ಇಂಡಿಯಾ VS ನ್ಯೂಜಿಲ್ಯಾಂಡ್ – ಮೆಗಾ ಸೆಮಿಫೈನಲ್ ಮ್ಯಾಚ್‌ಗೆ ಅಖಾಡ ರೆಡಿ

ಇಂಡಿಯಾ VS ನ್ಯೂಜಿಲ್ಯಾಂಡ್ – ಮೆಗಾ ಸೆಮಿಫೈನಲ್ ಮ್ಯಾಚ್‌ಗೆ ಅಖಾಡ ರೆಡಿ

ಇಂಡಿಯಾ VS ನ್ಯೂಜಿಲ್ಯಾಂಡ್.. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೆಗಾ ಸೆಮಿಫೈನಲ್ ಮ್ಯಾಚ್.. ಗೆದ್ದವರು ನೇರವಾಗಿ ಫೈನಲ್​ಗೆ ಎಂಟ್ರಿಯಾಗ್ತಾರೆ. ಸೋತವರು ಸೀದಾ ಮನೆ ದಾರಿ ಹಿಡೀತಾರೆ. 2019ರ ವರ್ಲ್ಡ್​​​ಕಪ್​​​ನ ಸೆಮಿಫೈನಲ್​​ನಲ್ಲಿ ಇದೇ ನ್ಯೂಜಿಲ್ಯಾಂಡ್​ ವಿರುದ್ಧ ಸೆಮಿಫೈನಲ್​​ನಲ್ಲಿ ಭಾರತ ಸೋತಿತ್ತು. ಹೀಗಾಗಿ ಇದು ನಿಜವಾಗಿಯೂ ಟೀಂ ಇಂಡಿಯಾದ ಪಾಲಿಗೆ ಸೇಡಿನ ಪಂದ್ಯ. ಭಾರತ-ನ್ಯೂಜಿಲ್ಯಾಂಡ್ ಸೆಮಿಫೈನಲ್​ ಮ್ಯಾಚ್ ಬಗ್ಗೆ. ಟೀಂ ಇಂಡಿಯಾ ಪ್ಲೇಯಿಂಗ್-11 ಹೇಗಿರಬಹುದು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವರ್ಲ್ಡ್​ ಕ್ರಿಕೆಟ್​​ಗೆ ರಿಷಬ್ ಪಂತ್ ಕಮ್​ಬ್ಯಾಕ್ ಯಾವಾಗ? -2024ರಲ್ಲಿ ಟಿ-20 ವರ್ಲ್ಡ್ ​​ಕಪ್​ ನಲ್ಲಿ ಆಡ್ತಾರಾ ಪಂತ್?

ರಾಬಿನ್​ ರೌಂಡ್ಸ್ ಸ್ಟೇಜ್​ನಲ್ಲಿ ಟೀಂ ಇಂಡಿಯಾ ಒಂದೇ ಒಂದು ಮ್ಯಾಚ್​​ನ್ನ ಕೂಡ ಸೋತಿಲ್ಲ. ಆಡಿದ ಎಲ್ಲಾ 9 ಪಂದ್ಯಗಳನ್ನ ಕೂಡ ಗೆದ್ದುಕೊಂಡಿದೆ. ಪಾಯಿಂಟ್ಸ್​​ ಟೇಬಲ್​​ನಲ್ಲಿ ನಂಬರ್​-1 ಪೊಸೀಷನ್​ನಲ್ಲಿದ್ದುಕೊಂಡು ಸೆಮಿಫೈನಲ್​ಗೆ ಎಂಟ್ರಿಯಾಗಿದೆ. ಈ ಬಾರಿಯ ವರ್ಲ್ಡ್​​ಕಪ್​ ಗೆಲ್ಲೋಕೆ ಭಾರತೀಯ ತಂಡಕ್ಕಿಂತ ಫೇವರೇಟ್ ಟೀಂ ಮತ್ತೊಂದಿಲ್ಲ. ಆದ್ರೂ ಕ್ರಿಕೆಟ್​ನಲ್ಲಿ ಏನನ್ನೂ ಹೇಳೋಕೆ ಸಾಧ್ಯವಿಲ್ಲ. ಇದು ಅನಿಶ್ಚಿತತೆಯ ಆಟ. ಯಾರು ಬೇಕಾದ್ರೂ ಗೆಲ್ಲಬಹುದು. ಏನು ಬೇಕಾದ್ರೂ ಆಗಬಹುದು. ಹೀಗಾಗಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯೋದು ನಿಜಕ್ಕೂ ರಣರೋಚಕ ಸೆಮಿಫೈನಲ್​ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಸೆಮಿಫೈನಲ್​ ನಲ್ಲಿ ಆರ್. ಅಶ್ವಿನ್ ಆಡ್ತಾರಾ?

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜ್ಯೂರಿಗೊಳಗಾಗಿ ವರ್ಲ್ಡ್​​ಕಪ್​ನಿಂದ ಔಟ್ ಆದ ಬಳಿಕ ಟೀಂ ಇಂಡಿಯಾ 6ನೇ ಬೌಲರ್​​ ಕೊರತೆ ಎದುರಿಸ್ತಾ ಇದೆ. ಲೀಗ್​​ ಸ್ಟೇಜ್​ನಲ್ಲಿ ಕಳೆದ ಕೆಲ ಪಂದ್ಯಗಳನ್ನ 5 ಬೌಲರ್ಸ್​​ಗಳನ್ನಿಟ್ಟುಕೊಂಡೇ ಭಾರತ ಗೆದ್ದಿತ್ತು. ಆದ್ರೀಗ ಸೆಮಿಫೈನಲ್​​ನಲ್ಲಿ 6ನೇ ಬೌಲರ್​ನ ಅವಶ್ಯಕತೆ ಎದುರಾದ್ರೂ ಆಗಬಹುದು. ಇನ್ನು ವಾಂಖೆಡೆ ಪಿಚ್​​ ಸ್ಪಿನ್ನರ್ಸ್​ಗಳಿಗೆ ಒಂದಷ್ಟು ಅಡ್ವಾಂಟೇಜ್ ಆಗಿದ್ದು, ಹೀಗಾಗಿ ಆರ್​.ಅಶ್ವಿನ್​​ರನ್ನ ಆಡಿಸುವ ಆಪ್ಷನ್ ಕೂಡ ಇದೆ. ಈ ಬಾರಿಯ ವರ್ಲ್ಡ್​​ಕಪ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್​ ಬಿಟ್ರೆ ಮತ್ತಿನ್ಯಾವ ಪಂದ್ಯಗಳಲ್ಲೂ ಅಶ್ವಿನ್ ಆಡಿಲ್ಲ. ಆದ್ರೆ ಈಗ 6ನೇ ಬೌಲರ್​ ಆಗಿ ಅಶ್ವಿನ್​ರನ್ನ ಪಿಕ್ ಮಾಡಿದ್ರೆ ಸೂರ್ಯಕುಮಾರ್ ಯಾದವ್​ರನ್ನ ಡ್ರಾಪ್ ಮಾಡಬೇಕಾಗಬಹುದು. ಆದ್ರೆ, ಸೂರ್ಯಕುಮಾರ್ ಮುಂಬೈನವರೇ ಆಗಿದ್ದು, ಕಳೆದ ಕೆಲ ಮ್ಯಾಚ್​ಗಳಲ್ಲಿ ಚೆನ್ನಾಗಿ ಪರ್ಫಾಮ್ ಮಾಡಿದ್ದಾರೆ. ಹೀಗಾಗಿ ಸೆಮಿಫೈನಲ್​ನಲ್ಲಿ ಸೂರ್ಯಕುಮಾರ್​ರನ್ನ ಡ್ರಾಪ್ ಮಾಡೋದು ಕೂಡ ಅಷ್ಟೊಂದು ಸುಲಭ ಅಲ್ಲ. ಹಾಗಿದ್ರೆ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.

 

ಟೀಂ ಇಂಡಿಯಾ PLAYING-11 (ಹೆಡ್)

ರೋಹಿತ್ ಶರ್ಮಾ

ಶುಬ್ಮನ್ ಗಿಲ್

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಕೆ.ಎಲ್.ರಾಹುಲ್

ಸೂರ್ಯಕುಮಾರ್

ರವೀಂದ್ರ ಜಡೇಜ

ಕುಲ್​ ದೀಪ್ ಯಾದವ್

ಮೊಹಮ್ಮದ್ ಶಮಿ

ಮೊಹಮ್ಮದ್ ಸಿರಾಜ್

ಜಸ್ಪ್ರಿತ್ ಬುಮ್ರಾ

 

ಇದು ಸೆಮಿಫೈನಲ್​ ಮ್ಯಾಚ್​ಗೆ ಟೀಂ ಇಂಡಿಯಾದ ಸಂಭಾವ್ಯ ತಂಡ. ಇವೆಲ್ಲದ್ರ ಜೊತೆ ಈ ಮ್ಯಾಚ್ ಬಗ್ಗೆ ಇನ್ನೊಂದು ಕುತೂಹಲ ಕೂಡ ಇದೆ. ವಿರಾಟ್​ ಕೊಹ್ಲಿ ದಾಖಲೆಯ 50ನೇ ಸೆಂಚೂರಿ ಬಾರಿಸ್ತಾರಾ ಅನ್ನೋದು. ಈಗಾಗ್ಲೇ ಸಚಿನ್ ತೆಂಡೂಲ್ಕರ್ 49 ಶತಕಗಳಿಗೆ ವಿರಾಟ್ ಸರಿಸಮಾನವಾಗಿ ನಿಂತಿದ್ದಾರೆ. ವಿಶ್ವದಾಖಲೆ ಬರಿಯೋಕೆ ಇನ್ನೊಂದು ಸೆಂಚೂರಿ ಮಾತ್ರ ಬೇಕಿರೋದು. ಹೀಗಾಗಿ ಸಚಿನ್ ಹೋಮ್​ ಗ್ರೌಂಡ್​​ನಲ್ಲೇ ಕೊಹ್ಲಿ ದಾಖಲೆ ಬರೀತಾರೆ ಅನ್ನೋ ಕುತೂಹಲ ಇದೆ. ಇನ್ನು ಈ ಮ್ಯಾಚ್​​ನ್ನ ನೋಡೋಕೆ ಸಚಿನ ತೆಂಡೂಲ್ಕರ್​ ಕೂಡ ಸ್ಟೇಡಿಯಂಗೆ ಬರ್ತಾರೆ. ಸೆಮಿಫೈನಲ್​ನಲ್ಲಿ, ಸಚಿನ್​ ಸಮ್ಮುಖದಲ್ಲೇ ಕೊಹ್ಲಿ ತಮ್ಮ ರೋಲ್​ಮಾಡೆಲ್​​​ ದಾಖಲೆ ಮುರಿದ್ರೆ Nothing better than this.. ಖುದ್ದು ಸಚಿನ್ ವರು ಕೊಹ್ಲಿಯನ್ನ ಭೇಟಿಯಾಗಿ ಅಭಿನಂದನೆ ಸಲ್ಲಿಸ್ತಾರೆ.

ಜೊತೆಗೆ ಸೆಮಿಫೈನಲ್​ನಲ್ಲಿ ಕೊಹ್ಲಿ ಶತಕ ಹೊಡೆದು ಟೀಂ ಇಂಡಿಯಾ ಕೂಡ ಗೆದ್ದು ಮತ್ತೊಮ್ಮೆ ವರ್ಲ್ಡ್​​ಕಪ್​​ ಫೈನಲ್​ಗೆ ಎಂಟ್ರಿಯಾದ್ರೆ ದಾಖಲೆಯ ಸೆಂಚೂರಿಗೆ ಇರುವ ವ್ಯಾಲ್ಯೂನೇ ಬೇರೆಯಾಗಿರುತ್ತೆ.

ಮಳೆಗೆ ಮ್ಯಾಚ್​ ವಾಶ್ ಔಟ್ ಆದ್ರೆ ಮುಂದೇನು?

ಇವೆಲ್ಲದ್ರ ಮಧ್ಯೆ ಇಲ್ಲಿ ಇನ್ನೊಂದು ಪ್ರಶ್ನೆ ಕೂಡ ಇದೆ. ಒಂದು ವೇಳೆ ಇಂಡಿಯಾ-ನ್ಯೂಜಿಲ್ಯಾಂಡ್ ಸೆಮಿಫೈನಲ್​​ ಮ್ಯಾಚ್​ಗೆ ಮಳೆ ಅಡ್ಡಿಯಾಯ್ತು ಅಂತಾ ಇಟ್ಕೊಳ್ಳಿ. ಆಗ ಮ್ಯಾಚ್​​ನ ರಿಸಲ್ಟ್ ಕಥೆಯೇನು ಅನ್ನೋದು. ಸೆಮಿಫೈನಲ್​ಗೆ ರಿಸರ್ವ್​ ಡೇಯನ್ನ ನಿಗದಿಪಡಿಸಲಾಗಿದೆ. ನವೆಂಬರ್​ 15ರಂದು ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆಯ್ತು ಅಂದ್ರೆ ಮರುದಿನ ಮತ್ತೆ ಪುನ: ಎರಡೂ ಟೀಂಗಳ ಮಧ್ಯೆ ಮ್ಯಾಚ್ ನಡೆಯುತ್ತೆ. ಅವಾಗ್ಲೂ ಮಳೆ ಬಂದು ಪಂದ್ಯ ರಾದ್ದಾದ್ರೆ ಪಾಯಿಂಟ್ಸ್​ ಟೇಬಲ್​​ನಲ್ಲಿ ಟಾಪ್​ ಪೊಸೀಷನ್​​ನಲ್ಲಿರುವ ಟೀಂ ಫೈನಲ್​ಗೆ ಎಂಟ್ರಿಯಾಗುತ್ತೆ. ಒಂದು ವೇಳೆ ರಿಸರ್ವ್​ ಡೇನಂದು ಮುಂಬೈನಲ್ಲಿ ಮಳೆ ಬಂದು ಭಾರತ-ನ್ಯೂಜಿಲ್ಯಾಂಡ್ ಮ್ಯಾಚ್ ವಾಶ್​ಔಟ್ ಆದ್ರೆ, ಪಾಯಿಂಟ್ಸ್​ ಟೇಬಲ್​ನಲ್ಲಿ ನಂಬರ್-1 ಪೊಸೀಷನ್​​ನಲ್ಲಿರುವ ಟೀಂ ಇಂಡಿಯಾ ನೇರವಾಗಿ ಫೈನಲ್​​ಗೆ ಎಂಟ್ರಿಯಾಗುತ್ತೆ. ಒಂದು ವೇಳೆ ಸೆಕೆಂಡ್ ಸೆಮಿಫೈನಲ್ ಅಂದ್ರೆ ಆಸ್ಟ್ರೇಲಿಯಾ VS ಸೌತ್ ಆಫ್ರಿಕಾ ಮ್ಯಾಚ್​​ ಕೂಡ ಮಳೆಗೆ ವಾಶ್​ಔಟ್ ಆಯ್ತು ಅಂದ್ರೆ ರಿಸರ್ವ್​ ಡೇನಲ್ಲಿ ಪಂದ್ಯ ನಡೆಯುತ್ತೆ. ಅದು ಕೂಡ ವಾಶ್​ಔಟ್ ಆದ್ರೆ, ಪಾಯಿಂಟ್ಸ್​​ ಟೇಬಲ್​​ನಲ್ಲಿ ಸೆಕೆಂಡ್ ಪೊಸೀಷನ್​​ನಲ್ಲಿರುವ ದಕ್ಷಿಣ ಆಫ್ರಿಕಾ ಫೈನಲ್​ಗೆ ಬರುತ್ತೆ. ಹೀಗಾಗಿ ಎರಡೂ ಸೆಮಿಫೈನಲ್​​ಗಳು ಮಳೆಯಿಂದಾಗಿ ಕ್ಯಾನ್ಸಲ್ ಆದ್ರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಫೈನಲ್ ಮ್ಯಾಚ್ ನಡೆಯುತ್ತೆ.

​​

 

 

Sulekha