ಇಂಡಿಯಾ VS ಇಂಗ್ಲೆಂಡ್ – ಆಂಗ್ಲರ ಪಡೆ ಎದುರಿಸಲು ರೋಹಿತ್ ಶರ್ಮಾ ಟೀಮ್ ಸಜ್ಜು

ಇಂಡಿಯಾ VS ಇಂಗ್ಲೆಂಡ್ – ಆಂಗ್ಲರ ಪಡೆ ಎದುರಿಸಲು ರೋಹಿತ್ ಶರ್ಮಾ ಟೀಮ್ ಸಜ್ಜು

ಇಂಡಿಯಾ VS ಇಂಗ್ಲೆಂಡ್.. 5 ಟೆಸ್ಟ್​ ಮ್ಯಾಚ್​​ಗಳ ಸರಣಿಯ ಫಸ್ಟ್ ಟೆಸ್ಟ್ ಜನವರಿ 25ರಿಂದ ಆರಂಭವಾಗ್ತಿದೆ. ಹೈದರಾಬಾದ್​​ನಲ್ಲಿ ಫಸ್ಟ್ ಟೆಸ್ಟ್ ಮ್ಯಾಚ್​ ನಡೀತಾ ಇದೆ. ಈ ಐದೂ ಟೆಸ್ಟ್​ ಮ್ಯಾಚ್​ಗಳು ಕೂಡ ಎರಡೂ ಟೀಮ್​ಗಳಿಗೂ ತುಂಬಾನೆ ಇಂಪಾರ್ಟೆಂಟ್ ಆಗುತ್ತೆ. ಯಾಕಂದ್ರೆ 2025ರಲ್ಲಿ ನಡೆಯೋ ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​​ಗೆ ಕ್ವಾಲಿಫೈ ಆಗೋಕೆ ಈ ಐದೂ ಟೆಸ್ಟ್​​ ಮ್ಯಾಚ್​​ಗಳಲ್ಲಿ ಪರ್ಫಾಮೆನ್ಸ್ ಕೌಂಟ್ ಆಗುತ್ತೆ. ಹೀಗಾಗಿಯೇ ಇಂಗ್ಲೆಂಡ್​ ವಿರುದ್ಧ ಟೆಸ್ಟ್ ಸೀರಿಸ್​​ ಇಷ್ಟೊಂದು ಹೈಪ್​ ಪಡೆದುಕೊಳ್ತಾ ಇರೋದು.

ಇದನ್ನೂ ಓದಿ: 2 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ ವಿರಾಟ್ ಕೊಹ್ಲಿ – ಕಿಂಗ್ ಕೊಹ್ಲಿಯ ಬದಲಿಗೆ ಆಡುವ ಆಟಗಾರ ಯಾರು?

ಫಸ್ಟ್ ಟೆಸ್ಟ್ ಮ್ಯಾಚ್​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಈ ಮ್ಯಾಚ್​​ನಲ್ಲಿ ವಿರಾಟ್ ಕೊಹ್ಲಿ ಆಡ್ತಾ ಇಲ್ಲ. ಹೀಗಾಗಿ ಯಾರು ರಿಪ್ಲೇಸ್ ಮಾಡ್ತಾರೆ ಅನ್ನೋದು ಒಂದು ವಿಚಾರ. ಕೆಲ ಮಾಹಿತಿಗಳ ಪ್ರಕಾರ್ ಆರ್​​ಸಿಬಿಯ ಮತ್ತೊಬ್ಬ ಸ್ಟಾರ್​ ಬ್ಯಾಟ್ಸ್​​ಮನ್ ರಜತ್​ ಪಾಟೀದಾರ್​ರನ್ನೇ ತಂಡಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಫಸ್ಟ್​ ಟೆಸ್ಟ್​ ಮ್ಯಾಚ್​​ನಲ್ಲಿ ರಜತ್ ಪಾಟೀದಾರ್ ಆಡಿದ್ರೂ ಆಶ್ಚರ್ಯ ಇಲ್ಲ. ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್-11 ಹೀಗಿದೆ.

ಟೀಂ ಇಂಡಿಯಾ PLAYING-11

  • ರೋಹಿತ್ ಶರ್ಮಾ
  • ಯಶಸ್ವಿ ಜೈಸ್ವಾಲ್
  • ಶುಬ್ಮನ್ ಗಿಲ್
  • ಶ್ರೇಯಸ್ ಅಯ್ಯರ್
  • ಕೆ.ಎಲ್.ರಾಹುಲ್
  • ಕೆ.ಎಸ್.ಭರತ್
  • ರವೀಂದ್ರ ಜಡೇಜ
  • ಆರ್.ಅಶ್ವಿನ್
  • ಅಕ್ಸರ್ ಪಟೇಲ್
  • ಜಸ್ಪ್ರಿತ್ ಬುಮ್ರಾ
  • ಮೊಹಮ್ಮದ್ ಸಿರಾಜ್

 

ಇದು ಇಂಗ್ಲೆಂಡ್ ವಿರುದ್ಧದ ಫಸ್ಟ್ ಟೆಸ್ಟ್ ಮ್ಯಾಚ್​ಗೆ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್-11. ಇನ್ನು ಇಂಗ್ಲೆಂಡ್​ ಕೂಡ ತುಂಬಾ ಸ್ಟ್ರಾಂಗ್​ ಟೀಮ್​​ನ್ನೇ ಅಖಾಡಕ್ಕಿಳಿಸ್ತಿದೆ. ಬೆನ್​​ ಸ್ಟೋಕ್ಸ್ ಟೀಮ್​​ನ ಕ್ಯಾಪ್ಟನ್ ಆಗಿದ್ದಾರೆ. ಜೋ ರೂಟ್, ಜಾನಿ ಬ್ಯಾರ್​ಸ್ಟೋ ನಮ್ಮ ಸ್ಪಿನ್ನರ್ಸ್​ಗಳನ್ನ ಫೇಸ್​ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. 41 ವರ್ಷದ ಪೇಸ್ ಬೌಲರ್ ಜೇಮ್ಸ್​ ಆ್ಯಂಡರ್ಸನ್ ಕೂಡ ಈ ಸೀರಿಸ್​ನಲ್ಲಿ ಆಡ್ತಾ ಇದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಜಿಮ್ಮಿ ಬೌಲಿಂಗ್ ನೋಡೋಕೆ ಮಸ್ತಾಗಿರುತ್ತೆ. ಅದ್ರಲ್ಲೂ ನ್ಯೂ ಬಾಲ್​ನಲ್ಲಿ ಅವರ ಸ್ವಿಂಗ್ ಬೌಲಿಂಗ್ ಅಂತೂ ಸೂಪರ್ಬ್. ಒಂದೇ ವೇಳೆ ಭಾರತ ಫಸ್ಟ್​ ಬ್ಯಾಟಿಂಗ್​ ಇಳಿದ್ರೆ ಓಪನಿಂಗ್​ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಮತ್ತು ಇಂಗ್ಲೆಂಡ್​ನ ಓಪನಿಂಗ್​ ಬೌಲರ್ಸ್​​ಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಮಾರ್ಕ್ ವುಡ್ ನಡುವಿನ ಕ್ಲ್ಯಾಶ್ ಇದ್ಯಲ್ಲಾ.. ಇದು ನಿಜಕ್ಕೂ ಕ್ಲಾಸ್ ಆಗಿರಲಿದೆ.

ಟೀಂ ಇಂಡಿಯಾ ಪಾಲಿಗೆ ಸ್ಪಿನ್ನರ್ಸ್​​ಗಳೇ ಪ್ರಮುಖ ಅಸ್ತ್ರ. ಹೀಗಾಗಿ ಮೂವರು ಸ್ಪಿನ್ನರ್ಸ್​ಗಳಂತೂ ಟೀಮ್​ನಲ್ಲಿ ಇದ್ದೇ ಇರ್ತಾರೆ. ಬಟ್ ಇಂಗ್ಲೆಂಡ್​​ನ ಮೇನ್ ವೆಪನ್ ಆಗಿರೋದು ಬೇಸ್ ಬಾಲ್​ ಬ್ಯಾಟಿಂಗ್. ಈ ಹಿಂದೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​, ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಬೇಸ್​​ಬಾಲ್​ ಸ್ಟ್ರ್ಯಾಟಜಿಯೊಂದಿಗೆ ಸಕ್ಸಸ್ ಆಗಿತ್ತು. ಅಂದ್ರೆ ಅಗ್ರೆಸ್ಸಿವ್ ಆಗಿ ಆಡೋದು. ಆದ್ರೆ ಭಾರತದ ಸ್ಪಿನ್ ಪಿಚ್​​ಗಳಲ್ಲಿ ಇಂಗ್ಲೆಂಡ್​ ಟೀಮ್​​ನ ಬೇಸ್​ಬಾಲ್​ ಆಟ ನಡೆಯುತ್ತಾ ಅನ್ನೋದನ್ನ ನೋಡಬೇಕಿದೆ. ಇಂಡಿಯನ್​ ಸ್ಪಿನ್ನರ್ಸ್ VS ಇಂಗ್ಲೆಂಡ್ ಬೇಸ್​​ಬಾಲ್ ಕ್ಲ್ಯಾಶ್ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ.

ಇವೆಲ್ಲದರ ಮಧ್ಯೆ, ಟೂರ್ನಿ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್​ಗೆ ಒಂದು ಹಿನ್ನಡೆಯಾಗಿದೆ. ಇಂಗ್ಲೆಂಡ್​​ನ ಯಂಗ್ ಸ್ಪಿನ್ನರ್ ಶೋಯೆಬ್ ಬಶೀರ್ ವೀಸಾ ಸಮಸ್ಯೆಯಿಂದಾಗಿ ಮತ್ತೆ ಇಂಗ್ಲೆಂಡ್​​ಗೆ ವಾಪಸ್ ಆಗಿದ್ದಾರೆ.  ಆ್ಯಕ್ಚುವಲಿ ಶೋಯೆಬ್ ಬಶೀರ್ ಪಾಕಿಸ್ತಾನ ಮೂಲದ ವ್ಯಕ್ತಿ. ಟೆಸ್ಟ್ ಸೀರಿಸ್​ ಆಡೋಕೆ ದುಬೈನಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ರು. ದುಬೈನಿಂದ ನೇರವಾಗಿ ಹೈದರಾಬಾದ್​ಗೆ ಬರಬೇಕಿತ್ತು. ಹೀಗಾಗಿ ಬಶೀರ್ ವೀಸಾಗೆ ಅಪ್ಲೈ ಮಾಡಿದ್ದು, ಆದ್ರೆ ಪಾಕಿಸ್ತಾನ ಮೂಲದವರಾಗಿರೋದ್ರಿಂದ ಇಮೀಡಿಯೆಟ್ ಆಗಿ ವೀಸಾ ನೀಡೋಕೆ ಭಾರತ ಸರ್ಕಾರ ನಿರಾಕರಿಸಿದೆ. ಇಲ್ಲಿ ವೀಸಾಗೆ ಅಪ್ಲೈ ಮಾಡಿರೋದೆ ಲಾಸ್ಟ್​ ಮೂಮೆಂಟ್​​ನಲ್ಲಿ. ಪ್ರಾಬ್ಲಂ ಆಗಿರೋದು ಇಲ್ಲೇ. ಇದ್ರಿಂದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​ ಸ್ಟೋಕ್ಸ್ ಫುಲ್ ಅಪ್​ಸೆಟ್ ಆಗಿದ್ದಾರೆ. ವೀಸಾ ಇಶ್ಯೂನಿಂದಾಗಿ ಅಂಥಾ ಯಂಗ್​​ ಕ್ರಿಕೆಟರ್​ಗೆ ಅವಕಾಶ ಸಿಗದೇ ಇರೋದ್ರಿಂದ ತುಂಬಾ ಹರ್ಟ್ ಆಗಿದೆ ಎಂದಿದ್ದಾರೆ. ಇಂಡಿಯನ್ ಪಿಚ್​​ಗಳನ್ನ ತಮ್ಮ ಪ್ರಮುಖ ಸ್ಪಿನ್ನರ್ ಆಗಿಯೇ ಶೋಯೆಬ್ ಬಶೀರ್​ರನ್ನ ಇಂಗ್ಲೆಂಡ್​​ ಪಿಕ್​ ಮಾಡಿತ್ತು. ಅನ್​ಫಾರ್ಚ್ಯುನೇಟ್ಲಿ ಫಸ್ಟ್​ ಟೆಸ್ಟ್​ ಮ್ಯಾಚ್​​ನಲ್ಲಂತೂ ಬಶೀರ್​ಗೆ ಅಡೋಕೆ ಆಗೋದಿಲ್ಲ.

ಭಾರತ-ಇಂಗ್ಲೆಂಡ್ ಫಸ್ಟ್ ಮ್ಯಾಚ್ ಜನವರಿ 25ರಂದು ಹೈದರಾಬಾದ್​​ನಲ್ಲಿ ಬೆಳಗ್ಗೆ 9.30ಕ್ಕೆ ಆರಂಭವಾಗುತ್ತೆ. ಸ್ಪೋರ್ಟ್ಸ್ 18 ಚಾನೆಲ್​​ನಲ್ಲಿ ಮತ್ತು ಜಿಯೋ ಸಿನಿಮಾದಲ್ಲಿ ಲೈವ್ ನೋಡಬಹುದು.

Sulekha