IND Vs ENG.. ಕೋಚ್ ಗಳ ಫೈಟ್ – 10 ವರ್ಷಗಳ ವಿಜಯಯಾತ್ರೆಗೆ ಸವಾಲು

IND Vs ENG.. ಕೋಚ್ ಗಳ ಫೈಟ್ – 10 ವರ್ಷಗಳ ವಿಜಯಯಾತ್ರೆಗೆ ಸವಾಲು

ಇಂಗ್ಲೆಂಡ್ ವಿರುದ್ಧದ ಟಿ-20 ಕದನದ ಮೂಲಕ 2025ರ ಮೊದಲ ವೈಟ್​ ಬಾಲ್ ಸರಣಿಗೆ ಭಾರತ ಸರ್ವ ಸನ್ನದ್ಧವಾಗಿದೆ. ಇದೇ ಸಿರೀಸ್​​ನಲ್ಲೇ ಹಲವರ ರೆಕಾರ್ಡ್ಸ್ ಕೂಡ ಬ್ರೇಕ್ ಆಗಲಿವೆ. ಟಿ-20 ವಿಶ್ವಕಪ್ ಬಳಿಕ ಭಾರತ ಟಿ-20 ಫಾರ್ಮೆಟ್​ನಲ್ಲಿ ಸೋಲೇ ಕಾಣದೆ ಮುನ್ನುಗ್ಗುತ್ತಿದೆ. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ವಿಜಯಯಾತ್ರೆ ಕಂಟಿನ್ಯೂ ಆಗೋ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ : ಭಾರತದಿಂದ ಬಿಟ್ರನ್‌ಗೆ ಹೋಗಿದ್ದು 5000 ಲಕ್ಷ ಕೋಟಿ!!

ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಓಪನರ್ಸ್ ಆಗಿ ಕಣಕ್ಕಿಳಿಯಲಿದ್ದಾರೆ. ಇಬ್ಬರೂ ಕೂಡ ಹೊಡಿ ಬಡಿ ಆಟಗಾರರಾಗಿದ್ದು, ಓಪನಿಂಗ್​ನಲ್ಲೇ ಟೀಂ ಇಂಡಿಯಾಗೆ ಆಸರೆಯಾಗಲಿದ್ದಾರೆ. ಹಾಗೇ ಸಾಲಿಡ್ ಫಾರ್ಮ್​ನಲ್ಲಿರುವ ತಿಲಕ್ ವರ್ಮಾ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೈದರಾಬಾದ್‌ನ ತಿಲಕ್ ವರ್ಮಾ ವಿಶ್ವದಾಖಲೆಯೊಂದನ್ನು ಸೃಷ್ಟಿಸುವ ಅವಕಾಶ ಸಿಕ್ಕಿದೆ. ಈ ಪಂದ್ಯದಲ್ಲಿ ತಿಲಕ್ ವರ್ಮಾ ಶತಕ ಗಳಿಸಿದರೆ, ಸತತ ಮೂರು ಟಿ20 ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಇನ್ನು ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಮಿಡಲ್ ಆರ್ಡರ್​ನ ಜವಾಬ್ದಾರಿ ಹೊರಲಿದ್ದಾರೆ. ರಿಂಕು ಸಿಂಗ್, ನಿತಿಶ್ ಕುಮಾರ್​​ ರೆಡ್ಡಿ ಮ್ಯಾಚ್ ಫಿನಿಷರ್​ ರೋಲ್​ ಪ್ಲೇ ಮಾಡಲಿದ್ದಾರೆ. ಈಡನ್ ಗಾರ್ಡನ್ಸ್​ನ ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಆಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯಲಿದ್ದಾರೆ. ರೈಟ್ ಆ್ಯಂಡ್ ಲೆಫ್ಟಿ ಬೌಲಿಂಗ್ ಕಾಂಬಿನೇಷನ್​ನಲ್ಲಿ ಅನುಭವಿ ಮೊಹಮ್ಮದ್ ಶಮಿ ಹಾಗೂ ಆರ್ಷ್​​​ದೀಪ್ ಸಿಂಗ್ ಕಣಕ್ಕಿಳಿಯೋದು ಫಿಕ್ಸ್​.

ಮೊದಲ ಪಂದ್ಯ ನಡೆಯಲಿರುವ ಈಡನ್ ಗಾರ್ಡನ್ಸ್​ ನಲ್ಲಿ, ಪವರ್ ಹಿಟ್ಟರ್ ಪ್ಲೇಯರ್ಸೇ ಇದ್ದಾರೆ. ಉಭಯ ತಂಡಗಳಲ್ಲಿ ಸೂಪರ್ ಟಿ20 ಸ್ಪೆಷಲಿಸ್ಟ್​ಗಳ ದಂಡಿದೆ. ಸಿಂಗಲ್ ಆಗಿ ಮ್ಯಾಚ್ ಗೆಲ್ಲಿಸಿಕೊಡುವ ಬಿಗ್ ಹಿಟ್ಟರ್ಸ್ ಇದ್ದಾರೆ. ಇವ್ರೆಲ್ಲ ಕ್ರಿಕೆಟ್ ಕಾಶಿಯಲ್ಲಿ ಸಿಕ್ಸರ್​ಗಳ ಸುರಿಮಳೆ ಸುರಿಸೋದು ಗ್ಯಾರಂಟಿ. ಇನ್ನು 2024ರಲ್ಲಿ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 12 ಇನ್ನಿಂಗ್ಸ್​ಗಳಿಂದ 31 ಸಿಕ್ಸರ್​ ಸಿಡಿಸಿದ್ರೆ, ಸೂರ್ಯಕುಮಾರ್​ ಯಾದವ್ 17 ಇನ್ನಿಂಗ್ಸ್​ಗಳಿಂದ 22 ಸಿಕ್ಸರ್​ ಸಿಡಿಸಿದ್ದಾರೆ. ತಿಲಕ್ ವರ್ಮಾ ಆಡಿರೋ 5 ಪಂದ್ಯಗಳಿಂದಲೇ 21 ಸಿಕ್ಸರ್ ದಾಖಲಿಸಿದ್ದಾರೆ. ಹಾರ್ದಿಕ್ ಪಾಂಡ್ಯ, ಅಭಿಷೇಕ್ ಶರ್ಮಾ ತಲಾ 19 ಸಿಕ್ಸರ್ ಸಿಡಿಸಿದ್ದಾರೆ. ಇಂಗ್ಲೆಂಡ್ ಪರ ಫಿಲ್ ಸಾಲ್ಟ್​ 15 ಇನ್ನಿಂಗ್ಸ್​ಗಳಿಂದ 25 ಸಿಕ್ಸರ್​ ಸಿಡಿಸಿದ್ರೆ, ಕ್ಯಾಪ್ಟನ್ ಜೋಸ್ ಬಟ್ಲರ್ 13 ಇನ್ನಿಂಗ್ಸ್​ಗಳಿಂದ 23 ಸಿಕ್ಸರ್ ದಾಖಲಿಸಿದ್ದಾರೆ.

ಇನ್ನು ಇವತ್ತಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ಮ್ಯಾಚ್ ಫಿನಿಷರ್ ರಿಂಕು ಸಿಂಗ್, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.  ಯಾಕಂದ್ರೆ ಕೊಲ್ಕತ್ತಾ ಪರ ಐಪಿಎಲ್​ನಲ್ಲಿ ಇದೇ ಸ್ಟೇಡಿಯಂನಲ್ಲಿ ಮೊಮೊರೆಬಲ್ ಇನ್ನಿಂಗ್ಸ್​ಗಳನ್ನಾಡಿದ್ದಾರೆ. ಮ್ಯಾಚ್ ವಿನ್ನರ್​ಗಳಾಗಿ ಮೆರೆದಾಡಿದ್ದಾರೆ. ಇವರ ಮೇಲೆ ಕೊಲ್ಕತ್ತಾ ಅಭಿಮಾನಿಗಳ ಕಣ್ಣಿದೆ. ಹಾಗೇ 1 ವರ್ಷ 2 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಾಪಸ್ ಆಗಿರುವ ಮೊಹಮ್ಮದ್​ ಶಮಿ, ತವರಿನ ಅಂಗಳದಲ್ಲೇ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚಾಂಪಿಯನ್ಸ್​ ಟ್ರೋಫಿಗೆ ಆಯ್ಕೆಯಾಗಿರೋ ಶಮಿ ಫಿಟ್​ನೆಸ್​ ಬಗ್ಗೆ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಬೌಲಿಂಗ್​ನಿಂದಲೇ ಆನ್ಸರ್​ ಕೊಡುವ ಲೆಕ್ಕಾಚಾರದಲ್ಲಿದ್ದಾರೆ.

ಇನ್ನು ಈಡನ್ ಗಾರ್ಡನ್​ನಲ್ಲಿ ನಡೆಯೋ ಇವತ್ತಿನ​ ಮ್ಯಾಚ್ ಆಟಗಾರರಿಗೆ ಮಾತ್ರವಲ್ಲ. ಉಭಯ ತಂಡಗಳ ಕೋಚ್​ಗಳಿಗೂ ಪ್ರತಿಷ್ಠೆಯ ಸಮರ. ಯಾಕಂದ್ರೆ ಕೊಲ್ಕತ್ತಾ ನೈಟ್​ ರೈಡರ್ಸ್ ಆ್ಯಂಡ್ ಈಡನ್​ ಗಾರ್ಡನ್ಸ್ ನಡುವಿನ ಸಂಬಂಧ. ಇಂಗ್ಲೆಂಡ್ ಕೋಚ್ ಬ್ರೆಡಮ್ ಮೆಕಲಮ್, ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್​ಗೂ ಈಡನ್​ ಗಾರ್ಡನ್ಸ್​ ಜೊತೆ ವಿಶೇಷ ನಂಟಿದೆ. ಕೆಕೆಆರ್ ಪರ ಜೊತೆಯಾಗಿ ಇನ್ನಿಂಗ್ಸ್​ ಆರಂಭಿಸಿದ್ದ ಇವರು, ಕೆಕೆಆರ್ ತಂಡದ ಕೋಚ್​​ಗಳಾಗಿ ಕಾರ್ಯ ಮಾಡಿದ್ದಾರೆ. ಅಗ್ರೆಸ್ಸಿವ್ ಮೈಂಡ್​ಸೆಟ್​​​​​​ ಹೊಂದಿರುವ ಇವರು, ಈಗ ಅಂತಾರಾಷ್ಟ್ರೀಯ ತಂಡಗಳ ಕೋಚ್​ಗಳಾಗಿ ಇದೇ ಈಡನ್ ಗಾರ್ಡನ್ಸ್​ನಲ್ಲಿ ಮುಖಾಮುಖಿಯಾಗ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *