ಭಾರತಕ್ಕೆ ಶರಣಾದ ಬ್ರಿಟಿಷರು – RO-KO & KL ಬ್ಯಾಟ್ ಸೈಲೆಂಟ್
ಕ್ಯಾಪ್ಟನ್ ಗಿಲ್ ಗೆ ಕೈಕೊಟ್ಟ ಲಕ್

ಭಾರತಕ್ಕೆ ಶರಣಾದ ಬ್ರಿಟಿಷರು – RO-KO & KL ಬ್ಯಾಟ್ ಸೈಲೆಂಟ್ಕ್ಯಾಪ್ಟನ್ ಗಿಲ್ ಗೆ ಕೈಕೊಟ್ಟ ಲಕ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಬ್ಯಾಟಿಂಗ್ ಹಾಗೆ ಬೌಲಿಂಗ್ ಎರಡ್ರಲ್ಲೂ ಮಿಂಚಿದ ಟೀಂ ಇಂಡಿಯಾ ಸರಣಿಯಲ್ಲಿ ಲೀಡ್ ಸಾಧಿಸಿದೆ. ಟಿ-20ಐ ನಲ್ಲಿ ಕ್ಲೀನ್ ಸ್ವೀಪ್ ಆಗಿದ್ದ ಭಾರತಕ್ಕೆ ಈ ಸರಣಿ ಗೆಲ್ಲೋದೇ ಪ್ರತಿಷ್ಟೇಯ ಪ್ರಶ್ನೆಯೂ ಆಗಿತ್ತು. ಸೀನಿಯರ್ ಪ್ಲೇಯರ್ಸ್ ಕಮ್ ಬ್ಯಾಕ್ ನಿಂದಾಗಿ ತುಂಬಾನೇ ನಿರೀಕ್ಷೆಯೂ ಇತ್ತು. ಅದ್ರಂತೆ ಭಾರತ ಪಂದ್ಯವನ್ನು ಗೆದ್ದು ಬೀಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು 47.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 258 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ 45.2 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಟಾರ್ಗೆಟ್ ರೀಚ್ ಆಯ್ತು.

ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿದ ಟೀಂ ಇಂಡಿಯಾ

ಮ್ಯಾಚ್ ಗೆದ್ದ ಭಾರತ!

ಮೊದಲು ಬೌಲಿಂಗ್ ನಲ್ಲಿ ಕಂಪ್ಲೀಟ್ ಕಂಟ್ರೋಲ್ ಮಾಡಿದ ಭಾರತ

ಬ್ಯಾಟಿಂಗ್ ನಲ್ಲಿ ಆರಂಭದಲ್ಲೇ ವಿಕೆಟ್ಸ್ ಬಿದ್ರೂ ಗಿಲ್ ಅದ್ಬುತ ಬ್ಯಾಟಿಂಗ್

ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ 100+ ರನ್ಸ್ ಜೊತೆಯಾಟ

80 ರನ್ ಗಳಿಸಿ ಸ್ನಾಯು ಸೆಳೆತಕ್ಕೆ ಒಳಗಾದ ಗಿಲ್ ರಿಂದ ದಾಖಲೆ ಮಿಸ್

ಅನುಭವಿ ಪ್ಲೇಯರ್ಸ್ ಇರೋದ್ರಿಂದ ಫೀಲ್ಡಿಂಗ್ ನಲ್ಲೂ ಜೋಶ್

ಇನ್ನು ಈ ಪಂದ್ಯದ ಸೋಲಿನ ಮೂಲಕ ಇಂಗ್ಲೆಂಡ್ ಅಜೇಯಯಾತ್ರೆಗೂ ಬ್ರೇಕ್ ಬಿದ್ದಿದೆ. ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಸೋತಿದ್ದು 2014 ರ ಸೆಪ್ಟೆಂಬರ್ 2 ರಂದು. ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡವೇ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಆ ಬಳಿಕ ಕಳೆದ 12 ವರ್ಷಗಳಲ್ಲಿ ಇಲ್ಲಿ ನಡೆದ ಸತತ 7 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಸೋಲಿಲ್ಲದ ಸರದಾರರಾಗಿ ಮುಂದುವರೆದಿದ್ದರು. ಆದರೆ, ಇಂಗ್ಲೆಂಡ್‌ನ ಈ ಸುದೀರ್ಘ ವಿಜಯಯಾತ್ರೆಗೆ ಮತ್ತೆ ಬ್ರೇಕ್ ಹಾಕಲು ಮತ್ತೆ ಟೀಮ್ ಇಂಡಿಯಾವೇ ಬರಬೇಕಾಯಿತು. ಎಡ್ಜ್​ಬಾಸ್ಟನ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಭಾರತ ಆಂಗ್ಲರ 12 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. ಮುಂದಿನ ಪಂದ್ಯವನ್ನೂ ಗೆದ್ದು ಭಾರತ ಸರಣಿ ಕೈವಶ ಮಾಡಿಕೊಳ್ಳೋ ಪ್ಲ್ಯಾನ್ ನಲ್ಲಿದ್ರೆ ಅತ್ತ ಇಂಗ್ಲೆಂಡ್ ಕಂ ಬ್ಯಾಕ್ ಮಾಡೋ ಪ್ಲ್ಯಾನ್ ನಲ್ಲಿದೆ.

Shantha Kumari

Leave a Reply

Your email address will not be published. Required fields are marked *