ಇಂಡಿಯಾ VS ಸೌತ್ ಆಫ್ರಿಕಾ – ಶತಕ ಹೊಡೆಯುತ್ತಾರಾ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ?

ಇಂಡಿಯಾ VS ಸೌತ್ ಆಫ್ರಿಕಾ – ಶತಕ ಹೊಡೆಯುತ್ತಾರಾ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ?

ಇಂಡಿಯಾ VS ಸೌತ್ ಆಫ್ರಿಕಾ.. ಪಾಯಿಂಟ್ಸ್​​ ಟೇಬಲ್​ನಲ್ಲಿ ನಂ.1 ಮತ್ತು ನಂ.2 ಟೀಂಗಳ ಮಧ್ಯೆ ಜಿದ್ದಾಜಿದ್ದಿನ ಫೈಟ್ ಭಾನುವಾರ ನಡೆಯಲಿದೆ. ರಾಬಿನ್​ ರೌಂಡ್ ಸ್ಟೇಜ್​ನಲ್ಲಿ ಟೀಂ ಇಂಡಿಯಾ ಎದುರಿಸೋಕೆ ಬಾಕಿ ಇದ್ದ ಏಕೈಕ ಬಲಿಷ್ಠ ಎದುರಾಳಿ ಅಂದ್ರೆ ದಕ್ಷಿಣ ಆಫ್ರಿಕಾ ಮಾತ್ರ. ಆದ್ರೆ ಈ ಮ್ಯಾಚ್​​ ಆಲ್​ಮೋಸ್ಟ್​​ ಭಾರತದ ಭವಿಷ್ಯವನ್ನೇ ನಿರ್ಧರಿಸಬಹುದು.

ಇದನ್ನೂ ಓದಿ:   ಸೆಮಿಫೈನಲ್ ರೇಸ್‌ನಲ್ಲಿ ಅಫ್ಘಾನಿಸ್ತಾನ – ಬಾಕಿಯಿರುವ ಎರಡು ಪಂದ್ಯಗಳಲ್ಲಿ ಗೆದ್ದರೆ ಅಫ್ಘಾನಿಸ್ತಾನಕ್ಕೆ ಚಾನ್ಸ್

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ವಂಡೇ ಕ್ರಿಕೆಟ್​​ ಒಟ್ಟು ಮೂರು ಬಾರಿ ಡಬಲ್​ ಸೆಂಚೂರಿ ಹೊಡೆದಿರೋದು ನಿಮಗೆ ಗೊತ್ತೇ ಇರುತ್ತೆ. ಇಲ್ಲಿ ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಈ ಮೂರು ಡಬಲ್ ಸೆಂಚೂರಿ ಪೈಕಿ ಹೈಯೆಸ್ಟ್ 264 ರನ್​ಗಳನ್ನ ರೋಹಿತ್ ಹೊಡೆದಿದ್ದು ಇದೇ ಈಡನ್ ಗಾರ್ಡನ್ಸ್ ಗ್ರೌಂಡ್​ನಲ್ಲೇ. ಶ್ರೀಲಂಕಾ ವಿರುದ್ಧ ರೋಹಿತ್ 173 ಬಾಲ್​ಗಳಲ್ಲಿ 264 ರನ್ ಬಾರಿಸಿದ್ರು. 33 ಬೌಂಡ್ರಿ 9 ಸಿಕ್ಸರ್​ಗಳನ್ನ ಹೊಡೆದಿದ್ರು. ಇದುವರೆಗೂ ರೋಹಿತ್​ ಶರ್ಮಾರ ರೆಕಾರ್ಡ್​ನ್ನ ಬೀಟ್ ಮಾಡೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಹೀಗಾಗಿ ಕೊಲ್ಕತ್ತಾದಲ್ಲಿ ಸಹಜವಾಗಿಯೇ ರೋಹಿತ್ ಶರ್ಮಾರಿಂದ ಮತ್ತೊಂದು ಬಿಗ್ ಸೆಂಚೂರಿ ನಿರೀಕ್ಷಿಸಲಾಗ್ತಿದೆ.

ಕೇವಲ ರೋಹಿತ್ ಅಷ್ಟೇ ಅಲ್ಲ, ವಿರಾಟ್​ ಕೊಹ್ಲಿಯ 49ನೇ ಶತಕಕ್ಕಾಗಿಯೂ ಎಲ್ರೂ ಕಾಯ್ತಾ ಇದ್ದಾರೆ. ಈ ವರ್ಲ್ಡ್​​ಕಪ್​ನಲ್ಲಿ ಮೂರು ಬಾರಿ ವಿರಾಟ್ ಸೆಂಚೂರಿ ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಕೊಲ್ಕತ್ತಾದಲ್ಲಾದ್ರೂ ಕೊಹ್ಲಿ ರೆಕಾರ್ಡ್​ ಸೆಂಚೂರಿ ಮಾಡ್ತಾರಾ ಅನ್ನೋ ಕುತೂಹಲ ಕೂಡ ಇದೆ.

ಇನ್ನು ಈ ಮ್ಯಾಚ್​ನಲ್ಲಿ ಕೆಲ ಕೀ ಕಾಂಟೆಸ್ಟ್​ಗಳು ಕೂಡ ನಡೆಯಲಿವೆ. ಟೀಂ ಇಂಡಿಯಾ ಓಪನರ್​ ರೋಹಿತ್ ಶರ್ಮಾ ಮತ್ತು ಸೌತ್ ಆಫ್ರಿಕಾ ಓಪನಿಂಗ್ ಬೌಲರ್ ಕಗಿಸೊ ರಬಾಡ ನಡುವೆ ಬ್ಯಾಟಲ್ ತುಂಬಾನೆ ಇಂಟ್ರೆಸ್ಟಿಂಗ್ ಆಗಿರುತ್ತೆ. ರೋಹಿತ್ ಶರ್ಮಾ ಈ ವರ್ಲ್ಡ್​ಕಪ್​ನಲ್ಲಿ ಇದುವರೆಗೆ 7 ಮ್ಯಾಚ್​ಗಳಲ್ಲಿ 402 ರನ್ ಮಾಡಿದ್ದಾರೆ. ಅತ್ತ ರಬಾಡ 11 ವಿಕೆಟ್​ಗಳನ್ನ ಪಡೆದಿದ್ದಾರೆ. ಇನ್ನು ಈಡನ್​ ಗಾರ್ಡನ್ಸ್​ನದ್ದು ಬೌನ್ಸಿ ಪಿಚ್ ಬೇರೆ. ಹೀಗಾಗಿ ರಬಾಡ ಬೌಲಿಂಗ್​ಗೆ ರೋಹಿತ್ ಶರ್ಮಾ ಪುಲ್​ ಶಾಟ್ ಮೂಲಕ ಎಷ್ಟು ಸಿಕ್ಸರ್​ ಹೊಡೀತಾರೊ ನೋಡ್ಬೇಕು. ವೇಯ್ಟ್​ & ಸೀ.. ರೋಹಿತ್ VS ರಬಾಡ ಬ್ಯಾಟಲ್.

ವಿರಾಟ್ ಕೊಹ್ಲಿ VS ಮಾರ್ಕೊ ಜೇನ್ಸನ್. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಬ್ಬರೂ ಇದೇ ಮೊದಲ ಬಾರಿಗೆ ಮುಖಾಮುಖಿಯಾಗ್ತಿದ್ದಾರೆ. ಸೌತ್​ ಆಫ್ರಿಕಾ ಆಲ್ರೌಂಡರ್ ಮಾರ್ಕೊ ಜೇನ್ಸನ್ ಈ ವರ್ಲ್ಡ್​ಕಪ್​ನಲ್ಲಿ ಇದುವರೆಗೆ 16 ವಿಕೆಟ್​ಗಳನ್ನ ಪಡೆದಿದ್ದಾರೆ. ಹೀಗಾಗಿ ಕೊಹ್ಲಿ ಮತ್ತು ಮಾರ್ಕೊ ಜೇನ್ಸನ್ ಹಣಾಹಣಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿರುತ್ತೆ.

ಇದಿಷ್ಟೇ ಅಲ್ಲ, ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಸೌತ್​ ಆಫ್ರಿಕಾ ಓಪನರ್​ ಕ್ವಿಂಟನ್ ಡಿಕಾಕ್ ಮಧ್ಯೆಯೂ ದೊಡ್ಡ ಮಟ್ಟದ ಕ್ಲ್ಯಾಶ್ ನಡೆಯಬಹುದು. ಇಬ್ಬರೂ ಕೂಡ ಬೆಸ್ಟ್ ಫಾರ್ಮ್​​ನಲ್ಲಿರುವ ಪ್ಲೇಯರ್ಸ್​ಗಳು. ಕ್ವಿಂಟನ್ ಡಿಕಾಕ್ ಅಂತೂ ಈ ವರ್ಲ್ಡ್​ಕಪ್​​ನಲ್ಲೇ 4 ಸೆಂಚೂರಿ ಹೊಡೆದಿದ್ದಾರೆ. ಬುಮ್ರಾ 15 ವಿಕೆಟ್​ಗಳನ್ನ ಪಡೆದಿದ್ದಾರೆ. ಇವರಿಬ್ಬರ ಜೊತೆಗೆ ಮತ್ತೊಂದು ಕಾಂಟೆಸ್ಟ್ ಕೂಡ ಇದೆ. ನಮ್ಮ ಸ್ಪಿನ್ನರ್ ಕುಲ್​ದೀಪ್ ಯಾದವ್ ಮತ್ತು ಸೌತ್​ ಆಫ್ರಿಕಾ ಮಿಡ್ಲ್ ಆರ್ಡರ್ ಬ್ಯಾಟ್ಸ್​ಮನ್ ಹೆನ್ರಿಚ್ ಕ್ಲಾಸೆನ್ ಮಧ್ಯೆ, ಕ್ಲಾಸೆನ್ ನಿಜಕ್ಕೂ ಭಯಾನಕ ಬ್ಯಾಟ್ಸ್​ಮನ್​. ಬರೀ ಸಿಕ್ಸರ್​ಗಳಲ್ಲೇ ಸ್ಕೋರ್ ಮಾಡ್ತಾರೆ. ಹೀಗಾಗಿ ನಮ್ಮಲ್ಲಿ ಮಿಡ್ಲ್​ ಆರ್ಡರ್​ನಲ್ಲಿ ಬೌಲಿಂಗ್​ಗೆ ಇಳಿಯುವ ಕುಲ್​ದೀಪ್​ ಯಾದವ್​ರ ಮೇನ್ ಟಾರ್ಗೆಟ್ ಹೆನ್ರಿಚ್ ಕ್ಲಾಸೆನ್ ಆಗಿರ್ತಾರೆ. ಈ ಟಾಸ್ಕ್​​ನ್ನ ರೋಹಿತ್​ ಕುಲ್​ದೀಪ್ ಯಾದವ್​​ಗೆ ನಿಡಬಹುದು.

ಹಾಗಿದ್ರೆ ದಕ್ಷಿಣ ಆಫ್ರಿಕಾ ವಿರುದ್ಧದ ಮ್ಯಾಚ್​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೀಗಿದೆ.

ಟೀಂ ಇಂಡಿಯಾ PLAYING-11

ರೋಹಿತ್ ಶರ್ಮಾ

ಶುಬ್ಮನ್ ಗಿಲ್

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಕೆ.ಎಲ್.ರಾಹುಲ್

ಸೂರ್ಯಕುಮಾರ್ ಯಾದವ್

ರವೀಂದ್ರ ಜಡೇಜ

ಕುಲ್​ದೀಪ್ ಯಾದವ್

ಮೊಹಮ್ಮದ್ ಶಮಿ

ಮೊಹಮ್ಮದ್ ಸಿರಾಜ್

ಜಸ್ಪ್ರಿತ್ ಬುಮ್ರಾ

 

Sulekha