ಭಾರತದ ಬೌಲಿಂಗ್ ಗೆ ಬೆಚ್ಚಿದ NZ – ಕೊಹ್ಲಿ SUPER MAN ಕ್ಯಾಚ್
185ಕ್ಕೆ ನೆಲ ಕಚ್ಚಿದ ಕಿವೀಸ್

ಟಿ-20ಐ ಫಾರ್ಮೆಟ್ನಲ್ಲಿ ಟೀಂ ಇಂಡಿಯಾ ಬೌಲರ್ಸ್ ಸಿಕ್ಕಾಪಟ್ಟೆ ಎಕ್ಸ್ಪೆನ್ಸಿವ್ ಆಗ್ತಿದ್ದಾರೆ ಅನ್ನೋದೇ ದೊಡ್ಡ ತಲೆಬಿಸಿಯಾಗಿತ್ತು. 20 ಓವರ್ಗಳಲ್ಲೇ ಹಿಂಗೇ.. ಇನ್ನು ಏಕದಿನ ಮಾದರಿಯಲ್ಲಿ ಇನ್ನೆಂಗೆ ರನ್ಸ್ ಕೊಡ್ತಾರೋ ಅನ್ನೋ ಟೆನ್ಷನ್ ಇತ್ತು. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಮ್ಯಾಚ್ನಲ್ಲಿ ಭಾರತದ ಬೌಲಿಂಗ್ ಸಿಕ್ಕಾಪಟ್ಟೆ ಚೆನ್ನಾಗಿತ್ತು. ಌಂಡ್ ಫೀಲ್ಡಿಂಗ್ ಕೂಡ ಸೂಪರ್.. ಹೀಗಾಗೇ ಫಸ್ಟ್ ಇನ್ನಿಂಗ್ಸ್ನಲ್ಲೇ ಕಿವೀಸ್ ಪಡೆಗೆ ಶಾಕ್ ಕೊಟ್ಟ ಭಾರತ ಕಡಿಮೆ ಸ್ಕೋರ್ಗೆ ಆಲೌಟ್ ಮಾಡಿದ್ರು.
ಇದನ್ನೂ ಓದಿ : ದುಡ್ಡಿಗಾಗಿ ಅಡ್ಡದಾರಿಗಿಳಿದ PAK – ₹23.73 ಲಕ್ಷಕ್ಕೆ PCB ಡಿಮ್ಯಾಂಡ್
ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ಶುರುವಾದ ಮೊದಲ ಮ್ಯಾಚಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಪ್ಲೇಯಿಂಗ್ 11ನಲ್ಲಿ ಬ್ಯಾಟಿಂಗ್ ಆರ್ಡರ್ ನಲ್ಲಿ ಬದಲಾವಣೆ ಇರ್ಲಿಲ್ಲ. ಬೌಲಿಂಗ್ನಲ್ಲಿ ನಮನ್ ಧೀರ್, ಅನ್ಶುಲ್ ಕಂಬೋಜ್, ಆಖಿಬ್ ನಬಿ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್ ಅವಕಾಶ ಪಡೆದಿದ್ರು. ಹೀಗೆ ಬೌಲಿಂಗ್ ಹೆಂಗಿರುತ್ತೋ ಏನೋ ಅಂತಾ ಕಣಕ್ಕಿಳಿದ ಭಾರತ ಕಿವೀಸ್ ಪಡೆಗೆ ಸರಿಯಾಗೇ ಕಾಟ ಕೊಟ್ರು.
ಮೊದಲ ಇನ್ನಿಂಗ್ಸ್ ನಲ್ಲಿ 185ಕ್ಕೆ ಆಲೌಟ್ ಆದ ನ್ಯೂಜಿಲೆಂಡ್!
ಟಾಸ್ ಸೋತ ಕಿವೀಸ್ ಪರ ವಿಲ್ ಯಂಗ್ ಹಾಗೇ ಟಿಮ್ ಸೈಫರ್ಟ್ ಇನ್ನಿಂಗ್ಸ ್ಆರಂಭಿಸಿದ್ರು. ಅರ್ಶದೀಪ್ ಸಿಂಗ್ ಯಂಗ್ ಮೊದಲ ವಿಕೆಟ್ ತೆಗೆದು ಪೆವಿಲಿಯನ್ ದಾರಿ ತೋರಿಸಿದ್ರು. ಅಲ್ಲಿಂದ ಶುರುವಾದ ಪೆವಿಲಿಯನ್ ಪರೇಡ್ ನಿಲ್ಲಲೇ ಇಲ್ಲ. ಟಿಮ್ ಸೈಫರ್ಟ್ 38 ರನ್ಸ್ ಕಲೆ ಹಾಕಿದ್ರೆ ಗ್ಲೆನ್ ಫಿಲಿಪ್ಸ್ 30 ರನ್ಸ್ ಕಲೆ ಹಾಕಿದ್ರು,. ಅದ್ರಲ್ಲೂ 10ನೇ ವಿಕೆಟ್ಗೆ ಜೊತೆಯಾದ ಬ್ಲೇರ್ ಟಿಕ್ನರ್ 4 ಸಿಕ್ಸರ್ಗಳ ಸಮೇತ 34 ರನ್ಸ್ ಚಚ್ಚಿದ್ರು. ಉಳಿದಂತೆ ಯಾರಿಂದಲೂ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. ಹೀಗಾಗಿ 46.1 ಓವರ್ಗಳಲ್ಲಿ 185 ರನ್ ಗಳಿಸಿ ಆಲೌಟ್ ಆದ್ರು. ಌಂಡ್ ಈ ಮ್ಯಾಚಲ್ಲಿ ಭಾರತದ ಬೌಲಿಂಗ್ ತುಂಬಾನೇ ಚೆನ್ನಾಗಿತ್ತು.
4 ವಿಕೆಟ್ ತೆಗೆದು ಕಾಡಿದ ಅರ್ಷದೀಪ್ ಸಿಂಗ್!
ಟೀಮ್ ಇಂಡಿಯಾ ಪರ ಅರ್ಶದೀಪ್ ಸಿಂಗ್ ಸೂಪರ್ ಪ್ರದರ್ಶನ ನೀಡಿದ್ರು. 4 ವಿಕೆಟ್ ಗಳನ್ನ ಬೇಟೆಯಾಡಿದ್ರು. ಹಾಗೇ ಅನ್ಶುಲ್ ಕಂಬೋಜ್ 10 ಓವರ್ಗಳಲ್ಲಿ ಕೇವಲ 22 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು. ಅಂದರೆ ಕಂಬೋಜ್ ತಮ್ಮ 10 ಓವರ್ಗಳಲ್ಲಿ ಬರೋಬ್ಬರಿ 46 ಡಾಟ್ ಬಾಲ್ಗಳನ್ನು ಎಸೆದಿದ್ದರು. ಕಂಬೋಜ್ಗೆ ಉತ್ತಮ ಸಾಥ್ ನೀಡಿದ ಗುರ್ನೂರ್ ಬ್ರಾರ್ ಕೂಡ 3 ವಿಕೆಟ್ ಕಬಳಿಸಿದರು. ಅಷ್ಟಕ್ಕೂ ಇಲ್ಲಿ ಬೌಲರ್ಗಳ ಸಕ್ಸಸ್ಗೆ ಒನ್ ಆಫ್ ದಿ ರೀಸನ್ ಫೀಲ್ಡಿಂಗ್ ಚೆನ್ನಾಗಿತ್ತು.
ಚಿರತೆಯಂತೆ ಹಾರಿ ಕ್ಯಾಚ್ ಹಿಡಿದ ಕೊಹ್ಲಿ!
ಫಿಟ್ನೆಸ್ನಿಂದಲೇ ಸದ್ದು ಮಾಡೋ ಕೊಹ್ಲಿ ನಾಥನ್ ಸ್ಮಿತ್ ಅವ್ರ ಅದ್ಭುತ ಕ್ಯಾಚ್ ಹಿಡಿದ್ರು. ಸ್ಲಿಪ್ನತ್ತ ಬಂದ ಬಾಲ್ನ ವಿರಾಟ್ ಕೊಹ್ಲಿ ಬಲಗಡೆ ಗಾಳಿಯಲ್ಲಿ ಜಿಗಿದು ನೆಲಕ್ಕೆ ತಾಗುವ ಮುನ್ನವೇ ಒಂದು ಕೈಯಿಂದ ಕ್ಯಾಚ್ ಹಿಡಿದರು. ಈ ಅದ್ಭುತ ಕ್ಯಾಚ್ಗೆ ಎಲ್ರೂ ಸ್ಟನ್ ಆಗಿದ್ರು. ಹಾಗೇ ಶ್ರೇಯಸ್ ಅಯ್ಯರ್ ಕೂಡ ಕ್ಯಾಚ್ಗಳನ್ನ ಚೆನ್ನಾಗಿ ಕನ್ವರ್ಟ್ ಮಾಡಿದ್ರು. ಹೀಗೆ ಫಸ್ಟ್ ಇನ್ನಿಂಗ್ಸ್ನಲ್ಲಿ ಭಾರತದ ಪ್ರದರ್ಶನ ತುಂಬಾನೇ ಚೆನ್ನಾಗಿತ್ತು.

ನೋಡಿರಿ

