ಇಂಡೋ-ಪಾಕ್ ಪಂದ್ಯಗಳ ಸರಣಿ – 14 ತಿಂಗಳಲ್ಲಿ 14 ರೋಚಕ ಮ್ಯಾಚ್
ಟೂರ್ನಮೆಂಟ್ ಅಲ್ಲ ಬ್ಯುಸಿನೆಸ್ ಅಡ್ಡಾ

ಇಂಡೋ-ಪಾಕ್ ಪಂದ್ಯಗಳ ಸರಣಿ – 14 ತಿಂಗಳಲ್ಲಿ 14 ರೋಚಕ ಮ್ಯಾಚ್ಟೂರ್ನಮೆಂಟ್ ಅಲ್ಲ ಬ್ಯುಸಿನೆಸ್ ಅಡ್ಡಾ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಗೆ ನೆಕ್ಸ್​ಟ್ ಲೆವೆಲ್ ಫ್ಯಾನ್ ಬೇಸ್ ಇದೆ. ಮೆನ್ಸ್, ವುಮೆನ್ಸ್, ಅಂಡರ್ 19, ಬ್ಲೈಂಡ್ ಕ್ರಿಕೆಟ್ ಹೀಗೆ ಯಾವುದೇ ಫಾರ್ಮೆಟ್​ನಲ್ಲೂ ಮುಖಾಮುಖಿಯಾದ್ರೂ ಹೈವೋಲ್ಟೇಜ್ ಮ್ಯಾಚ್ ಆಗಿರುತ್ತೆ. ಅಲ್ಲಿ ಸೋಲು ಗೆಲುವಿಗಿಂತ ಜಾಸ್ತಿ ಎರಡೂ ತಂಡಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತೆ. ಬಟ್ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಎರಡೂ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳಿಗೆ ಅವಕಾಶವಿಲ್ಲ.  ಮಲ್ಟಿನೇಷನ್ಸ್ ಟೂರ್ನಮೆಂಟ್​ಗಳಲ್ಲಿ ಮಾತ್ರ ಮುಖಾಮುಖಿ ಆಗ್ತಿರೋದು.

ಇದನ್ನೂ ಓದಿ : RCB ರಿಲ್ಯಾಕ್ಸ್.. CSKಗೆ ಟೆನ್ಷನ್ – MI, KKR, LSGಗೆ ಕ್ಯಾಪ್ಟನ್ಸಿ ಕಗ್ಗಂಟು  

ಭಾರತ ಮತ್ತು ಪಾಕಿಸ್ತಾನ ನಡುವೆ 2012ರಿಂದ ಈಚೆಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಅವಕಾಶವಿಲ್ಲ. ಹೀಗಿದ್ರೂ ಕಳೆದ 14 ತಿಂಗಳಲ್ಲಿ ಬರೋಬ್ಬರಿ 14 ಪಂದ್ಯಗಳು ನಡೆದಿವೆ. ಸೀನಿಯರ್ಸ್​ ಟೀಮ್​ನಿಂದ ಹಿಡಿದು ಮಹಿಳಾ ಕ್ರಿಕೆಟ್, ಅಂಡರ್-19  ಹಾಗೂ A ತಂಡಗಳವರೆಗೆ ಭಾರತ-ಪಾಕ್ ನಡುವೆ ಕಂಟಿನ್ಯುಯಸ್ ಆಗಿ ಪಂದ್ಯಗಳು ನಡೆಯುತ್ತಲೇ ಇವೆ. 2025ರ ಸೆಪ್ಟೆಂಬರ್​ನಿಂದ 2026ರ ನವೆಂಬರ್ 22ರವರೆಗೆ ಭಾರತ ಮತ್ತು ಪಾಕಿಸ್ತಾನದ ತಂಡಗಳು ಬೇರೆ ಬೇರೆ ಮಾದರಿ ಕ್ರಿಕೆಟ್​ನಲ್ಲಿ ಬರೋಬ್ಬರಿ 14 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಹಿರಿಯರ ಪುರುಷರ ತಂಡ, ಮಹಿಳಾ ತಂಡ, ಅಂಡರ್-19 ತಂಡ ಹಾಗೂ ಎಮರ್ಜಿಂಗ್ ಆಟಗಾರರ ತಂಡಗಳ ಪಂದ್ಯಗಳೂ ಸೇರಿವೆ.

ಸರಣಿಗಳು ನಡೆಯದಿದ್ರೂ ಇಂಡೋ-ಪಾಕ್ ಪಂದ್ಯಗಳಿಗಿಲ್ಲ ಕೊರತೆ!

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಿಂತು 14 ವರ್ಷಗಳೇ ಕಳೆದಿವೆ. 2012-13ರಲ್ಲಿ ಪಾಕಿಸ್ತಾನ ಭಾರತ ಪ್ರವಾಸ ಕೈಗೊಂಡಿದ್ದೇ ಕೊನೆಯ ದ್ವಿಪಕ್ಷೀಯ ಸೀಮಿತ ಓವರ್‌ಗಳ ಸರಣಿ. ಕೊನೆಯ ಟೆಸ್ಟ್ ಸರಣಿ ನಡೆದಿದ್ದು 2007ರಲ್ಲಿ. ಆದರೆ ಐಸಿಸಿ ಮತ್ತು ಎಸಿಸಿ ಟೂರ್ನಿಗಳಲ್ಲಿ ಮಾತ್ರ ಎರಡೂ ತಂಡಗಳು ನಿರಂತರವಾಗಿ ಮುಖಾಮುಖಿಯಾಗುತ್ತಿವೆ. ಏಷ್ಯಾಕಪ್, ಟಿ20 ವಿಶ್ವಕಪ್, ಅಂಡರ್-19 ಏಷ್ಯಾಕಪ್ ಹಾಗೂ ರೈಸಿಂಗ್ ಸ್ಟಾರ್ಸ್ ಟೂರ್ನಿಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯಗಳು ನಡೆಯುತ್ತಲೇ ಇವೆ. 2025ರ ಸೆಪ್ಟೆಂಬರ್‌ನಿಂದ 2026ರ ನವೆಂಬರ್‌ವರೆಗೆ 14 ಸಲ ಮುಖಾಮುಖಿ ಆಗಿದ್ದಾರೆ. ಅಂದ್ರೆ ದ್ವಿಪಕ್ಷೀಯ ಸರಣಿ ಇಲ್ಲದಿದ್ದರೂ ವರ್ಷಕ್ಕೆ ಒಂದು ಸರಣಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಂದ್ಯಗಳು ನಡೆಯುತ್ತಿವೆ. 2007ರಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆದಿದ್ದ ಕೊನೆಯ ವರ್ಷದಲ್ಲಿ ಎರಡೂ ದೇಶಗಳು ಒಟ್ಟು 10 ಪಂದ್ಯಗಳನ್ನಾಡಿದ್ದವು. ಆದರೆ ಈಗ 14 ತಿಂಗಳಲ್ಲಿ 14 ಪಂದ್ಯಗಳು ನಡೆದಿರುವುದು ಗಮನ ಸೆಳೆದಿದೆ. ದ್ವಿಪಕ್ಷೀಯ ಕ್ರಿಕೆಟ್ ಬೇಡ ಎನ್ನುವ ನಿರ್ಧಾರದ ನಡುವೆಯೂ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಪದೇಪದೇ ಪಂದ್ಯಗಳನ್ನು ಆಯೋಜಿಸುವುದರ ಹಿಂದೆ ಬ್ಯುಸಿನೆಸ್ ಮೈಂಡ್ ಇದೆ.

ಇಂಡೋ-ಪಾಕ್ ಪಂದ್ಯಗಳಿಗೆ ಜಗತ್ತಿನಾದ್ಯಂತ ಕ್ರೇಜ್!

ಕ್ರಿಕೆಟ್​ನಲ್ಲಿ ಯಾವುದೇ 2 ತಂಡಗಳ ನಡುವೆ ಪಂದ್ಯಗಳು ನಡೆದ್ರೆ ಆಯಾ ತಂಡಗಳ ದೇಶಗಳಲ್ಲಿ ಮಾತ್ರ ನೋಡ್ತಾರೆ. ಬಟ್ ಇಂಡೋ-ಪಾಕ್ ಮ್ಯಾಚಸ್ ಅಂದ್ರೆ ಅದು ವರ್ಲ್ಡ್ ವೈಡ್ ಕ್ರೇಜ್ ಇರುತ್ತೆ. ಈ ಪಂದ್ಯಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರೇಕ್ಷಕ ವರ್ಗವಿದೆ. ಟಿವಿ ವೀಕ್ಷಣೆ, ಡಿಜಿಟಲ್ ಸ್ಟ್ರೀಮಿಂಗ್, ಜಾಹೀರಾತು ಹಾಗೂ ಪ್ರಸಾರ ಹಕ್ಕುಗಳ ದೃಷ್ಟಿಯಿಂದ ಈ ಪಂದ್ಯಗಳಿಗೆ ಅತಿದೊಡ್ಡ ಕಮರ್ಷಿಯಲ್ಸ್ ಸಿಗುತ್ತೆ.  ಹೀಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಪ್ರಸಾರಕರು ಹಾಗೂ ಕ್ರಿಕೆಟ್ ಮಂಡಳಿಗಳು ಆದಾಯದ ಆಸೆಯಲ್ಲಿ ಈ ಪಂದ್ಯಗಳಿಗೆ ಹೆಚ್ಚಿನ ಪ್ರಿಫರೆನ್ಸ್ ಕೊಡ್ತಾರೆ. ಌಂಡ್ ಗ್ರೂಪ್ ಅಥವಾ ಲೀಗ್ ಹಂತದ ಪಂದ್ಯಗಳಲ್ಲಿ ಎರಡೂ ತಂಡಗಳನ್ನ ಒಂದೇ ಗುಂಪಿನಲ್ಲಿಟ್ಟು ಅಟ್​ಲೀಸ್ಟ್ ಒಂದು ಸಲವಾದ್ರೂ ಮುಖಾಮುಖಿ ಆಗಲೇಬೇಕು ಎನ್ನುವಂತೆ ಶೆಡ್ಯೂಲ್ ಸೆಟ್ ಮಾಡ್ತಾರೆ. ಆದ್ರೆ ಭಾರತ-ಪಾಕ್ ಪಂದ್ಯಗಳಲ್ಲಿ ಇತ್ತೀಚೆಗೆ ಆಟಗಾರರ ನಡುವಿನ ಕಿರಿಕ್​ಗಳು ಜಾಸ್ತಿಯಾಗ್ತಿವೆ. ನೋ ಶೇಕ್ ಹ್ಯಾಂಡ್ ಸೇರಿದಂತೆ ಅಂತರ ಹೆಚ್ಚಾಗ್ತಿದೆ. ಅಗ್ರೆಸ್ಸಿವ್ ಸೆಲೆಬ್ರೇಷನ್, ಆನ್ ಫೀಲ್ಡ್ ಫೈಟ್ ಮಿತಿ ಮೀರುತ್ತಿವೆ. ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲೂ ಹರ್ಷಿತ್ ರಾಣಾ ಮತ್ತು ಪಾಕಿಸ್ತಾನದ ಆಟಗಾರರ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿತ್ತು. ಇನ್ನು ಏಷ್ಯಾಕಪ್ ಟ್ರೋಫಿ ವಿವಾದವೂ ಚರ್ಚೆಯಲ್ಲಿದೆ. ಭಾರತೀಯ ಪುರುಷರ ಹಾಗೂ ಮಹಿಳಾ ತಂಡಗಳು ಪ್ರಶಸ್ತಿ ಗೆದ್ದಿದ್ದರೂ ಟ್ರೋಫಿ ಹಸ್ತಾಂತರ ಇನ್ನೂ ಕಗ್ಗಂಟಾಗೇ ಇದೆ. ಒಟ್ನಲ್ಲಿ ಭಾರತ-ಪಾಕ್ ನಡುವೆ ನಾವು ದ್ವಿಪಕ್ಷೀಯ ಸರಣಿಗಳನ್ನ ನಡೆಸಲ್ಲ ಎಂದು ದೇಶಾಭಿಮಾನ ತೋರುವ ಕ್ರಿಕೆಟ್ ಮಂಡಳಿಗಳು ಅದೇ ದುಡ್ಡಿನಾಸೆಗಾಗಿ ಬಹುರಾಷ್ಟ್ರೀಯ ಟೂರ್ನಮೆಂಟ್​ಗಳಲ್ಲಿ ಪದೇಪದೆ ಪಂದ್ಯಗಳನ್ನ ಆಯೋಜನೆ ಮಾಡ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

Shantha Kumari

Leave a Reply

Your email address will not be published. Required fields are marked *