IND Vs SA.. ಪ್ಲೇಯಿಂಗ್ 11 ಟ್ವಿಸ್ಟ್ – 107.. 0.. 0 ರನ್.. ಸಂಜು ಆಡಿಸ್ಬೇಕಾ?
ಮಳೆ ಭೀತಿ.. ಪಂದ್ಯ ರದ್ದು.. ಯಾರಿಗೆ ಲಾಭ?
ಟೀಂ ಇಂಡಿಯಾಗೆ ಸರಣಿ ಕೈವಶ ಮಾಡಿಕೊಳ್ಳೋ ತವಕ.. ಸೌತ್ ಆಫ್ರಿಕಾ ಪಡೆಗೆ ತವರಿನಲ್ಲಿ ಪ್ರತಿಷ್ಠೆಯ ಆಟ. ಎರಡು ತಂಡಗಳ ನಡುವಿನ ನಾಲ್ಕನೇ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಮೈದಾನವೂ ಸಿದ್ಧಗೊಂಡಿದೆ. ಆದ್ರೆ ಇಂದಿನ ಪಂದ್ಯ ಎರಡೂ ಟೀಂಗಳಿಗೂ ತುಂಬಾನೇ ಇಂಟಾರ್ಟೆಂಟ್. ಅಷ್ಟಕ್ಕೂ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ? ಸ್ಟಾರ್ ಬ್ಯಾಟರ್ಸ್ ಡ್ರಾಪ್ ಆಗ್ತಾರಾ? ಆರ್ಸಿಬಿ ಬೌಲರ್ಸ್ ಗೆ ಕೊನೇ ಪಂದ್ಯದಲ್ಲಾದ್ರೂ ಚಾನ್ಸ್ ಸಿಗುತ್ತಾ? ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: TV ಶೋಗಿಂತ ದನ ಕಾಯೋದು ವಾಸಿ! – ತುಕಾಲಿ ಸಂತು ಹೆಂಡ್ತಿ ಮಾನಸಗೆ ಏನಾಯ್ತು?
ನಾಲ್ಕು ಪಂದ್ಯಗಳ ಟಿ-20 ಸರಣಿಯಲ್ಲಿ ಈಗಾಗ್ಲೇ ಮೂರು ಮ್ಯಾಚ್ಗಳು ಮುಗಿದಿದೆ. ಟೀಂ ಇಂಡಿಯಾ ಮೊದಲ ಹಾಗೂ ಮೂರನೇ ಪಂದ್ಯ ಗೆದ್ದಿದ್ರೆ 2 ಪಂದ್ಯವನ್ನ ಸೌತ್ ಆಫ್ರಿಕಾ ಗೆದ್ದುಕೊಂಡಿತ್ತು. ಹೀಗಾಗಿ ಭಾರತ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಕೊನೇ ಪಂದ್ಯವನ್ನ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋಕೆ ಟೀಂ ಇಂಡಿಯಾ ಪ್ಲ್ಯಾನ್ ಮಾಡಿದ್ರೆ ಅತ್ತ ಸೌತ್ ಆಫ್ರಿಕಾ ಕೂಡ ತವರಿನಲ್ಲಿ ಮುಖಭಂಗ ತಪ್ಪಿಸಿಕೊಳ್ಳೋಕೆ ಸ್ಟ್ರಾಟಜಿಗಳನ್ನ ರೆಡಿ ಮಾಡ್ಕೊಂಡಿದೆ. ಸರಣಿ ಗೆಲ್ಲದಿದ್ರೂ ಸಮಬಲ ಸಾಧಿಸೋಕೆ ಕಸರತ್ತು ನಡೆಸ್ತಿದೆ.
ಜೋಹಾನ್ಸ್ ಬರ್ಗ್ ನಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿ ಸೂರ್ಯಕುಮಾರ್!
ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಒಂದೇ ಒಂದು ಟಿ-20 ಸರಣಿಗಳನ್ನೂ ಸೋತಿಲ್ಲ. ಸೋ ಇದೀಗ ಸೌತ್ ಆಫ್ರಿಕಾ ವಿರುದ್ಧವೂ ಗೆಲ್ಲುವ ಕಾನ್ಫಿಟೆನ್ಸ್ನಲ್ಲಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಭಾರತ ಗೆದ್ದರೆ, ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ. ಹಾಗೇನಾದ್ರೂ ದಕ್ಷಿಣ ಆಫ್ರಿಕಾ ಗೆದ್ದರೆ ಸರಣಿ 2-2 ರಿಂದ ಸಮಬಲಗೊಳ್ಳಲಿದೆ. ಬಟ್ ಈಗಾಗ್ಲೇ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಸೂರ್ಯಕುಮಾರ್ ಪಡೆ, ಜೋಹಾನ್ಸ್ ಬರ್ಗ್ನಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಮೊದಲ ಮ್ಯಾಚ್ ಸೆಂಚುರಿ.. 2, 3 ಪಂದ್ಯದಲ್ಲಿ ಸಂಜು ಝೀರೋ!
ಹೌದು. ಸೌತ್ ಆಫ್ರಿಕಾದಲ್ಲಿ ಸರಣಿ ಕೈವಶ ಮಾಡಿಕೊಳ್ಳೋ ವಿಶ್ವಾಸದಲ್ಲಿರುವಂಥ ಭಾರತ ತಂಡಕ್ಕೆ ಕಾಡ್ತಿರೋ ಭಯವೇ ಬ್ಯಾಟಿಂಗ್ ಸಮಸ್ಯೆ. ಫಸ್ಟ್ ಮ್ಯಾಚ್ನಲ್ಲಿ ಸಿಡಿಲಿನಂತೆ ಅಬ್ಬರಿಸಿ ಸೆಂಚುರಿ ಸಿಡಿಸಿದ್ದ ಸಂಜು ಸ್ಯಾಮ್ಸನ್ ಆ ಬಳಿಕ ನಡೆದ 2 ಪಂದ್ಯಗಳಲ್ಲಿ ಅಟ್ಟರ್ ಫ್ಲ್ಯಾಪ್ ಆಗಿದ್ರು. ಎರಡು, 3ನೇ ಮ್ಯಾಚ್ನಲ್ಲಿ ಡಕೌಟ್ ಆಗಿದ್ರು. ಸಂಜು ಸ್ಯಾಮ್ಸನ್ರ ಸತತ 2 ಗೋಲ್ಡನ್ ಡಕ್, ಟೀಮ್ ಮ್ಯಾನೇಜ್ಮೆಂಟ್ ನಿದ್ದೆಗೆಡಿಸಿದೆ. ಮತ್ತೊಂದೆಡೆ ಟೀಂ ಇಂಡಿಯಾದ ಡೇರಿಂಗ್ ಌಂಡ್ ಡ್ಯಾಶಿಂಗ್ ಯಂಗ್ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ, ಸತತ ವೈಫಲ್ಯದ ಬಳಿಕ ಕಮ್ ಬ್ಯಾಕ್ ಮಾಡಿದ್ದಾರೆ. ಇನ್ನು ಕಳೆದ ಮ್ಯಾಚ್ನಲ್ಲಿ ಭರ್ಜರಿ ಶತಕ ಬಾರಿಸಿದ್ದ ತಿಲಕ್ ವರ್ಮಾ ಇಂದಿನ ಪಂದ್ಯದಲ್ಲೂ ಭರವಸೆ ಮೂಡಿಸಿದ್ದಾರೆ. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅಷ್ಟೇನು ಸೌಂಡ್ ಮಾಡ್ದೇ ಇದ್ರೂ ಯಾವಾಗ ಬೇಕಿದ್ರೂ ಸ್ಫೋಟಕ ಬ್ಯಾಟಿಂಗ್ ಮಾಡ್ಬೋದು.
ರಿಂಕು ಮತ್ತು ಪಾಂಡ್ಯ ಬ್ಯಾಟಿಂಗ್ ನತ್ತ ಎಲ್ಲರ ಚಿತ್ತ!
ಕಳೆದ ಮೂರು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಓವರ್ ಕಾನ್ಫಿಡೆನ್ಸ್ನಲ್ಲೇ ಬ್ಯಾಟ್ ಬೀಡ್ತಿದ್ದಾರೆ. 3 ಪಂದ್ಯಗಳಿಂದ 59 ರನ್ ಕಲೆ ಹಾಕಿದ್ದಾರೆ. 88ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿರುವ ಪಾಂಡ್ಯ ಜೋಹಾನ್ಸ್‌ಬರ್ಗ್‌ನಲ್ಲಿ ಹೆಚ್ಚು ರನ್ ಸಿಡಿಸೋ ನಿರೀಕ್ಷೆ ಮೂಡಿಸಿದ್ದಾರೆ. ಬಟ್ ಸಿಕ್ಸರ್ ಕಿಂಗ್ ರಿಂಕು ಸಿಂಗ್ ಮಾತ್ರ ಫುಲ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಫೈನಲ್ ಫೈಟ್ನಲ್ಲಿ ರಿಂಕು, ಬ್ಯಾಟಿಂಗ್ನಲ್ಲಿ ತನ್ನ ಪರಾಕ್ರಮ ತೋರಿಸಬೇಕಿದೆ. ಇಷ್ಟು ಆಟಗಾರರ ಪೈಕಿ ಒಂದಿಬ್ರು ಸೆಟಲ್ ಆಗಿ ಬ್ಯಾಟ್ ಬೀಸಿದ್ರೂ ಕೂಡ ರನ್ ಮಳೆ ಸುರಿಯೋದ್ರಲ್ಲಿ ಡೌಟೇ ಇಲ್ಲ.
ಆರ್ ಸಿಬಿಯ ವೇಗಿಗಳಿಗೆ ಸಿಗುತ್ತಾ ಪದಾರ್ಪಣೆ ಭಾಗ್ಯ?
ಕಳೆದ ಪಂದ್ಯದಲ್ಲಿ ಪಂಜಾಬ್ನ ಡೈನಾಮಿಕ್ ಆಲ್ರೌಂಡರ್ ರಮಣ್ದೀಪ್ ಸಿಂಗ್, ಸೆಂಚೂರಿಯನ್ನಲ್ಲಿ ಡೆಬ್ಯು ಮಾಡಿದ್ದಾರೆ. ಆದ್ರೆ ಬೆಂಚ್ನಲ್ಲಿ ಕಾಯುತ್ತಿರುವ ಕನ್ನಡಿಗ ವೇಗಿ ವೈಶಾಖ್ ವಿಜಯ್ಕುಮಾರ್, ಕೊನೆ ಪಂದ್ಯದಲ್ಲಿ ಡೆಬ್ಯು ಕನಸು ಕಾಣುತ್ತಿದ್ದಾರೆ. ಮಹತ್ವದ ಪಂದ್ಯದಲ್ಲಿ ಕ್ಯಾಪ್ಟನ್ ಸೂರ್ಯ, ಕನ್ನಡಿಗನಿಗೆ ಡೆಬ್ಯು ಕ್ಯಾಪ್ ಕೊಡಿಸುತ್ತಾರಾ, ಇಲ್ವಾ ಅನ್ನೋದೇ, ಸಸ್ಪೆನ್ಸ್ ಆಗಿದೆ. ಯಶ್ ದಯಾಳ್ರದ್ದೂ ಇದೇ ಕಥೆಯಾಗಿದೆ.
ತವರಿನಲ್ಲಿ ಟೀಂ ಇಂಡಿಯಾಗೆ ತಿರುಗೇಟು ನೀಡಲು ಸೌತ್ ಆಫ್ರಿಕಾ ಪ್ಲ್ಯಾನ್!
ತವರಿನ ಸರಣಿಯಲ್ಲಿ ಈಗಾಗ್ಳೇ ಹಿನ್ನಡೆ ಅನುಭವಿಸಿರೋ ಹರಿಣಗಳ ಪಡೆ ಸರಣಿ ಸಮಬಲಕ್ಕಾಗಿ ಹೋರಾಟ ನಡೆಸಲಿದೆ. ಇಂದು ಟೀಮ್ ಇಂಡಿಯಾಕ್ಕೆ ತಿರುಗೇಟು ನೀಡುವ ತವಕದಲ್ಲಿದೆ. ಈ ಪಿಚ್, ಬ್ಯಾಟರ್ಸ್ಗೆ ಹೆಚ್ಚು ನೆರವಾಗೋದ್ರಿಂದ, ಆಫ್ರಿಕನ್ನರು ಟೀಮ್ ಇಂಡಿಯಾ ಬೌಲರ್ಗಳ ಮೇಲೆ ಸವಾರಿ ನಡೆಸೋ ಲೆಕ್ಕಾಚಾರದಲ್ಲಿದ್ದಾರೆ. ಭಾರತ ತಂಡ ಏಳನೇ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿಯನ್ನು ಆಡುತ್ತಿದೆ. ಈ ಪೈಕಿ ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಒಂದು ಸಲ ಮಾತ್ರ ಸರಣಿ ಸೋಲು ಕಂಡಿದೆ. ಇನ್ನು ಜೋಹಾನ್ ಬರ್ಗ್ಸ್ ಪಿಚ್ನಲ್ಲಿ ಟೀಂ ಇಂಡಿಯಾ ಒಟ್ಟು 6 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಉಭಯ ತಂಡಗಳು 30 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 17 ಮತ್ತು ದಕ್ಷಿಣ ಆಫ್ರಿಕಾ 12 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದಲ್ಲಿ ಯಾವುದೇ ರಿಸಲ್ಟ್ ಬಂದಿಲ್ಲ.
ಮಳೆಯಿಂದ ಪಂದ್ಯ ರದ್ದಾದ್ರೆ ಭಾರತಕ್ಕೆ ಸರಣಿ ಕೈವಶ!
ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಇದ್ದು ಪಂದ್ಯದ ಆರಂಭದ ಬಳಿಕ ಶೇಕಡಾ 70 ರಷ್ಟು ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇನಾದ್ರೂ ಮಳೆ ಬಂದು ಮ್ಯಾಚ್ ರದ್ದಾದರೆ 2 ತಂಡಕ್ಕೂ ಪಾಯಿಂಟ್ಸ್ ಹಂಚಿಕೆ ಮಾಡಲಾಗುತ್ತೆ. ಹೀಗಾದ್ರೂ ಕೂಡ ಈಗಾಗ್ಳೇ 2 ಪಂದ್ಯಗಳನ್ನ ಗೆದ್ದಿರುವ ಭಾರತ ಸರಣಿ ವಶಪಡಿಸಿಕೊಳ್ಳಲಿದೆ. ಕೊನೇ ಪಂದ್ಯ ರಾತ್ರಿ 8:30ಕ್ಕೆ ಆರಂಭವಾಗಲಿದ್ದು, ವಾಂಡರರ್ಸ್ ಸ್ಟೇಡಿಯಂನಲ್ಲಿ ಎರಡು ತಂಡಗಳು ಗೆಲುವಿಗಾಗಿ ಹಣಾಹಣಿ ನಡೆಸಲಿವೆ. ಇನ್ನು ಫೈನಲ್ಲಾಗಿ ಹೇಳೋದಾದ್ರೆ ಟೀಂ ಇಂಡಿಯಾದಲ್ಲಿ ಕಳೆದ ಪಂದ್ಯದಲ್ಲಿ ಆಡಿದ್ದ ಆಟಗಾರರೇ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯೋದು ಪಕ್ಕಾ. ಆದ್ರೆ ಸಂಜು ಸ್ಯಾಮ್ಸನ್ ಒಂದೇ ಒಂದು ಪಂದ್ಯಕ್ಕೆ ಸೈಲೆಂಟ್ ಆಗಿರೋದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಗೆ ತಲೆಬಿಸಿ ತಂದಿಟ್ಟಿದೆ.