ತಿಲಕ್ ತಿಣುಕಾಟಕ್ಕೆ ಸೋತ ಭಾರತ – PAK ಪ್ಲೇಯರ್ಸ್ & ಫ್ಯಾನ್ಸ್ ಹುಚ್ಚಾಟ
ಅಪರೂಪಕ್ಕೆ ಗೆದ್ದವರ ಗಾಂಚಾಲಿ!

ತಿಲಕ್ ತಿಣುಕಾಟಕ್ಕೆ ಸೋತ ಭಾರತ – PAK ಪ್ಲೇಯರ್ಸ್ & ಫ್ಯಾನ್ಸ್ ಹುಚ್ಚಾಟಅಪರೂಪಕ್ಕೆ ಗೆದ್ದವರ ಗಾಂಚಾಲಿ!

ಭಾರತದ ವಿರುದ್ಧದ ಪಂದ್ಯಗಳಲ್ಲಿ ಸೋತಾಗ್ಲೇ ಪಾಕಿಸ್ತಾನಿಯರಿಗೆ ಲಂಗು ಲಗಾಮು ಇರೋದಿಲ್ಲ. ಇನ್ನು ಅಪರೂಪಕ್ಕೊಮ್ಮೆ ಗೆದ್ರೆ ಕೇಳ್ಬೇಕಾ. ಭಾನುವಾರ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಿಯಲ್ಲಿ ಭಾರತದ ಎದುರು ಗೆದ್ದ ಪಾಕಿಸ್ತಾನಿ ಪ್ಲೇಯರ್ಸ್ ಹಾಗೇ ಫ್ಯಾನ್ಸ್ ಕೂಡ ಅತಿಯಾಗಿ ವರ್ತಿಸಿದ್ದಾರೆ.

ಇದನ್ನೂ ಓದಿ : RCB ರಿಲ್ಯಾಕ್ಸ್.. CSKಗೆ ಟೆನ್ಷನ್ – MI, KKR, LSGಗೆ ಕ್ಯಾಪ್ಟನ್ಸಿ ಕಗ್ಗಂಟು  

ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಿಯಲ್ಲಿ ಪಾಕಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ಸೋಲು ಕಂಡಿದೆ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎ ತಂಡ 49.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲೌಟ್ ಆಯಿತು. ಏಕದಿನ ಮಾದರಿಯಲ್ಲಿ 300+ ರನ್ಸ್ ಅಂದಾಗ್ಲೇ ಅದು ಬಿಗ್ ಟಾರ್ಗೆಟ್. ಹೀಗೆ 314 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ 265 ರನ್‌ಗಳಿಗೆ ಆಲೌಟ್ ಆಗೋ ಮೂಲಕ 48 ರನ್​ಗಳಿಂದಪಂದ್ಯವನ್ನ ಕೈಚೆಲ್ಲಿತು.

ಭಾರತ ಜಾರಿದ್ದೆಲ್ಲಿ?

ಬೌಲಿಂಗ್ ನಲ್ಲಿ 313 ರನ್ ಗಳನ್ನ ಬಿಟ್ಟುಕೊಟ್ಟಿದ್ದೇ ಬಿಗ್ ಟಾರ್ಗೆಟ್ ಒತ್ತಡ

ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ವೈಭವ್ (11), ಬದೋನಿ (0)ಔಟ್

42 ಎಸೆತಗಳಲ್ಲಿ 70 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿ ಅಭಿ ಔಟ್

ಆರಂಭದಿಂದಲೂ ತಿಣಕಾಡಿ ಬಾಲ್ ವೇಸ್ಟ್ ಮಾಡಿ ಒತ್ತಡ ಹೆಚ್ಚಿಸಿದ ತಿಲಕ್

149 ಎಸೆತಗಳಲ್ಲಿ 100 ರನ್ಸ್ ಸಿಡಿಸಿದ್ರೂ ಪಂದ್ಯ ಗೆಲ್ಲಿಸೋಕೆ ಸಾಧ್ಯವಾಗಲಿಲ್ಲ

56(49) ರನ್ಸ್ ಕಲೆ ಹಾಕಿ ಬ್ಯಾಟಿಂಗ್ ನಲ್ಲಿ ಫೈಟ್ ಕೊಟ್ಟ ಶಹಬಾಜ್ ಅಹ್ಮದ್

7 ಆಟಗಾರರು ಸಿಂಗಲ್ ಡಿಜಿಟ್.. 265(49.1) ರನ್ ಗಳಿಗೆ ಆಲೌಟ್

ಹೀಗೆ ಭಾರತ ಬ್ಯಾಟಿಂಗ್ ಫೇಲ್ಯೂರ್​ನಿಂದಾಗಿ ಪಂದ್ಯವನ್ನ ಸೋಲಬೇಕಾಯ್ತು. ಕ್ಯಾಪ್ಟನ್ ತಿಲಕ್ ವರ್ಮಾ ಶತಕ ಸಿಡಿಸಿ ಮಿಂಚಿದರೂ, ನಿಧಾನಗತಿಯ ಬ್ಯಾಟಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂಬ ಟೀಕೆಗಳು ವ್ಯಕ್ತವಾಗ್ತಿದೆ. ಹಾಗೇ ಪಾಕಿಸ್ತಾನ ಪರ ಆಡಿದ ಟ್ವೆಲ್ತ್ ಮ್ಯಾನ್ ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ. ಹೀಗಿದ್ರೂ ತಿಲಕ್ ವರ್ಮಾ ನನಗೆ ಉತ್ತಮ ಜೊತೆಯಾಟ ಸಿಗಲಿಲ್ಲ. ನಾನು ಮತ್ತು ಶಹಬಾಝ್ ಅಹ್ಮದ್ ನಿರ್ಮಿಸಿದ ಜೊತೆಯಾಟ ಬಹಳ ಮುಖ್ಯವಾಗಿತ್ತು. ಆದರೆ ನಾವು ರನ್ ವೇಗ ಹೆಚ್ಚಿಸಲು ಮುಂದಾದಾಗಲೇ ಶಹಬಾಝ್ ಔಟಾದರು. ಇನ್ನೆರಡು ಓವರ್ ಕ್ರೀಸ್‌ನಲ್ಲಿದ್ದಿದ್ದರೆ, ನಾನು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದೆ ಎಂದಿದ್ದಾರೆ. ಒಂದ್ಕಡೆ ಭಾರತ ಹೀಗೆ ಪಂದ್ಯ ಸೋತ್ರೆ ಮತ್ತೊಂದ್ಕಡೆ ಮೈದಾನದಲ್ಲಿ ಕಿರಿಕ್ ಕೂಡ ಆಗಿದೆ.

ಸ್ಲೆಡ್ಜ್ ಮಾಡಿ ವಿಕೆಟ್ ತೆಗೆದ ರಾಣಾ.. ಮುಗಿಬಿದ್ದ ಪಾಕ್ ಪ್ಲೇಯರ್ಸ್!

ಭಾರತ-ಪಾಕ್ ಮ್ಯಾಚ್ ಅಂದ್ರೆ ಅಲ್ಲಿ ಸೋಲು ಗೆಲುವಿಗಿಂತ ಜಾಸ್ತಿ ಉಭಯ ತಂಡಗಳ ಆಟಗಾರರ ನಡುವೆ ಕಿರಿಕ್​ಗಳು ಇದ್ದದ್ದೇ. ಌಸ್ ಯೂಶುಯಲ್ ಈ ಮ್ಯಾಚಲ್ಲೂ ಉಭಯ ತಂಡಗಳ ಕ್ಯಾಪ್ಟನ್ಸ್ ಟಾಸ್ ಟೈಮಲ್ಲಿ ಶೇಕ್ ಹ್ಯಾಂಡ್ ಮಾಡ್ಲಿಲ್ಲ.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ಪರ ಓಪನರ್​ಗಳಾದ ಶಾಮಿಲ್ ಹುಸೇನ್ ಮತ್ತು ಮಾಝ್ ಸದಾಕತ್ ಸ್ಟಾರ್ಟ್ ಚೆನ್ನಾಗಿ ಮಾಡಿದ್ರು. ಹರ್ಷಿತ್ ರಾಣಾ ಬೌಲಿಂಗ್ ವೇಳೆ ಬಿಗ್ ಹಿಟ್ಸ್ ಬರ್ತಾ ಇತ್ತು. ಇದರಿಂದ ಸಿಟ್ಟಾದ ರಾಣಾ ಪಾಕ್ ಪ್ಲೇಯರ್ಸ್ ಜೊತೆ ಮಾತಿನ ಚಕಮಕಿ ಶುರು ಮಾಡಿದ್ರು. ನೆಕ್ಸ್​ಟ್ ಆಯುಷ್ ಬದೋನಿ ಬೌಲಿಂಗ್‌ನಲ್ಲಿ ಶಾಮಿಲ್ ಹುಸೇನ್ (33) ಕ್ಯಾಚ್ ಹಿಡಿದ ರಾಣಾ, ಬ್ಯಾಟರ್‌ಗೆ ಪೆವಿಲಿಯನ್‌ಗೆ ಹೋಗುವಂತೆ ಸಹ್ನೆ ಮಾಡಿ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ್ರು. ಆನಂತ್ರ ವಿಕೆಟ್ ಕೀಪರ್ ರೋಹೈಲ್ ನಝೀರ್ ರನ್ನ ಡಕ್ ಔಟ್ ಮಾಡಿ ಮತ್ತೆ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ರು. ಇನ್ನು ಭಾರತದ ಬ್ಯಾಟಿಂಗ್ ವೇಳೆ 45ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಬ್ಯಾಟಿಂಗ್‌ಗೆ ಬಂದರು. ಈ ವೇಳೆ ಮೊಹಮ್ಮದ್ ಇಮ್ರಾನ್ ರಾಂಧವಾ ಎಸೆದ ಫುಲ್-ಟಾಸ್ ಎಸೆತಕ್ಕೆ ಸಿಕ್ಸರ್​ ಬಾರಿಸಲು ಯತ್ನಿಸಿದ ರಾಣಾ, ಡೀಪ್ ಸ್ಕ್ವೇರ್-ಲೆಗ್‌ನಲ್ಲಿದ್ದ ಫರ್ಹಾನ್ ಯೂಸುಫ್ ಅವರಿಗೆ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು. ಇದಕ್ಕೇ ಕಾಯ್ತಾ ಇದ್ದ ಪಾಕಿಸ್ತಾನಿ ಆಟಗಾರರು ರಾಣಾ ಔಟಾಗುತ್ತಿದ್ದಂತೆಯೇ ಮುಗಿಬಿದ್ದರು. ಸ್ಪಿನ್ನರ್ ಸುಫಿಯಾನ್ ಮುಕೀಮ್, ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ರಾಣಾ ಬಳಿ ಬಂದು ಸಿಟ್ಟಿನಿಂದ ಸೆಂಡ್ ಆಫ್ ನೀಡಿದ್ರು. ಈ ವೇಳೆ ಆನ್ ಫೀಲ್ಡ್ ಅಂಪೈರ್ ಬಂದು ಪರಿಸ್ಥಿತಿ ತಿಳಿಗೊಳಿಸಿದ್ರು.

ಹೀಗೆ ಮೈದಾನದಲ್ಲಿ ಆಟಗಾರರ ನಡುವೆ ಜಿದ್ದಾಜಿದ್ದಿನ ಫೈಟ್ ನಡೀತಿದ್ರೆ ಅತ್ತ ಗ್ಯಾಲರಿಯಲ್ಲಿ ಪಾಕ್ ಅಭಿಮಾನಿಗಳ ಸಂಭ್ರಮವೂ ಮಿತಿ ಮೀರಿತ್ತು. ಭಾರತೀಯರನ್ನ ಕೆಣಕೋ ರೀತಿಯಲ್ಲಿ ಸಹ್ನೆಗಳನ್ನ ಮಾಡುತ್ತಾ ಸೆಲೆಬ್ರೇಟ್ ಮಾಡ್ತಿದ್ರು. ಮತ್ತೊಂದೆಡೆ ಗ್ಯಾಲರಿಯಲ್ಲಿ ಕುಳಿತಿದ್ದ ಇಂಡೋ-ಪಾಕ್ ಫ್ಯಾನ್ಸ್ ನಡುವೆ ಕಿರಿಕ್ ಆಗಿ ಕೊನೆಗೆ ಸ್ಟೇಡಿಯಂ ಸೆಕ್ಯೂರಿಟಿ ಬಂದು ಎರಡೂ ಕಡೆಯ ಅಭಿಮಾನಿಗಳನ್ನ ಶಾಂತಗೊಳಿಸಿದ್ರು.

ಇದಿಷ್ಟೇ ಅಲ್ಲದೆ ಇನ್ನೂ ಒಂದಷ್ಟು ಅಭಿಮಾನಿಗಳು ಮಾನಸಿಕ ಸ್ಥಿಮಿತವನ್ನೇ ಕಳ್ಕೊಂಡಂತೆ ಓವರ್ ಆಗಿ ಆಡ್ತಿದ್ರು. ಯಾಕಂದ್ರೆ ಭಾರತದ ವಿರುದ್ಧ ಪ್ರತೀ ಸಲ ಸೋತು ಸೋತು ಸುಣ್ಣವಾಗುವ ಪಾಕಿಸ್ತಾನಿಯರಿಗೆ ಅಪರೂಪಕ್ಕೊಮ್ಮೆ ಗೆದ್ದಾಗ ಅದನ್ನ ಡೈಜೆಸ್ಟ್ ಮಾಡಿಕೊಳ್ಳೋದು ಕಷ್ಟವೇ. ಈಗ ರೈಸಿಂಗ್ ಸ್ಟಾರ್ ಏಷ್ಯಾಕಪ್​ನಲ್ಲಿ ಗ್ರೂಪ್ ಸ್ಟೇಜಲ್ಲಿ ಗೆದ್ದಿರೋದನ್ನೇ ವಿಶ್ವಕಪ್ ಗೆದ್ದ ರೇಂಜ್​ಗೆ ಫೀಲ್ ಮಾಡ್ತಿದ್ದಾರೆ. ಆದ್ರೆ ಈ ಎರಡೂ ತಂಡಗಳು ಇದೇ ಟೂರ್ನಿಯಲ್ಲಿ ಫೈನಲ್​ನಲ್ಲಿ ಎದುರುಬದುರಾಗೋ ಸಾಧ್ಯತೆಗಳೂ ಇದೆ. ಗ್ರೂಪ್ ಹಂತದಲ್ಲಿ ಇಬ್ರೂ ಟಾಪ್ 2ನಲ್ಲಿ ಬಂದ್ರೆ ಸೆಮಿಫೈನಲ್​ನಲ್ಲಿ ಬಿ ಗುಂಪಿನ ಟಾಪ್2 ತಂಡಗಳನ್ನ ಎದುರಿಸಲಿದ್ದು ಅಲ್ಲಿಯೂ ಗೆದ್ರೆ ಫೈನಲ್​ನಲ್ಲಿ ಮುಖಾಮುಖಿ ಆಗಬಹುದು. ಹಾಗೇನಾದ್ರೂ ಭಾರತ-ಪಾಕ್ ನಡುವೆ ಫೈನಲ್ ಆಯ್ತು ಅಂದ್ರೆ ಭಯಂಕರವಾಗಿ ಇರೋದ್ರಲ್ಲಿ ಡೌಟೇ ಇಲ್ಲ.

Shantha Kumari

Leave a Reply

Your email address will not be published. Required fields are marked *