NZಗೆ ಕೊಹ್ಲಿಯದ್ದೇ ನಡುಕ – 2ನೇ ಮ್ಯಾಚಲ್ಲೇ ಸರಣಿ ಕೈ ವಶ?
ಸುಂದರ್ ಬದಲಿಗೆ ಬದೋನಿ Or ರೆಡ್ಡಿ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ನಾಳೆ ನಡೆಯಲಿದೆ. ಈಗಾಗ್ಲೇ ಸರಣಿಯಲ್ಲಿ ಒಂದು ಪಂದ್ಯ ಗೆದ್ದು ಲೀಡ್ ಸಾಧಿಸಿರೋ ಭಾರತ ಈ ಮ್ಯಾಚ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದೆ. ಮತ್ತೊಂದ್ಕಡೆ 2ನೇ ಪಂದ್ಯ ಗೆದ್ದು ಸರಣಿಯಲ್ಲಿ ಜೀವಂತವಾಗಿರೋದೇ ಕಿವೀಸ್ ಪಡೆಗೆ ಇರುವಂಥ ಚಾಲೆಂಜ್. ಮೊದಲ ಮ್ಯಾಚ್ ನೋಡ್ದಾಗ ಎರಡನೇ ಪಂದ್ಯ ಕೂಡ ನೆಕ್ ಟು ನೆಕ್ ಪರ್ಫಾಮೆನ್ಸ್ ಇರುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಇದ್ರ ನಡುವೆ ಭಾರತದ ತಂಡದಲ್ಲಿ ಕೆಲ ಬದಲಾವಣೆಗಳು ಆಗಿವೆ.
ಇದನ್ನೂ ಓದಿ : Mr. Perfect ರಾಹುಲ್ – ಬ್ಯಾಟಿಂಗ್ ನಲ್ಲಿ ಫುಟ್ ಬಾಲ್ ಆದ್ರಾ?
ಬ್ಲ್ಯಾಕ್ ಕ್ಯಾಪ್ಸ್ ಮತ್ತು ಮೆನ್ ಇನ್ ಬ್ಲ್ಯೂ ಬಾಯ್ಸ್ ನಡುವಿನ 2ನೇ ಏಕದಿನ ಪಂದ್ಯ ಬುಧವಾರ ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಇಲ್ಲಿಯವರೆಗೆ ನಾಲ್ಕು ಬಾರಿ ಏಕದಿನ ಪಂದ್ಯಗಳನ್ನ ಆಡಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳನ್ನ ಎದುರಿಸಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ನಾಲ್ಕು ಪಂದ್ಯಗಳಲ್ಲಿ ಭಾರತ ಒಂದು ಸಲ ಮಾತ್ರ ಗೆದ್ದಿದೆ, ಅದು 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಅದೂ ಅಲ್ದೇ ಹಿಂದಿನ ODI ಪಂದ್ಯಗಳಲ್ಲಿ 352, 340 ಮತ್ತು 325.. ಹೀಗೆ ಮೊದಲ ಇನ್ನಿಂಗ್ಸ್ನಲ್ಲಿ ಒಳ್ಳೆ ಸ್ಕೋರ್ ಬಂದಿರೋದ್ರಿಂದ ಈ ಸಲವೂ ಈ ಪಿಚ್ನಲ್ಲಿ ಹೆಚ್ಚಿನ ರನ್ಸ್ ನಿರೀಕ್ಷೆ ಮಾಡಲಾಗಿದೆ. ಬ್ಯಾಟರ್ ಫ್ರೆಂಡ್ಲಿ ಆಗಿರೋ ಈ ಪಿಚ್ನಲ್ಲಿ ಹೈಸ್ಕೋರ್ ನಿರೀಕ್ಷೆ ಮಾಡ್ಬೋದು. ಹೀಗಿರುವಾಗ್ಲೇ ಭಾರತ ತಂಡದಲ್ಲಿ ಮೇಜರ್ ಸರ್ಜರಿಯಾಗಿದೆ.
ವಾಷಿಂಗ್ಟನ್ ಔಟ್.. ಆಯುಷ್ ಬದೋನಿಗೆ ಚಾನ್ಸ್!
2ನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿಯಾಗಿದೆ. ತಂಡದಲ್ಲಿದ್ದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರಣಿಯಿಂದಲೂ ರೂಲ್ಡ್ ಔಟ್ ಆಗಿದ್ದಾರೆ. ಸುಂದರ್ ಬದಲಿಗೆ ಯುವ ಆಲ್ರೌಂಡರ್ ಆಯುಷ್ ಬದೋನಿ ಅವರನ್ನು ಆಯ್ಕೆ ಮಾಡಲಾಗಿದೆ. ಫಸ್ಟ್ ಮ್ಯಾಚ್ ಟೈಮಲ್ಲಿ ಸುಂದರ್ ಪೆಕ್ಕೆಲುಬಿಗೆ ಗಾಯವಾಗಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಮುಂದಿನ ಎರಡು ಪಂದ್ಯಗಳಿಂದ ಕೈ ಬಿಡಲಾಗಿದೆ. ಇವ್ರ ಸ್ಥಾನಕ್ಕೆ ಆಲ್ರೌಂಡರ್ ಆಯುಷ್ ಬದೋನಿ ಆಯ್ಕೆಯಾಗಿದ್ದಾರೆ. ದೆಹಲಿ ಮೂಲದ ಬದೋನಿ ಫಾರ್ ದಿ ಫಸ್ಟ್ ಟೈಂ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದಾರೆ. ರಾಜ್ಕೋಟ್ ಹಾಗೂ ಇಂದೋರ್ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ 2 ಪಂದ್ಯಗಳ ವೇಳೆ ಟೀಂ ಇಂಡಿಯಾದಲ್ಲಿ ಇರ್ತಾರೆ. ಬದೋನಿ ಈವರೆಗೆ ಲಿಸ್ಟ್ ಎ ಕ್ರಿಕೆಟ್ನಲ್ಲಿ ಈವರೆಗೆ 27 ಪಂದ್ಯಗಳನ್ನಾಡಿದ್ದಾರೆ. 22 ಇನಿಂಗ್ಸ್ ಆಡಿದ್ದು 1 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದಾರೆ. ಜೊತೆಗೆ 18 ವಿಕೆಟ್ ತೆಗೆದಿದ್ದಾರೆ. ಐಪಿಎಲ್ನಲ್ಲಿ ಎಲ್ಎಸ್ಜಿ ಪರ ಆಡ್ತಿದ್ದಾರೆ. ಬಹುಶಃ ಭಾರತ ತಂಡಕ್ಕೆ ಸೆಲೆಕ್ಟ್ ಆದ ಮೊದಲ ಪಂದ್ಯದಲ್ಲೇ ಬದೋನಿ ಪ್ಲೇಯಿಂಗ್ 11ನಲ್ಲಿ ಆಡೋ ಚಾನ್ಸಸ್ ಕೂಡ ಇದೆ.
ಪ್ಲೇಯಿಂಗ್ 11ನಲ್ಲಿ ಬದೋನಿ?
ಆಯುಷ್ ಬದೋನಿಗೆ ಚಾನ್ಸ್ ಕೊಟ್ಟಿರೋದೇ ವಾಷಿಂಗ್ಟನ್ ಸುಂದರ್ ಬದಲಿಗೆ
ಸುಂದರ್ ಗಾಯಗೊಂಡಿದ್ದಕ್ಕೆ ನ್ಯೂಜಿಲೆಂಡ್ ವಿರುದ್ಧ 5ನೇ ಸ್ಲಾಟ್ ಗೆ ಜಡ್ಡು
ಸುಂದರ್ ಆಬ್ಸೆನ್ಸ್ ನಲ್ಲಿ ಬೌಲಿಂಗ್ ನಲ್ಲಿಯೂ ಕೊಡುಗೆ ನೀಡಬಲ್ಲ ಆಟಗಾರ
ನಿತೀಶ್ ಕುಮಾರ್ ರೆಡ್ಡಿ ಅಥವಾ ಧ್ರುವ್ ಜುರೆಲ್ ಬದಲಿ ಆಪ್ಶನ್ಸ್ ಇದ್ರೂ ಕಷ್ಟ
ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾನಂತ ವೇಗಿಗಳು ಇದ್ದಾರೆ
ವಿಕೆಟ್ ಕೀಪರ್ ಬ್ಯಾಟರ್ ಜುರೇಲ್ ಬೌಲಿಂಗ್ ಮಾಡಲ್ಲ, ಅವಕಾಶ ಕಷ್ಟ
ದೇಶೀಯ ಕ್ರಿಕೆಟ್ ನಲ್ಲಿ ರೆಡ್ಡಿಗಿಂತ ಬದೋನಿಯೇ ಉತ್ತಮ ಬ್ಯಾಟ್ಸ್ಮನ್
ವಿಜಯ್ ಹಜಾರೆ ಟ್ರೋಫಿಯಲ್ಲಿ ರೈಲ್ವೇಸ್ ವಿರುದ್ಧ ದೆಹಲಿ ಪರ 3 ವಿಕೆಟ್
ಹೀಗಾಗಿ ಬದಾನಿ ಪ್ಲೇಯಿಂಗ್ 11 ಸೇರುವ ನಿರೀಕ್ಷೆ ಇದೆ. ಆದ್ರೆ ಎಕ್ಸ್ಪೀರಿಯನ್ಸ್ ಅಂತಾ ಬಂದ್ರೆ ನಿತೀಶ್ ರೆಡ್ಡಿಯನ್ನ ಸೆಲೆಕ್ಟ್ ಮಾಡೋ ಸಾಧ್ಯತೆಯೂ ಇರುತ್ತೆ. ಉಳಿದಂತೆ ಯಾವುದೇ ಬದಲಾವಣೆಗಳು ಇರೋದಿಲ್ಲ. ಹಾಗಾದ್ರೆ ಎರಡನೇ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ 11 ಹೇಗಿರಬಹುದು ಅನ್ನೋದನ್ನ ನೋಡೋದಾದರೆ..
ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ
ಶುಭಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಆಯುಷ್ ಬಡೋನಿ / ನಿತೀಶ್ ರೆಡ್ಡಿ
ಕೆಎಲ್ ರಾಹುಲ್
ರವೀಂದ್ರ ಜಡೇಜಾ
ಹರ್ಷಿತ್ ರಾಣಾ
ಕುಲದೀಪ್ ಯಾದವ್
ಮೊಹಮ್ಮದ್ ಸಿರಾಜ್
ಪ್ರಸಿದ್ಧ್ ಕೃಷ್ಣ
ಹೀಗೆ ಆಲ್ಮೋಸ್ಟ್ ಕಳೆದ ಪಂದ್ಯದ ವಿನ್ನಿಂಗ್ ಪ್ಲೇಯರ್ಗಳೇ ಈ ಮ್ಯಾಚಲ್ಲೂ ಕಾಣಿಸಿಕೊಳ್ಳೋ ಚಾನ್ಸಸ್ ಇದೆ. ಸುಂದರ್ ಬದಲಿಗೆ ಬದೋನಿ ಮಾತ್ರವೇ ಪ್ಲೇಯಿಂಗ್ 11 ಆಡುವ ಸಾಧ್ಯತೆಗಳಿವೆ. ವೇಗಿಗಳ ವಿಭಾಗದಲ್ಲಿ ಅರ್ಶದೀಪ್ಗೆ ಚಾನ್ಸ್ ಕೊಡ್ತಾರೆ ಕೊಟ್ರೂ ಯಾರನ್ನೂ ಕೂರಿಸ್ತಾರೆ ಅನ್ನೋ ಕ್ಯೂರಿಯಾಸಿಟಿ ಬಿಟ್ರೆ ಉಳಿದವ್ರೆಲ್ಲಾ ಹಾಗೇ ಕಂಟಿನ್ಯೂ ಆಗ್ತಾರೆ.
ರಾಜ್ ಕೋಟ್ ನಲ್ಲೂ ಕೊಹ್ಲಿ ಬ್ಯಾಟಿಂಗ್ ಪವರ್ ಶೋ!
ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಕೊಹ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿ 301 ರನ್ಗಳ ಟಾರ್ಗೆಟ್ ಬೆನ್ನತ್ತೋಕೆ ಪ್ರಮುಖ ಅಸ್ತ್ರವಾಗಿದ್ರು. ಌಂಡ್ ಸೆಕೆಂಡ್ ಮ್ಯಾಚಲ್ಲೂ ನ್ಯೂಜಿಲೆಂಡ್ ಪಡೆಗೆ ನಡುಕ ಹುಟ್ಟಿಸಿದ್ದಾರೆ. ಯಾಕಂದ್ರೆ ರಾಜ್ಕೋಟ್ನಲ್ಲೂ ಕೊಹ್ಲಿ ರೆಕಾರ್ಡ್ಸ್ ಅದ್ಭುತವಾಗಿದೆ. ಸತತ ಐದು ಪಂದ್ಯಗಳಿಂದ ಕೊಹ್ಲಿ 50 ಕ್ಕೂ ಹೆಚ್ಚು ಸ್ಕೋರ್ಗಳ ದಾಖಲೆ ಮಾಡಿದ್ದಾರೆ. ಇನ್ನು 2ನೇ ಪಂದ್ಯ ನಡೆಯಲಿರೋ ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 56.50 ಸರಾಸರಿಯಲ್ಲಿ 226 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ ಅವರ ಗರಿಷ್ಠ ಸ್ಕೋರ್ 78. ಌಂಡ್ ಇಲ್ಲಿ 3 ಅರ್ಧಶತಕ ಬಾರಿಸಿದ್ದಾರೆ. ಬಟ್ ಈ ಮ್ಯಾಚಲ್ಲಿ ಶತಕ ಗಳಿಸ್ತಾರೆ ಅನ್ನೋ ನಿರೀಕ್ಷೆ ಮೂಡಿಸಿದ್ದಾರೆ.

ನೋಡಿರಿ

