2ನೇ ಟೆಸ್ಟ್ ನಲ್ಲಿ ಭಾರತ ಬೆಂಕಿ ಬಿರುಗಾಳಿ ಪ್ರದರ್ಶನ – ಇಂಗ್ಲೆಂಡ್ಗೆ ಬಿಗ್ ಟಾರ್ಗೆಟ್ ಕೊಟ್ಟ ಗಿಲ್ ಪಡೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತದ ಬೆಂಕಿ ಬಿರುಗಾಳಿ ಪ್ರದರ್ಶನವನ್ನ ನೀಡಿದೆ. ಶುಭ್ಮನ್ ಗಿಲ್ ಅವರ ಅದ್ಭುತ ದ್ವಿಶತಕದ ನೆರವಿನಿಂದ ಭಾರತ ತಂಡವು 587 ರನ್ಗಳಿಗೆ ಆಲೌಟ್ ಆಯಿತು. 2ನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡವು 3 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅವರ ನಡುವೆ ನಾಲ್ಕನೇ ವಿಕೆಟ್ಗೆ 52 ರನ್ಗಳ ಜೊತೆಯಾಟ ಆಡಿದ್ರು.
ಇದನ್ನೂ ಓದಿ: ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡಿ ತಾಯಿ – ಚಾಮುಂಡಿ ಬೆಟ್ಟಕ್ಕೆ ದರ್ಶನ್ ಭೇಟಿ!
ಇಂಗ್ಲೆಂಡ್ನ ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ಗಳಿಗೆ 77 ರನ್ಗಳನ್ನು ಗಳಿಸಿದ್ದು, ಇನ್ನೂ ಭಾರತಕ್ಕಿಂತ 510 ರನ್ಗಳ ಹಿನ್ನಡೆಯಲ್ಲಿದೆ. ಬ್ರೂಕ್ ಅಜೇಯ 30 ರನ್ ಮತ್ತು ರೂಟ್ ಅಜೇ 18 ರನ್ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಭಾರತದ ಪರ ಆಕಾಶ್ ದೀಪ್ 2 ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದ್ದಾರೆ.
ನಾಯಕ ಶುಭ್ಮನ್ ಗಿಲ್ 269 ರನ್ ಬಾರಿಸಿದರು. ಗಿಲ್ ಹೊರತುಪಡಿಸಿ, ರವೀಂದ್ರ ಜಡೇಜಾ ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್ ಅರ್ಧಶತಕ ಸಿಡಿಸಿದರು. ಈ ಮೂವರ ಇನ್ನಿಂಗ್ಸ್ ಇಂಗ್ಲೆಂಡ್ ವಿರುದ್ಧ ಭಾರತ ದೊಡ್ಡ ಸ್ಕೋರ್ ಗಳಿಸಲು ಸಹಾಯ ಮಾಡಿತು. ಇಂಗ್ಲೆಂಡ್ ಪರ ಶೋಯಬ್ ಬಶೀರ್ ಮೂರು ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಮತ್ತು ಜೋಶ್ ಟಂಗ್ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಬ್ರೈಡನ್ ಕಾರ್ಸ್, ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ತಲಾ ಒಂದು ವಿಕೆಟ್ ಪಡೆದರು. 3ನೇ ದಿನದಾಟವಾದ ಇಂದು ಟೀಂ ಇಂಡಿಯಾ ಇಂಗ್ಲೆಂಡ್ನ ಆಲ್ಔಟ್ ಮಾಡೋಕ್ಕೆ ಕಾತರದಿಂದ ಕಾಯುತ್ತಿದೆ. ಒಂದು ವೇಳೆ ಇವತ್ತು 300 ರನ್ನೊಳಗೆ ಇಂಗ್ಲೆಂಡ್ ಆಲ್ಔಟ್ ಆದ್ರೆ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.

ನೋಡಿರಿ

