ಸೂರ್ಯವಂಶಿ ಇನ್ನೆಷ್ಟು ಕಾಯಬೇಕು – POWER PLAYನಲ್ಲೇ ಭಾರತ ಫೇಲ್
ENGನಲ್ಲೂ ಕೈಕೊಟ್ಟ ಬ್ಯಾಟರ್ಸ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಮಳೆ ಕಾರಣಕ್ಕೆ ರದ್ದಾಯ್ತು. ಬ್ಯಾಟಿಂಗ್ ಕಂಪ್ಲೀಟ್ ಮಾಡಿದ್ದ ಭಾರತ ಬೌಲಿಂಗ್ಗೆ ಚಾನ್ಸ್ ಸಿಗ್ಲಿಲ್ಲ. ಮ್ಯಾಚ್ ಫಿನಿಶ್ ಆಗದಿದ್ರೂ ಭಾರತದ ಕೆಲ ವೀಕ್ ನೆಸ್ ರಿವಿಲ್ ಆಗಿದೆ.
ಇದನ್ನೂ ಓದಿ : 30 ಮ್ಯಾಚ್.. 9 ಸಲ DUCK OUT – Switch ON.. Switch OFF ಬ್ಯಾಟಿಂಗ್
ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆದಿದ್ದ ಮೊದಲ ಮ್ಯಾಚ್ನಲ್ಲಿ ಟಾಸ್ ಗೆದ್ದ ಭಾರತ ಫಸ್ಟ್ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಳ್ಳುತ್ತೆ. ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ಒಂದಷ್ಟು ಚಂಗೇಸ್ ಇತ್ತು. ಮೂವರು ಸ್ಪಿನ್ನರ್ಗಳಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಇಬ್ಬರು ಬೌಲರ್ಗಳು ಇದ್ರು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಲಿರಲಿಲ್ಲ. ಇನ್ನು ಅಭಿಷೇಕ್ ಶರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕೇವಲ 24 ಎಸೆತಗಳಲ್ಲಿ 59 ರನ್ ಕಲೆಹಾಕಿದರು. ಈ ಇನ್ನಿಂಗ್ಸ್ ಮೂಲಕ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ವೇಗದ 100 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದರು. ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸಿದ್ದು ಭಾರತ ಫಸ್ಟ್ ಇನ್ನಿಂಗ್ಸ್ನಲ್ಲಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್ಸ್ ಕಲೆ ಹಾಕಿತು. ಮ್ಯಾಚ್ ರಿಸಲ್ಟ್ ಬರದೇ ಇದ್ರು ಒಂದಷ್ಟು ವೀಕ್ ನೆಸ್ ಅಂತೂ ರಿವಿಲ್ ಆಗಿದೆ.
ಎಚ್ಚೆತ್ತುಕೊಳ್ಳಬೇಕು ಭಾರತ!
ಸಂಜು ಸ್ಯಾಮ್ಸನ್ ಮೂರು ಪಂದ್ಯಗಳಲ್ಲೂ ಫೇಲ್ಯೂರ್
ಸತತ ಎರಡು ಪಂದ್ಯಗಳಲ್ಲಿ ಇಶಾನ್ ಕಿಶನ್ ರನ್ ಔಟ್
ಮಿಡ್ಲ್ ಆರ್ಡರ್ ನಲ್ಲಿ ಬ್ಯಾಟರ್ಸ್ ಕಡೆಯಿಂದ ರನ್ಸ್ ಇಲ್ಲ
ದುಬೆ ಮಾತ್ರವೇ ಫೈಟ್.. ಅಕ್ಷರ್, ತಿಲಕ್ ಕಳಪೆ
ಅಕ್ಷರ್ ಗಿಂತ ಮೊದಲು ಹರ್ಷಿತ್ ರಾಣಾಗೆ ಬ್ಯಾಟಿಂಗ್ ಚಾನ್ಸ್
8ರಿಂದ 16ನೇ ಓವರ್ ವರೆಗೆ ಬ್ಯಾಟಿಂಗ್ ನಲ್ಲಿ ನಿಧಾನಗತಿ
ಹೀಗೆ ಮುಂದಿನ ಪಂದ್ಯಕ್ಕೂ ಮುನ್ನ ಭಾರತ ಒಂದಷ್ಟು ವಿಚಾರಗಳಲ್ಲಿ ಗ್ರೌಂಡ್ ವರ್ಕ್ ಮಾಡಿಕೊಳ್ಬೇಕಿದೆ. ಎರಡನೇ ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

ನೋಡಿರಿ

