ಮೊದಲ ದಿನವೇ ಆಂಗ್ಲರ ಮೇಲೆ ಟೀಮ್ ಇಂಡಿಯಾ ಸವಾರಿ – ಇಂಗ್ಲೆಂಡ್ ಟೀಮ್ ಬೆಂಡೆತ್ತಿದ ಭಾರತದ ಬೌಲರ್ಸ್
ಇಂಡಿಯಾ vs ಇಂಗ್ಲೆಂಡ್.. ಐದನೇ ಟೆಸ್ಟ್..ಡೇ-1. ಟೀಂ ಇಂಡಿಯಾ ಟಾಪ್ ಕ್ಲಾಸ್ ಪರ್ಫಾಮೆನ್ಸ್.. ಕಂಪ್ಲೀಟ್ ಡಾಮಿನೇಷನ್. ಈ ಮ್ಯಾಚ್ನ್ನ ಕೂಡ ಭಾರತವೇ ಗೆಲ್ಲೋದು ಮೊದಲ ದಿನವೇ ಗ್ಯಾರಂಟಿಯಾಗಿದೆ. ಇಂಗ್ಲೆಂಡ್ನ್ನ ಆಲೌಟ್ ಮಾಡಿ, ನಮ್ಮ ಬ್ಯಾಟ್ಸ್ಮನ್ಗಳು ಬೆನ್ ಸ್ಟೋಕ್ಸ್ ಬೌಲರ್ಸ್ಗಳನ್ನ ಬೆಂಡೆತ್ತಿದ್ದಾರೆ. ರೋಹಿತ್ ಹುಡುಗ್ರಂತೂ ಇಂಗ್ಲೆಂಡ್ ಮೇಲೆ ಅಕ್ಷರಶ: ಸವಾರಿ ಮಾಡ್ತಾ ಇದ್ದಾರೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟಿಗೆ ದೇವದತ್ ಪಡಿಕ್ಕಲ್ ಪಾದಾರ್ಪಣೆ – 314ನೇ ಸಂಖ್ಯೆಯ ಜೆರ್ಸಿ ಪಡೆದ ಕನ್ನಡಿಗ
ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲಿ ಒಳ್ಳೆಯ ಸ್ಟಾರ್ಟ್ ಪಡ್ಕೊಂಡಿತ್ತು. ಓಪನರ್ಸ್ಗಳಾದ ಜ್ಯಾಕ್ ಕ್ರೌಲಿ ಮತ್ತು ಬೆನ್ ಡಕೆಟ್ ಮಧ್ಯೆ ಒಳ್ಳೆಯ ಪಾಟ್ನರ್ಶಿಪ್ ಬಿಲ್ಡ್ ಆಗ್ತಾ ಇತ್ತು. ಟೀಮ್ ಸ್ಕೋರ್ 64 ರನ್ಗಳಾಗಿದ್ದಾಗ ಬೆನ್ ಡಕೆಟ್ ಔಟಾಗ್ತಾರೆ. ಶುಬ್ಮನ್ ಗಿಲ್ ಬ್ರಿಲಿಯಂಟ್ ಕ್ಯಾಚ್ ಹಿಡೀತಾರೆ. ಇದಾದ್ಮೇಲೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಪರೇಡ್ ಶುರುವಾಗುತ್ತೆ ನೋಡಿ. ಓಲಿ ಪಾಪ್ 11 ರನ್.. ಜೋ ರೂಟ್ 26 ರನ್.. ಜಾನಿ ಬೇರ್ ಸ್ಟೋ 29 ರನ್.. ಕ್ಯಾಪ್ಟನ್ ಬೆನ್ ಸ್ಟೋಕ್ಸ್ 0.. ಹೀಗೆ ಮೇಲಿಂದ ಮೇಲೆ ವಿಕೆಟ್ಗಳು ಬೀಳ್ತಾನೆ ಹೋಗುತ್ತೆ. ಆದ್ರೆ ಮತ್ತೊಂದು ಎಂಡ್ನಲ್ಲಿ ಸ್ವಲ್ಪ ಗಟ್ಟಿಯಾಗಿ ನಿಂತ ಏಕೈಕ ಬ್ಯಾಟ್ಸ್ಮನ್ ಅಂದ್ರೆ ಜ್ಯಾಕ್ ಕ್ರೌಲಿ ಮಾತ್ರ. ಓಪನರ್ ಜ್ಯಾಕ್ ಕ್ರೌಲಿ 108 ಬಾಲ್ ಗಳಲ್ಲಿ 79 ರನ್ ಗಳಿಸಿದ್ರು. ಇಂಗ್ಲೆಂಡ್ನ ಕೊನೆಯ ಐದು ವಿಕೆಟ್ಗಳಂತೂ ಕೇವಲ 17 ರನ್ಗಳಿಗೆ ಬಿದ್ದಿದೆ. ಯಾವ ರೇಂಜಿಗೆ ನಮ್ಮ ಬೌಲಿಂಗ್ ಮಾಡಿದ್ದಾರೆ ನೋಡಿ. ಇನ್ ದಿ ಎಂಡ್ ಇಂಗ್ಲೆಂಡ್ 57.4 ಓವರ್ಗಳಲ್ಲಿ 218 ರನ್ಗಳಿಗೆ ಆಲೌಟ್ ಆಗಿದೆ. ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ಸ್ ಅಂದ್ರೆ ಕುಲ್ದೀಪ್ ಯಾದವ್ ಮತ್ತು 100ನೇ ಟೆಸ್ಟ್ ಆಡ್ತಿರೋ ಆರ್.ಅಶ್ವಿನ್. ಕುಲ್ದೀಪ್ ಯಾದವ್ 15 ಓವರ್ಗಳಲ್ಲಿ 72 ರನ್ ನೀಡಿ ಐದು ವಿಕೆಟ್ ಕಬಳಿಸಿದ್ರು. ಆರ್.ಅಶ್ವಿನ್ 11.4 ಓವರ್ಗಳಲ್ಲಿ 51 ರನ್ ನೀಡಿ ನಾಲ್ಕು ವಿಕೆಟ್ಗಳನ್ನ ತೆಗೆದ್ರು.
ಆದ್ರೆ ಇಲ್ಲಿ ಕುಲ್ದೀಪ್ ಯಾದವ್ ಎಸೆದ ಒಂದು ಬಾಲ್ ಇದ್ಯಲ್ಲಾ ಅದು ವೆರಿ ವೆರಿ ಸ್ಪೆಷಲ್.. 79 ರನ್ ಗಳಿಸಿ ವೆಲ್ ಸೆಟ್ಲ್ ಆಗಿದ್ದ ಜ್ಯಾಕ್ ಕ್ರೌಲಿಯನ್ನ ಔಟ್ ಮಾಡೋದೆ ನಮ್ಮ ಬೌಲರ್ಸ್ಗಳಿಗೆ ದೊಡ್ಡ ಟಾಸ್ಕ್ ಆಗಿತ್ತು. ಕುಲ್ದೀಪ್ ಸೇರಿದಂತೆ ಭಾರತೀಯ ಬೌಲರ್ಸ್ಗಳನ್ನ ತುಂಬಾ ಚೆನ್ನಾಗಿಯೇ ಪಿಕ್ ಮಾಡ್ತಿದ್ರು. ಆದ್ರೆ ಕುಲ್ದೀಪ್ ಯಾದವ್ ಎಸೆದ ಆ ಒಂದು ಅಲ್ಟಿಮೇಟ್ ಬಾಲ್ಗೆ ಜ್ಯಾಕ್ ಕ್ರೌಲಿ ಬಳಿಯೂ ಆನ್ಸರ್ ಇರಲಿಲ್ಲ. ಜ್ಯಾಕ್ ಕ್ರೌಲಿಯನ್ನ ಫುಲ್ ಅಬ್ಸರ್ವ್ ಮಾಡಿಯೇ ಕುಲ್ದೀಪ್ ಯಾದವ್ ಆ ಬಾಲ್ನ್ನ ಎಸೀತಾರೆ. ಬೌಲರ್ ಬೌಲಿಂಗ್ಗೆ ಮುಂದಾಗುವಾಗ ಜ್ಯಾಕ್ ಕ್ರೌಲಿ ಯಾವಾಗಲೂ ಬ್ಯಾಟ್ನ್ನ ಎತ್ತಿ ಹಿಡಿದೇ ಕ್ರೀಸ್ನಲ್ಲಿ ನಿಲ್ತಾರೆ. ಹೆಚ್ಚಿನ ಬ್ಯಾಟ್ಸ್ಮನ್ಗಳು ಬೌಲರ್ ಬೌಲಿಂಗ್ಗೆ ಮುಂದಾಗುವ ವೇಳೆ ಬ್ಯಾಟ್ನ್ನ ಪಿಚ್ಗೆ ಟಚ್ ಮಾಡುತ್ತಲೇ ಪೊಸೀಶನ್ ತಗೊಳ್ತಾರೆ. ಆದ್ರೆ ಜ್ಯಾಕ್ ಕ್ರೌಲಿ ಬ್ಯಾಟ್ ಎತ್ತಿ ಹಿಡಿದಿರ್ತಾರೆ. ಈ ವೇಳೆ ಪ್ಯಾಡ್ ಮತ್ತು ಬ್ಯಾಟ್ ಮಧ್ಯೆ ಭಾರಿ ಗ್ಯಾಪ್ ಇರೋದನ್ನ ಕುಲ್ದೀಪ್ ಯಾದವ್ ಅಬ್ಸರ್ವ್ ಮಾಡ್ತಾರೆ. ಆ ಫೈನ್ ಗ್ಯಾಪ್ನ್ನ ನೋಡಿಕೊಂಡೇ ಲೆಫ್ಟ್ ಆರ್ಮರ್ ಕುಲ್ದೀಪ್ ಎಸೆದ ಬಾಲ್ ಫುಲ್ ಸ್ಪಿನ್ ಆಗಿ ನೇರವಾಗಿ ವಿಕೆಟ್ಗೆ ಬಡಿಯುತ್ತೆ. ಔಟ್ ಸೈಡ್ ದಿ ಆಫ್ ಸ್ಟಂಪ್ನತ್ತ ಪಿಚ್ ಆಗಿದ್ದ ಬಾಲ್ ಭಾರಿ ಸ್ಪಿನ್ ಆಗಿ ಮಿಡ್ಲ್ & ಲೆಗ್ ಸ್ಟಂಪ್ಗೆ ಬಡಿಯುತ್ತೆ. ಜ್ಯಾಕ್ ಕ್ರೌಲಿ ಕ್ಲೀನ್ ಬೌಲ್ಡ್. ಅನ್ಪ್ಲೇಯಬಲ್ ಬಾಲ್ ಅಂತಾರಲ್ಲಾ..ಸೇಮ್ ಡೆಲಿವರಿ. ರಿಪೋರ್ಟ್ಗಳ ಪ್ರಕಾರ ಕುಲ್ದೀಪ್ ಯಾದವ್ ಎಸೆದ ಆ ಬಾಲ್ 10 ಡಿಗ್ರಿಯಷ್ಟು ಟರ್ನ್ ಆಗಿದ್ಯಂತೆ.
ಶೇನ್ ವಾರ್ನ್ ನೆನಪಾಗೋದು ಕೂಡಾ ಇದಕ್ಕೇನೆ. 1993ರಲ್ಲಿ ನಡೆದ ಆ್ಯಶಸ್ ಮ್ಯಾಚ್ನಲ್ಲಿ ಇಂಗ್ಲೆಂಡ್ನ ಮೈಕ್ ಗ್ಯಾಟಿಂಗ್ರನ್ನ ವಾರ್ನಿ ಕ್ಲೀನ್ ಬೌಲ್ಡ್ ಮಾಡ್ತಾರೆ. ಔಟ್ಸೈಡ್ ದಿ ಲೆಗ್ಸ್ಟಂಪ್ನತ್ತ ಪಿಚ್ ಆದ ಬಾಲ್ ಲೆಗ್ ಸ್ಪಿನ್ ಆಗಿ ಆಫ್ ಸ್ಟಂಪ್ಗೆ ಬಡಿದಿತ್ತು. ಮೈಕ್ ಗ್ಯಾಟಿಂಗ್ ಏನಾಗ್ತಿದೆ ಅಂದುಕೊಳ್ಳವಷ್ಟರಲ್ಲೇ ಬೌಲ್ಡ್ ಆಗಿದ್ರು. ರೆಪ್ಪೆ ಮಿಟುಕಿಸುವಷ್ಟರಲ್ಲಿ ಬಾಲ್ ಸಾಲಿಡ್ ಟರ್ನ್ ಆಗಿ ವಿಕೆಟ್ಗೆ ಅಪ್ಪಳಿಸಿತ್ತು. ಶೇನ್ ವಾರ್ನ್ ಎಸೆದ ಆ ಬಾಲ್ ಆಲ್ಮೋಸ್ಟ್ 90 ಡಿಗ್ರಿಯಷ್ಟು ಟರ್ನ್ ಆಗಿತ್ತು. ಅದನ್ನ ಬಾಲ್ ಆಫ್ ದಿ ಸೆಂಚೂರಿ ಅಂದ್ರೆ ಶತಮಾನದ ಬಾಲ್ ಅಂತಾನೆ ಕರೆಯಲಾಗುತ್ತೆ. ಇವತ್ತಿಗೂ ಅಂಥಾ ಬಾಲ್ನ್ನ ಜಗತ್ತಿನ ಇನ್ಯಾವ ಸ್ಪಿನ್ನರ್ ಕೂಡ ಎಸೆದಿಲ್ಲ. ಮ್ಯಾಕ್ ಗ್ಯಾಟಿಂಗ್ ಬಳಿಕ 2005ರಲ್ಲಿ ಇಂಗ್ಲೆಂಡ್ ಆ್ಯಂಡ್ರ್ಯೂ ಸ್ಟ್ರಾಸ್ ಕೂಡ ಅದೇ ರೀತಿಯ ಬಾಲ್ಗೆ ಕ್ಲೀನ್ ಬೌಲ್ಡ್ ಆಗಿದ್ರು. ಲೆಫ್ಟ್ ಹ್ಯಾಂಡರ್ ಸ್ಟ್ರಾಸ್ಗೆ ಕಂಪ್ಲೀಟ್ಲಿ ಔಟ್ ಸೈಡ್ ದಿ ಆಫ್ ಸ್ಟಂಪ್ಗೆ ಅಂದ್ರೆ ಸ್ವಲ್ಪ ಆಚೆಗೆ ಬಿದ್ರೆ ವೈಡ್ ಹೋಗುವಷ್ಟರ ಮಟ್ಟಿಗೆ ಶೇನ್ ವಾರ್ನ್ ಬಾಲ್ ಪಿಚ್ ಮಾಡ್ತಾರೆ. ಸ್ಲಿಪ್ ಮತ್ತು ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡರ್ ಬೇರೆ ಇದ್ದಿದ್ರಿಂದ ಆ್ಯಂಡ್ರ್ಯೂ ಸ್ಟ್ರಾಸ್ ಆ ಬಾಲ್ನ್ನ ಲೀವ್ ಮಾಡೋಕೆ ಮುಂದಾಗ್ತಾರೆ. ಲೀವ್ ಮಾಡೋಕೆ ಅಂತಾ ಬ್ಯಾಟ್ ಮೇಲಕ್ಕೆ ಎತ್ತುತ್ತಲೇ ಔಟ್ ಸೈಡ್ ದಿ ಆಫ್ ಸ್ಟಂಪ್ ಪಿಚ್ ಆಗಿದ್ದ ಬಾಲ್ ಫುಲ್ ಟರ್ನ್ ಆಗಿ ಸ್ಟ್ರಾಸ್ ಹಿಂದೆ ನುಗ್ಗಿ ಲೆಗ್ ಸ್ಟಂಪ್ಗೆ ಬಡಿಯುತ್ತೆ. ಅಫ್ಕೋಸ್.. ಕ್ಲೀನ್ ಬೌಲ್ಡ್. ಆ್ಯಂಡ್ರ್ಯೂ ಸ್ಟ್ರಾಸ್ ನೋಡಿಯೇ ಬಾಕಿ. ಈಗ ನಮ್ಮ ಕುಲ್ದೀಪ್ ಯಾದವ್ ಎಸೆದ ಬಾಲ್ ಶೇನ್ ವಾರ್ನ್ರನ್ನ ನೆನಪಿಸಿರೋದು ಇದೇ ಕಾರಣಕ್ಕೆ. ಆದ್ರೆ ಕುಲ್ದೀಪ್ ಬಾಲ್ ವಾರ್ನ್ ಎಸೆದಿದ್ದ ಬಾಲ್ನಷ್ಟು ಟರ್ನ್ ಆಗಿರಲಿಲ್ಲ. ಸ್ಟಿಲ್.. ಇಟ್ಸ್ ಎ ಗ್ರೇಟ್ ಬಾಲ್. ಟೋಟಲಿ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಪಾಲಿಗೆ ಒಬ್ಬ ಗಿಫ್ಟೆಡ್ ಬೌಲರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಕುಲ್ದೀಪ್ರನ್ನ ತುಂಬಾ ಚೆನ್ನಾಗಿ ಯೂಸ್ ಮಾಡ್ತಾ ಇದ್ದಾರೆ.
ರೋಹಿತ್ ಜೊತೆಗೆ ಓಪನಿಂಗ್ಗೆ ನಾನೇ ಬೆಸ್ಟ್ ಚಾಯ್ಸ್ ಅನ್ನೋದನ್ನ ಜೈಸ್ವಾಲ್ ಪದೇ ಪದೆ ಸಾಬೀತುಪಡಿಸ್ತಾ ಇದ್ದಾರೆ. ಮತ್ತೊಂದು ಹಾಫ್ ಸೆಂಚೂರಿ ಜೈಸ್ವಾಲ್ ಬ್ಯಾಟ್ನಿಂದ ಬಂದಿದೆ. 58 ಬಾಲ್ಗಳಲ್ಲೇ 57 ರನ್ ಗಳಿಸಿ ಔಟಾದ್ರು. ಇಂಗ್ಲೆಂಡ್ ಬೌಲರ್ಸ್ಗಳ ಅರ್ಧ ಎನರ್ಜಿ ಜೈಸ್ವಾಲ್ ಮತ್ತು ರೋಹಿತ್ಗೆ ಬೌಲಿಂಗ್ ಮಾಡಿದಾಗಲೇ ಖಾಲಿಯಾಗುತ್ತೆ.
ಅಂದಹಾಗೆ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್ ಡೆಬ್ಯೂ ಆಗಿದೆ. ಹೀಗಾಗಿ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನೋಡಬಹುದು. ಇನ್ನು ಸ್ಪಿನ್ನರ್ ಆರ್.ಅಶ್ವಿನ್ಗೆ ಇದು 100ನೇ ಟೆಸ್ಟ್. ಮೆಮೋರೆಬಲ್ ಟೆಸ್ಟ್ ಮ್ಯಾಚ್. ಕುಲ್ದೀಪ್ ಮತ್ತು ಅಶ್ವಿನ್ ಮಧ್ಯೆ ಒಂದು ಇಂಟ್ರೆಸ್ಟಿಂಗ್ ಇನ್ಸಿಡೆಂಟ್ ಕೂಡ ನಡೀತು. ಕುಲ್ದೀಪ್ ಐದು ವಿಕೆಟ್ ಪಡೆದಿದ್ರು. ಅಶ್ವಿನ್ ನಾಲ್ಕು ವಿಕೆಟ್..ಹಾಗೆಯೇ ಅಶ್ವಿನ್ಗೆ ಇದು 100ನೇ ಟೆಸ್ಟ್. ಹೀಗಾಗಿ ಇಂಗ್ಲೆಂಡ್ನ್ನ ಆಲೌಟ್ ಮಾಡಿ ಟೀಂ ಇಂಡಿಯಾ ಪ್ಲೇಯರ್ಸ್ ಪೆವಿಲಿಯನ್ನತ್ತ ಬರೋವಾಗ ಟೀಮ್ನ್ನ ಲೀಡ್ ಮಾಡೋ ವಿಚಾರದಲ್ಲಿ ಕುಲ್ದೀಪ್ ಮತ್ತು ಅಶ್ವಿನ್ ಮಧ್ಯೆ ಬಾಲ್ ಶೇರಿಂಗ್ ಆಗ್ತಾನೆ ಇತ್ತು. ಕುಲ್ದೀಪ್ ಅಶ್ವಿನ್ ಕೈಗೆ ಬಾಲ್ ಎಸೆದು ನೀವು ಲೀಡ್ ಮಾಡಿ ಅಂತಾ..ಇತ್ತ ಅಶ್ವಿನ್ ಐದು ವಿಕೆಟ್ ಪಡೆದ ಕುಲ್ದೀಪ್ಗೆ ಬಾಲ್ ಕೊಟ್ಟು ನೀನು ಲೀಡ್ ಮಾಡು ಅಂತಾ. ಕೊನೆಗೆ ಕುಲ್ದೀಪ್ ಯಾದವ್ ಲೀಡ್ ಮಾಡಿದ್ರು. ನಮ್ಮ ಪ್ಲೇಯರ್ಸ್ಗಳ ಮಧ್ಯೆ ಎಂಥಾ ಬಾಂಡ್ ಇದೆ ಅನ್ನೋದಕ್ಕೆ ಇದೇ ಸಾಕ್ಷಿ. ಇನ್ನು ವಿಕೆಟ್ ಕೀಪರ್ ಧ್ರುವ್ ಜ್ಯುರೆಲ್ ಮತ್ತೆ ಕಮಾಲ್ ಮಾಡಿದ್ದಾರೆ. ಓಲಿ ಪಾಪ್ ಕ್ರೀಸ್ನಲ್ಲಿದ್ದಾಗ ಕುಲ್ದೀಪ್ ಯಾದವ್ ಬೌಲಿಂಗ್ ಮಾಡೋ ಮುನ್ನ ವಿಕೆಟ್ ಹಿಂದಿನಿಂದ ಜ್ಯುರೆಲ್ ಸ್ಟೆಪ್ ಔಟ್ ಆಗ್ತಾನೆ ಅಂತಾ ಕೂಗ್ತಾರೆ. ಕುಲ್ದೀಪ್ ಬಾಲ್ ಎಸೀತಾನೆ ಓಲಿ ಪಾಪ್ ಫ್ರಂಟ್ ಫುಟ್ ಹೋಗಿ ಆಡೋಕೆ ಮುಂದಾಗ್ತಾರೆ. ಬಾಲ್ ಬೀಟ್ ಆಗುತ್ತೆ. ಇತ್ತ ಶಾರ್ಪ್ ಧ್ರುವ್ ಜ್ಯುರೆಲ್ ಸ್ಟಂಪ್ ಮಾಡಿಬಿಡ್ತಾರೆ. ವಿಕೆಟ್ ಹಿಂದೆ ಜ್ಯುರೆಲ್ ತುಂಬಾನೆ ಸ್ಮಾರ್ಟ್ ಆಗಿ ವರ್ಕ್ ಮಾಡ್ತಿದ್ದಾರೆ.