ದೇಶದಲ್ಲೇ ಅತ್ಯಂತ ಎತ್ತರದ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಟೆಸ್ಟ್ ಮ್ಯಾಚ್ – ಧರ್ಮಶಾಲಾದಲ್ಲಿ ಇಂಡಿಯಾ vs ಇಂಗ್ಲೆಂಡ್ ಸೆಣಸಾಟ

ದೇಶದಲ್ಲೇ ಅತ್ಯಂತ ಎತ್ತರದ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಟೆಸ್ಟ್ ಮ್ಯಾಚ್ – ಧರ್ಮಶಾಲಾದಲ್ಲಿ  ಇಂಡಿಯಾ vs ಇಂಗ್ಲೆಂಡ್ ಸೆಣಸಾಟ

ಇಂಡಿಯಾ vs ಇಂಗ್ಲೆಂಡ್.. 5ನೇ ಟೆಸ್ಟ್ ಮ್ಯಾಚ್. ಟೀಂ ಇಂಡಿಯಾ ಈಗಾಗ್ಲೇ ಸೀರಿಸ್ ಗೆದ್ದಾಗಿದೆ. ಆದ್ರೂ ಇಂಗ್ಲೆಂಡ್​​ನ್ನ 4-1 ಅಂತರದಿಂದ ಮಣಿಸಿ ಮನೆಗೆ ಕಳುಹಿಸೋ ಪ್ಲ್ಯಾನ್ ರೋಹಿತ್​ ಶರ್ಮಾ ಪಡೆ ಇದೆ. ಫಸ್ಟ್ ಟೆಸ್ಟ್ ಸೋತ ಬಳಿಕ ಉಳಿದ ಮೂರೂ ಮ್ಯಾಚ್​​ಗಳನ್ನ ನಮ್ಮವರೇ ಗೆದ್ದ ರೀತಿ ನೋಡಿದ್ರೆ ಈಗ 5ನೇ ಟೆಸ್ಟ್​ನಲ್ಲಿ ಕೂಡ ಸೇಮ್ ರಿಸಲ್ಟ್ ಬರಬಹುದು ಅನ್ಸುತ್ತೆ. ಮ್ಯಾಚ್​ ನಡೀತಾ ಇರೋದು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ.

ಇದನ್ನೂ ಓದಿ:IPLನಿಂದಲೂ ಹೊರಗುಳಿಯಬೇಕಾಗುತ್ತಾ ಕೆ.ಎಲ್ ರಾಹುಲ್ – ಕನ್ನಡಿಗ ಕ್ರಿಕೆಟಿಗನಿಗೆ ಫಿಟ್ನೆಸ್ ಟೆಸ್ಟ್ ಅಗ್ನಿಪರೀಕ್ಷೆ

ಧರ್ಮಶಾಲಾದಲ್ಲಿ ಇದುವರೆಗೆ ಒಂದು ಇಂಟರ್​ನ್ಯಾಷನಲ್ ಟೆಸ್ಟ್ ಮ್ಯಾಚ್ ಅಷ್ಟೇ ನಡೆದಿರೋದು. 2017ರಲ್ಲಿ ಭಾರತ-ಆಸ್ಟ್ರೇಲಿಯಾ ಮಧ್ಯೆ ಮ್ಯಾಚ್ ನಡೆದಿತ್ತು. ಆ ಪಂದ್ಯವನ್ನ ಟೀಂ ಇಂಡಿಯಾವೇ ಗೆದ್ದಿತ್ತು. ಸುತ್ತಲೂ ಹಿಮಾಲಾಯದ ಬೆಟ್ಟವನ್ನ ಆವರಿಸಿರೋ ಧರ್ಮಶಾಲಾದಲ್ಲಿ ವೆದರ್ ಕಂಡೀಷನ್ ಕಂಪ್ಲೀಟ್ಲಿ ಡಿಫರೆಂಟ್ ಆಗಿರುತ್ತೆ. ಆ ಲೋಕೇಶನ್ ಸ್ವರ್ಗದಲ್ಲೇ ಮ್ಯಾಚ್​ ನಡೀತಿದ್ಯಾ ಎಂಬಂತೆಯೇ ಇದೆ. ಇಡೀ ದೇಶದಲ್ಲೇ ಅತ್ಯಂತ ಎತ್ತರದಲ್ಲಿರೋ ಕ್ರಿಕೆಟ್ ಸ್ಟೇಡಿಯಂ ಅಂದ್ರೆ ಅದು ಧರ್ಮಶಾಲಾವೇ. ಕಳೆದ ಕೆಲ ದಿನಗಳಿಂದ ಇಲ್ಲಿ ಆಗಾಗ ಮಳೆಯಾಗ್ತಾನೆ ಇತ್ತು. ಈ ನಡುವೆಯೇ ಗ್ರೌಂಡ್ಸ್​ಮನ್​ಗಳು ಪಿಚ್ ಮತ್ತು ಇಡೀ ಗ್ರೌಂಡ್​​ನ್ನ ರೆಡಿ ಮಾಡಿದ್ದಾರೆ. ಪಿಚ್​ ರೆಡಿ ಮಾಡೋಕೆ ಕ್ಯುರೇಟರ್​ಗೂ ಅಷ್ಟೊಂದು ಸಮಯ ಸಿಕ್ಕಿಲ್ಲ. ಮಳೆ ಬಿಟ್ಟಾಗಲೆಲ್ಲಾ ಪಿಚ್ ಮೇಲೆ ವರ್ಕ್ ಮಾಡಿದ್ದಾರೆ. ಇಂಡಿಯನ್ ಎಕ್ಸ್​​ಪ್ರೆಸ್ ಮೀಡಿಯಾ ರಿಪೋರ್ಟ್​​ ಪ್ರಕಾರ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಜೊತೆಗೆ​ ಕ್ಯುರೇಟರ್​ ಚರ್ಚೆ ಮಾಡಿಯೇ ಪಿಚ್ ರೆಡಿ ಮಾಡಿದ್ದಾರಂತೆ. ಸ್ಲೋ ಟರ್ನರ್​​ ಪಿಚ್ ಸಿದ್ಧಪಡಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಈ ಬಾರಿಯ ಸೀರಿಸ್​​ನಲ್ಲಿ ಪಿಚ್​ಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಹೈದರಾಬಾದ್​ನಲ್ಲಿ ನಡೆದ ಫಸ್ಟ್ ಟೆಸ್ಟ್​ಗೆ ಫುಲ್​ ಟರ್ನಿಂಗ್​ ಪಿಚ್​​ನ್ನ ರೆಡಿ ಮಾಡಲಾಗಿತ್ತು. ಆ ಮ್ಯಾಚ್​ನ್ನ ಭಾರತ ಸೋತಿತ್ತು. ಅಲ್ಲಿಂದ ಬಳಿಕ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಟ್ರೆಡಿಷನ್ ಇಂಡಿಯನ್​ ಪಿಚ್​ಗಳನ್ನೇ ರೆಡಿ ಮಾಡೋಕೆ ನಿರ್ಧರಿಸಿತ್ತು. ವೈಜಾಗ್, ರಾಜ್​ಕೋಟ್ ಮತ್ತು ರಾಂಚಿಯಲ್ಲಿ ಮೊದಲ ಎರಡು ದಿನ ಪಿಚ್​​​ ಬ್ಯಾಟಿಂಗ್​ಗೆ ಹೆಚ್ಚು ಹೆಲ್ಪ್ ಆಗಿತ್ತು. ನಂತರ ನಿಧಾನಕ್ಕೆ ಬಾಲ್​​ ಟರ್ನ್ ಆಗೋಕೆ ಶುರುವಾಗಿತ್ತು. ಈ ವೇಳೆ ನಮ್ಮವರು ಟ್ರಿಕ್ಸ್ ಅಪ್ಲೈ ಮಾಡಿ ಮೂರೂ ಮ್ಯಾಚ್​ಗಳನ್ನ ಗೆದ್ದುಕೊಂಡಿದ್ರು. ಧರ್ಮಶಾಲಾದ ಪಿಚ್​ ಕೂಡ ಆಲ್​​ಮೋಸ್ ಇದೇ ಕಂಡೀಷನ್​​ನಲ್ಲಿರಬಹುದು.

ಮೊದಲ ಎರಡು ಬ್ಯಾಟ್ಸ್​​ಮನ್​ಗಳಿಗೆ ಒಂದಷ್ಟು ಸ್ಕೋರ್ ಮಾಡಬಹುದು. ನಂತರ ಸ್ಪಿನ್ನರ್ಸ್​​ಗಳಿಗೆ ಅಡ್ವಾಂಟೇಜ್​ ಸಿಗ್ತಾ ಹೋಗಬಹುದು. ಹೀಗಾಗಿ ಡೇ-3 ಬಳಿಕ ಧರ್ಮಶಾಲಾದಲ್ಲಿ ಬ್ಯಾಟಿಂಗ್ ಮಾಡೋದು ಚಾಲೆಂಜಿಂಗ್ ಆಗಿರಬಹುದು. ಬಟ್ ಈ ಟೆಸ್ಟ್ ಮ್ಯಾಚ್ ಐದು ದಿನಗಳ ಕಾಲ ಯಶಸ್ವಿಯಾಗಿ ನಡೀಬೇಕು ಅನ್ನೋದಾದ್ರೆ ಗ್ರೌಂಡ್ಸ್​ಮನ್​ಗಳ ರೋಲ್ ತುಂಬಾ ದೊಡ್ಡದಿದೆ. ಯಾಕಂದ್ರೆ ಯಾವಾಗ ಬೇಕಾದ್ರೂ ಮಳೆಯಾಗಬಹುದು. ಹಿಮ ಸುರಿದ್ರೂ ಆಶ್ಚರ್ಯ ಇಲ್ಲ. ಫೆಬ್ರವರಿಯಲ್ಲಿ ಇದೇ ಮೈದಾನದಲ್ಲಿ ರಣಜಿ ಮ್ಯಾಚ್ ಕೂಡ ನಡೆದಿತ್ತು. ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ ಮ್ಯಾಚ್​​ಗೂ ಮುನ್ನ ಧರ್ಮಶಾಲಾ ಗ್ರೌಂಡ್​ನ್ನ ಕಂಪ್ಲೀಟ್ ಆಗಿ ಹಿಮ ಆವರಿಸಿತ್ತು. ಹೀಗಾಗಿ ಭಾರತ-ಇಂಗ್ಲೆಂಡ್​ ನಡುವಿನ ಟೆಸ್ಟ್ ಮ್ಯಾಚ್ ವೇಳೆಯೂ ವೆದರ್​ ಕಂಡೀಷನ್​ನಲ್ಲಿ ಏನು ಬೇಕಾದ್ರೂ ಆಗಬಹುದು. ಹವಾಮಾನ ವರದಿ ಪ್ರಕಾರ ಹಗಲು ಹೊತ್ತಿನಲ್ಲಿ ಟೆಂಪರೇಚರ್ -4 ಡಿಗ್ರಿ ಸೆಲ್ಸಿಯಸ್​ಗೆ ಇಳಿಯಬಹುದು. ಹೀಗಾಗಿ ಬೌಲಿಂಗ್​ ಮಾಡೋದು ದೊಡ್ಡ ಚಾಲೆಂಜ್​. ಎಸ್ಪೆಷಲಿ ಟೀಂ ಇಂಡಿಯಾ ಬೌಲರ್ಸ್​ಗೆ. ಇಂಗ್ಲೆಂಡ್​​ನಲ್ಲಿ ಯಾವಾಗಲೂ ವೆದರ್​ ಕಂಡೀಷನ್​ ಧರ್ಮಶಾಲಾ ರೀತಿಯಲ್ಲೇ ಇರುತ್ತೆ. ಅವರಿಗೆ ಈ ಕೋಲ್ಡ್ ಕಂಡೀಷನ್​ಗಳನ್ನ ಆಡಿ ಅಭ್ಯಾಸ ಇದೆ.

Sulekha