ಇಂದು ಇಂಡಿಯಾ–ಪಾಕ್ ಹೈವೋಲ್ಟೇಜ್ ಕದನ! – ಗೆಲುವಿನ ಮೇಲೆ ಟೀಂ ಇಂಡಿಯಾ ಕಣ್ಣು!

ಇಂದು, ಸೆಪ್ಟೆಂಬರ್ 5ರಂದು ಮಹಿಳಾ ಏಷ್ಯಾಕಪ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಭಾರತ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಥಾಯ್ಲೆಂಡ್ ವಿರುದ್ಧ 94 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ, ಹಾಂಗ್‌ಕಾಂಗ್ ವಿರುದ್ಧ ಬರೋಬ್ಬರಿ 137 ರನ್‌ಗಳ ಜಯ ದಾಖಲಿಸಿ ಭಾರತ ತನ್ನ ಬಲವನ್ನು ಮತ್ತೊಮ್ಮೆ ತೋರಿಸಿದೆ.
ಇದನ್ನೂ ಓದಿ:15-4=11.. ಇಷ್ಟೇ ಪ್ಲೇಯರ್ಸ್ ಸಾಕಾ? – AFG ಸರಣಿಯಲ್ಲೂ BCCI ಚೆಲ್ಲಾಟ
ವಿಶೇಷವಾಗಿ ಸ್ಮೃತಿ ಮಂಧನಾ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹಾಂಗ್‌ಕಾಂಗ್ ವಿರುದ್ಧ 124 ರನ್‌ಗಳ ಸ್ಫೋಟಕ ಶತಕ ಸಿಡಿಸಿದ ಮಂಧನಾ, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇತ್ತ ಪಾಕಿಸ್ತಾನ ಕೂಡ ಥಾಯ್ಲೆಂಡ್ ವಿರುದ್ಧ 35 ರನ್‌ಗಳ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿದೆ. ಆದರೆ ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ಪಾಕಿಸ್ತಾನಕ್ಕೆ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ.
ಭಾರತದ ಪರ ಮಂಧನಾ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಹೀಗಾಗಿ ಇದು ಕೇವಲ ಮತ್ತೊಂದು ಲೀಗ್ ಪಂದ್ಯವಲ್ಲ—ಭಾರತ-ಪಾಕಿಸ್ತಾನ ಕ್ರಿಕೆಟ್ ಕದನದ ರೋಚಕ ಅಧ್ಯಾಯವಾಗಲಿದೆ.

ನೋಡಿರಿ

