116/6.. ಭಾರತ ಬೆಂಡೆತ್ತಿದ NZ – ಫಾಲೋ-ಆನ್ ಸುಳಿಗೆ ಬೀಳ್ತಾರಾ?
ಗಂಭೀರ್ ದರ್ಪಕ್ಕೆ ದೊಡ್ಡ ಪೆಟ್ಟು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕಿವೀಸ್ ಬೌಲರ್ಸ್ ಅಕ್ಷರಶಃ ಡಾಮಿನೇಟ್ ಮಾಡಿದ್ದಾರೆ. ಭಾರತದ ಟಾಪ್-6 ಬ್ಯಾಟರ್ಗಳನ್ನ ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಭಾರತಕ್ಕೆ ಫಸ್ಟ್ ಇನ್ನಿಂಗ್ಸ್ನಲ್ಲೇ ಫಾಲೋ ಆನ್ ಭಯ ಶುರುವಾಗಿದೆ. ಡಬ್ಲ್ಯೂಟಿಸಿ ರೇಸ್ ಹಿನ್ನೆಲೆಯಲ್ಲಿ ಮಸ್ಟ್ ಌಂಡ್ ಶುಡ್ ಈ ಪಂದ್ಯವನ್ನ ಗೆಲ್ಲಲೇಬೇಕಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ : HITಮ್ಯಾನ್ ಗೆ ಮತ್ತೆ MI ಪಟ್ಟ – 5 ಟ್ರೋಫಿ.. 45ರ ಜೆರ್ಸಿ ಅದೃಷ್ಟನಾ?
ಕ್ರೈಸ್ಟ್ಚರ್ಚ್ ಮೈದಾನದಲ್ಲಿ ಶುಕ್ರವಾರದಿಂದ ಸ್ಟಾರ್ಟ್ ಆಗಿರೋ ಎರಡನೇ ಪಂದ್ಯದಲ್ಲಿ ಎರಡೂ ತಂಡಗಳು ಈಕ್ವಲ್ ಪರ್ಫಾಮೆನ್ಸ್ ನೀಡಿದ್ರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿತ್ತು. 2ನೇ ದಿನದಾಟ ಆರಂಭಕಿಸಿದ ಕಿವೀಸ್ ಪರ ಟಾಮ್ ಬ್ಲಂಡೆಲ್ 89 ರನ್ಸ್ ಗಳಿಸಿ ಹೈಸ್ಕೋರರ್ ಎನಿಸಿಕೊಂಡ್ರು. ಎರಡನೇ ದಿನದಾಟದ ಮುಕ್ತಾಯದ ವೇಳೆಗೆ 356 ರನ್ ಗಳಿಸಿ ಆಲೌಟ್ ಆದ್ರು. ಇನ್ನು ಭಾರತದ ಪರ ಆಕಾಶ್ ದೀಪ್ ಫೈವ್ ಫರ್ ವಿಕೆಟ್ಸ್ ಬೇಟೆಯಾಡಿದ್ರೆ ಅನ್ಶುಲ್ ಕಾಂಬೋಜ್ ಹಾಗೇ ಗುರ್ನೂರ್ ಬ್ರಾರ್ ತಲಾ 2 ವಿಕೆಟ್ಸ್ ತೆಗೆದ್ರು. ಇನ್ನು ವಾಷಿಂಗ್ಟನ್ ಸುಂದರ್ 1 ವಿಕೆಟ್ ಬೇಟೆಯಾಡಿದ್ರು. ನ್ಯೂಜಿಲೆಂಡ್ನ 356 ರನ್ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಶುರುಮಾಡಿದ ಭಾರತಕ್ಕೆ ಟಾಪ್ ಆರ್ಡರ್ ಬ್ಯಾಟರ್ಸ್ ಎಲ್ರೂ ಕೈಕೊಟ್ಟಿದ್ದಾರೆ.
ಜೈಸ್ವಾಲ್ ಸೊನ್ನೆ.. 116ಕ್ಕೆ 6 ವಿಕೆಟ್ ಕಳ್ಕೊಂಡ ಭಾರತ!
ವೆಲ್ಲಿಂಗ್ಟನ್ನಲ್ಲಿ ನಡೆದಿದ್ದ ಫಸ್ಟ್ ಮ್ಯಾಚ್ ಫಸ್ಟ್ ಇನ್ನಿಂಗ್ಸ್ನಲ್ಲಿ ಭಾರತ 720 ರನ್ಸ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಆದ್ರೆ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತಕ್ಕೆ ಟಾಪ್ ಆರ್ಡರ್ ಬ್ಯಾಟರ್ಸ್ ಎಲ್ರೂ ಕೈಕೊಟ್ಟಿದ್ದಾರೆ. ಭಾರತದ ಪರ ಯಶಸ್ವಿ ಜೈಸ್ವಾಲ್ ಹಾಗೇ ಕೆಎಲ್ ರಾಹುಲ್ ಇನ್ನಿಂಗ್ಸ ್ಆರಂಭಿಸಿದ್ದು ಯಶಸ್ವಿ ಜೈಸ್ವಾಲ್ ಡಕೌಟ್ ಆದರೆ, ಕೆಎಲ್ ರಾಹುಲ್ 25 ರನ್ ಗಳಿಸಿ ಜೇಕಬ್ ಡಫಿಗೆ ವಿಕೆಟ್ ಒಪ್ಪಿಸಿದರು. ದೇವದತ್ ಪಡಿಕ್ಕಲ್ ಕೂಡ 21 ರನ್ ಗಳಿಸಿ ಪೆವಿಲಿಯನ್ ಸೇರಿದ್ರೆ ಶುಭ್ ಮನ್ ಗಿಲ್ 17, ರಿಷಬ್ ಪಂತ್ 23 ಮತ್ತು ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಔಟಾದರು. ಆ ಮೂಲಕ ಭಾರತ 2ನೇ ದಿನದಾಟದ ಅಂತ್ಯಕ್ಕೆ ಭಾರತ ಕೇವಲ 116 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಹಾಗೇ ಇನ್ನೂ ಕೂಡ 240 ರನ್ಸ್ ಹಿನ್ನೆಡೆಯಲ್ಲಿದೆ. ಭಾರತದ ಪರ ಇನ್ನು ನಾಲ್ಕು ವಿಕೆಟ್ಗಳಷ್ಟೇ ಬಾಕಿ ಇದ್ದು ಈಗ ಮೂರನೇ ದಿನದಾಟ ಭಾರತಕ್ಕೆ ಮಾಡು ಇಲ್ಲವೇ ಮಡಿ ಆಗಲಿದೆ. ಯಾಕಂದ್ರೆ ಫಾಲೋ ಆನ್ ಸುಳಿಗೆ ಬೀಳೋ ಆತಂಕ ಶುರುವಾಗಿದೆ.
ಫಾಲೋ ಆನ್ ತಪ್ಪಿಸಿಕೊಳ್ಳಲು ಭಾರತಕ್ಕೆ 41 ರನ್ ಗಳ ಅಗತ್ಯ!
ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಿರುವ ಟೀಮ್ ಇಂಡಿಯಾ, ಸದ್ಯ 240 ರನ್ಗಳ ಹಿನ್ನಡೆಯಲ್ಲಿದೆ. ಅದರಲ್ಲೂ ಫಾಲೋ-ಆನ್ ತಪ್ಪಿಸಿಜಕೊಳ್ಳೋಕೆ ಭಾರತಕ್ಕೆ ಇನ್ನೂ 41 ರನ್ಗಳ ಅಗತ್ಯವಿದೆ. ಅಂದರೆ ಟೀಮ್ ಇಂಡಿಯಾ ತನ್ನ ಮೊದಲ ಇನಿಂಗ್ಸ್ನಲ್ಲಿ ಕನಿಷ್ಠ 157 ರನ್ ಗಳಿಸಲೇಬೇಕು. ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ 157 ರನ್ಗಳ ಗಡಿ ದಾಟುವ ಮುನ್ನವೇ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡರೆ, ನ್ಯೂಜಿಲೆಂಡ್ಗೆ ಈ ಪಂದ್ಯ ಗೆಲ್ಲೋಕೆ ಗೋಲ್ಡನ್ ಆಪರ್ಚುನಿಟಿ ಸಿಗಲಿದೆ. ಫಸ್ಟ್ ಇನ್ನಿಂಗ್ಸ್ನಲ್ಲಿ 200+ ಲೀಡ್ಸ್ ಗಳಿಸಿದ್ರೆ ಕಿವೀಸ್ ನಾಯಕ ಟಾಮ್ ಲ್ಯಾಥಮ್ ಫಾಲೋ-ಆನ್ ಹೇರಲು ನಿರ್ಧರಿಸಬಹುದು. ಆಗ ಟೀಮ್ ಇಂಡಿಯಾ ಬ್ಯಾಟರ್ಸ್ ಮತ್ತೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಬೇಕಾಗುತ್ತದೆ. ಈ ಹಂತದಲ್ಲಿ ಭಾರತ ಮೊದಲ ಇನ್ನಿಂಗ್ಸ್ನ ಶಾರ್ಟೇಜ್ ರನ್ಸ್ ಜೊತೆಗೆ ಎರಡನೇ ಇನ್ನಿಂಗ್ಸ್ ಎರಡೂ ಸೇರಿ ಬೃಹತ್ ಮೊತ್ತವನ್ನೇ ಕಲೆ ಹಾಕಬೇಕಾಗುತ್ತೆ. ಒಂದು ವೇಳೆ ಎರಡನೇ ಇನ್ನಿಂಗ್ಸ್ನಲ್ಲೂ ಭಾರತ 200 ರನ್ಸ್ ಒಳಗೇ ಆಲೌಟ್ ಆದರೆ, ನ್ಯೂಝಿಲೆಂಡ್ ‘ಇನ್ನಿಂಗ್ಸ್ ಮತ್ತು ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಲಿದೆ. ಹೀಗಾಗಿ, ಇನ್ನಿಂಗ್ಸ್ ಸೋಲಿನ ಮುಖಭಂಗದಿಂದ ಪಾರಾಗಲು ಭಾರತೀಯ ಬ್ಯಾಟರ್ಗಳು ಎರಡನೇ ಇನ್ನಿಂಗ್ಸ್ನಲ್ಲಿ ಗ್ರೇಟ್ ಪರ್ಫಾಮೆನ್ಸ್ ನೀಡ್ಬೇಕಾಗುತ್ತೆ. ಏನಿಲ್ಲ ಅಂದ್ರೂ 500+ ರನ್ಸ್ ಕಲೆ ಹಾಕ್ಬೇಕಾಗುತ್ತೆ. ಆದ್ರೆ ಸದ್ಯದ ಸಿಚುಯೇಷನ್ ನೋಡ್ತಿದ್ರೆ ಇದು ಕಷ್ಟಸಾಧ್ಯನೇ. ಸದ್ಯ ಭಾರತದ ಕೈಯಲ್ಲಿ ಇನ್ನೂ ನಾಲ್ಕು ವಿಕೆಟ್ಸ್ ಇದೆ. ಧ್ರುವ್ ಜುರೇಲ್, ಆಕಾಶ್ ದೀಪ್, ಅನ್ಶುಲ್ ಕಾಂಬೋಜ್, ಗುರ್ನೂರ್ ಬ್ರಾರ್ ಹಾಗೇ ಜಸ್ಪ್ರೀತ್ ಬುಮ್ರಾ.. ಸೋ ಇವ್ರೆಲ್ಲರೂ ಸೇರಿ ಆಲೌಟ್ ಆಗೋ ಮುನ್ನ ತಂಡವನ್ನ 157 ರನ್ಗಳ ಗಡಿ ದಾಟಿಸಿ ಭಾರತವನ್ನ ಫಾಲೋ ಆನ್ನಿಂದ ತಪ್ಪಿಸಿಬೇಕಿದೆ. ಆಗಷ್ಟೇ ಭಾರತ ಚೇತರಿಸಿಕೊಳ್ಳೋಕೆ ಸಾದ್ಯ. ಹಾಗೇ ಅಟ್ಲೀಸ್ಟ್ ಮ್ಯಾಚ್ ಗೆಲ್ಲೋಕೆ ಕಡೇ ಪಕ್ಷ ಸಾಧ್ಯನೇ ಆಗಲ್ಲ ಅಂದಾಗ ಅಟ್ಲೀಸ್ಟ್ ಡ್ರಾ ಮಾಡಿಕೊಳ್ಳೋಕಾದ್ರೂ ಅವಕಾಶ ಇರುತ್ತೆ. ಆಲ್ರೆಡಿ ಈಗ ನ್ಯೂಜಿಲೆಂಡ್ ವಿನ್ನಿಂಗ್ ಪ್ರೆಡಿಕ್ಷನ್ 51 ಪರ್ಸೆಂಟ್ ಇದೆ. ಭಾರತಕ್ಕೆ ಇರೋದೇ 8 ಪರ್ಸೆಂಟ್.. ಅಟ್ಲೀಸ್ಟ್ ಗೆಲ್ಲೋಕಾಗದೇ ಇದ್ರೂ ಡ್ರಾನಲ್ಲಾದ್ರೂ ಮುಗಿಸ್ಬೋದು. ಌಂಡ್ ಇದೆಲ್ಲದ್ರ ನಡುವೆ ಹೆಡ್ಕೋಚ್ ಗೌತಮ್ ಗಂಭಿರ್ ಅವ್ರ ಪ್ಲೇಯಿಂಗ್ 11 ಬಗ್ಗೆಯೂ ಚರ್ಚೆಯಾಗ್ತಿದೆ. ಜಡೇಜಾ ಇಲ್ಲದ ಎಫೆಕ್ಟ್ ಕೂಡ ಗೊತ್ತಾಗ್ತಿದೆ.

ನೋಡಿರಿ

