IND ಪ್ರತಿಷ್ಠೆ.. PAK ಸೇಡಿನ ಜ್ವಾಲೆ – ಸೂಪರ್ ಸಂಡೇ.. ಸೂಪರ್ 4 ಫೈಟ್
ಶೇಕ್ ಹ್ಯಾಂಡ್ ಶೇಪ್ ಔಟ್ ಯಾರಿಗೆ?

ಏಷ್ಯಾಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕ್ಟರಿಯೊಂದಿಗೆ ಸೂಪರ್ 4ಗೆ ಕಾಲಿಟ್ಟಿರೋ ಭಾರತಕ್ಕೆ ಭಾನುವಾರದ ಪಂದ್ಯ ಮೋಸ್ಟ್ ಇಂಪಾರ್ಟೆಂಟ್. ಲೀಗ್ ಹಂತದಲ್ಲಿ ಗೆದ್ದು ಶೇಕ್ ಹ್ಯಾಂಡ್ ಮಾಡದೇ ಟಾಂಟ್ ಕೊಟ್ಟಿದ್ದ ಟೀಂ ಇಂಡಿಯಾ ಈ ಮ್ಯಾಚನ್ನೂ ಗೆದ್ದು ಅದೇ ಲೆವೆಲ್ನ ಮೇಂಟೇನ್ ಮಾಡ್ಬೇಕು. ಅತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೊಳಗಾಗಿರೋ ಪಾಕಿಸ್ತಾನಿ ಆಟಗಾರರು ಈ ಪಂದ್ಯದಲ್ಲಿ ಗೆದ್ದು ರಿವೇಂಜ್ ತೀರಿಸಿಕೊಳ್ಳೋಕೆ ಎದುರು ನೋಡ್ತಿದ್ದಾರೆ. ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಏಷ್ಯಾಕಪ್ ಟ್ರೋಫಿಗಿಂತಲೂ ಮುಖ್ಯವಾಗಿದೆ.
ಇದನ್ನೂ ಓದಿ : IND Vs OMA ಪಂದ್ಯಕ್ಕಿಲ್ಲ ಬುಮ್ರಾ? – ಪ್ಲೇಯಿಂಗ್ 11 ದಿಢೀರ್ ಟ್ವಿಸ್ಟ್ ಏಕೆ?
ಶೇಕ್ ಹ್ಯಾಂಡ್ ವಿವಾದ.. ಸೂಪರ್ 4ರಲ್ಲಿ ಗೆಲ್ಲಲೇಬೇಕು ಭಾರತ!
ಏಷ್ಯಾಕಪ್ನಲ್ಲಿ ಭಾರತವೇ ಟ್ರೋಫಿ ಗೆಲ್ಲುವಂತ ಫೇವರೆಟ್ ಟೀಂ ಅನ್ನಿಸಿದ್ರೂ ಕೂಡ ಪಾಕಿಸ್ತಾನದ ವಿರುದ್ಧ ಗೆಲ್ಲೋದು ಅದಕ್ಕಿಂತ ದೊಡ್ಡದು. ಈಗಾಗ್ಲೇ ಸೆಪ್ಟೆಂಬರ್ 14 ರಂದು ಲೀಗ್ ಹಂತದ ಪಂದ್ಯದಲ್ಲಿ ಉಭಯ ತಂಡಗಳೂ ಮುಖಾಮುಖಿಯಾಗಿದ್ವು. ಈ ಮ್ಯಾಚಲ್ಲಿ ಭಾರತ 7 ವಿಕೆಟ್ಗಳಿಂದ ಪಾಕ್ ತಂಡವನ್ನ ಸೋಲಿಸಿತ್ತು. ಆದ್ರೆ ಪಂದ್ಯಕ್ಕೂ ಮುನ್ನ ಮತ್ತು ನಂತರದ ಕೆಲ ಬೆಳವಣಿಗೆಗಳು ಎರಡೂ ರಾಷ್ಟ್ರಗಳ ನಡುವೆ ಸಮರವನ್ನೇ ಸೃಷ್ಟಿಸಿವೆ. ಟಾಸ್ ಟೈಮಲ್ಲಿ ಕ್ಯಾಪ್ಟನ್ ಗಳು ಶೇಕ್ ಹ್ಯಾಂಡ್ ಮಾಡದೇ ಇದ್ದದ್ದು ಮ್ಯಾಚ್ ಮುಗಿದ್ಮೇಲೆ ಭಾರತದ ಆಟಗಾರರು ಕೈಕುಲಕದೇ ಹೊರ ನಡೆದಿದ್ದು ಡ್ರೆಸ್ಸಿಂಗ್ ರೂಂ ಬಾಗಿಲು ಹಾಕಿದ್ದು ಹೀಗೆ ಎಲ್ಲವೂ ಕೂಡ ರಾಜಕೀಯ ಸ್ವರೂಪ ಪಡ್ಕೊಂಡಿದೆ. ಹೀಗಾಗಿ ಸೂಪರ್ 4 ಹಂತದಲ್ಲೂ ಪಾಕಿಸ್ತಾನದ ಎದುರು ಗೆಲ್ಲೋದು ಭಾರತಕ್ಕೆ ಪ್ರತಿಷ್ಠಿಯಾಗಿ ಮಾರ್ಪಟ್ಟಿದೆ.
ಭಾರತದ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಆಗುತ್ತಾ?
ಇನ್ನು ಯುಎಇ ಮತ್ತು ಪಾಕ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡದ ಭಾರತ ತಂಡ ಓಮನ್ ವಿರುದ್ಧದ ಪಂದ್ಯಕ್ಕೆ ಕೆಲ ಚೇಂಜಸ್ ಮಾಡಿತ್ತು. ಹಾಗೇ ಬೌಲಿಂಗ್ನಲ್ಲಿ ಸಿಕ್ಕಾಪಟ್ಟೆ ಸ್ಟ್ರಗಲ್ ಕಂಡಿತ್ತು. ಆದ್ರೆ ಪಾಕ್ ವಿರುದ್ಧದ ಮ್ಯಾಚ್ನ ಅಷ್ಟು ಈಸಿಯಾಗಿ ತಗೊಳ್ಳೋಕೆ ಸಾಧ್ಯ ಇಲ್ಲ. ಗೆದ್ದೇ ಗೆಲ್ಲಬೇಕಾದ ಪಂದ್ಯ ಆಗಿರೋದ್ರಿಂದ ಪ್ಲೇಯಿಂಗ್ 11 ಮುಖ್ಯವಾಗುತ್ತೆ. ಹೀಗಾಗಿ ಬಹುಶಃ ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಕಣಕ್ಕಿಳಿಸಿದ್ದ ಆಟಗಾರರನ್ನ ಈ ಸಲವೂ ಫೈನಲ್ ಮಾಡೋ ಚಾನ್ಸಸ್ ಇದೆ. ಓಮನ್ ವಿರುದ್ಧ ಕಣಕ್ಕಿಳಿದಿದ್ದ ಅರ್ಶದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾಗೆ ಮತ್ತೆ ಬೆಂಚ್ ಕಾಯಿಸಬಹುದು.
ಸೇಡು ತೀರಿಸಿಕೊಳ್ಳೋಕೆ ಮ್ಯಾಚ್ ಗೆಲ್ಲಲು ಪಾಕಿಸ್ತಾನ ಪಣ!
ಇನ್ನು ಪಾಕಿಸ್ತಾನದ ಸ್ಥಿತಿ ಬೇರೆ ಥರಾನೇ ಇದೆ. ಕಳೆದ ಭಾನುವಾರದ ಪಂದ್ಯದಲ್ಲಿ ಮ್ಯಾಚ್ ಗೆಲ್ಲೋಕೆ ಸಾಧ್ಯವಾಗ್ಲಿಲ್ಲ. ಅತ್ತ ಭಾರತೀಯ ಆಟಗಾರರು ಕೈಕುಲುಕಲಿಲ್ಲ. ಕೊನೆಗೆ ಐಸಿಸಿ ಬಳಿ ಹೋಗಿದ್ದು ಮ್ಯಾಚ್ ರೆಫರಿಯನ್ನಾದ್ರೂ ವಜಾ ಮಾಡಿ ಸ್ವಲ್ಪ ಸಮಾಧಾನ ಮಾಡ್ತಾರೆ ಅಂದ್ರೆ ಅದೂ ನಡೀಲಿಲ್ಲ. ಹೀಗೆ ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸುತ್ತಲೇ ಬಂದಿದೆ. ಇನ್ನು ಪಾಕ್ ಆಟಗಾರರ ಪ್ರದರ್ಶನಕ್ಕೆ ಪಾಕಿಸ್ತಾನದ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಕೂಡ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಇವ್ರನ್ನೆಲ್ಲಾ ತಣಿಸ್ಬೇಕು ಅಂದ್ರೆ ಭಾನುವಾರದ ಪಂದ್ಯವನ್ನ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಸೇಡಿನ ಜ್ವಾಲೆಯನ್ನ ಆರಿಸೋಕೆ ಕಾಯ್ತಾ ಇದ್ದಾರೆ. ಈಗಾಗ್ಲೇ ನಾಯಕ ಸಲ್ಮಾನ್ ಅಲಿ ಅಘಾ ಅಂತೂ ಫುಲ್ ಕಾನ್ಫಿಡೆನ್ಸ್ ನಲ್ಲಿ ದೊಡ್ಡ ದೊಡ್ಡ ಹೇಳಿಕೆಗಳನ್ನೇ ಕೊಟ್ಟಿದ್ದಾರೆ. ನಾವು ಭಾರತವನ್ನ ಸೋಲಿಸೋಕೆ ರೆಡಿ ಅಂದಿದ್ದಾರೆ. ಆದ್ರಿಲ್ಲಿ ಯಾರೇ ಗೆದ್ರೂ ಸೋತ್ರೂ ಶೇಪ್ ಔಟ್ ಅಂತೂ ಇದ್ದೇ ಇರುತ್ತೆ.
ಸೂಪರ್ 4ನಲ್ಲೂ ಕೈ ಕುಲುಕಲ್ಲ ಉಭಯ ಆಟಗಾರರು!
ಇನ್ನು ಭಾನುವಾರದ ಪಂದ್ಯದ ಮೇನ್ ಹೈಲೆಟ್ ಅಂದ್ರೆ ಉಭಯ ಆಟಗಾರರು ಮತ್ತೆ ಕೈಕುಲುಕೋದಿಲ್ಲ ಅನ್ನೋದು. ಟೂರ್ನಿಯಲ್ಲಿ ಮೊದಲ ಸಲ ಮುಖಾಮುಖಿಯಾಗಿದಾಗ ನೋ ಶೇಕ್ ಹ್ಯಾಂಡ್ ವಿಚಾರ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಸೂಪರ್-4 ಹಂತದ ಪಂದ್ಯದಲ್ಲೂ ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿ ಆಗಲಿದೆ. ನೋ ಶೇಕ್‌ಹ್ಯಾಂಡ್ ನಿಲುವನ್ನು ಸಮರ್ಥನೆ ಮಾಡಿಕೊಳ್ತಿರೋ ಭಾರತ ಮುಂದಿನ ಪಂದ್ಯಗಳಲ್ಲೂ ಪಾಕಿಸ್ತಾನ ಆಟಗಾರರ ಕೈ ಕುಲುಕುವ ಸಾಧ್ಯತೆ ಇಲ್ಲ. ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ನೋ ಶೇಕ್‌ಹ್ಯಾಂಡ್‌ಗೆ ಒಪ್ಪಿದೆ ಎನ್ನಲಾಗಿದೆ.

ನೋಡಿರಿ

