IND Vs PAK.. ರೋಹಿತ್ OUT? – 1,2,3,4.. ಹೇಗಿದೆ ಪ್ಲೇಯಿಂಗ್ 11?
ಪಾಕಿಗಳಿಗೆ ಕೊಹ್ಲಿ, ಪಾಂಡ್ಯದೇ ಚಿಂತೆ! 

IND Vs PAK.. ರೋಹಿತ್ OUT? – 1,2,3,4.. ಹೇಗಿದೆ ಪ್ಲೇಯಿಂಗ್ 11?ಪಾಕಿಗಳಿಗೆ ಕೊಹ್ಲಿ, ಪಾಂಡ್ಯದೇ ಚಿಂತೆ! 

ಕ್ರಿಕೆಟ್ ಲೋಕದ ಬದ್ಧ ವೈರಿಗಳ ಕಾದಾಟ ನೋಡೋಕೆ ಇಡೀ ಜಗತ್ತೇ ಕಾದು ಕುಳಿತಿದೆ. ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ರಣರೋಚಕ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಭಾನುವಾರ ಟಿ-20 ವಿಶ್ವಕಪ್​ನ ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿದ್ದು, ಭಾರೀ ಕುತೂಹಲ ಮೂಡಿಸಿದೆ. ಈಗಾಗ್ಲೇ ಅಮೆರಿಕ ಮುಂದೆ ಮಂಡಿಯೂರಿರೋ ಪಾಕಿಸ್ತಾನ ಕಮ್ ಬ್ಯಾಕ್ ಮಾಡೋ ಕನಸು ಕಾಣ್ತಿದ್ರೆ ಇತ್ತ ಟೀಂ ಇಂಡಿಯಾ ಆಟಗಾರರು ಪಾಕ್ ಪಡೆಯನ್ನ ಬಗ್ಗು ಬಡಿಯೋಕೆ ಸನ್ನದ್ಧರಾಗ್ತಿದ್ದಾರೆ. ಭಾರತ ಮತ್ತು ಪಾಕ್ ಪಂದ್ಯದ ಬಗೆಗಿನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಿಯಾಲಿಟಿ ಶೋ ಮುಳುವಾಯ್ತಾ? – ಚಂದು, ನಿವಿ ನಡುವೆ ವಿಲನ್ ಯಾರು?

ಟಿ20 ವಿಶ್ವಕಪ್​ನ ಹೈವೊಲ್ಟೇಜ್ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಭಾನುವಾರ ನ್ಯೂಯಾರ್ಕ್​ನಲ್ಲಿ ನಡೆಯಲಿರುವ ವಿಶ್ವಕಪ್​ನ 19ನೇ ಪಂದ್ಯದಲ್ಲಿ ಕಡುವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಣಕ್ಕಿಳಿಯಲಿವೆ. ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಪಾಕ್​ಗೆ ಪಾಲಿಗೆ ನಿರ್ಣಾಯಕವಾಗಿದೆ. ಯಾಕಂದ್ರೆ ಈಗಾಗ್ಲೇ ಫಸ್ಟ್ ಪಂದ್ಯದಲ್ಲೇ ಮುಗ್ಗರಿಸಿರೋ ಪಾಕಿಸ್ತಾನ ಅದೂ ಕೂಡ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಸೋತು ಸುಣ್ಣವಾಗಿದೆ. ಈಗ ಬಲಿಷ್ಠ ಭಾರತವನ್ನ ಎದುರಿಸಲು ಸಜ್ಜಾಗ್ತಿದೆ. ಹಾಗೇನಾದ್ರೂ ಭಾನುವಾರ ಕೂಡ ಪಾಕಿಗಳ ಫ್ಲ್ಯಾಪ್ ಶೋ ರಿಪೀಟ್ ಆದ್ರೆ ವಿಶ್ವಕಪ್ ಟೂರ್ನಿಯಿಂದ ಗಂಟು ಮೂಟೆ ಕಟ್ಟೋದು ಫಿಕ್ಸ್ ಆಗಲಿದೆ. ಮತ್ತೊಂದೆಡೆ ಐರ್ಲೆಂಡ್ ವಿರುದ್ಧ ಗೆದ್ದು ಜೋಶ್​ನಲ್ಲಿರೋ ಟೀಂ ಇಂಡಿಯಾ ಪಾಕ್ ಆಟಗಾರರನ್ನ ಬೆಂಡೆತ್ತಿ ಬ್ರೇಕ್ ಹಾಕೋಕೆ ಭರ್ಜರಿ ಸಿದ್ಧತೆ ಮಾಡಿಕೊಳ್ತಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿದೆ? ರೋಹಿತ್ ಶರ್ಮಾ ಆಡ್ತಾರೋ ಇಲ್ವೋ ಅನ್ನೋ ಬಗ್ಗೆ ಹೇಳ್ತೇನೆ ನೋಡಿ.

ಭಾರತ ಪ್ಲೇಯಿಂಗ್ 11! 

ಟೀಮ್ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ವಿಶ್ವದ ಕ್ಲಾಸ್‌ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಕಣಕ್ಕಿಳಿಯೋದು ಫಿಕ್ಸ್.  ಇವರಿಬ್ಬರೂ ಪವರ್‌ ಪ್ಲೇನಲ್ಲಿ ಪಾಕ್‌ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ರನ್‌ ಗಳಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲುವು ಸುಲಭವಾಗುತ್ತದೆ. ಹಾಗೇ  ಇಬ್ಬರಲ್ಲಿ ಒಬ್ಬರು ಬಿಗ್ ಇನ್ನಿಂಗ್ಸ್ ಕಟ್ಟಬೇಕು. ಮೂರನೇ ಕ್ರಮಾಂಕದಲ್ಲಿ ರಿಷಭ್ ಪಂಥ್‌ ಆಡುವುದು ಪಕ್ಕಾ.  ನಾಲ್ಕನೇ ಕ್ರಮಾಂಕದಲ್ಲಿ ವಿಶ್ವದ ಸ್ಟಾರ್‌ ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಕ್ರೀಸ್​​ಗೆ ಎಂಟ್ರಿ ಕೊಡ್ತಾರೆ. ಸೂರ್ಯ ಸೆಟಲ್ ಆದ್ರು ಅಂದ್ರೆ ರನ್‌ವೇಗ ಹೆಚ್ಚಾಗೋದ್ರಲ್ಲಿ ಅನುಮಾನ ಇಲ್ಲ. ಐದನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ಹಾಗೂ ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಇವರು ಬ್ಯಾಟಿಂಗ್‌ನಲ್ಲಿ ಪಾಕ್‌ ತಂಡವನ್ನ ಕಾಡಬಲ್ಲರು. ಈ ಹಿಂದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಂಡ್ಯ ಸಿಕ್ಸರ್‌ಗಳಿಗೆ ಪಾಕ್‌ ಕಂಗಾಲಾಗಿತ್ತು. ಇವರ ಬಳಿಕ ರವೀಂದ್ರ ಜಡೇಜಾ ಬರ್ತಾರೆ. ಆಲ್‌ರೌಂಡರ್‌ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್‌ ಇಬ್ಬರೂ ಮೊದಲ ಪಂದ್ಯದಲ್ಲಿ ಆಡಿದ್ದರು. ಇವರಿಬ್ಬರಲ್ಲಿ ಒಬ್ಬರಿಗೆ ಕೊಕ್ ಸಿಗುವ ಸಾಧ್ಯತೆ ಇದೆ. ಇವರ ಬದಲಿಗೆ ಕುಲ್‌ದೀಪ್ ಯಾದವ್ ಕಾಣಿಸಿಕೊಳ್ಳಬಹುದು. ಇವರ ಎಂಟ್ರಿ ಇಂದ ಟೀಮ್ ಇಂಡಿಯಾದ ಸ್ಪಿನ್ ವಿಭಾಗ ಇನ್ನು ಬಲಾಢ್ಯವಾಗುತ್ತದೆ. ಇನ್ನು ಅಮೆರಿಕದಲ್ಲಿನ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಸಹಾಯ ನೀಡುತ್ತಿದ್ದು, ಟೀಮ್ ಇಂಡಿಯಾ ಮೂವರು ವೇಗಿಗಳಿಂದ ಕಣಕ್ಕೆ ಇಳಿಯಲಿದೆ. ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ, ಅರ್ಷದೀಪ್‌ ಸಿಂಗ್, ಮೊಹಮ್ಮದ್‌ ಸಿರಾಜ್‌ ತಂಡದಲ್ಲಿ ಕಾಣಿಸಿಕೊಳ್ಳುವ ವೇಗಿಗಳಾಗಿದ್ದಾರೆ.

ಇನ್ನು ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆತಂಕ ಎದುರಾಗಿದೆ. ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ಆದ್ರೆ  ಶುಕ್ರವಾರ ನೆಟ್ಸ್​​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ್ದ ರೋಹಿತ್ ಶರ್ಮಾಶ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಇದರಿಂದಾಗಿ ಅಭ್ಯಾಸ ನಿಲ್ಲಿಸಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಹೀಗಾಗಿ ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕೆ ಗೈರಾಗ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಈ ಪಂದ್ಯಕ್ಕೆ ಮಳೆಯಾಗುವ ಆತಂಕ ಇದ್ದು, ಹಾಗೇನಾದ್ರೂ ಪಂದ್ಯ ಕ್ಯಾನ್ಸಲ್ ಆದ್ರೆ ಉಭಯ ತಂಡಗಳಿಗೂ ಒಂದೊಂದು ಅಂಕ ಸಿಗಲಿದೆ. ಇಲ್ಲಿ ಪಂದ್ಯದ ಬಗ್ಗೆ ಎಷ್ಟೇ ನಿರೀಕ್ಷೆಗಳು ಇದ್ರೂ ಕೂಡ ನ್ಯೂಯಾರ್ಕ್​ನ ನಸ್ಸೌಂ ಕೌಂಟಿ ಅಂತಾರಾಷ್ಟ್ರೀಯ ಮೈದಾನದ ಪಿಚ್​​​​ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಸ್ಪರ್ಧಾತ್ಮಕ ಕ್ರಿಕೆಟ್ ಸಾಧ್ಯವಿಲ್ಲವೆಂದು ಎಂದು ಕ್ರಿಕೆಟ್​​​ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕ ಆಟಗಾರರು ಇಂಜುರಿಗೆ ತುತ್ತಾಗಿದ್ದು ಪಿಚ್​​​​​ ಬಗ್ಗೆ ಭೀತಿ ಹೆಚ್ಚಿಸಿದೆ. ಇಂತಹ ಡೇಂಜರಸ್ ಪಿಚ್​ನಲ್ಲಿ ಜೂನ್​​ 9 ರಂದು ಇಂಡೋ-ಪಾಕಿಸ್ತಾನ ತಂಡಗಳು ಕಾದಾಡಬೇಕಿದೆ.  ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಯುಎಸ್​ಎ ಕಾಲಮಾನ ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಅಂದರೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಸಾಂಪ್ರದಾಯಿಕ ಎದುರಾಳಿಗಳ ಕದನಕ್ಕೆ ಈ ಬಾರಿ ನ್ಯೂಯಾರ್ಕ್​​ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಒಟ್ನಲ್ಲಿ ಟಿ-20 ವಿಶ್ವಕಪ್​ನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಮತ್ತೊಮ್ಮೆ ಗೆದ್ದು ಬಾ ಇಂಡಿಯಾ ಅಂತಾ ಕೋಟ್ಯಂತರ ಭಾರತೀಯರು ವಿಶ್ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *