ಬೌಲಿಂಗ್ ವಿಭಾಗದಲ್ಲಿ ಒಂಟಿಯಾದ್ರಾ ಬುಮ್ರಾ?- ವಿಕೆಟ್ ಇಲ್ಲದೆ ಸಿರಾಜ್ ಶತಕ, ಬೇಡದ ದಾಖಲೆ ಬರೆದ ವೇಗದ ಬೌಲರ್

ಆಸ್ಟ್ರೇಲಿಯಾ ಬೃಹತ್ ರನ್ ಪೇರಿಸಿ ಗೆಲುವಿನ ಉತ್ಸಾಹದಲ್ಲಿದೆ. ಆದ್ರೆ, ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಫೈಲ್ಯೂರ್ ಜಗಜ್ಜಾಹೀರಾಗಿದೆ. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದ್ರು. ಆದ್ರೆ, ಬುಮ್ರಾ ಬೌಲಿಂಗ್‌ಗೆ ಸಾಥ್ ಕೊಡಲು ಉಳಿದ ಬೌಲರ್‌ಗಳಿಗೆ ಸಾಧ್ಯವಾಗಲೇ ಇಲ್ಲ.
ಇದನ್ನೂ ಓದಿ:19ರ ಹುಡುಗನ ಜೊತೆ ಕೊಹ್ಲಿ ಕಿರಿಕ್ – ಗುದ್ದಿದ್ದಕ್ಕೆ ಬ್ಯಾನ್ ಮಾಡುತ್ತಾ ಐಸಿಸಿ?
ಮೆಲ್ಬೋರ್ನ್ನಲ್ಲಿ ಬೇಡದ ದಾಖಲೆ ಬರೆದಿದ್ದಾರೆ ಸಿರಾಜ್. ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಯಾವುದೇ ವಿಕೆಟ್ ಪಡೆಯದೆ 122 ರನ್‌ಗಳನ್ನು ಬಿಟ್ಟುಕೊಟ್ಟು ತೀರ ದುಬಾರಿಯಾಗಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 23 ಓವರ್‌ಗಳನ್ನು ಬೌಲ್ ಮಾಡಿದ ಸಿರಾಜ್ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇತ್ತ ರನ್ ನೀಡುವುದರಲ್ಲೂ ದಾರಾಳತೆ ಮೆರೆದ ಸಿರಾಜ್ 100 ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ನಾಚಿಕೆಗೇಡಿನ ದಾಖಲೆಯನ್ನೂ ನಿರ್ಮಿಸಿದ್ದಾರೆ.
23 ಓವರ್ ಬೌಲ್ ಮಾಡಿದ ಸಿರಾಜ್ 5.30ರ ಎಕಾನಮಿಯಲ್ಲಿ 122 ರನ್ ಬಿಟ್ಟುಕೊಟ್ಟರು. ಇದರೊಂದಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಯಾವುದೇ ವಿಕೆಟ್ ಪಡೆಯದೇ ಅತಿ ಹೆಚ್ಚು ರನ್ ವ್ಯಯಿಸಿದ ಭಾರತೀಯ ಬೌಲರ್ ಎನಿಸಿಕೊಂಡರು.
ತಂಡದ ಪರ ಎಂದಿನಂತೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್, ಆಕಾಶ್ ದೀಪ್ ಎರಡು ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ಒಂದು ವಿಕೆಟ್ ಪಡೆದರು.