ಏಷ್ಯಾಕಪ್ ನಲ್ಲಿ ಭಾರತ Vs ಪಾಕ್ ಫೈಟ್ ನಡೆದಿಲ್ಲ – ಈ 5 ಪಂದ್ಯಗಳ ಕ್ಲೈಮ್ಯಾಕ್ಸ್ ಸೂಪರ್

ಏಷ್ಯಾಕಪ್ ಟೂರ್ನಿಗಾಗಿ ಯುಎಇಗೆ ಹಾರಿರೋ ಭಾರತ ತಂಡ ಈಗಾಗಲೇ ಅಭ್ಯಾಸ ಶುರು ಮಾಡಿದೆ. ಆಟಗಾರರೆಲ್ಲಲ್ಲೂ ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ಸ್ಪಾನ್ಸರ್ಶಿಪ್ ಇಲ್ದೇ ಇರೋದ್ರಿಂದ ಜೆರ್ಸಿಗಳ ಮೇಲೆ ಇಂಡಿಯಾ ಹೆಸರರು ರಾರಾಜಿಸ್ತಿದೆ. ಇನ್ನು ಸೆಪ್ಟೆಂಬರ್ 9ರಂದು ಉದ್ಘಾಟನಾ ಪಂದ್ಯ ನಡೆಯಲಿದ್ದು ಅಫ್ಘಾನಿಸ್ತಾನ ಹಾಗೇ ಹಾಂಗ್ಕಾಂಗ್ ತಂಡಗಳು ಕಣಕ್ಕಿಳಿಯಲಿವೆ. ಇನ್ನು ಎರಡನೇ ದಿನವಾದ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನ ಆಡಲಿದೆ. ಯುಎಇ ವಿರುದ್ಧದ ಪಂದ್ಯಕ್ಕಿಂತ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿಯೇ ಇಡೀ ಜಗತ್ತು ಕಾಯ್ತಿದೆ. ಸೆಪ್ಟೆಂಬರ್ 14 ರಂದು ಈ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಹೀಗೆ ರಣರೋಚಕ ರೀತಿಯಲ್ಲಿ ಕ್ಲೈಮ್ಯಾಕ್ಸ್ ಕಂಡಿರೋ 5 ಪಂದ್ಯಗಳ ಬಗ್ಗೆ ಹೇಳ್ತೇನೆ. ಅದಕ್ಕೂ ಮುನ್ನ ಏಷ್ಯಾಕಪ್ ಫೈನಲ್ ಇದೊಂದು ಘಟನೆಗೆ ಸಾಕ್ಷಿಯಾಗಿಲ್ಲ.
ಏಷ್ಯಾಕಪ್ ನಲ್ಲಿ ಭಾರತ & ಪಾಕ್ ನಡುವೆ ಫೈನಲ್ ಪಂದ್ಯ ನಡೆದಿಲ್ಲ!
ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 10 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳಲ್ಲಿ ಗೆದ್ದಿದೆ. ಮೂರು ಪಂದ್ಯಗಳು ರದ್ದಾಗಿವೆ. ಟಿ20 ಮಾದರಿಯಲ್ಲಿ, ಈ ತಂಡಗಳು ಮೂರು ಬಾರಿ ಆಡಿವೆ. ಈ ಪೈಕಿ ಭಾರತ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಪಾಕಿಸ್ತಾನ ಒಂದು ಪಂದ್ಯವನ್ನು ಗೆದ್ದಿದೆ. ಇನ್ನು ಏಷ್ಯಾಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದ್ದು, ಇದುವರೆಗೆ 8 ಪ್ರಶಸ್ತಿಗಳನ್ನು ಗೆದ್ದಿದೆ. ಇತ್ತ ಪಾಕಿಸ್ತಾನ ಕೇವಲ ಎರಡು ಬಾರಿ ಮಾತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ ಉಭಯ ರಾಷ್ಟ್ರಗಳು ಈ 16 ಆವೃತ್ತಿಗಳಲ್ಲಿ ಒಮ್ಮೆಯೂ ಕೂಡ ಫೈನಲ್ನಲ್ಲಿ ಮುಖಾಮುಖಿಯಾಗಿಲ್ಲ. ಭಾರತಕ್ಕೆ ಪ್ರತೀ ಬಾರಿಯೂ ಶ್ರೀಲಂಕಾ ತಂಡವೇ ಹೆಚ್ಚು ಪೈಪೋಟಿ ನೀಡಿದೆ. ಹೀಗಿದ್ರೂ ಈ 5 ಪಂದ್ಯಗಳ ರಿಸಲ್ಟ್ ಮಾತ್ರ ಯಾವ ಥ್ರಿಲ್ಲರ್ ಮೂವಿಗೆ ಕಮ್ಮಿ ಇರಲಿಲ್ಲ.
ಕೊನೇ ಓವರ್ ನಲ್ಲಿ ಭಾರತಕ್ಕೆ 3 ವಿಕೆಟ್ ಗಳ ಭರ್ಜರಿ ಜಯ!
2010ರ ಏಷ್ಯಾಕಪ್‌ನಲ್ಲಿ ನಡೆದಿದ್ದ ಹೈವೋಲ್ಟೇಜ್ ಮ್ಯಾಚ್ ಇದು. ಜೂನ್ 19ರಂದು ನಡೆದಿದ್ದ ಏಕದಿನ ಮಾದದಿಯ ಈ ಪಂದ್ಯದಲ್ಲಿ ಪಾಕಿಸ್ತಾನ 267 ರನ್ಗಳಿಗೆ ಆಲೌಟ್ ಆಗಿತ್ತು. 268 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ಗೌತಮ್ ಗಂಭೀರ್ (83) ಮತ್ತು ಎಂಎಸ್ ಧೋನಿ (56) ರನ್ ಗಳಿಸೋ ಮೂಲಕ ತಂಡಕ್ಕೆ ಬೂಸ್ಟ್ ನೀಡಿದ್ರು. ಸುರೇಶ್ ರೈನಾ 34 ರನ್ ಕಲೆ ಹಾಕಿದ್ರು. ಉಳಿದವ್ರಿಂದ ಉತ್ತಮ ಸಾಥ್ ಸಿಗ್ಲಿಲ್ಲ. ಕೊನೇ ಓವ್ವರೆಗೂ ಸಾಗಿದ್ದ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಸ್ಟ್ರೈಕ್ನಲ್ಲಿದ್ರು. ಈ ವೇಳೆ ಭಾರತಕ್ಕೆ ಕೊನೇ 2 ಎಸೆತಗಳಲ್ಲಿ 4 ರನ್ ಬೇಕಿತ್ತು. ಆಗ ಭಜ್ಜಿ 49ನೇ ಓವರ್ನ 5ನೇ ಬಾಲ್ನ ಸಿಕ್ಸರ್ಗಟ್ಟಿದ್ರು. ಪರಿಣಾಮ ಒಂದು ಎಸೆತ ಬಾಕಿ ಇರುವಂತೆಯೇ ಭಾರತ 3 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಹಾಗೇ ಅದೇ ವರ್ಷ ಏಷ್ಯಾಕಪ್ನೂ ಗೆದ್ದಿತು.
330 ರನ್ ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ 6 ವಿಕೆಟ್ ಗಳ ಜಯ!
2012ರಲ್ಲಿ ನಡೆದಿದ್ದ ಮತ್ತೊಂದು ಏಷ್ಯಾಕಪ್ ಪಂದ್ಯದಲ್ಲಿ 50 ಓವರ್ಗಳ ಮಾದರಿಯಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ಗೆ ಇಳಿದಿತ್ತು. ಈ ಮ್ಯಾಚಲ್ಲಿ ಪಾಕಿಸ್ತಾನ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 329 ರನ್ಗಳನ್ನ ಕಲೆ ಹಾಕಿತ್ತು. 330 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ವಿರಾಟ್ ಕೊಹ್ಲಿ ಅಕ್ಷರಶಃ ರನ್ ಮಳೆ ಸುರಿಸಿದ್ರು. 148 ಎಸೆತಗಳಲ್ಲೇ 183 ರನ್ ಚಚ್ಚಿದ್ರು. ಏಷ್ಯಾಕಪ್ ಇತಿಹಾಸದಲ್ಲಿ ಈಗ್ಲೂ ಕೂಡ ವೈಯಕ್ತಿಕ ಹೈಯೆಸ್ಟ್ ಸ್ಕೋರ್ ಇದೇ ಆಗಿದೆ. ಅದೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (52) ಮತ್ತು ರೋಹಿತ್ ಶರ್ಮಾ (68) ರನ್ ಕಲೆ ಹಾಕಿದ್ರು. ಒನ್ ಮೋರ್ ಥಿಂಗ್ ಏನಂದ್ರೆ ಇದು ಸಚಿನ್ ಅವರ ಕೊನೆಯ ಏಕದಿನ ಪಂದ್ಯವಾಗಿತ್ತು. ಅಂತಿಮವಾಗಿ ಭಾರತ 13 ಎಸೆತಗಳು ಬಾಕಿ ಇದ್ದಾಗಲೇ 6 ವಿಕೆಟ್ಗಳಿಂದ ಪಂದ್ಯವನ್ನ ಗೆದ್ದಿತ್ತು. ಏಷ್ಯಾಕಪ್ನ್ನೂ ಗೆದ್ದಿತ್ತು.
ಕೊನೇ ಓವರ್ ನಲ್ಲಿ 1 ಎಸೆತದಲ್ಲಿ ಗೆದ್ದು ಬೀಗಿದ ಪಾಕಿಸ್ತಾನ!
2014ರ ಈ ಪಂದ್ಯವನ್ನಂತೂ ಭಾರತೀಯರು ಮರೆಯೋಕೆ ಸಾಧ್ಯನೇ ಇಲ್ಲ. ಮಾರ್ಚ್ 2ರಂದು ನಡೆದಿದ್ದ ಈ ಪಂದ್ಯದಲ್ಲಿ ಭಾರತ 50 ಓವರ್ಗಳಲ್ಲಿ 245 ರನ್ ಕಲೆ ಹಾಕಿತ್ತು. 246 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನದ ಪರ ಮೊಹಮ್ಮದ್ ಹಫೀಜ್ 75 ರನ್ ಗಳಿಸಿ ಆಸರೆಯಾದ್ರು. ಮತ್ತೊಂದೆಡೆ ವಿಕೆಟ್ಗಳು ಉರುಳುತ್ತಲೇ ಇದ್ವು. ಆದ್ರೆ ಶಾಹೀನ್ ಆಫ್ರಿದಿ ಆ ಪಂದ್ಯದಲ್ಲಿ 18 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ಮೂರು ಎಸೆತಗಳಲ್ಲಿ ಮೂರು ರನ್ ಗಳ ಅಗತ್ಯವಿದ್ದಾಗ ಅಫ್ರಿದಿ ಗೆಲುವಿನ ಸಿಕ್ಸ್ ಬಾರಿಸಿದರು. 2 ಎಸೆತಗಳು ಬಾಕಿ ಇರುವಾಗ ಪಾಕಿಸ್ತಾನ ಒಂದು ವಿಕೆಟ್ನಿಂದ ಗೆಲುವು ಸಾಧಿಸಿತ್ತು.
2 ಎಸೆತಗಳು ಬಾಕಿ ಇರುವಾಗ ಗೆದ್ದ ಭಾರತ!
2022ರಲ್ಲಿ ಟಿ-20 ಮಾದರಿಯಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಟಾಸ್ ಗೆದ್ದ ಭಾರತ ಮೊದಲಿ ಫೀಲ್ಡಿಂಗ್ ಆಯ್ಕೆ ಮಾಡ್ಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.4 ಓವರ್ಗಳಲ್ಲಿ 147 ರನ್ ಗಳಿಸಿ ಆಲೌಟ್ ಆಗಿತ್ತು. 148 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತ 2 ಎಸೆತಗಳು ಬಾಕಿ ಇರುವಾಗ ಐದು ವಿಕೆಟ್ಗಳಿಂದ ಈ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.
1 ಎಸೆತ ಬಾಕಿ ಇದ್ದಾಗ ಗೆಲುವು ಸಾಧಿಸಿದ ಪಾಕಿಸ್ತಾನ!
2022ರ ಸೀಸನ್ನಲ್ಲೇ ಸೂಪರ್ 4 ಹಂತಕ್ಕೆ ತಲುಪಿದ್ದ ಎರಡೂ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಿದ್ವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ಗಳನ್ನ ಕಲೆ ಹಾಕಿತ್ತು. 182 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಪರ ಮೊಹಮ್ಮದ್ ರಿಜ್ವಾನ್ (71) ಮತ್ತು ಮೊಹಮ್ಮದ್ ನವಾಜ್ (42) ರನ್ ಗಳಿಸಿ ನೆರವಾದ್ರು. ಕೊನೇ ಓವರ್ನಲ್ಲಿ ರೋಚಕ ಘಟ್ಟಕ್ಕೆ ಸಾಗಿದ್ದ ಪಂದ್ಯದಲ್ಲಿ ಇನ್ನೊಂದು ಎಸೆತ ಬಾಕಿ ಇರುವಾಗ ಪಾಕಿಸ್ತಾನ 5 ವಿಕೆಟ್ಗಳಿಂದ ಪಂದ್ಯವನ್ನ ಗೆದ್ದಿತ್ತು.

ನೋಡಿರಿ

