ರಾಹುಲ್ ಸೆಂಚುರಿಗಾಗಿ ಪಂತ್ ಔಟ್ – 1 ರನ್.. ಪಂತ್ ಔಟ್.. ಎಂಥಾ ಎಫೆಕ್ಟ್?
ಟೀಂ ಇಂಡಿಯಾ ಲೆಕ್ಕಾಚಾರ ಕೈ ತಪ್ಪಿತಾ?

ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟರ್ಸ್ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್ಸ್ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ನಾಲ್ಕನೇ ವಿಕೆಟ್ಗೆ ಜೊತೆಯಾದ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅದ್ಭುತ ಜೊತೆಯಾಟವಾಡಿದ್ರು. ಅದ್ರಲ್ಲೂ ಕೆಎಲ್ ರಾಹುಲ್ ಅಂತೂ ತಾಳ್ಮೆಯಿಂದಲೇ ಆಂಗ್ಲರ ಬೆವರಿಳಿಸಿದ್ರು.
ಇದನ್ನೂ ಓದಿ : 3ನೇ ಟೆಸ್ಟ್‌ನಿಂದ ರಿಷಭ್ OUT – ಪಂತ್ ಇಂಜುರಿಯಿಂದ ಮಿಡಲ್ ಆರ್ಡರ್ ಕಷ್ಟ?
ಮೂರನೇ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 251 ರನ್ ಗಳಿಸಿದ್ದ ಇಂಗ್ಲೆಂಡ್ ತಂಡವನ್ನ ಭಾರತ ತಂಡ 2ನೇ ದಿನದಾಟದಲ್ಲಿ 387ಕ್ಕೆ ಆಲೌಟ್ ಮಾಡೋ ಮೂಲಕ ಮೇಲುಗೈ ಸಾಧಿಸಿತ್ತು. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದಿದ್ರು. ಭಾರತದ ಪರ ಜೈಸ್ವಾಲ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಈ ಬಳಿಕ ಕನ್ನಡಿಗರ ದರ್ಬಾರ್ ಶುರುವಾಗಿತ್ತು. ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಉತ್ತಮ ಜೊತೆಯಾಟ ಆಡ್ತಿದ್ರು. ಕರುಣ್ ನಾಯರ್ ಸಹ 62 ಎಸೆತದಲ್ಲಿ 40 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ನಾಯಕ ಶುಭ್‌ಮನ್ ಗಿಲ್ 16 ರನ್ ಸಿಡಿಸಿ ಔಟ್ ಆದರು. ಈ ವೇಳೆ ತಾಳ್ಮೆಯಿಂದಲೇ ಇಂಗ್ಲೆಂಡ್ ಬೌಲರ್ಸ್ನ ಎದುರಿಸಿದ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದ್ರು. ಮೂರನೇ ದಿನವೂ ಬ್ಯಾಟಿಂಗ್ ಕಂಟಿನ್ಯೂ ಮಾಡಿದ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ರು.
2014 ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಕೆಎಲ್ ರಾಹುಲ್ ಈಗ ಟೀಂ ಇಂಡಿಯಾದ ಸ್ಟಾರ್ ಆಟಗಾರನಾಗಿ ಬೆಳೆದಿದ್ದಾರೆ. ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿರೋ ಟೆಸ್ಟ್ ಸರಣಿಯಲ್ಲೂ ಭಾರತದ ಪರ ಓಪನರ್ ಆಗಿ ಉತ್ತಮ ಇನ್ನಿಂಗ್ಸ್ ಆಡ್ತಿದ್ದಾರೆ. ಹೆಡಿಂಗ್ಲಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 42 ರನ್ ಬಾರಿಸಿದ್ರು. ಹಾಗೇ ಎರಡನೇ ಇನ್ನಿಂಗ್ಸ್ನಲ್ಲಿ 137 ರನ್ ಗಳಿಸಿದ್ರು. ನಂತರ ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 2 ರನ್ಗಳಿಗೆ ಔಟಾಗೋ ಮೂಲಕ ನಿರಾಸೆ ಮೂಡಿಸಿದ್ರು. ಬಟ್ ಎರಡನೇ ಇನ್ನಿಂಗ್ಸ್ನಲ್ಲಿ 55 ರನ್ ಗಳಿಸಿದ್ರು. ಇದೀಗ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಭಾರತಕ್ಕೆ ಆಸರೆಯಾಗಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್ಸ್ ಮೂವರು ಔಟಾದಾಗ ಕ್ರೀಸ್ ಕಚ್ಚಿ ನಿಂತ ರಾಹುಲ್ ತಾಳ್ಮೆಯಿಂದಲೇ ಆಡಿದ್ರು. ಅದ್ರಲ್ಲೂ ಮೂರನೇ ದಿನದ ಇನ್ನಿಂಗ್ಸ್ನಲ್ಲಂತೂ ಒಂದೊಂದು ರನ್ಗೂ ತುಂಬಾನೇ ಟೈಂ ತಗೊಂಡ್ರು. ಇನ್ನ ರಿಷಭ್ ಪಂತ್ ಕೂಡ ರಾಹುಲ್ಗೆ ಒಳ್ಳೆ ಸಾಥ್ ನೀಡಿದ್ರು. ಇಂಜುರಿಯಲ್ಲೂ ರಿವರ್ಸ್ ಸ್ವೀಪ್ಗೆ ಸಾಕಷ್ಟು ಟ್ರೈ ಮಾಡಿದ್ರು. ಇಬ್ಬರ ಪಾರ್ಟರ್ಶಿಪ್ನಲ್ಲಿ ಭಾರತ 200+ ಸ್ಕೋರ್ ಕೂಡ ಕಂಪ್ಲೀಟ್ ಮಾಡ್ತು. ಇಬ್ಬರು ವಿಕೆಟ್ ಕೀಪರ್ಗಳ ಬ್ಯಾಟಿಂಗ್ ಸ್ಟೈಲ್ಗೆ ಇಂಗ್ಲೆಂಡ್ ಬೌಲರ್ಸ್ ಅಕ್ಷರಶಃ ಥಂಡಾ ಹೊಡೆದಿದ್ರು. ಮೊದಲ ಸೆಷನ್ ಕಂಪ್ಲೀಟ್ ಹೊತ್ತಿಗೆ ಕೆಎಲ್ ರಾಹುಲ್ 98 ರನ್ಸ್ ಕಲೆ ಹಾಕಿದ್ರು. ಈ ವೇಳೆ ಲಂಚ್ ಗೂ ಮುನ್ನ ರಾಹುಲ್ಗೆ ಸೆಂಚುರಿ ಕಂಪ್ಲೀಟ್ ಮಾಡಲು ಸ್ಟ್ರೈಕ್ ಬಿಟ್ಟುಕೊಡಲು ಮುಂದಾದ ರಿಷಭ್ ಪಂತ್ ಸಿಂಗಲ್ ರನ್ಗೆ ಓಡಿದ್ರು. ಓಡೋ ವೇಳೆ ರನ್ ಔಟ್ ಆದ್ರು. ಬೆನ್ ಸ್ಟೋಕ್ಸ್ ಡೈರೆಕ್ಟ್ ಹಿಟ್ ಮೂಲಕ ವಿಕೆಟ್ ಎಗರಿಸಿದ್ರು. 74 ರನ್ ಗಳಿಸಿದ್ದ ಪಂತ್ ಪೆವಿಲಿಯನ್ ಸೇರಿದ್ರು.
ಟೀಂ ಇಂಡಿಯಾ ಟೆಸ್ಟ್ ಟೀಮ್ನಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ರಾಹುಲ್ ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 3,500 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನದಂದು 33 ವರ್ಷದ ರಾಹುಲ್ ಈ ದಾಖಲೆ ಬರೆದಿದ್ದಾರೆ.. 61 ಟೆಸ್ಟ್ ಪಂದ್ಯಗಳ 106 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಒಂಬತ್ತು ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ. ಇಂಟ್ರೆಸ್ಟಿಂಗ್ ಅಂದ್ರೆ ರಾಹುಲ್ ಅವ್ರ ಟೆಸ್ಟ್ ರನ್‌ಗಳಲ್ಲಿ 2,000 ಕ್ಕೂ ಹೆಚ್ಚು ರನ್ಸ್ ವಿದೇಶಗಳಲ್ಲೇ ಬಂದಿವೆ. ಅಲ್ದೇ ಎಂಟು ಶತಕಗಳು ಬಂದಿರೋದು ವಿದೇಶದಲ್ಲೇ. ಇನ್ನು ತವರಿನಲ್ಲಿ 1,149 ಟೆಸ್ಟ್ ರನ್‌ಗಳನ್ನು ಸಿಡಿಸಿದ್ದಾರೆ.
ಲಾರ್ಡ್ಸ್‌ನಲ್ಲಿ ಅರ್ಧಶತಕ ಸಿಡಿಸಿದ ರಾಹುಲ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೀರೇಂದ್ರ ಸೆಹ್ವಾಗ್ ಅವ್ರ ವಿಶೇಷ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ. ಅರ್ಧಶತಕದೊಂದಿಗೆ SENA ದೇಶಗಳಲ್ಲಿ ಅಂದ್ರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಓಪನರ್ ಆಗಿ 11ನೇ ಬಾರಿಗೆ ಅರ್ಧಶತಕ ಕಂಪ್ಲೀಟ್ ಮಾಡಿದ್ದಾರೆ. ಅಂದ್ರೆ ಈ ಲಿಸ್ಟ್ನಲ್ಲಿ ಈಗ ಮೂರನೇ ಸ್ಥಾನಕ್ಕೇರಿದ್ದಾರೆ. ಸುನಿಲ್ ಗವಾಸ್ಕರ್ (19) ಮತ್ತು ಡಿ. ಕರುಣರತ್ನೆ (12) ಈ ಸಾಧನೆ ಮಾಡಿದ್ದಾರೆ. ರಾಹುಲ್ ಈಗ ಮೂರನೇ ಪ್ಲೇಸ್ನಲ್ಲಿದ್ದಾರೆ.

ನೋಡಿರಿ

