ದೇಶದಲ್ಲೇ ಅತ್ಯಂತ ಎತ್ತರದ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಟೆಸ್ಟ್ ಮ್ಯಾಚ್ – ಧರ್ಮಶಾಲಾದಲ್ಲಿ ಇಂಡಿಯಾ vs ಇಂಗ್ಲೆಂಡ್ ಸೆಣಸಾಟ
ಇಂಡಿಯಾ vs ಇಂಗ್ಲೆಂಡ್.. 5ನೇ ಟೆಸ್ಟ್ ಮ್ಯಾಚ್. ಟೀಂ ಇಂಡಿಯಾ ಈಗಾಗ್ಲೇ ಸೀರಿಸ್ ಗೆದ್ದಾಗಿದೆ. ಆದ್ರೂ ಇಂಗ್ಲೆಂಡ್ನ್ನ 4-1 ಅಂತರದಿಂದ ಮಣಿಸಿ ಮನೆಗೆ ಕಳುಹಿಸೋ ಪ್ಲ್ಯಾನ್ ರೋಹಿತ್ ಶರ್ಮಾ ಪಡೆ ಇದೆ. ಫಸ್ಟ್ ಟೆಸ್ಟ್ ಸೋತ ಬಳಿಕ ಉಳಿದ ಮೂರೂ ಮ್ಯಾಚ್ಗಳನ್ನ ನಮ್ಮವರೇ ಗೆದ್ದ ರೀತಿ ನೋಡಿದ್ರೆ ಈಗ 5ನೇ ಟೆಸ್ಟ್ನಲ್ಲಿ ಕೂಡ ಸೇಮ್ ರಿಸಲ್ಟ್ ಬರಬಹುದು ಅನ್ಸುತ್ತೆ. ಮ್ಯಾಚ್ ನಡೀತಾ ಇರೋದು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ.
ಇದನ್ನೂ ಓದಿ:IPLನಿಂದಲೂ ಹೊರಗುಳಿಯಬೇಕಾಗುತ್ತಾ ಕೆ.ಎಲ್ ರಾಹುಲ್ – ಕನ್ನಡಿಗ ಕ್ರಿಕೆಟಿಗನಿಗೆ ಫಿಟ್ನೆಸ್ ಟೆಸ್ಟ್ ಅಗ್ನಿಪರೀಕ್ಷೆ
ಧರ್ಮಶಾಲಾದಲ್ಲಿ ಇದುವರೆಗೆ ಒಂದು ಇಂಟರ್ನ್ಯಾಷನಲ್ ಟೆಸ್ಟ್ ಮ್ಯಾಚ್ ಅಷ್ಟೇ ನಡೆದಿರೋದು. 2017ರಲ್ಲಿ ಭಾರತ-ಆಸ್ಟ್ರೇಲಿಯಾ ಮಧ್ಯೆ ಮ್ಯಾಚ್ ನಡೆದಿತ್ತು. ಆ ಪಂದ್ಯವನ್ನ ಟೀಂ ಇಂಡಿಯಾವೇ ಗೆದ್ದಿತ್ತು. ಸುತ್ತಲೂ ಹಿಮಾಲಾಯದ ಬೆಟ್ಟವನ್ನ ಆವರಿಸಿರೋ ಧರ್ಮಶಾಲಾದಲ್ಲಿ ವೆದರ್ ಕಂಡೀಷನ್ ಕಂಪ್ಲೀಟ್ಲಿ ಡಿಫರೆಂಟ್ ಆಗಿರುತ್ತೆ. ಆ ಲೋಕೇಶನ್ ಸ್ವರ್ಗದಲ್ಲೇ ಮ್ಯಾಚ್ ನಡೀತಿದ್ಯಾ ಎಂಬಂತೆಯೇ ಇದೆ. ಇಡೀ ದೇಶದಲ್ಲೇ ಅತ್ಯಂತ ಎತ್ತರದಲ್ಲಿರೋ ಕ್ರಿಕೆಟ್ ಸ್ಟೇಡಿಯಂ ಅಂದ್ರೆ ಅದು ಧರ್ಮಶಾಲಾವೇ. ಕಳೆದ ಕೆಲ ದಿನಗಳಿಂದ ಇಲ್ಲಿ ಆಗಾಗ ಮಳೆಯಾಗ್ತಾನೆ ಇತ್ತು. ಈ ನಡುವೆಯೇ ಗ್ರೌಂಡ್ಸ್ಮನ್ಗಳು ಪಿಚ್ ಮತ್ತು ಇಡೀ ಗ್ರೌಂಡ್ನ್ನ ರೆಡಿ ಮಾಡಿದ್ದಾರೆ. ಪಿಚ್ ರೆಡಿ ಮಾಡೋಕೆ ಕ್ಯುರೇಟರ್ಗೂ ಅಷ್ಟೊಂದು ಸಮಯ ಸಿಕ್ಕಿಲ್ಲ. ಮಳೆ ಬಿಟ್ಟಾಗಲೆಲ್ಲಾ ಪಿಚ್ ಮೇಲೆ ವರ್ಕ್ ಮಾಡಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ಮೀಡಿಯಾ ರಿಪೋರ್ಟ್ ಪ್ರಕಾರ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಕ್ಯುರೇಟರ್ ಚರ್ಚೆ ಮಾಡಿಯೇ ಪಿಚ್ ರೆಡಿ ಮಾಡಿದ್ದಾರಂತೆ. ಸ್ಲೋ ಟರ್ನರ್ ಪಿಚ್ ಸಿದ್ಧಪಡಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಈ ಬಾರಿಯ ಸೀರಿಸ್ನಲ್ಲಿ ಪಿಚ್ಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಹೈದರಾಬಾದ್ನಲ್ಲಿ ನಡೆದ ಫಸ್ಟ್ ಟೆಸ್ಟ್ಗೆ ಫುಲ್ ಟರ್ನಿಂಗ್ ಪಿಚ್ನ್ನ ರೆಡಿ ಮಾಡಲಾಗಿತ್ತು. ಆ ಮ್ಯಾಚ್ನ್ನ ಭಾರತ ಸೋತಿತ್ತು. ಅಲ್ಲಿಂದ ಬಳಿಕ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಟ್ರೆಡಿಷನ್ ಇಂಡಿಯನ್ ಪಿಚ್ಗಳನ್ನೇ ರೆಡಿ ಮಾಡೋಕೆ ನಿರ್ಧರಿಸಿತ್ತು. ವೈಜಾಗ್, ರಾಜ್ಕೋಟ್ ಮತ್ತು ರಾಂಚಿಯಲ್ಲಿ ಮೊದಲ ಎರಡು ದಿನ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಹೆಲ್ಪ್ ಆಗಿತ್ತು. ನಂತರ ನಿಧಾನಕ್ಕೆ ಬಾಲ್ ಟರ್ನ್ ಆಗೋಕೆ ಶುರುವಾಗಿತ್ತು. ಈ ವೇಳೆ ನಮ್ಮವರು ಟ್ರಿಕ್ಸ್ ಅಪ್ಲೈ ಮಾಡಿ ಮೂರೂ ಮ್ಯಾಚ್ಗಳನ್ನ ಗೆದ್ದುಕೊಂಡಿದ್ರು. ಧರ್ಮಶಾಲಾದ ಪಿಚ್ ಕೂಡ ಆಲ್ಮೋಸ್ ಇದೇ ಕಂಡೀಷನ್ನಲ್ಲಿರಬಹುದು.
ಮೊದಲ ಎರಡು ಬ್ಯಾಟ್ಸ್ಮನ್ಗಳಿಗೆ ಒಂದಷ್ಟು ಸ್ಕೋರ್ ಮಾಡಬಹುದು. ನಂತರ ಸ್ಪಿನ್ನರ್ಸ್ಗಳಿಗೆ ಅಡ್ವಾಂಟೇಜ್ ಸಿಗ್ತಾ ಹೋಗಬಹುದು. ಹೀಗಾಗಿ ಡೇ-3 ಬಳಿಕ ಧರ್ಮಶಾಲಾದಲ್ಲಿ ಬ್ಯಾಟಿಂಗ್ ಮಾಡೋದು ಚಾಲೆಂಜಿಂಗ್ ಆಗಿರಬಹುದು. ಬಟ್ ಈ ಟೆಸ್ಟ್ ಮ್ಯಾಚ್ ಐದು ದಿನಗಳ ಕಾಲ ಯಶಸ್ವಿಯಾಗಿ ನಡೀಬೇಕು ಅನ್ನೋದಾದ್ರೆ ಗ್ರೌಂಡ್ಸ್ಮನ್ಗಳ ರೋಲ್ ತುಂಬಾ ದೊಡ್ಡದಿದೆ. ಯಾಕಂದ್ರೆ ಯಾವಾಗ ಬೇಕಾದ್ರೂ ಮಳೆಯಾಗಬಹುದು. ಹಿಮ ಸುರಿದ್ರೂ ಆಶ್ಚರ್ಯ ಇಲ್ಲ. ಫೆಬ್ರವರಿಯಲ್ಲಿ ಇದೇ ಮೈದಾನದಲ್ಲಿ ರಣಜಿ ಮ್ಯಾಚ್ ಕೂಡ ನಡೆದಿತ್ತು. ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ ಮ್ಯಾಚ್ಗೂ ಮುನ್ನ ಧರ್ಮಶಾಲಾ ಗ್ರೌಂಡ್ನ್ನ ಕಂಪ್ಲೀಟ್ ಆಗಿ ಹಿಮ ಆವರಿಸಿತ್ತು. ಹೀಗಾಗಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಮ್ಯಾಚ್ ವೇಳೆಯೂ ವೆದರ್ ಕಂಡೀಷನ್ನಲ್ಲಿ ಏನು ಬೇಕಾದ್ರೂ ಆಗಬಹುದು. ಹವಾಮಾನ ವರದಿ ಪ್ರಕಾರ ಹಗಲು ಹೊತ್ತಿನಲ್ಲಿ ಟೆಂಪರೇಚರ್ -4 ಡಿಗ್ರಿ ಸೆಲ್ಸಿಯಸ್ಗೆ ಇಳಿಯಬಹುದು. ಹೀಗಾಗಿ ಬೌಲಿಂಗ್ ಮಾಡೋದು ದೊಡ್ಡ ಚಾಲೆಂಜ್. ಎಸ್ಪೆಷಲಿ ಟೀಂ ಇಂಡಿಯಾ ಬೌಲರ್ಸ್ಗೆ. ಇಂಗ್ಲೆಂಡ್ನಲ್ಲಿ ಯಾವಾಗಲೂ ವೆದರ್ ಕಂಡೀಷನ್ ಧರ್ಮಶಾಲಾ ರೀತಿಯಲ್ಲೇ ಇರುತ್ತೆ. ಅವರಿಗೆ ಈ ಕೋಲ್ಡ್ ಕಂಡೀಷನ್ಗಳನ್ನ ಆಡಿ ಅಭ್ಯಾಸ ಇದೆ.