ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು – 51 ರನ್ಗಳಿಂದ ಗೆದ್ದ ಹರಿಣ ಪಡೆ

ಟೀಮ್ ಇಂಡಿಯಾ ನ್ಯೂ ಚಂಡೀಗಢ್ನಲ್ಲಿ ಹೀನಾಯ ಸೋಲು ಕಂಡಿದೆ. ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 51 ರನ್ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಪ್ರವಾಸಿ ದಕ್ಷಿಣ ಆಫ್ರಿಕಾ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. ಸವಾಲಿನ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಟರ್ಗಳು ರನ್ಕಲೆ ಹಾಕುವಲ್ಲಿ ವಿಫಲರಾದರು. ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ಒತ್ತಡವನ್ನು ಮೆಟ್ಟಿನಿಂತು ರನ್ ಕಲೆ ಹಾಕಲಿಲ್ಲ. ಸೂರ್ಯಕುಮಾರ್ ಯಾದವ್ ಸಹ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಕ್ಷರ್ ಪಟೇಲ್ 21 ರನ್ ಬಾರಿಸಿದರು.
ಮೊದಲ ಟಿ20 ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ 2ನೇ ಪಂದ್ಯದಲ್ಲಿ ಕೇವಲ 20 ರನ್ ಬಾರಿಸುವಲ್ಲಿ ಸಫಲರಾದರು. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ 27 ರನ್ ಸೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡಲಿಲ್ಲ.
ಇದನ್ನೂ ಓದಿ: ಮನೆಯಲ್ಲಿ ಗೂಬೆಯ ಪ್ರತಿಮೆ ಫೋಟೋ ಇಟ್ಟುಕೊಳ್ಳಬಹುದಾ? – ಇಟ್ಟರೇ ಹೇಗೆ ಇಡಬೇಕು ಗೊತ್ತಾ?
ಭರವಸೆಯ ಬ್ಯಾಟರ್ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 34 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಭಾರತ 19.1 ಓವರ್ಗಳಲ್ಲಿ 162 ರನ್ ಕಲೆ ಹಾಕಿ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾದ ಪರ ಒಟ್ನೀಲ್ ಬಾರ್ಟ್ಮನ್ 4 ವಿಕೆಟ್ ಕಬಳಿಸಿದರೆ, ಲುಂಗಿ ಎನ್ಗಿಡಿ ಮತ್ತು ಮಾರ್ಕೊ ಜಾನ್ಸನ್ ತಲಾ 2 ವಿಕೆಟ್ ಪಡೆದರು.
ವಾಸ್ತವವಾಗಿ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಆಗಿರಲಿ ಅಥವಾ ಬೌಲಿಂಗ್ ಆಗಿರಲಿ, ಎರಡೂ ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿತು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಎಂಟು ಓವರ್ಗಳಲ್ಲಿ ಒಟ್ಟು 99 ರನ್ಗಳನ್ನು ಬಿಟ್ಟುಕೊಟ್ಟರು. ವರುಣ್ ಚಕ್ರವರ್ತಿ ಹೊರತುಪಡಿಸಿ, ಎಲ್ಲಾ ಬೌಲರ್ಗಳು ಅತ್ಯಂತ ದುಬಾರಿಯಾದರು. ಅದರಲ್ಲೂ ಟೀಂ ಇಂಡಿಯಾದ ಬೌಲರ್ಗಳು 16 ವೈಡ್ಗಳು ಸೇರಿದಂತೆ 22 ಹೆಚ್ಚುವರಿ ರನ್ಗಳನ್ನು ಬಿಟ್ಟುಕೊಟ್ಟರು.

ನೋಡಿರಿ

