IND Vs PAK ಟಿಕೆಟ್ ಮಾರಾಟದಲ್ಲಿ ಚರಿತ್ರೆ – ಒಂದೇ ಗಂಟೆಯಲ್ಲೇ SOLD OUT
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಮುಗಿದಿದ್ದು, ಇನ್ನೇನು ಏಕದಿನ ಸರಣಿ ಆರಂಭ ಆಗ್ಲಿದೆ. ಈ ಮೂರು ಪಂದ್ಯಗಳ ಸರಣಿ ಫೆಬ್ರವರಿ 6 ರಿಂದ ಶುರುವಾಗಲಿದೆ. ಆ ಬಳಿಕ ಕ್ರಿಕೆಟ್ ಲೋಕವೇ ಕಾಯ್ತಿರೋ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಅದರಲ್ಲೂ ಭಾರತ-ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾಯ್ತಿದ್ದಾರೆ. ಈಗಾಗ್ಲೇ ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನಕ್ಕೆ ಟಿಕೆಟ್ಗಳು ಕೂಡ ಮಾರಾಟವಾಗಿದ್ದು ಜಸ್ಟ್ ಒಂದು ಗಂಟೆಯಲ್ಲೇ ಸೋಲ್ಡ್ ಔಟ್ ಆಗಿವೆ.
ಇದನ್ನೂ ಓದಿ : ಕ್ರೀಡಾಂಗಣಗಳು ಸಿದ್ಧವಾಗದೆ ಇರುವುದೇ ತಲೆನೋವು – ಪಾಕ್ ನಲ್ಲಿ ನಡೆಯಲ್ವಾ ಉದ್ಘಾಟನಾ ಪಂದ್ಯ?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ದುಬೈನಲ್ಲಿ ಫೆಬ್ರವರಿ 23 ರಂದು ನಡೆಯಲಿದೆ. ಕೆಲ ಕ್ರಿಕೆಟ್ ಫ್ಯಾನ್ಸ್ ಅಂತೂ ಉಭಯ ರಾಷ್ಟ್ರಗಳ ನಡುವಿನ ಪಂದ್ಯವನ್ನ ಮೈದಾನದಲ್ಲೇ ಹೋಗಿ ನೋಡ್ಬೇಕು ಅಂತಾ ತುದಿಗಾಲಲ್ಲಿ ನಿಂತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ ಫೆಬ್ರವರಿ 3 ರಂದು ಟಿಕೆಟ್ ಮಾರಾಟದ ಘೋಷಣೆ ಮಾಡಿತ್ತು. ಹೀಗೆ ಘೋಷಣೆಯಾಗಿದ್ದೇ ತಡ ಟಿಕೆಟ್ ಖರೀದಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ವರದಿಗಳ ಪ್ರಕಾರ, ಅನೌನ್ಸ್ ಆದ ಒಂದು ಗಂಟೆಯೊಳಗೆ ಮಾರಾಟವಾಗಿವೆ. ಅಷ್ಟ್ರಲ್ಲೇ ಡಿಜಿಟಲ್ ಪೋರ್ಟಲ್ನಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಾಗಿ ಕ್ಯೂನಲ್ಲಿದ್ರು ಎನ್ನಲಾಗಿದೆ.
ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೀತಾ ಇದೆ. ಫೆಬ್ರವರಿ 19 ರಿಂದ ಟೂರ್ನಿ ಆರಂಭವಾದ್ರೆ ಮಾರ್ಚ್ 9 ರಂದು ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬೀಳಲಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 9ನೇ ಆವೃತ್ತಿ ಇದು. ಇದಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿಯ 8 ಆವೃತ್ತಿಗಳನ್ನು ಆಡಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಹಾಲಿ ಚಾಂಪಿಯನ್ ಆಗಿದೆ. ಕೊನೆಯ ಬಾರಿಗೆ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದಿದ್ದು, ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ಪಾಕಿಸ್ತಾನ ಪ್ರಶಸ್ತಿ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ 30.3 ಓವರ್‌ಗಳಲ್ಲಿ 158 ರನ್‌ಗಳಿಗೆ ಆಲೌಟ್ ಆಗಿತ್ತು. ಬಟ್ ಈ ಸಲ ಹಿಂದಿನ ಸೋಲಿನ ಸೇಡನ್ನ ತೀರಿಸಿಕೊಳ್ಳೋಕೆ ಟೀಂ ಇಂಡಿಯಾ ಪ್ಲ್ಯಾನ್ ಮಾಡಿಕೊಳ್ತಿದೆ.