ಗಿಲ್ಲ ಪಡೆಗೆ ಬೆನ್ ಸ್ಟೋಕ್ಸ್ ವಾರ್ನಿಂಗ್ – ಟೆಸ್ಟ್‌ಗೆ ರೈತನ ಮಗ ಕಾಂಬೋಜ್ ಎಂಟ್ರಿ
ಕರುಣ್ ನಾಯರ್ ಕೆರಿಯರ್ ಎಂಡ್ ?

ಗಿಲ್ಲ ಪಡೆಗೆ ಬೆನ್ ಸ್ಟೋಕ್ಸ್ ವಾರ್ನಿಂಗ್ –  ಟೆಸ್ಟ್‌ಗೆ  ರೈತನ ಮಗ ಕಾಂಬೋಜ್ ಎಂಟ್ರಿಕರುಣ್ ನಾಯರ್ ಕೆರಿಯರ್ ಎಂಡ್ ?

ಗೆಲ್ಲಲೇ ಬೇಕು ಇಂಗ್ಲೆಂಡ್ ಟೀಂ ವಿರುದ್ಧ 4ನೇ ಟೆಸ್ಟ್ ಪಂದ್ಯ ಗೆಲ್ಲಲೇಬೇಕು ಅಂತ ಟೀಂ ಇಂಡಿಯಾ ಪಣ ತೊಟ್ಟಿದೆ.. ಅದ್ದಕ್ಕಾಗಿ ದೊಡ್ಡ ಸೈನ್ಯವನ್ನೇ  ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಇಳಿಸಿದೆ.. ಕಳೆದ 3 ಟೆಸ್ಟ್‌ನಲ್ಲಿ 2 ಪಂದ್ಯ ಸೋತಿರೋ ಟೀಂ ಇಂಡಿಯಾಗೆ 4 ಯುದ್ಧ ಗೆಲ್ಲೋಕೆ ಸರ್ವಸನ್ನದ್ಧವಾಗಿದೆ..  ಮ್ಯಾಂಚೆಸ್ಟರ್​ನಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತಾ ಇಲ್ವಾ ಎಂಬ ಪ್ರಶ್ನೆಯ ಜೊತೆಗೆ ಎಲ್ಲರನ್ನೂ ಕಾಡ್ತಿರುವ ಪ್ರಶ್ನೆ ಏನೆಂದರೆ  ಅನ್ಶುಲ್ ಕಾಂಬೋಜ್ ಡೆಬ್ಯು ಪಂದ್ಯ ಹೇಗೆ ಆಡ್ತಾರೆ ಅನ್ನೋದು.. ತನಗೆ ಸಿಕ್ಕಿರೋ ಅವಕಾಶವನ್ನ ಹೇಗೆ ಬಳಸಿಕೊಳ್ತಾರೆ..  ರೈತನ ಮಗನ  ಪರಿಶ್ರಮಕ್ಕೆಹೇಗೆ ಪ್ರತಿಫಲ ಸಿಗುತ್ತೆ ಅನ್ನೋ ಕುತೂಹಲ ಭಾರತೀಯರಲ್ಲಿ ಹೆಚ್ಚಾಗಿದೆ..

4ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾ ಭರ್ಜರಿ ಆರಂಭ ಮಾಡಿದೆ. ಇಂಜುರಿಯ ನಡುವೆಯೇ ಡು ಆರ್ ಡೈ ಮ್ಯಾಚ್ ಗೆಲ್ಲೋಕೆ ಟೀಮ್ ಇಂಡಿಯಾ ಪಣ ತೊಟ್ಟಿದೆ.  . ಈ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ರೆ,  ಇದೇ ಪಂದ್ಯದಲ್ಲಿ ಅನ್ಶಲ್ ಕಾಂಬೋಜ್​, ಅದೃಷ್ಟ ಖುಲಾಯಿಸಿದೆ.

3 ಅಸ್ತ್ರ ಬಿಟ್ಟ ಟೀಂ ಇಂಡಿಯಾ

ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸರಣಿಯ ಮೊದಲ ಮೂರು ಪಂದ್ಯದಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿರುವ ಕರುಣ್‌ ನಾಯರ್‌ ಅವರಿಗೆ ತಂಡ ಗೇಟ್ ಪಾಸ್ ನೀಡಿದೆ. 3 ಅವಕಾಶವನ್ನ ಕೈ ಚೆಲ್ಲಿದ್ರಿಂದ 4ನೇ ಟೆಸ್ಟ್‌ನಿಂದ ಕರುಣ್‌ನ ಕೈ ಬಿಡಲಾಗಿದೆ. ಹೀಗಾಗಿ ಇಲ್ಲಿಗೆ  ಕರುಣ್ ನಾಯರ್ ಟೆಸ್ಟ್‌ ಕೆರಿಯರ್ ಎಂಡ್ ಆಗಲಿದೆ ಅನ್ನೋ ಚರ್ಚೆ ಶುರುವಾಗಿದೆ. ಕರುಣ್ ಬದಲಿಗೆ  ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್‌ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಗಾಯಾಳು ಆಟಗಾರರ ಬದಲಿಗೆ ಟೀಮ್ ಇಂಡಿಯಾ ಬದಲಿ ಆಟಗಾರರನ್ನು ಆಯ್ಕೆ ಮಾಡಿದೆ. ಗಾಯಾಳು ನಿತೀಶ್‌ ಕುಮಾರ್ ರೆಡ್ಡಿ ಬದಲಿಗೆ ಶಾರ್ದೂಲ್ ಠಾಕೂರ್‌ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಮೂರನೇ ವೇಗದ ಬೌಲರ್‌ ಸ್ಥಾನದಲ್ಲಿ ಆಕಾಶ್ ದೀಪ್‌ ಬದಲಿಗೆ ಅನ್ಶುಲ್ ಕಾಂಬೋಜ್ ಸ್ಥಾನ ಪಡೆದಿದ್ದಾರೆ. 4 ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ನಾಲ್ಕು ವೇಗದ ಬೌಲರ್‌ಗಳಿಗೆ ಅವಕಾಶ ನೀಡಲಾಗಿದೆ.  ಕಾಂಬೋಜ್,   ಸಿರಾಜ್,  ಬುಮ್ರಾ ಜೊತೆಗೆ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇನ್ನು ಆಲ್‌ರೌಂಡರ್ ರೂಪದಲ್ಲಿ ವಾಷಿಂಗ್ಟನ್‌ ಸುಂದರ್‌, ರವೀಂದ್ರ ಜಡೇಜಾ ಅವರು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೊಂದು ಇಟ್ರೆಸ್ಟಿಂಗ್ ಏನಪ್ಪ ಅಂದ್ರೆ  ಸತತ 4ನೇ ಬಾರಿಗೆ ಇಂಗ್ಲೆಂಡ್ ಟಾಸ್ ವಿನ್ ಆಗಿದ್ದು, ಆಂಗ್ಲ ಪಡೆ ಬೌಲಿಂಗ್ ಆಯ್ದು ಕೊಂಡಿದೆ. ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭದ ಜೊತೆಯಾಟ ಆಡುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ರೈತನ ಮಗ ಎಂಟ್ರಿ 

4ನೇ ಟೆಸ್ಟ್ ಪಂದ್ಯದ ಹೈಲೈಟ್ ಏನಂದ್ರೆ ಹೊಸ ಆಟಗಾರನ ಎಂಟ್ರಿ.  ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ 24 ವರ್ಷದ ಮಧ್ಯಮ ವೇಗಿ ಅನ್ಶೂಲ್ ಕಾಂಬೋಜ್  ಬಿಸಿಸಿಐ ಆಯ್ಕೆ ಸಮಿತಿಯ ಚಿತ್ತ ಕದ್ದಿದ್ದರು. ಈಗ ಇವರು ಇಂಗ್ಲೆಂಡ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡುತ್ತಿದ್ದಾರೆ. ಆಕಾಶ್ ದೀಪ್‌ ಬದಲಿಗೆ   ಕಾಂಬೋಜ್‌ಗೆ ಪ್ಲೆಯಿಂಗ್ 11ನಲ್ಲಿ ಅವಕಾಶ ನೀಡಲಾಗಿದ್ದು, ಮೊದಲ ಡಬ್ಲ್ಯೂ ಪಂದ್ಯ ಆಡಲಿದ್ದಾರೆ.  ಕಂಬೋಜ್‌ ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದರು. ಹಾಗೇ ಈ ಸಲದ ಐಪಿಎಲ್‌ನಲ್ಲಿ ಕಂಬೋಜ್ ಚೆನ್ನೈ ಪರ ಆಡಿದ್ದು, 3.40 ಕೋಟಿಗೆ ಸಿಎಸ್‌ಕೆ ಇವರನ್ನ ಖರೀದಿ ಮಾಡಿತ್ತು. ಆರಂಭದಲ್ಲಿ ಕೇವಲ ಬೆಂಚ್​ಗೆ ಸೀಮಿತವಾಗಿದ್ದ ಕಾಂಬೋಜ್​, ಅವಕಾಶ ಸಿಕ್ಕ 8 ಪಂದ್ಯಗಳಿಂದ 8 ವಿಕೆಟ್ ಬೇಟೆಯಾಡಿದ್ರು. ಇನ್ನು ಕಾಂಬೋಜ್ ಹರಿಯಾಣದ ಕರ್ನಾಲ್ ಮೂಲದವರಾಗಿದ್ದು,  ತಂದೆ ಉದಮ್ ಸಿಂಗ್, ಹಾಗೂ ತಾಯಿ ಫಿಂಕಿ. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಕಾಂಬೋಜ್‌  ಅಪ್ಪನ ಸಾಥ್‌ನಿಂದ ಇಂದು ಇಂಡಿಯಾ ಟೆಸ್ಟ್ ಪಂದ್ಯಕ್ಕೆ ಪಾದರ್ಪಾಣೆ ಮಾಡಿದ್ದಾರೆ. ಎರಡೂ ಕಡೆ ಸ್ವಿಂಗ್ ಮಾಡಬಲ್ಲ ಈತ, ಗುಡ್ ಲೈನ್ ಆ್ಯಂಡ್ ಲೆನ್ತ್ ಜೊತೆಗೆ ಬೌಲಿಂಗ್​ನಲ್ಲಿ ವೇರಿಯನ್ಸ್ ಹೊಂದಿದ್ದಾರೆ. 6.2 ಉದ್ದನೆಯ ಕಾಂಬೋಜ್​ ತನಗೆ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಂಡ್ರೆ ಇವರ ಲಕ್ ಈ ಪಂದ್ಯದಿಂದಲೇ ಚೇಂಜ್ ಆಗೋದು ಪಕ್ಕಾ.. Vis Flow..

ಗಿಲ್ಲ ಪಡೆಗೆ ವಾರ್ನಿಂಗ್ ಕೊಟ್ಟ ಬೆನ್‌ ಸ್ಟೋಕ್ಸ್ 

ಮೂರನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಪಡೆ ಮತ್ತು ಸ್ಟೋಕ್ಸ್ ಪಡೆ ನಾನಾ ನೀನಾ ಅಂತಾ ಸ್ಲೆಡ್ಜಿಂಗ್ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಗ್ರೌಂಡ್‌ನಲ್ಲಿ ಇದು ಮುಂದುವರೆಯುತ್ತೆ ಅನ್ನೋದನ್ನ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಒತ್ತಿ ಒತ್ತಿ ಹೇಳಿದ್ದಾರೆ. ಜೊತೆಗೆ ಇಂಡಿಯಾಕ್ಕೆ ವಾರ್ನಿಂಗ್ ಕೂಡಾ ಮಾಡಿದ್ದಾರೆ. ನೀವೇನಾದ್ರು ನಮ್ಮ ಮೇಲೆ ಆಕ್ರಮಣಕಾರಿ ವರ್ತನೆ ತೋರಿದ್ರೆ ನಾವು ಸೈಲೆಂಟ್ ಆಗೋ ಮಾತೇ ಇಲ್ಲ ಅಂತಾ ವಾರ್ನಿಂಗ್ ಮಾಡಿದ್ದಾರೆ. ತಮ್ಮ ತಂಡದ ಆಟಗಾರರು ಭಾರತೀಯ ಆಟಗಾರರ ಆಕ್ರಮಣಶೀಲತೆಗೆ ಪ್ರತಿಕ್ರಿಯಿಸುವುದರಿಂದ ಹಿಂದೆ ಸರಿಯುವುದಿಲ್ಲ. ಆದರೆ, ನಾವು ಮೊದಲು ಸ್ಲೆಡ್ಜಿಂಗ್ ಶುರುಮಾಡೋದನ್ನ ಇಷ್ಟಪಡುವುದಿಲ್ಲ ಅಂತಾನೂ ಸ್ಟೋಕ್ಸ್ ಹೇಳಿದ್ದಾರೆ. ನಾವು ಗೆದ್ದಿದ್ದು ಸ್ಲೆಡ್ಜಿಂಗ್ ಮೂಲಕ ಅಲ್ಲ. ನಮ್ಮ ಕೌಶಲ್ಯ, ನಮ್ಮ ಸಂಪೂರ್ಣ ಶಕ್ತಿಯನ್ನು ಟೀಮ್ ಇಂಡಿಯಾದ ಮೇಲೆ ಹಾಕಿದ್ದೇವೆ ಎಂದು ಹೇಳುವ ಮೂಲಕ ಟೀಮ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಟೀಂ ಇಂಡಿಯಾ ಪಾಲಿಗೆ ಈ ಟೆಸ್ಟ್‌ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಸರಣಿಯನ್ನೇ ಕಳೆದುಕೊಳ್ಳಲಿದೆ.

Kishor KV