IND Vs SA.. ಯಾರಿಗೆ ಬ್ಯಾಡ್​ಲಕ್? – ಭಾರತಕ್ಕೆ ಬ್ಯಾಟಿಂಗ್ ಫೇಲ್ಯೂರ್ ಶಾಪ
3ನೇ ಪಂದ್ಯ.. 3 ಟಾಸ್ಕ್.. ಗೆಲ್ಲೋದ್ಯಾರು?

IND Vs SA.. ಯಾರಿಗೆ ಬ್ಯಾಡ್​ಲಕ್? – ಭಾರತಕ್ಕೆ ಬ್ಯಾಟಿಂಗ್ ಫೇಲ್ಯೂರ್ ಶಾಪ3ನೇ ಪಂದ್ಯ.. 3 ಟಾಸ್ಕ್.. ಗೆಲ್ಲೋದ್ಯಾರು?

ಫಸ್ಟ್ ಮ್ಯಾಚ್ ನಲ್ಲಿ ಸೂಪರ್ ಡೂಪರ್ ಬ್ಯಾಟಿಂಗ್. ಸೆಕೆಂಡ್ ಮ್ಯಾಚ್​ನಲ್ಲಿ ಬ್ಯಾಟಿಂಗ್ ಲೈನಪ್ ಕಂಪ್ಲೀಟ್ ಫೇಲ್. ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಒಂದು ಪಂದ್ಯವನ್ನ ಗೆದ್ದು ಮತ್ತೊಂದು ಮ್ಯಾಚ್ ಕೈ ಚೆಲ್ಲಿಕೊಂಡಿರೋ ಭಾರತಕ್ಕೆ ಇವತ್ತಿನ ಫೈಟ್ ತುಂಬಾನೇ ಇಂಪಾರ್ಟೆಂಟ್. ಇವತ್ತಿನ ಮ್ಯಾಚ್ ಗೆದ್ರಷ್ಟೇ ಸಿರೀಸ್ ಗೆಲ್ಲೋ ಅವಕಾಶ ಇದೆ. ಇಲ್ದಿದ್ರೆ ಮುಂದಿನ ಪಂದ್ಯದಲ್ಲಿ ಡು ಆರ್ ಡೈ ಎನ್ನುವ ಸ್ಥಿತಿ ನಿರ್ಮಾಣವಾಗುತ್ತೆ. ಹೀಗಾಗಿ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಬದಲಾವಣೆ ಮಾಡೋ ಸಾಧ್ಯತೆ ಇದೆ. ಅಷ್ಟಕ್ಕೂ ಇಂದಿನ ಮ್ಯಾಚ್​ಗೆ ಭಾರತ ಹೇಗೆ ಸಿದ್ಧವಾಗಿದೆ? ಪ್ಲೇಯಿಂಗ್​ 11ನಲ್ಲಿ ಯಾರಿಗೆಲ್ಲಾ ಚಾನ್ಸ್? ಆರ್ ಸಿಬಿ ಆಟಗಾರರಿಗೆ ಸಿಗುತ್ತಾ ಪದಾರ್ಪಣೆ ಭಾಗ್ಯ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದೇವೇಗೌಡರು ನನ್ನ ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿಯೇ? – ಜಮೀರ್‌ ಪರ ಬ್ಯಾಟ್‌ ಬೀಸಿದ ಸಿಎಂ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಸೆಂಚುರಿಯನ್‌ ಸ್ಟೇಡಿಯಂ  ಈಗಾಗ್ಲೇ ರೆಡಿಯಾಗಿದೆ. ಎರಡೂ ಟೀಮ್​ಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿರೋದ್ರಿಂದ 3ನೇ ಪಂದ್ಯ ಬಾರೀ ಕುತೂಹಲ ಮೂಡಿಸಿದೆ. ಈ ಪಂದ್ಯವನ್ನ ಗೆದ್ದವ್ರೇ ಸರಣಿಯಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಮೊದಲ ಮ್ಯಾಚ್​ನಲ್ಲಿ ಅಬ್ಬರಿಸಿದ್ದ ಭಾರತೀಯ ಆಟಗಾರರು ಸೆಕೆಂಡ್ ಮ್ಯಾಚ್​ನಲ್ಲಿ ಸೈಲೆಂಟ್ ಆಗಿದ್ರು. ಹೀಗಾಗಿ 3ನೇ ಪಂದ್ಯಕ್ಕೆ ಒಂದಷ್ಟು ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯೋಕೆ ಮ್ಯಾನೇಜ್​ಮೆಂಟ್ ಪ್ಲ್ಯಾನ್ ಮಾಡಿದೆ. ಯಾಕಂದ್ರೆ ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಅದರಲ್ಲೂ ಜೆರಾಲ್ಡ್ ಕೊಯೆಟ್ಜಿ ಮತ್ತು ಮಾರ್ಕೊ ಜಾನ್ಸನ್ ಅವರ ಮಾರಕ ಬೌಲಿಂಗ್ ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.

ಸೋಲಿನಿಂದ ಪಾರಾಗ್ಬೇಕು ಅಂದ್ರೆ ಇಂದಿನ ಪಂದ್ಯ ಗೆಲ್ಲಲೇಬೇಕು!

ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು ಒಂದೊಂದು ಮ್ಯಾಚ್ ಗೆದ್ದು ಸಮಬಲ ಸಾಧಿಸಿವೆ. ಭಾರತ ಸರಣಿಯನ್ನ ಗೆಲ್ಬೇಕು ಅಂದ್ರೆ ಅಥವಾ ಸೋಲಿನಿಂದ ಪಾರಾಗ್ಬೇಕು ಅಂದ್ರೆ ಸೆಂಚುರಿಯನ್‌ನಲ್ಲಿ ಇಂದು ನಡೆಯಲಿರುವ ಮೂರನೇ ಟಿ20 ಪಂದ್ಯವನ್ನು ಗೆಲ್ಲಲೇಬೇಕು. ಮೊದಲ ಪಂದ್ಯದಲ್ಲಿ 61 ರನ್‌ಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಭಾರತ ಸುಲಭವಾಗಿ ಸೋಲಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ 3 ವಿಕೆಟ್​​ಗಳಿಂದ ಸೋಲೊಪ್ಪಿಕೊಂಡಿತ್ತು.

ಪ್ಲೇಯಿಂಗ್ 11ನಲ್ಲಿ ಇಬ್ಬರಿಗೆ ಕೊಕ್?

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆಯಿದೆ. ಅಕ್ಷರ್ ಪಟೇಲ್​ ಬದಲಿಗೆ ರಮಣ್​ದೀಪ್ ಸಿಂಗ್​ಗೆ ಚಾನ್ಸ್ ಸಿಗುವ ನೀಡಬಹುದು. ಹಾಗೆಯೇ ಅವೇಶ್ ಖಾನ್ ಸ್ಥಾನದಲ್ಲಿ ಯಶ್ ದಯಾಳ್ ಕಣಕ್ಕಿಳಿಯಬಹುದು. ಬಟ್ ಬ್ಯಾಟಿಂಗ್​ನಲ್ಲಿ ಆರಂಭಿಕರಾಗಿ  ಸಂಜು ಸ್ಯಾಮ್ಸನ್​ ಜೊತೆ ಅಭಿಷೇಕ್ ಶರ್ಮಾ ಮುಂದುವರೆಯಬಹುದು. ಇನ್ನು ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಎಡಗೈ ದಾಂಡಿಗ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದು, ಆರನೇ ಕ್ರಮಾಂಕವು ರಿಂಕು ಸಿಂಗ್ ಪಾಲಾಗಲಿದೆ. ಹಾಗೆಯೇ ಏಳನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಆಗಿ ಅಕ್ಷರ್ ರಮಣ್​ದೀಪ್​ ಸಿಂಗ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಇನ್ನು ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಹಾಗೂ ಯಶ್ ದಯಾಳ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಯುವ ಕ್ರಿಕೆಟಿಗರಿಗೆ ಸಿಗುತ್ತಾ ಪದಾರ್ಪಣೆ ಭಾಗ್ಯ?

ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್ ಮೂರನೇ ಪಂದ್ಯದಲ್ಲಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ಯೋಜನೆಯಲ್ಲಿದೆ. ಆರ್‌ಸಿಬಿ ಮತ್ತು ಕೆಕೆಆರ್ ಯುವ ಆಟಗಾರರಾದ ಯಶ್ ದಯಾಳ್, ವಿಜಯ್​ ಕುಮಾರ್ ವೈಶಾಕ್ ಮತ್ತು ರಮಣದೀಪ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ರಮಣದೀಪ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಂಡರೆ ಭಾರತದ ಬ್ಯಾಟಿಂಗ್ ಕ್ರಮಾಂಕ ಮತ್ತಷ್ಟು ಬಲಗೊಳ್ಳಲಿದೆ. ಹಾಗಾಗಿ ಅಕ್ಷರ್ ಪಟೇಲ್ ಬದಲಿಗೆ ರಮಣದೀಪ್ ಅವರನ್ನು ಆಯ್ಕೆ ಮಾಡುವ ಯೋಜನೆಯಲ್ಲಿದೆ ಮ್ಯಾನೇಜ್​ಮೆಂಟ್. ರಮಣ್​ ದೀಪ್ 200ರ ಸ್ಟ್ರೈಕ್​ನಲ್ಲಿ ಟಿ20 ಕ್ರಿಕೆಟ್​ನಲ್ಲಿ ರನ್​ಗಳಿಸಿದ್ದಾರೆ. ಮತ್ತೊಂದೆಡೆ ಅರ್ಷದೀಪ್ ಸಿಂಗ್ ಅಥವಾ ಆವೇಶ್​ ಖಾನ್​ ಬದಲಿಗೆ ಯಶ್ ದಯಾಳ್ ತಂಡದಲ್ಲಿ ಸ್ಥಾನ ಪಡೆಯಬಹುದು. ಅಲ್ದ ಪಂದ್ಯ ನಡೆಯಲಿರುವ ಮೈದಾನ ಸ್ಪಿನ್​ಗೆ ಸಹಾಯಕವಾಗಿಲ್ಲ. ಹೀಗಾಗಿ ವೇಗದ ಬೌಲರ್​ಗೆ ಮಣೆಯಾಕುವ ಸಾಧ್ಯತೆ ಇದೆ. ಹಾಗಾಗಿ ರವಿ ವಿಷ್ಣೋಯ್ ಬದಲಿಗೆ ಕರ್ನಾಟಕದ ವೇಗದ ಬೌಲರ್​ ವಿಜಯ್ ಕುಮಾರ್ ವೈಶಾಕ್ ಅವರಿಗೆ ಅವಕಾಶ ನೀಡಬಹುದು.

ಅಭಿಷೇಕ್ ಶರ್ಮಾಗೆ ಆಫ್ರಿಕಾ ಸರಣಿಯೇ ಕೊನೆ ಪಂದ್ಯವಾಗುತ್ತಾ?

ಐಪಿಎಲ್​ನಲ್ಲಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ ನೋಡೋದೇ ಚೆಂದ. ಹೈದ್ರಾಬಾದ್ ಪರ ಹೊಡಿಬಡಿ ಆಟವಾಡಿದ್ದ ಅಭಿಗೆ ಟೀಂ ಇಂಡಿಯಾದ ಟಿ-20 ಸರಣಿಯಲ್ಲಿ ಚಾನ್ಸ್ ನೀಡಲಾಗಿತ್ತು. ಆದ್ರೆ ಅದ್ಯಾಕೋ ಏನೂ ಬ್ಯಾಟಿಂಗ್​ನಲ್ಲಿ ಸದ್ದು ಮಾಡೋಕೆ ಆಗ್ತಿಲ್ಲ. ತಮ್ಮ ವೃತ್ತಿಜೀವನದ ಎರಡನೇ ಪಂದ್ಯದಲ್ಲೇ ಅದ್ಭುತ ಶತಕ ಸಿಡಿಸಿದ್ದ ಯುವ ಎಡಗೈ ಬ್ಯಾಟ್ಸ್ ಮನ್ ಅಭಿಷೇಕ್ ಆ ಬಳಿಕ ಒಂದೇ ಒಂದು ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಅಭಿಷೇಕ್ ಭಾರತದ ಪರ ಇದುವರೆಗೆ 9 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 10ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ್ದು ಕೇವಲ 3 ಸಲ ಮಾತ್ರ.  ಇವತ್ತಿನ ಪಂದ್ಯದಲ್ಲೂ ಇದೇ ಫೇಲ್ಯೂರ್ ಕಂಟಿನ್ಯೂ ಆದ್ರೆ ಇದೇ ಕೊನೆಯ ಅವಕಾಶ ಎನ್ನಲಾಗ್ತಿದೆ.

ಇನ್ನು ಪಂದ್ಯ ನಡೆಯಲಿರುವ ಸೆಂಚುರಿಯನ್ ಸ್ಟೇಡಿಯಂ ಪಿಚ್ ವೇಗ ಮತ್ತು ಬೌನ್ಸ್ ಗೆ ಹೆಚ್ಚು ಪ್ರಸಿದ್ಧಿಯಾಗಿದೆ. ಹಾಗಾಗಿ ವೇಗಿಗಳು ಈ ಪಿಚ್ ನಲ್ಲಿ ಬ್ಯಾಟರ್ ಗಳಿಗೆ ಸಿಂಹಸ್ವಪ್ನವಾಗಬಲ್ಲರು. ಇನ್ನು ಹೆಚ್ಚುವರಿ ಬೌನ್ಸ್ ಸಿಗುವುದರಿಂದ ಸ್ಪಿನ್ನರುಗಳೂ ಪ್ರಾಬಲ್ಯ ಮೆರೀಬಹುದು. ಇಲ್ಲಿ ನಡೆದಿರುವಂಥ 14 ಪಂದ್ಯಗಳ ಪೈಕಿ 8ರಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡಗಳೇ ಜಯಿಸಿವೆ. ಸೋ ಅಂತಿಮವಾಗಿ ಇಂದಿನ ಪಂದ್ಯವನ್ನ ಭಾರತ ಗೆಲ್ಲಲೇಬೇಕಿದೆ. ಇಲ್ದಿದ್ರೆ ತವರಿನ ಲಾಭ ಪಡೆದು ಸೌತ್ ಆಫ್ರಿಕಾ ಆಟಗಾರರು ಭಾರತವನ್ನ ಸೋಲಿಸೋಕೆ ರೆಡಿಯಾಗಿದ್ದಾರೆ.

Shwetha M