ಪಾಕಿಸ್ತಾನ್ ಸದ್ದಡಗಿಸಲು ಭಾರತ ರೆಡಿ – 18 ಸಲ ಫೈಟ್.. ಫೈನಲ್ ಆಡಿಲ್ಲ ಏಕೆ?

ಏಷ್ಯಾಕಪ್ನ ಅರ್ಧಕ್ಕರ್ಧ ಟ್ರೋಫಿಗಳನ್ನ ಗೆದ್ದಿರೋ ಭಾರತ ಈ ಸಲವೂ ಚಾಂಪಿಯನ್ ಆಗೋ ಟಾರ್ಗೆಟ್ನಲ್ಲೇ ಕಣಕ್ಕಿಳಿದಿದೆ. ಈಗಾಗ್ಲೇ ಮೊದಲ ಪಂದ್ಯದಲ್ಲೇ ಯುಎಇ ವಿರುದ್ಧ ಗೆಲುವು ಸಾಧಿಸಿದೆ. ಇದೀಗ ಪಾಕ್ ವಿರುದ್ಧ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹಿಂದೆಲ್ಲಾ ಭಾರತಕ್ಕೆ ಪಾಕಿಸ್ತಾನ ನೆಕ್ ಟು ನೆಕ್ ಫೈಟ್ ಕೊಡ್ತಿದ್ರೂ ಇತ್ತೀಚಿನ ದಿನಗಳಲ್ಲಿ ಕಂಪ್ಲೀಟ್ ಫ್ಲ್ಯಾಪ್ ಆಗಿದ್ದಾರೆ.
ಇದನ್ನೂ ಓದಿ : ಹಾಂಕಾಂಗ್ ಓಪನ್ ಬಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್‌ಗೆ ಭಾರತ – ಸಾತ್ವಿಕ್, ಚಿರಾಗ್ ರೋಚಕ ಹೋರಾಟ
ಟೂರ್ನಮೆಂಟ್ ನಲ್ಲಿ 18 ಸಲ ಮುಖಾಮುಖಿ.. ಭಾರತವೇ ಮೇಲುಗೈ!
ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಈ ಪಂದ್ಯ ಭಾರತೀಯ ಟೈಮಿಂಗ್ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗುತ್ತೆ. ಎರಡೂ ತಂಡಗಳು ಟೂರ್ನಮೆಂಟ್ ಇತಿಹಾಸದಲ್ಲಿ 18 ಬಾರಿ ಮುಖಾಮುಖಿಯಾಗಿದ್ದು, ಭಾರತ 10 ರಲ್ಲಿ ಗೆಲುವು ಸಾಧಿಸಿದ್ರೆ ಪಾಕಿಸ್ತಾನ 6 ಬಾರಿ ಗೆದ್ದಿದೆ. 2 ಪಂದ್ಯಗಳು ಫಲಿತಾಂಶ ಬಂದಿಲ್ಲ. ಅಚ್ಚರಿಯ ವಿಚಾರ ಏನಪ್ಪಾ ಅಂದ್ರೆ ಏಷ್ಯಾಕಪ್‌ನಲ್ಲಿ ಇದುವರೆಗೆ 16 ಆವೃತ್ತಿಗಳು ನಡೆದಿದ್ರೂ ಉಭಯ ತಂಡಗಳು ಒಮ್ಮೆಯೂ ಫೈನಲ್ನಲ್ಲಿ ಮುಖಾಮುಖಿ ಆಗಿಲ್ಲ.
ಭಾರತ & ಪಾಕ್ ಮೊದಲ ಪಂದ್ಯ ನಡೆದಿದ್ದು ಯಾವಾಗ?
ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯ ಯಾವಾಗ ನಡೀತು ಅನ್ನೋದನ್ನ ನೋಡಿದ್ರೆ 1984 ರಲ್ಲಿ ನಡೆದ ಉದ್ಘಾಟನಾ ಪಂದ್ಯಾವಳಿಯಲ್ಲೇ ಉಭಯ ತಂಡಗಳು ಮುಖಾಮುಖಿ ಆಗಿದ್ವು. ಮೊದಲ ಆವೃತ್ತಿಯಲ್ಲಿ ಭಾಗಿಯಾಗಿದ್ದೇ ಮೂರು ಟೀಂ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ತಂಡಗಲು. ಈ ಸೀಸನ್ನಲ್ಲಿ ಯುಎಇಯ ಶಾರ್ಜಾದಲ್ಲಿ ಎರಡು ರಾಷ್ಟ್ರಗಳು ಎದುರು ಬದುರಾಗಿದ್ದು ಭಾರತ ಈ ಪಂದ್ಯವನ್ನ 54 ರನ್‌ಗಳಿಂದ ಗೆದ್ದುಕೊಂಡಿತು. ಭಾರತವು ಮೊದಲು ಬ್ಯಾಟಿಂಗ್ ಮಾಡಿ 4 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತ್ತು. ಆದ್ರೆ ಪಾಕಿಸ್ತಾನ 40 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನ ಕೈಚೆಲ್ಲಿತ್ತು.
ಭಾರತ vs ಪಾಕಿಸ್ತಾನ ತಂಡದ ಅತ್ಯಧಿಕ ಸ್ಕೋರ್ ಎಷ್ಟು?
2023 ರ ಏಷ್ಯಾಕಪ್ ODI ಸ್ವರೂಪದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 356/2 ಗಳಿಸಿತು ಮತ್ತು ಇದು ಪಂದ್ಯಾವಳಿಯಲ್ಲಿ ಎರಡು ತಂಡಗಳ ನಡುವಿನ ಅತ್ಯಧಿಕ ಸ್ಕೋರ್ ಆಗಿದೆ. ಟಿ-20ಐ ಸ್ವರೂಪದಲ್ಲಿ, ಪಾಕಿಸ್ತಾನ 2022 ರಲ್ಲಿ 182 ರನ್‌ಗಳ ಗುರಿಯನ್ನು ಬೆನ್ನಟ್ಟಿತು, ಇದು ಎರಡು ತಂಡಗಳ ನಡುವಿನ ಅತ್ಯಧಿಕ ಸ್ಕೋರ್ ಆಗಿದೆ.
ಏಷ್ಯಾಕಪ್ ನಲ್ಲಿ ಹೆಡ್ ಟು ಹೆಡ್ ರೆಕಾರ್ಡ್ಸ್ ಹೇಗಿದೆ?
ಏಷ್ಯಾಕಪ್‌ನಲ್ಲಿ ಈ ತಂಡಗಳು ಇಲ್ಲಿಯವರೆಗೆ ಒಟ್ಟು 18 ಪಂದ್ಯಗಳನ್ನು ಆಡಿವೆ. ಪಾಕಿಸ್ತಾನ ವಿರುದ್ಧ ಭಾರತ 10 ಪಂದ್ಯಗಳನ್ನ ಗೆದ್ದಿದೆ. ಪಾಕ್ 6ರಲ್ಲಿ ಗೆದ್ದಿದೆ. ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಟಿ-20ಐ ಮಾದರಿಯಲ್ಲಿ ಭಾರತ 2 ಪಂದ್ಯ ಗೆದ್ದಿದ್ದು 1 ರಲ್ಲಿ ಸೋಲು ಕಂಡಿದೆ.
ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು ಯಾವಾಗ?
ಇನ್ನು ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕೊನೆಯ ಬಾರಿಗೆ 2023ರ ಸೆಪ್ಟೆಂಬರ್ 10 ರಂದು ಕಣಕ್ಕಿಳಿದಿದ್ವು. ಇದು ಏಕದಿನ ಮಾದರಿಯ ಟೂರ್ನಿಯಾಗಿತ್ತು. ಈ ಮ್ಯಾಚಲ್ಲಿ ಭಾರತ 228 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 356/2 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ 56, ಶುಭ್ಮನ್ ಗಿಲ್ 58, ವಿರಾಟ್ ಕೊಹ್ಲಿ ಅಜೇಯ 122 ಮತ್ತು ಕೆಎಲ್ ರಾಹುಲ್ ಅಜೇಯ 11 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ, ಪಾಕಿಸ್ತಾನ 32 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಕುಲದೀಪ್ ಯಾದವ್ ಎಂಟು ಓವರ್‌ಗಳಲ್ಲಿ 25/5 ವಿಕೆಟ್ ಪಡೆದು ಮಿಂಚಿದ್ರು.

ನೋಡಿರಿ

