ಕೆ.ಎಲ್ ಶತಕ ಮಿಸ್.. ಗಿಲ್ ಕೆರಿಯರ್ ಗಿರ ಗಿರ – ಎರಡನೇ ದಿನದ ಟೆಸ್ಟ್ ಪಂದ್ಯದ ಹೈಲೆಟ್ಸ್
ಇಂಡಿಯಾ VS ಇಂಗ್ಲೆಂಡ್.. ಮೊದಲ ದಿನದಾಟದ ಅಂತ್ಯದ ವೇಳೆಗೆ ಭಾರತ 1 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ 76 ಮತ್ತು ಶುಬ್ಮನ್ ಗಿಲ್ 14 ರನ್ ಗಳಿಸಿ ಕ್ರೀಸ್ನಲ್ಲಿದ್ರು. ಫಸ್ಟ್ ಡೇ ಇಂಗ್ಲೆಂಡ್ ಬೌಲರ್ಸ್ ಮೇಲೆ ಫುಲ್ ಅಟ್ಯಾಕ್ ಮಾಡಿದ್ದ ಜೈಸ್ವಾಲ್ ಸೆಂಚೂರಿಗಾಗಿ ಎಲ್ರೂ ಕಾಯ್ತಾ ಇದ್ರು. ಬಟ್ ಸೆಕೆಂಡ್ ಡೇ ಆರಂಭದಲ್ಲೇ ಯಂಗ್ ಬ್ಯಾಟ್ಸ್ಮನ್ ವಿಕೆಟ್ ಒಪ್ಪಿಸಿದ್ರು. ಸೆಂಚೂರಿ ಮಿಸ್ ಮಾಡ್ಕೊಂಡ್ರು. ಅ್ಯಕ್ಚುವಲಿ ಟೀಂ ಇಂಡಿಯಾ ಇಬ್ಬರು ಬ್ಯಾಟ್ಸ್ಮನ್ಗಳು ಶತಕ ಮಿಸ್ ಮಾಡ್ಕೊಂಡಿದ್ದಾರೆ. ಇಂಡಿಯಾ VS ಇಂಗ್ಲೆಂಡ್ ಮೊದಲ ಟೆಸ್ಟ್ನ ಡೇ-2 ಹೇಗಿತ್ತು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೊದಲ ದಿನ ಭಾರತದ ಬೌಲರ್ಸ್ ಮೋಡಿ – ಇಂಗ್ಲೆಂಡ್‌ನ ಒಂದು ರನ್ ಕಟ್ ಮಾಡಿದ್ದು ಯಾಕೆ?
ಎರಡನೇ ದಿನದ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. 80 ರನ್ಗಳಿಸಿದ್ದ ಜೈಸ್ವಾಲ್ ಜೋ ರೂಟ್ ಬೌಲಿಂಗ್ನಲ್ಲಿ ಬೌಲರ್ ತಲೆ ಮೇಲಿನಿಂದಲೇ ಬೌಂಡರಿ ಹೊಡೆಯೋಕೆ ಹೋಗಿ ಜೋ ರೂಟ್ ಕೈಗೇ ಕ್ಯಾಚ್ ಕೊಟ್ರು. ಇದಾಗಿ ಕೆಲ ಹೊತ್ತಲ್ಲೇ ಟೀಂ ಇಂಡಿಯಾದ ಸ್ಕೋರ್ 159 ರನ್ಗಳಾಗಿದ್ದಾಗ ಮೂರನೇ ವಿಕೆಟ್ ಬೀಳುತ್ತೆ. ಶುಬ್ಮನ್ ಗಿಲ್ 23 ರನ್ ಮಾಡಿ ಔಟಾಗ್ತಾರೆ. ಮತ್ತೊಮ್ಮೆ ಗಿಲ್ ಫೇಲ್ಯೂರ್. ಏನೇ ಹೇಳಿ ಶುಬ್ಮನ್ ಗಿಲ್ ಮಾತ್ರ ಮತ್ತಷ್ಟು ಡೀಪ್ ಟ್ರಬಲ್ಗೆ ಸಿಲುಕ್ತಾ ಇದ್ದಾರೆ. ಕಳೆದ ಹಲವು ಸೀರಿಸ್ಗಳಿಂದ ಗಿಲ್ ಬ್ಯಾಟ್ನಿಂದ ರನ್ ಬಂದಿಲ್ಲ. ಎಸ್ಪೆಷಲಿ ಟೆಸ್ಟ್ ಮ್ಯಾಚ್ಗಳಲ್ಲಿ ಸೌತ್ ಆಫ್ರಿಕಾದಲ್ಲೂ ಶುಬ್ಮನ್ ಗಿಲ್ ಫೇಲ್ಯೂರ್ ಆಗಿದ್ರು. ಹೀಗಾಗಿ ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟರ್ಸ್ ಕೂಡ ಶುಬ್ಮನ್ ಗಿಲ್ಗೆ ವಾರ್ನಿಂಗ್ಗೆ ಮಾಡಿದ್ರು. ಟೀಮ್ನಿಂದ ಡ್ರಾಪ್ ಆಗೋ ಬಗ್ಗೆ ಮುನ್ಸೂಚನೆ ಕೊಟ್ಟಿದ್ರು. ಆದ್ರೆ ಇಂಗ್ಲೆಂಡ್ ವಿರುದ್ಧದ ಸೀರಿಸ್ನಲ್ಲೂ ಫಸ್ಟ್ 2 ಟೆಸ್ಟ್ ಮ್ಯಾಚ್ಗಳಿಗೆ ಶುಬ್ಮನ್ ಗಿಲ್ರನ್ನ ಪಿಕ್ ಮಾಡಲಾಗಿತ್ತು. ಇದು ನಿಜಕ್ಕೂ ಶುಬ್ಮನ್ ಗಿಲ್ಗೆ ಸಿಕ್ಕಿರೋ ಗೋಲ್ಡನ್ ಅಪಾರ್ಚ್ಯುನಿಟಿ. ಬಟ್ ಫಸ್ಟ್ ಮ್ಯಾಚ್ನ ಫಸ್ಟ್ ಇನ್ನಿಂಗ್ಸ್ನಲ್ಲಂತೂ ಗಿಲ್ ಸ್ಕೋರ್ ಮಾಡಿಲ್ಲ. ಸೆಕೆಂಡ್ ಇನ್ನಿಂಗ್ಸ್ನಲ್ಲೂ ಆಡಿಲ್ಲ ಅಂದ್ರೆ ಈ ಬಾರಿ ಶುಬ್ಮನ್ ಗಿಲ್ ಪ್ರಾಬ್ಲಂ ಫೇಸ್ ಮಾಡೋದು ಗ್ಯಾರಂಟಿ. ಟೀಂನಿಂದ ಡ್ರಾಪ್ ಆದ್ರೂ ಆಶ್ಚರ್ಯ ಇಲ್ಲ. ಎಲ್ಲರ ಕೆರಿಯರ್ನಲ್ಲೂ ಈ ರೀತಿಯ ಪ್ಯಾಚ್ ಬಂದೇ ಬರುತ್ತೆ. ಸ್ಟಿಲ್ ಶುಬ್ಮನ್ ಗಿಲ್ ಇನ್ನೂ ಯಂಗ್ ಬ್ಯಾಟ್ಸ್ಮನ್. ಈ ಟೈಮ್ನಲ್ಲಿ ಗಿಲ್ ಕನ್ಸಿಸ್ಟೆನ್ಸಿ ಮೇಂಟೇನ್ ಮಾಡಬೇಕಿರೋದು ತುಂಬಾನೆ ಇಂಪಾರ್ಟೆಂಟ್ ಆಗುತ್ತೆ.
ಮೂರು ವಿಕೆಟ್ಗಳು ಬಿದ್ದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಪಾಟ್ನರ್ಶಿಪ್ ಬಿಲ್ಡ್ ಆಗುತ್ತೆ. ರಾಹುಲ್ ಈ ಬಾರಿಯೂ 4ನೇ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಇಳಿದಿದ್ರು. ಸೌತ್ ಆಫ್ರಿಕಾದಲ್ಲೂ ಅಷ್ಟೇ 4ನೇ ಆರ್ಡರ್ನಲ್ಲಿ ಬಂದು ಸೆಂಚೂರಿ ಹೊಡೆದಿದ್ರು. ಕೆಎಲ್ ಈಗ 4th ಆರ್ಡರ್ಗೆ ಕಂಪ್ಲೀಟ್ ಸೆಟ್ ಆಗಿದ್ದಾರೆ. ಕೆಲ ಸಮಯದ ಹಿಂದೆ 4ನೇ ಆರ್ಡರ್ ಬ್ಯಾಟ್ಸ್ಮನ್ ಬಗ್ಗೆ ಟೀಂ ಇಂಡಿಯಾದಲ್ಲಿ ಒಂದಷ್ಟು ವರಿ ಇತ್ತು. ಬಟ್ ಈಗ ಅದನ್ನ ಕನ್ನಡಿಗ ಕೆಎಲ್ ರಾಹುಲ್ ಸಾಲ್ವ್ ಮಾಡಿದ್ದಾರೆ. 123 ಬಾಲ್ಗಳಲ್ಲಿ ರಾಹುಲ್ 86 ರನ್ ಗಳಿಸಿದ್ರು. 8 ಬೌಂಡರಿ, 2 ಸಿಕ್ಸರ್. ಅತ್ಯಂತ ಕ್ರೂಶಿಯಲ್ ಟೈಮ್ನಲ್ಲೇ ಮತ್ತೊಮ್ಮೆ ತಂಡಕ್ಕೆ ನೆರವಾಗಿದ್ದಾರೆ. ಬಟ್ ಬಿಗ್ ಶಾಟ್ ಹೊಡೆಯೋಕೆ ಹೋಗಿ ಬ್ಯಾಂಡರಿ ಲೈನ್ನಲ್ಲಿ ಕ್ಯಾಚ್ ಕೊಟ್ಟು ರಾಹುಲ್ ಔಟಾದ್ರು. ಟೆಸ್ಟ್ನಲ್ಲಿ ತಮ್ಮ 9ನೇ ಸೆಂಚೂರಿ ಮಿಸ್ ಮಾಡಿಕೊಂಡ್ರು. ರಾಹುಲ್ಗೂ ಮುನ್ನ ಶ್ರೇಯಸ್ ಅಯ್ಯರ್ ಕೂಡ ಸಿಕ್ಸರ್ ಹೊಡಿಯೋಕೆ ಹೋಗಿ ಕ್ಯಾಚ್ ಕೊಡ್ತಾರೆ. 288ಕ್ಕೆ ಟೀಂ ಇಂಡಿಯಾದ 5 ವಿಕೆಟ್ಗಳು ಬೀಳುತ್ತೆ. ಬಳಿಕ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶ್ರೀಕರ್ ಭರತ್ ಪಾರ್ಟ್ನರ್ಶಿಪ್ ಬಿಲ್ಡ್ ಮಾಡೋಕೆ ಮುಂದಾಗ್ತಾರೆ. ಫಸ್ಟ್ಗೆ ಇಬ್ಬರೂ ಟೈಮ್ ತಗೊಂಡು, ಡಿಫೆನ್ಸಿವ್ ಆಗಿ ಆಡಿ ಕ್ರೀಸ್ನಲ್ಲಿ ಸೆಟ್ಲ್ ಆಗ್ತಾರೆ. ಯಾಕಂದ್ರೆ ಇಂಗ್ಲೆಂಡ್ ಫಸ್ಟ್ ಇನ್ನಿಂಗ್ಸ್ನಲ್ಲಿ ಗಳಿಸಿರೋದು 246 ರನ್. ಹೀಗಾಗಿ ಜಡೇಜಾ ಮತ್ತು ಶ್ರೀಕರ್ ಭರತ್ ಪಾಟ್ನರ್ಶಿಪ್ ಬಿಲ್ಡ್ ಆಗೋ ವೇಳೆಗಾಗಲೇ ಟೀಂ ಇಂಡಿಯಾ ಲೀಡ್ ಪಡೆದುಕೊಂಡಾಗಿತ್ತು. ಸೋ ಇಂಗ್ಲೆಂಡ್ ಮುಂದೆ ದೊಡ್ಡ ಮೊತ್ತದ ಟಾರ್ಗೆಟ್ ಇಡೋಕೆ ಇಬ್ಬರೂ ಎಚ್ಚರಿಕೆಯಿಂದಲೇ ಆಡಿದ್ರು. ಈ ಪೈಕಿ ಶ್ರೀಕರ್ ಭರತ್ 41 ರನ್ಗಳಿಸಿದ್ರು.
ಮತ್ತೊಂದೆಡೆ ರವೀಂದ್ರ ಜಡೇಜಾ ಅಂತೂ ಕಲ್ಲಿನಂತೆ ನಿಂತು ಬಿಟ್ರು. ಇಂಗ್ಲೆಂಡ್ ಫಾಸ್ಟ್ ಬೌಲರ್ಸ್ಗಳ ಆಟವಂತೂ ಈ ಪಿಚ್ನಲ್ಲಿ ನಡೀತಾ ಇಲ್ಲ. ಇನ್ನು ಸ್ಪಿನ್ನರ್ಸ್ಗಳು ಜಡ್ಡು ಸರಿಯಾಗಿ ಚಚ್ಚಿದ್ರು. ಅಂತಿಮವಾಗಿ ಸಕೆಂಡ್ ಡೇ ಆಟ ಮುಗಿಯೋ ವೇಳೆಗೆ ಜಡೇಜಾ 155 ಬಾಲ್ಗಳಲ್ಲಿ 81 ರನ್ ಗಳಿಸಿದ್ರು. 7 ಬೌಂಡರಿ 2 ಸಿಕ್ಸರ್. ಜಡೇಜಾ ಬ್ಯಾಟ್ನಿಂದ ಇಂಥದ್ದೊಂದು ಮೆಗಾ ಇನ್ನಿಂಗ್ಸ್ ಬರಲೇಬೇಕಾಗಿತ್ತು. ಯಾಕಂದ್ರೆ ಕಳೆದ ಕೆಲ ಸಮಯದಿಂದ ಬ್ಯಾಟಿಂಗ್ನಲ್ಲಿ ಜಡೇಜ ಹೇಳಿಕೊಳ್ಳುವಂಥಾ ಪರ್ಫಾಮೆನ್ಸ್ ನೀಡಿಲ್ಲ. ಅಂದ್ರೆ ಜಡ್ಡು ಬ್ಯಾಟ್ನಿಂದ ಬಿಗ್ ಸ್ಕೋರ್ ಬಂದಿಲ್ಲ. ಬ್ಯಾಟಿಂಗ್ನಲ್ಲಿ ಕ್ಲಿಕ್ ಆಗದಿದ್ರೂ ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ನೆಕ್ಟ್ಸ್ ಲೆವೆಲ್ನ ಪರ್ಫಾಮೆನ್ಸ್ ನೀಡ್ತಾ ಇದ್ದಾರೆ ಜಡೇಜಾ. ಈ ಟೆಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾವನ್ನ ಗೆಲುವಿನ ಹಂತಕ್ಕೆ ತಲುಪಿಸಿದ್ದಾರೆ. ಇಲ್ಲಿ ಮತ್ತೊಬ್ಬ ಆಲ್ರೌಂಡರ್ ಬಗ್ಗೆಯೂ ಹೇಳಲೇಬೇಕು. ಅಕ್ಸರ್ ಪಟೇಲ್.. ಇಂಟ್ರೆಸ್ಟಿಂಗ್ ಏನಂದ್ರೆ ಟೀಂನಲ್ಲಿರೋ ಮೂವರು ಸ್ಪಿನ್ನರ್ಸ್ಗಳು ಕೂಡ ಬ್ಯಾಟಿಂಗ್ ಮಾಡುವವರೇ. ಜಡೇಜಾ, ಅಶ್ವಿನ್ ಮತ್ತು ಅಕ್ಸರ್ ಪಟೇಲ್. ಈ ಪೈಕಿ ಅಶ್ವಿನ್ ಕೇವಲ 1 ರನ್ಗೆ ಔಟಾದ್ರು. ಬಟ್ ಅಕ್ಸರ್ ಪಟೇಲ್ ಆಡೋಕೆ ಶುರು ಮಾಡಿದ್ರು. ರವೀಂದ್ರ ಜಡೇಜಾ ಮತ್ತು ಅಕ್ಸರ್ ನಡುವೆ ಒಳ್ಳೆಯ ಪಾಟ್ನರ್ಶಿಪ್ ಬಿಲ್ಡ್ ಆಗಿದೆ. ಅಕ್ಸರ್ ಪಟೇಲ್ 62 ಬಾಲ್ಗಳಲ್ಲಿ 35 ರನ್ ಗಳಿಸಿ ನಾಟ್ಔಟ್ ಆಗಿ ಉಳಿದಿದ್ದಾರೆ. 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ರವೀಂದ್ರೆ ಜಡೇಜಾ 81 ನಾಟ್ಔಟ್. ಹೀಗಾಗಿ ಜಡ್ಡು ಸೆಂಚೂರಿ ಹೊಡಿಯೋಕೆ ಒಳ್ಳೆ ಚಾನ್ಸ್ ಇದೆ. ಈ ಮ್ಯಾಚ್ನಲ್ಲಿ ಫಸ್ಟ್ ಇನ್ನಿಂಗ್ಸ್ನಲ್ಲಿ ಯಾರೊಬ್ಬರು ಕೂಡ ಸೆಂಚೂರಿ ಹೊಡೆದಿಲ್ಲ. ಹೀಗಾಗಿ ರವೀಂದ್ರ ಜಡೇಜ ಬಗ್ಗೆ ಸಾಕಷ್ಟು ಹೋಪ್ ಇದೆ. ಆದ್ರೆ 3ನೇ ದಿನದಾಟದ ಆರಂಭದಲ್ಲಿ ತುಂಬಾನೆ ಕೇರ್ಫುಲ್ ಆಗಿ ಬ್ಯಾಟಿಂಗ್ ಮಾಡಬೇಕಾಗುತ್ತೆ.
ಹೊಸ ಬಾಲ್ ಆದ್ರೆ ಬ್ಯಾಟ್ಸ್ಮನ್ಗಳಿಗೂ ರಿಸ್ಕ್ ಇರುತ್ತೆ. ಸೆಂಚೂರಿ ಹೊಡಿಬೇಕಿದ್ದ ಯಶಸ್ವಿ ಜೈಸ್ವಾಲ್ ಸೆಕೆಂಡ್ ಡೇ ಹೇಗೆ ಔಟಾದ್ರು ಅನ್ನೋದು ನಿಮಗೆ ಗೊತ್ತಿದೆ. ಬಟ್ ಸೆಕೆಂಡ್ ಅಂತ್ಯದ ವೇಳೆಗೆ ಟೀಂ ಇಂಡಿಯಾ 421/7 ರನ್ ಗಳಿಸಿದೆ. ಇಂಗ್ಲೆಂಡ್ಗಿಂತ ಒಟ್ಟು 175 ರನ್ಗಳ ಲೀಡ್ ಪಡೆದುಕೊಂಡಾಗಿದೆ. ಸೋ 3ನೇ ದಿನದಾಟ ಮ್ಯಾಚ್ನ ರಿಸಲ್ಟ್ ಡಿಸೈಡ್ ಮಾಡಬಹುದು. ರಿಸಲ್ಟ್ ಬಂದ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಡೇ-3 ಟೀಂ ಇಂಡಿಯಾ ಒಂದು 250ಯಷ್ಟು ಲೀಡ್ ಪಡೆದುಕೊಂಡ್ರೆ, ಅಷ್ಟರೊಳಗೆ ಇಂಗ್ಲೆಂಡ್ನ್ನ ಅಲೌಟ್ ಮಾಡೋದು ಕಷ್ಟ ಇಲ್ಲ. ಡೇ-3, ಡೇ-4 ಪಿಚ್ ಇನ್ನಷ್ಟು ಟರ್ನ್ ಆಗುತ್ತೆ. ಒಟ್ಟು 8 ವಿಕೆಟ್ಗಳನ್ನ ನಮ್ಮ ಸ್ಪಿನ್ನರ್ಸ್ಗಳೇ ತೆಗೆದಿದ್ರು. ನೆಕ್ಸ್ಟ್ ಪಿಚ್ ಇನ್ನಷ್ಟು ಟರ್ನ್ ಆಗೋದ್ರಿಂದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಆಡೋದು ಅಷ್ಟೊಂದು ಈಸಿ ಇಲ್ಲ. ಸೋ ಫಸ್ಟ್ ಟೆಸ್ಟ್ನ್ನ ಟೀಂ ಇಂಡಿಯಾ ಇನ್ನಿಂಗ್ಸ್ನಿಂದ ಗೆಲ್ಲೋ ಸಾಧ್ಯತೆ ಹೆಚ್ಚಿದೆ.