields are marked *