ನೆದರ್ಲ್ಯಾಂಡ್ ಪಂದ್ಯಕ್ಕಿಲ್ಲ ಬುಮ್ರಾ? – 4ನೇ ವಿಕ್ಟರಿಗೆ ಹೇಗಿದೆ ಪ್ಲೇಯಿಂಗ್ 11?

ನೆದರ್ಲ್ಯಾಂಡ್ ಪಂದ್ಯಕ್ಕಿಲ್ಲ ಬುಮ್ರಾ? – 4ನೇ ವಿಕ್ಟರಿಗೆ ಹೇಗಿದೆ ಪ್ಲೇಯಿಂಗ್ 11?

ಟಿ-20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕ್ಟರಿಯೊಂದಿಗೆ ಮುನ್ನುಗ್ತಿರೋ ಟೀಂ ಇಂಡಿಯಾ ಈಗ ಅದೇ ವಿಜಯಯಾತ್ರೆಯಲ್ಲೇ ಸೂಪರ್​ 8 ಸುತ್ತಿಗೆ ಕಾಲಿಡೋಕೆ ಕಾಯ್ತಿದೆ. ಗ್ರೂಪ್ ಸ್ಟೇಜ್​ನಲ್ಲಿ ಬುಧವಾರ ನೆದರ್​ಲ್ಯಾಂಡ್ ವಿರುದ್ಧ ಕೊನೇ ಪಂದ್ಯ ಆಡ್ತಾರೆ. ಆಲ್ರೆಡಿ ಭಾರತ ಸೂಪರ್ 8 ಹಂತಕ್ಕೆ ಕಾಲಿಟ್ಟಿದ್ದು ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಚೇಂಜಸ್ ಆಗಲಿದೆ.

ಇದನ್ನೂ ಓದಿ : ಫೆ 28ರಿಂದ ಮಾ.17ರ ವರೆಗೆ ದ್ವಿತೀಯ ಪಿಯುಸಿ – ಮಾ. 18 ರಿಂದ ಏ.2ಕ್ಕೆSSLC ಎಕ್ಸಾಂ

ಚುಟುಕು ವಿಶ್ವಕಪ್​ನ ಹಾಲಿ ಚಾಂಪಿಯನ್ ಆಗಿರೋ ಭಾರತ ಬುಧವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಅಖಾಡಕ್ಕಿಳಿಯಲಿದೆ. ನೆದರ್​ಲ್ಯಾಂಡ್ ವಿರುದ್ಧವೂ ಭಾರತವೇ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಗ್ರೂಪ್ ಎನಲ್ಲಿ 3 ಪಂದ್ಯಗಳಿಂದ ಆರು ಅಂಕಗಳೊಂದಿಗೆ ಟೇಬಲ್ ಟಾಪರ್ ಆಗಿದ್ದು  ಸೂಪರ್ 8 ಸುತ್ತಿನಲ್ಲೂ ಡಾಮಿನೇಷನ್​ಗೆ ರೆಡಿಯಾಗ್ತಿದೆ. ಸೂಪರ್ 8 ಹಂತದ ಮ್ಯಾಚ್​ಗಳು ಇಂಪಾರ್ಟೆಂಟ್ ಹಿನ್ನೆಲೆ ಈ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಚೇಂಜಸ್ ಆಗೋದು ಪಕ್ಕಾ ಇದೆ. ಅದ್ರಲ್ಲೂ ಈ ಮ್ಯಾಚಲ್ಲೂ ಎಲ್ಲರ ಕಣ್ಣು ಇಶಾನ್ ಕಿಶನ್ ಮೇಲಿದೆ.

ನೆದರ್ ಲ್ಯಾಂಡ್ ವಿರುದ್ಧ ಸಿಡಿಯುತ್ತಾರಾ ಇಶಾನ್ ಕಿಶನ್?

ಭಾರತದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡ್ತಿರೋ ಇಶಾನ್ ಕಿಶನ್ ಮೇಲೆ ಈ ಪಂದ್ಯದಲ್ಲೂ ಎಲ್ಲರ ಕಣ್ಣಿದೆ. ಅಭಿಷೇಕ್ ಜೊತೆ ಕಿಶನ್ ಇನ್ನಿಂಗ್ಸ್ ಓಪನ್ ಮಾಡೋದು ಪಕ್ಕಾ. ಆಡಿರುವಂಥ ಮೂರು ಪಂದ್ಯಗಳಲ್ಲಿ 158 ರನ್‌ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅದೂ ಕೂಡ 197.50 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಈ ರನ್‌ಗಳನ್ನು ಗಳಿಸಿದ್ದಾರೆ.  52.66 ರ ಆವರೇಜ್​ನಲ್ಲಿ ಬ್ಯಾಟ್ ಬೀಸಿದ್ದು, ಮುಂದಿನ ಪಂದ್ಯದಲ್ಲೂ ಅದೇ ಫಾರ್ಮ್​ನಲ್ಲೇ ರನ್ ಸ್ಕೋರ್ ಮಾಡೋಕೆ ಕಾಯ್ತಿದ್ದಾರೆ. ಇನ್ನು ಈ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯೋ ಚಾನ್ಸಸ್ ಇದೆ.

ಭಾರತದ ಪರ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ಇಶಾನ್ ಕಿಶನ್

ತಿಲಕ್ ವರ್ಮಾ

ಸೂರ್ಯಕುಮಾರ್ ಯಾದವ್

ಹಾರ್ದಿಕ್ ಪಾಂಡ್ಯ

ರಿಂಕು ಸಿಂಗ್

ಶಿವಂ ದುಬೆ

ಅಕ್ಷರ್ ಪಟೇಲ್

ವರುಣ್ ಚಕ್ರವರ್ತಿ

ಅರ್ಷದೀಪ್ ಸಿಂಗ್

ಮೊಹಮ್ಮದ್ ಸಿರಾಜ್

ಹೀಗೆ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಚೇಂಜಸ್ ಇಲ್ದಿದ್ರೂ ಬೌಲಿಂಗ್ ನಲ್ಲಿ ಸ್ವಲ್ಪ ವೇರಿಯೇಷನ್ಸ್ ಆಗುವಂಥ ನಿರೀಕ್ಷೆ ಇದೆ.  ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಕೆಲ ಆಟಗಾರರು ದಾಖಲೆಯ ಹೊಸ್ತಿಲಿನಲ್ಲಿದ್ದಾರೆ. ಏನೆಲ್ಲಾ ರೆಕಾರ್ಡ್ಸ್ ಮಾಡೋ ಅವಕಾಶ ಇದೆ.

ದಾಖಲೆಯ ಹೊಸ್ತಿಲಲ್ಲಿ ಆಟಗಾರರು!

ತಿಲಕ್ ವರ್ಮಾಗೆ T20I ಗಳಲ್ಲಿ 100 ಬೌಂಡರಿಗಳ ದಾಖಲೆಗೆ 1 ಬೌಂಡರಿ ಅಗತ್ಯ

ಟಿ20ಐಗಳಲ್ಲಿ 100 ವಿಕೆಟ್‌ ಗಳಿಗೆ ಕುಲ್ದೀಪ್ ಯಾದವ್‌ ಗೆ 5 ವಿಕೆಟ್‌ ಗಳ ಅಗತ್ಯ

ಇಶಾನ್ ಕಿಶನ್ ಟಿ20ಯಲ್ಲಿ 300 ಸಿಕ್ಸರ್‌ ಗಳಿಗೆ 2 ಸಿಕ್ಸರ್ ಗಳ ಅಗತ್ಯ

ಎಲ್ಲಾ ಟಿ20 ಪಂದ್ಯಗಳಲ್ಲಿ 6,000 ರನ್ ಗಳಿಸಲು ಪಾಂಡ್ಯಗೆ 22 ರನ್‌ ಬೇಕು

ಹೀಗೆ ಆಟಗಾರರು ದಾಖಲೆ ಬರೆಯುತ್ತಲೇ ವಿಶ್ವಕಪ್​ನಲ್ಲಿ ಅಜೇಯ ಯಾತ್ರೆ ಮುನ್ನಡೆಸಿದ್ದಾರೆ. ನೆದರ್​ಲ್ಯಾಂಡ್ ವಿರುದ್ಧವೂ ಒಂದಷ್ಟು ರೆಕಾರ್ಡ್ಸ್ ಕ್ರಿಯೇಟ್ ಆಗುತ್ತೆ. ಇನ್ನು ಈ ಭಾರತ ಮತ್ತು ನೆದರ್ಲ್ಯಾಂಡ್ಸ್ ತಂಡಗಳ ಸ್ಟಾಟ್ಸ್ ನೋಡೋದಾದ್ರೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಸಲ ಮಾತ್ರ ಮುಖಾಮುಖಿಯಾಗಿದ್ದಾರೆ.. ಸಿಡ್ನಿಯಲ್ಲಿ ನಡೆದ 2022 ರ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಮೆನ್ ಇನ್ ಬ್ಲೂ ತಂಡವು ಡಚ್ ವಿರುದ್ಧ 56 ರನ್‌ಗಳ ಸುಲಭ ಜಯ ಸಾಧಿಸಿತು. ಸೋ ಈ ಸಲ ಭಾರತ ತಂಡ ಇನ್ನೇ ಡೇಂಜರಸ್ ಆಗಿದ್ದು ವಿಕ್ಟರಿ ಮಾರ್ಜಿನ್ ಇನ್ನಷ್ಟು ಜಾಸ್ತಿಯಾಗ್ಬೋದು.

Shantha Kumari

Leave a Reply

Your email address will not be published. Required fields are marked *