T-20I ಗೆ ಬಂದಾಯ್ತು ಬೆಂಕಿ ಭುವಿ! – 4 ವರ್ಷ.. BCCI ತಲೆ ಬಾಗಿದ್ದೇಗೆ?
ವಿಶ್ವಕಪ್ ನೂ ಆಡ್ತಾರಾ ಸ್ವಿಂಗ್ ಕಿಂಗ್?

T-20I ಗೆ ಬಂದಾಯ್ತು ಬೆಂಕಿ ಭುವಿ! – 4 ವರ್ಷ.. BCCI ತಲೆ ಬಾಗಿದ್ದೇಗೆ?ವಿಶ್ವಕಪ್ ನೂ ಆಡ್ತಾರಾ ಸ್ವಿಂಗ್ ಕಿಂಗ್?

ಟೀಂ ಇಂಡಿಯಾ ಫ್ಯಾನ್ಸ್ ಖುಷಿಯಾಗಿದ್ದಾರೆ.. ಆರ್​ಸಿಬಿ ಫ್ಯಾನ್ಸ್ ಹ್ಯಾಪಿಯಾಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳೆಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣ ಸ್ವಿಂಗ್ ಕಿಂಗ್ ಭುವನೇಶ್ವರ್ ಈಸ್ ಬ್ಯಾಕ್ ಟು ಟೀಂ ಇಂಡಿಯಾ ಸ್ಕಾಡ್.. 1,414 ದಿನಗಳ ನಂತ್ರ ಮೆನ್ ಇನ್ ಬ್ಲ್ಯೂ ಜೆರ್ಸಿಗೆ ಭುವಿ ಕಂ ಬ್ಯಾಕ್​ಗೆ ವೇದಿಕೆ ಸಿದ್ಧವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟಿ-20ಐ ಸರಣಿಗೆ ಟೀಂ ಇಂಡಿಯಾ ಅನೌನ್ಸ್ ಆಗಿದ್ದು ಇದ್ರಲ್ಲಿ ಭುವಿಗೂ ಚಾನ್ಸ್ ಸಿಕ್ಕಿದೆ.

ಇದನ್ನೂ ಓದಿ : ವೈಭವ್ ಔಟ್.. ಬುಮ್ರಾಗೆ ರೆಸ್ಟ್? – T-20Iಗೆ ಕುಲ್ದೀಪ್ ಕಂ ಬ್ಯಾಕ್

ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯ ಭಾರತ ಟಿ-20ಐ ಪ್ಲೇಯರ್ಸ್ ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ-20ಐ ಸಿರೀಸ್​ನಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 17ಕ್ಕೆ ಸರಣಿಯ ಕೊನೇ ಪಂದ್ಯ ಮುಗಿಯಲಿದ್ದು ಆ ನಂತ್ರ ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 22ರಿಂದ ಐದು ಪಂದ್ಯಗಳ ಟಿ-20ಐ ಸರಣಿ ಶುರುವಾಗಲಿದೆ. ಈ ಸರಣಿಗೆ ಶ್ರೇಯಸ್ ನಾಯಕತ್ವದಲ್ಲಿ 16 ಜನರ ತಂಡವನ್ನ ಬಿಸಿಸಿಐ ಅನೌನ್ಸ್ ಮಾಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಟೀಮ್​ನಲ್ಲಿ ಭುವನೇಶ್ವರ್ ಕುಮಾರ್​ಗೂ ಚಾನ್ಸ್ ಸಿಕ್ಕಿರೋದು. ಅಷ್ಟಕ್ಕೂ ಭುವಿಗೆ ಅವಕಾಶ ನೀಡೋಕೆ ಕಾರಣ ಕೂಡ ಇದೆ.

16 ಆಟಗಾರರ ಟೀಂ ಅನೌನ್ಸ್!

ಬ್ಯಾಟರ್ಸ್ : ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ

ವಿಕೆಟ್ ಕೀಪರ್ಸ್  : ಸಂಜು ಸ್ಯಾಮ್ಸನ್, ಇಶಾನ್ ಕಿಶನ್

ಆಲ್ ರೌಂಡರ್ಸ್ : ಶಿವಂ ದುಬೆ, ಅಕ್ಷರ್ ಪಟೇಲ್, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ

ಫಾಸ್ಟ್ ಬೌಲರ್ಸ್ : ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್

ಸ್ಪಿನ್ ಬೌಲರ್ಸ್ :  ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್

ಟೀಂ ಇಂಡಿಯಾ ಪರ ಇನ್ನೇನು ಭುವನೇಶ್ವರ್ ಕುಮಾರ್ ಕೆರಿಯರ್ ಎಂಡ್ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಈವನ್ ಭುವಿ ಕೂಡ ಕಂ ಬ್ಯಾಕ್ ಆಸೆ ಏನೋ ಇದೆ. ಆದ್ರೆ ಅದ್ರಿಂದ ತುಂಬಾ ದೂರ ಬಂದಿದ್ದೇನೆ ಅನ್ನೋದು ಗೊತ್ತಿದೆ ಅನ್ನೋ ಮೂಲ ಆ ಆಸೆಯನ್ನೂ ಬಿಟ್ಟಿದ್ರು. ಯಾಕಂದ್ರೆ ಭಾರತದ ಪರ ಕಣಕ್ಕಿಳಿದು 4 ವರ್ಷಗಳೇ ಕಳೆದಿತ್ತು. 2022ರ ನವೆಂಬರ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕೊನೇ ಸಲ ಆಡಿದ್ದು. ಈಗ ಅದೇ ತಂಡದ ವಿರುದ್ಧವೇ ಗ್ರೇಟ್ ಕಂ ಬ್ಯಾಕ್​ಗೆ ರೆಡಿಯಾಗಿದ್ದಾರೆ. ಹಾಗಂತ ಈ ಕಂ ಬ್ಯಾಕ್ ಈಸಿ ಕೂಡ ಇರಲ್ಲ.

ಭುವಿ ಕಂ ಬ್ಯಾಕ್ ಸೀಕ್ರೆಟ್ಸ್!

  1. ಬುಮ್ರಾಗೆ ರೆಸ್ಟ್ ನೀಡಿರೋದ್ರಿಂದ ವೇಗದ ಬೌಲಿಂಗ್ ವಿಭಾಗ ಸ್ಟ್ರಾಂಗ್
  2. ನ್ಯೂಜಿಲೆಂಡ್ ಪಿಚ್ ಗಳಲ್ಲಿ ಸ್ವಿಂಗ್ ಮಾಡಬಲ್ಲ ಅನುಭವಿ ಬೌಲರ್ ಅವಶ್ಯಕತೆ
  3. ಪವರ್ ಪ್ಲೇ & ಡೆತ್ ಓವರ್ ಗಳಲ್ಲಿ ಬ್ರೇಕ್ ಥ್ರ್ಯೂ ತಂದುಕೊಡುವ ಸಾಮರ್ಥ್ಯ
  4. ತಂಡದಲ್ಲಿ ಇರುವ ಸಾಕಷ್ಟು ಯಂಗ್ ಬೌಲರ್ ಗಳಿಗೆ ಉತ್ತಮ ಗೈಡೆನ್ಸ್
  5. ಐಪಿಎಲ್ ನಲ್ಲಿ ಅದ್ಭುತ ಫಾರ್ಮ್.. 2026ರಲ್ಲೇ 28 ವಿಕೆಟ್ಸ್ ಪಡೆದಿದ್ದ ಭುವಿ
  6. ಭಾರತದ ಬೌಲಿಂಗ್ ವೀಕ್ಸ್ ಆಗ್ತಿದ್ದರಿಂದ ಮಾಜಿ ಕ್ರಿಕೆಟಿಗರಿಂದಲೂ ಒತ್ತಾಯ
  7. ಟಿ-20ಐನಲ್ಲಿ ಕ್ಲಿಕ್ ಆದ್ರೆ ಏಕದಿನ ಮಾದರಿ ಪಂದ್ಯಗಳಲ್ಲೂ ಅವಕಾಶ ಸಾಧ್ಯತೆ

ಹೀಗೆ ಭುವನೇಶ್ವರ್ ಕುಮಾರ್​​ರನ್ನ ತಂಡಕ್ಕೆ ಪಿಕ್ ಮಾಡೋಕೆ ಸಾಕಷ್ಟು ರೀಸನ್ಸ್ ಇದೆ. ಅದ್ರಲ್ಲೂ ನ್ಯೂಜಿಲೆಂಡ್​ ಪ್ರವಾಸ ಭಾರತಕ್ಕೆ ಮೋಸ್ಟ್ ಇಂಪಾರ್ಟೆಂಟ್. ಮೂರೂ ಮಾದರಿಯಲ್ಲೂ ಸರಣಿಗಳು ನಡೆಯೋದ್ರಿಂದ  ನ್ಯೂಜಿಲೆಂಡ್‌ನ ಪಿಚ್‌ಗಳಲ್ಲಿ ಚೆಂಡನ್ನು ಸ್ವಿಂಗ್ ಮಾಡಲು ಭುವನೇಶ್ವರ್ ಅವರಂತಹ ಅನುಭವ ಹೊಂದಿರುವ ಮಧ್ಯಮ ವೇಗಿ ಬೆಸ್ಟ್ ಬೌಲರ್ ಎನ್ನುವ ಕಾರಣಕ್ಕೆ ಆಯ್ಕೆ ಸಮಿತಿ ಅವ್ರನ್ನ ಪಿಕ್ ಮಾಡಿದೆ. ಇನ್ನು ಭಾರತದ ಪರ 87 ಟಿ20 ಪಂದ್ಯಗಳನ್ನು ಆಡಿ 90 ವಿಕೆಟ್‌ ಪಡೆದಿದ್ದಾರೆ. ಒಟ್ನಲ್ಲಿ ಭುವಿಗೆ ಭಾರತದ ಪರ ಆಡುವ ಎಲ್ಲಾ ಸಾಮರ್ಥ್ಯವೂ ಇದೆ. ಇದೇ ಕಾರಣಕ್ಕೆ 36 ವರ್ಷದ ಭುವಿಯನ್ನ ಬಿಸಿಸಿಐ ಮತ್ತೆ ಸೆಲೆಕ್ಟ್ ಮಾಡಿದೆ. ಸೋ ನ್ಯೂಜಿಲೆಂಡ್ ಸಿರೀಸ್​ನಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದೇ ಎಲ್ಲರ ಕುತೂಹಲ.

Shantha Kumari

Leave a Reply

Your email address will not be published. Required fields are marked *