ಭಾರತ-ಬಾಂಗ್ಲಾ 3ನೇ ಏಕದಿನ ಪಂದ್ಯ: ಟೀಂ ಇಂಡಿಯಾಗೆ ಭರ್ಜರಿ ಗೆಲುವು-ಸರಣಿ ಬಾಂಗ್ಲಾ ವಶ
ಇಶಾನ್ ಕಿಶನ್ ದಾಖಲೆಯ ದ್ವಿಶತಕ.. ವಿರಾಟ್​ ಕೊಹ್ಲಿ 44ನೇ ಶತಕ!

ಭಾರತ-ಬಾಂಗ್ಲಾ 3ನೇ ಏಕದಿನ ಪಂದ್ಯ: ಟೀಂ ಇಂಡಿಯಾಗೆ ಭರ್ಜರಿ ಗೆಲುವು-ಸರಣಿ ಬಾಂಗ್ಲಾ ವಶಇಶಾನ್ ಕಿಶನ್ ದಾಖಲೆಯ ದ್ವಿಶತಕ.. ವಿರಾಟ್​ ಕೊಹ್ಲಿ 44ನೇ ಶತಕ!

ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 408ರನ್​​ಗಳ ಬೃಹತ್ ಮೊತ್ತ ಪೇರಿಸಿತ್ತು. ಇಶಾನ್ ಕಿಶನ್ ಕೇವಲ 131 ಬಾಲ್​ಗಳಲ್ಲಿ 210 ರನ್ ಬಾರಿಸಿ ಹೊಸ ದಾಖಲೆ ಬರೆದ್ರೆ, ಮತ್ತೊಂದೆಡೆ ವಿರಾಟ್​ ಕೊಹ್ಲಿ 113 ರನ್​ ಚಚ್ಚಿದ್ದಾರೆ. 408ರನ್​ಗಳನ್ನ ಚೇಸ್​ ಮಾಡೋಕೆ ಮುಂದಾದ ಬಾಂಗ್ಲಾದೇಶ ಆರಂಭದಲ್ಲೇ ವಿಕೆಟ್​​ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. 34 ಓವರ್​​ಗಳಲ್ಲಿ 182 ರನ್​ಗಳಿಗೆ ಬಾಂಗ್ಲಾ ತಂಡ ಆಲೌಟ್ ಆಗಿ ಹೀನಾಯ ಸೋಲೊಪ್ಪಿಕೊಂಡಿತು. ಭಾರತದ ಪರ ಶಾರ್ದುಲ್ ಠಾಕೂರ್ 3 ವಿಕೆಟ್ ಪಡೆದಿದ್ದು, ಅಕ್ಸರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಯ ಪಂದ್ಯದಲ್ಲಿ 227 ರನ್​ಗಳಿಂದ ಭಾರತ ಗೆಲುವು ದಾಖಲಿಸಿದೆಯಾದ್ರೂ ಮೊದಲ ಎರಡೂ ಪಂದ್ಯಗಳನ್ನು ಸೋತಿದ್ರಿಂದ ಸರಣಿಯನ್ನು ಕಳೆದುಕೊಂಡಿದೆ.  ​​​

suddiyaana