ಗೆಲ್ಲೋ ಮ್ಯಾಚ್ ಡ್ರಾ – 720 ರನ್ಸ್ ಹೊಡೆದ್ರೂ ಎಡವಿದ್ದೆಲ್ಲಿ?
2ನೇ ಪಂದ್ಯದಲ್ಲಿ WTC ಭವಿಷ್ಯ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಯಾಗಿದೆ. ಬ್ಯಾಟಿಂಗ್ನಲ್ಲಿ ದಾಖಲೆಯ ರನ್ಸ್ ಹೊಡೆದ್ರೂ ಕೂಡ ಟೀಮ್ ಇಂಡಿಯಾಗೆ ಈ ಪಂದ್ಯವನ್ನ ಗೆಲ್ಲೋಕೆ ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಪಂದ್ಯ ಗೆಲ್ಲದೆಯೇ ನ್ಯೂಜಿಲೆಂಡ್ ತಂಡ ಶಾಕ್ ಕೊಟ್ಟಿದೆ.
ಇದನ್ನೂ ಓದಿ : RO-KOಗಿಂತ ಗಿಲ್ ಬೆಸ್ಟ್! ಧರ್ಮದ ಕಾರಣಕ್ಕೆ ಸಿರಾಜ್ ಡ್ರಾಪ್?
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವೇ ಗೆಲ್ಲುವಂಥ ಟೀಂ ಆಗಿ ಕಾಣ್ತಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಹಾಗೇ ಬ್ಯಾಟಿಂಗ್ ಎರಡ್ರಲ್ಲೂ ಮಿಂಚಿದ್ದ ಭಾರತಕ್ಕೆ ಈ ಪಂದ್ಯದ ಗೆಲುವು ಅನಿವಾರ್ಯವೂ ಇತ್ತು. ಆದ್ರೆ ಕೊನೆಯ ದಿನದಾಟದಲ್ಲಿ ಇದು ಗೆಲ್ಲೋ ಆಟವನ್ನ ಅಂತಾ ಇನ್ನೂ ಓವರ್ಗಳು ಬಾಕಿ ಇದ್ದಂತೆಯೇ ಶಸ್ತ್ರತ್ಯಾಗ ಮಾಡಿ ಕೈಕುಲುಕಿದ್ದಾರೆ.
720/9 ರನ್ಸ್ ಹೊಡೆದ್ರೂ ಗೆಲ್ಲದ ಭಾರತ!
ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 368 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 9 ವಿಕೆಟ್ಗಳ ನಷ್ಟಕ್ಕೆ 720 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಌಂಡ್ ಫಸ್ಟ್ ಇನ್ನಿಂಗ್ಸ್ನಲ್ಲಿ 352 ರನ್ಗಳ ಮುನ್ನಡೆಯನ್ನೂ ಸಾಧಿಸಿತು. ಆ ನಂತ್ರ ನ್ಯೂಜಿಲೆಂಡ್ ನಾಲ್ಕನೇ ದಿನದಾಟದಲ್ಲಿ ಎರಡು ವಿಕೆಟ್ ನಷ್ಟಕ್ಕೆ 119 ರನ್ಸ್ ಕಲೆ ಹಾಕಿತ್ತು. ಐದನೇ ದಿನ 233 ರನ್ಗಳ ಹಿನ್ನಡೆಯಲ್ಲಿದ್ರು. ಆದ್ರೆ ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ ಪಡೆಯನ್ನು ಆಲೌಟ್ ಮಾಡಿದ್ದ ಭಾರತಕ್ಕೆ ಎರಡನೇ ಇನ್ನಿಂಗ್ಸ್ನಲ್ಲಿ ಇದು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 239 ರನ್ ಗಳಿಸಿ ಆಡುವಾಗ ಇನ್ನೂ 15 ಓವರ್ಗಳ ಆಟ ಬಾಕಿ ಇರುವಾಗಲೇ ಭಾರತ ಪಂದ್ಯ ನಿಲ್ಲಿಸಿ ಡ್ರಾ ಮಾಡಿಕೊಂಡಿದೆ. ಆದ್ರೆ ಇನ್ನೂ 90 ಎಸೆತಗಳು ಬಾಕಿ ಇದ್ದಾಗ್ಲೇ ಶರಣಾಗಿದ್ದರ ಬಗ್ಗೆ ಟೀಕೆಗಳು ವ್ಯಕ್ತವಾಗ್ತಿದೆ. ಭಾರತಕ್ಕೆ ಇನ್ನು 5 ವಿಕೆಟ್ಸ್ ಬೇಕಿತ್ತು. ಇನ್ನೂ 90 ಎಸೆತಗಳು ಬಾಕಿ ಇದ್ದಾಗ ಡ್ರಾ ಮಾಡಿಕೊಂಡಿದ್ದು ಸರಿಯಲ್ಲ. ಪೂರ್ತಿ ಆಟ ಆಡಬೇಕಿತ್ತು ಅಂತಾ ಕಿಡಿ ಕಾರಿದ್ದಾರೆ. ಅಲ್ಲದೆ ಈ ಪಂದ್ಯ ಡ್ರಾ ಆಗಿರೋದ್ರಿಂದ ಭಾರತಕ್ಕೆ ದೊಡ್ಡ ಪೆಟ್ಟೂ ಬಿದ್ದಿದೆ.
ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಹಾದಿ ಇನ್ನೂ ಕಠಿಣ!
ಭಾರತಕ್ಕೆ ಈಗಾಗ್ಲೇ 2027ರ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಕಠಿಣವಾಗಿದೆ. ಈ ರೇಸ್ನಲ್ಲಿ ಒಂದೊಂದು ಪಾಯಿಂಟ್ ಕೂಡ ಮೋಸ್ಟ್ ಇಂಪಾರ್ಟೆಂಟ್. ವಿದೇಶಿ ನೆಲದಲ್ಲಿ ಸಿಗುವ ಒಂದು ಗೆಲುವು ತಂಡದ ಫೈನಲ್ ಹಾದಿಯನ್ನು ಈಸಿ ಮಾಡುತ್ತೆ. ಹೀಗಿರುವಾಗ ಮೊದಲ ಇನ್ನಿಂಗ್ಸ್ನಲ್ಲಿ 720 ರನ್ ಗಳಿಸಿ ಕಿವೀಸ್ ಮೇಲೆ ಕಂಪ್ಲೀಟ್ ಪ್ರೆಶರ್ ಕ್ರಿಯೇಟ್ ಮಾಡಿದ್ದ ಭಾರತ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರಿಂದ ಕ್ರೂಶಿಯಲ್ ಪಾಯಿಂಟ್ಸ್ ಕೈತಪ್ಪಿವೆ. ಹಾಗೇ ಈ ಪಂದ್ಯದ ಬಳಿಕ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲೂ ಮಹತ್ವದ ಬದಲಾವಣೆಗಳೂ ಆಗವೆ. ಡ್ರಾ ಹೊರತಾಗಿಯೂ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಡ್ರಾ ನಂತರ ಎರಡೂ ತಂಡಗಳಿಗೆ ನಾಲ್ಕು ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಭಾರತದ ಪಾಯಿಂಟ್ ಶೇಕಡಾವಾರು 51.52% ರಿಂದ 50.00%ಕ್ಕೆ ಇಳಿದಿದೆ. ನ್ಯೂಜಿಲೆಂಡ್ ಕೂಡ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ (66.67%) ಕುಸಿದಿದ್ದು, ಆಸ್ಟ್ರೇಲಿಯಾ (69.23%) ಎರಡನೇ ಸ್ಥಾನಕ್ಕೆ ತಲುಪಿದೆ. ಇನ್ನು ಭಾರತಕ್ಕೆ ಎರಡನೇ ಇನ್ನಿಂಗ್ಸ್ ಬೌಲಿಂಗ್ ಚೆನ್ನಾಗಿ ಮಾಡದಿರುವುದೇ ಭಾರತದ ಗೆಲುವು ಕೈತಪ್ಪಿದೆ ಅನ್ನೋ ಆರೋಪವಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ರವೀಂದ್ರ ಜಡೇಜಾಗೆ ಅವಕಾಶ ನೀಡಬೇಕಿತ್ತು. ಜಡ್ಡು ಸಾಕಷ್ಟು ಅನುಭವ ಇರೋ ಪ್ಲೇಯರ್.. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ದಿ ಬೆಸ್ಟ್ ಚಾಯ್ಸ್ ಆಗ್ತಿತ್ತು. ಌಂಡ್ ಮೊಹಮ್ಮದ್ ಸಿರಾಜ್ಗೂ ಅವಕಾಶ ನೀಡಿದ್ರೆ ಗೆಲ್ಲಬಹುದಿತ್ತು ಅನ್ನೋ ಲೆಕ್ಕಾಚಾರಗಳು ನಡೀತಿವೆ. ಈಗ ಮೊದಲ ಪಂದ್ಯ ಡ್ರಾನಲ್ಲಿ ಕೊನೆಯಾಗಿರೋದ್ರಿಂದ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಅಂಕಪಟ್ಟಿಯಲ್ಲಿ ಭಾರತ ಸದ್ಯ 4ನೇ ಸ್ಥಾನದಲ್ಲಿದ್ದು, ಫೈನಲ್ ತಲುಪಲು ಉಳಿದಿರುವ 6 ಪಂದ್ಯಗಳಲ್ಲಿ ಕನಿಷ್ಠ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಭಾರತವು ಗರಿಷ್ಠ 62.96% PCT ತಲುಪಲು ಉಳಿದಿರುವ ಎಲ್ಲಾ 6 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಒಂದು ವೇಳೆ 5 ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಂಡರೆ 59.26% PCT ಗಳಿಸಲಿದೆ. ಹಾಗೇ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಸರಣಿಯಲ್ಲಿ ಕನಿಷ್ಠ 4-0 ಅಥವಾ 4-1 ಅಂತರದ ಭರ್ಜರಿ ಜಯ ಸಾಧಿಸಿದರೆ ಮಾತ್ರ ಭಾರತ 2027ರ ಜೂನ್ನಲ್ಲಿ ಲಂಡನ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ರೇಸ್ನಲ್ಲಿ ಉಳಿಯಲು ಸಾಧ್ಯ.

ನೋಡಿರಿ

