ಭಾರತ VS ಆಸ್ಟ್ರೇಲಿಯಾ 3ನೇ ಟಿ-20 ಮ್ಯಾಚ್ – ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ತವಕ

ಭಾರತ VS ಆಸ್ಟ್ರೇಲಿಯಾ 3ನೇ ಟಿ-20 ಮ್ಯಾಚ್ – ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ತವಕ

ಭಾರತ VS ಆಸ್ಟ್ರೇಲಿಯಾ.. ನವೆಂಬರ್ 28ರಂದು ಸಂಜೆ 7 ಗಂಟೆಗೆ 3ನೇ ಟಿ-20 ಮ್ಯಾಚ್ ಆರಂಭವಾಗಲಿದೆ. ಈಗಾಗಲೇ ಟೀಮ್ ಇಂಡಿಯಾ ಎರಡು ಮ್ಯಾಚ್​​ನ್ನ ಗೆದ್ದಾಗಿದೆ. ಈ ಪಂದ್ಯವನ್ನ ಕೂಡ ಗೆದ್ದುಕೊಂಡರೆ ಇಡೀ ಸೀರಿಸ್ ಭಾರತದ ಪಾಲಾಗುತ್ತದೆ. ಹೀಗಾಗಿ ಟೀಂ ಇಂಡಿಯಾ ಈಗ ಸೀರಿಸ್ ಗೆಲುವಿನತ್ತ ಕಣ್ಣಿಟ್ಟಿದೆ.

ಇದನ್ನೂ ಓದಿ: 2ನೇ ಟಿ20 ಪಂದ್ಯದಲ್ಲಿ 44 ರನ್‌ಗಳಿಂದ ಗೆದ್ದು ಬೀಗಿದ ಭಾರತ – ರಿಂಕು ಸಿಂಗ್ ಆಟಕ್ಕೆ ನಾಯಕನ ಮೆಚ್ಚುಗೆ

ಮೊದಲ ಎರಡು ಮ್ಯಾಚ್​ಗಳಲ್ಲಿ ಆಡಿದ್ದನ್ನ ನೋಡಿದರೆ, ಈ ಮ್ಯಾಚ್​​ನಲ್ಲೂ ಟೀಂ ಇಂಡಿಯಾವೇ ಫೇವರೇಟ್ ಅನ್ನೋದರಲ್ಲಿ ಯಾವುದೇ ಡೌಟ್ ಇಲ್ಲ. ಆದರೆ, ಆಸ್ಟ್ರೇಲಿಯಾದವರು ಅದ್ಯಾವಾಗ ಹೇಗೆ ತಿರುಗಿ ಬೀಳುತ್ತಾರೋ ಹೇಳೋದು ಅಸಾಧ್ಯ. ಅದರಲ್ಲೂ ಆಸ್ಟ್ರೇಲಿಯಾ ಪಾಲಿಗೆ ಇದು ಡೂ or ಡೈ ಮ್ಯಾಚ್.. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಹೀಗಾಗಿ ಹೊಸ ಸ್ಟ್ರ್ಯಾಟಜಿಯೊಂದಿಗೆ ಅಖಾಡಕ್ಕಿಳಿಯೋದಂತೂ ಗ್ಯಾರಂಟಿ.

ಇನ್ನು ಆಸ್ಟ್ರೇಲಿಯಾ ವಿರುದ್ಧದ 3ನೇ ಮ್ಯಾಚ್​​ಗೆ ಟೀಂ ಇಂಡಿಯಾದ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.

ಟೀಂ ಇಂಡಿಯಾ PLAYING-11?

ಯಶಸ್ವಿ ಜೈಸ್ವಾಲ್

ರುತುರಾಜ್ ಗಾಯಕ್ವಾಡ್

ಇಶಾನ್ ಕಿಶನ್

ಸೂರ್ಯಕುಮಾರ್ ಯಾದವ್

ತಿಲಕ್ ವರ್ಮಾ

ರಿಂಕು ಸಿಂಗ್

ಅಕ್ಸರ್ ಪಟೇಲ್

ರವಿ ಬಿಷ್ಣೋಯಿ

ಅರ್ಶ್​​ದೀಪ್ ಸಿಂಗ್

ಪ್ರಸಿಧ್ ಕೃಷ್ಣ

ಮುಕೇಶ್ ಕುಮಾರ್

ಇದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮ್ಯಾಚ್​ಗೆ ಟೀಂ ಇಂಡಿಯಾದ ಸಂಭಾವ್ಯ ತಂಡ. ತಂಡಕ್ಕೆ ಸ್ವಲ್ಪ ಚಿಂತೆಯಾಗಿರೋದು ಅಂದ್ರೆ ಅದು ಬೌಲಿಂಗ್ ಡಿಪಾರ್ಟ್​​ಮೆಂಟ್. ಫಸ್ಟ್ ಮ್ಯಾಚ್​ಗೆ ಹೋಲಿಸಿದರೆ ಸೆಕೆಂಡ್​ ಮ್ಯಾಚ್​​ನಲ್ಲಿ ಬೌಲರ್ಸ್​ಗಳು ಬೆಟರ್ ಪರ್ಫಾಮೆನ್ಸ್ ನೀಡಿದ್ದಾರೆ. ಆದರೂ, ಬೌಲಿಂಗ್​​ನಲ್ಲಿ ಇನ್ನಷ್ಟು ಇಂಪ್ರೂವ್​ಮೆಂಟ್​ ಆಗಲೇಬೇಕಾದ ಅವಶ್ಯಕತೆ ಇದೆ. ಅದ್ರಲ್ಲೂ ಫಾಸ್ಟ್ ಬೌಲರ್ಸ್​​ಗಳು ಇನ್ನಷ್ಟು ಎಫೆಕ್ಟಿವ್ ಆಗಬೇಕಿದೆ.

ಇನ್ನು ಬ್ಯಾಟಿಂಗ್ ಡಿಪಾರ್ಟ್​​ಮೆಂಟ್​ ಅಂತೂ ಸ್ಟ್ರಾಂಗ್ ಆಗಿಯೇ ಇದೆ. ಅದ್ರಲ್ಲೂ ಜೈಸ್ವಾಲ್​ ಮತ್ತು ರುತುರಾಜ್​ ಗಾಯಕ್ವಾಡ್ ಉತ್ತಮ ಸ್ಟಾರ್ಟ್​ ಕೊಡ್ತಿದ್ದಾರೆ. ಇಶಾನ್​ ಕಿಶನ್, ಸೂರ್ಯಕುಮಾರ್​ ಯಾದವ್ ಮತ್ತು ರಿಂಕು ಸಿಂಗ್​ರಿಂದಾಗಿ ಫಸ್ಟ್​ ಎರಡೂ ಮ್ಯಾಚ್​​ಗಳಲ್ಲೂ ಟೀಂ ಇಂಡಿಯಾ ಬಿಗ್ ಸ್ಕೋರ್ ಮಾಡಿದೆ. ತಿಲಕ್​ ವರ್ಮಾ ಬ್ಯಾಟ್​​ನಿಂದ ಮಾತ್ರ ಇನ್ನೂ ಕೂಡ ರನ್ ಬಂದಿಲ್ಲ. ತಿಲಕ್ ವರ್ಮಾ ಪರ್ಫಾಮ್​ ಮಾಡಲೇಬೇಕಾದ ಅನಿವಾರ್ಯತೆ ಇದೆ. ಯಾಕಂದ್ರೆ ಮುಂದಿನ ಎರಡು ಟಿ-20 ಮ್ಯಾಚ್​​ಗಳಿಗೆ ಶ್ರೇಯಸ್ ಅಯ್ಯರ್ ಟೀಂಗೆ ಕಮ್​ಬ್ಯಾಕ್ ಮಾಡ್ತಾರೆ. ಒಂದು ವೇಳೆ ತಿಲಕ್​ ವರ್ಮಾ ಈ ಮ್ಯಾಚ್​​ನಲ್ಲೂ ಆಡಿಲ್ಲ ಅಂದ್ರೆ, ನೆಕ್ಟ್ಸ್ಟ್ ಎರಡೂ ಮ್ಯಾಚ್​​ಗಳಲ್ಲಿ ತಿಲಕ್​ಗೆ ಪ್ಲೇಯಿಂಗ್​-11ನಲ್ಲಿ ಚಾನ್ಸ್ ಸಿಗೋದು ಡೌಟ್. ತಿಲಕ್ ವರ್ಮಾ ಬದಲು ಶ್ರೇಯಸ್ ಅಯ್ಯರ್ ಅಖಾಡಕ್ಕಿಳಿಯಬಹುದು.

ಇನ್ನು ಆಸ್ಟ್ರೇಲಿಯಾವಂತೂ 3ನೇ ಟಿ-20 ಮ್ಯಾಚ್​​ನಲ್ಲಿ ತನ್ನ ಫುಲ್​ ಫ್ಲೆಡ್ಜ್ ಟೀಂನ್ನೇ ಅಖಾಡಕ್ಕಿಳಿಸಬಹುದು. 2ನೇ ಮ್ಯಾಚ್​​ನಲ್ಲಿ ಗ್ಲೇನ್ ಮ್ಯಾಕ್ಸ್​​ವೆಲ್​ ಟೀಂ ಸೇರಿಕೊಂಡಿದ್ರು. ಈಗ 3ನೇ ಮ್ಯಾಚ್​​ನಲ್ಲಿ​ ಟೀಂ ಇಂಡಿಯಾದ ಪಾಲಿನ ವರ್ಲ್ಡ್​​ಕಪ್​ ವಿಲನ್ ಟ್ರಾವಿಸ್ ಹೆಡ್​ ಕ್ರೀಸ್​​ಗಿಳಿಯುವ ಸಾಧ್ಯತೆ ಇದೆ. ಫಸ್ಟ್ ಎರಡು ಮ್ಯಾಚ್​ನಲ್ಲೂ ಟ್ರಾವಿಸ್ ಹೆಡ್ ಆಡಿರಲಿಲ್ಲ. ಆದ್ರೀಗ ಆಸ್ಟ್ರೇಲಿಯಾಗೆ ಡೂ or ಡೈ ಮ್ಯಾಚ್ ಆಗಿರೋದ್ರಿಂದ ತನ್ನ ಕೀ ಪ್ಲೇಯರ್​​ನ್ನ ಒಪನಿಂಗ್ ಕಳುಹಿಸಬಹುದೋ ಏನೊ. ಈ ಟ್ರಾವಿಸ್ ಹೆಡ್​ನ್ನ ನೋಡಿದ್ರೆ ಸಾಕು. ವರ್ಲ್ಡ್​ಕಪ್ ಫೈನಲೇ ನೆನಪಾಗುತ್ತೆ. ಇದೀಗ ಆಸ್ಟ್ರೇಲಿಯಾಗೆ ಕ್ರೂಶಿಯಲ್ ಆಗಿರೋ 3ನೇ ಮ್ಯಾಚ್​ನ್ನಾದ್ರೂ ಟ್ರಾವಿಸ್ ಹೆಡ್ ಗೆಲ್ಲಿಸ್ತಾರಾ ನೋಡಬೇಕಿದೆ. ಕೇವಲ ವಂಡೇನಲ್ಲಿ ಮಾತ್ರವಲ್ಲ ಟ್ರಾವಿಸ್ ಹೆಡ್ ಟಿ-20ಯಲ್ಲಿ ಕೂಡ ಅತ್ಯಂತ ಡೇಂಜರಸ್ ಬ್ಯಾಟ್ಸ್​​ಮನ್. ಟ್ರಾವಿಸ್ ಹೆಡ್ ಆಡಿದ್ರೆ ಟೀಂ ಇಂಡಿಯಾ ಬೌಲರ್ಸ್​ಗಳ ಮೇಲೆ ಮೆಂಟಲಿ ಒಂದಷ್ಟು ಪ್ರೆಷರ್ ಬೀಳುತ್ತೆ. ಬೇಡ ಅಂದ್ರೂ ಕೂಡ ವರ್ಲ್ಡ್​​ಕಪ್​​ ಫೈನಲ್​​ ನೆನಪಿಗೆ ಬಂದೇ ಬರುತ್ತೆ. ಒಂದು ವೇಳೆ 3ನೇ ಮ್ಯಾಚ್​ನಲ್ಲಿ ಕೂಡ ಆಸ್ಟ್ರೇಲಿಯಾವನ್ನ ಈ ಯಂಗ್​ಸ್ಟರ್ಸ್​ಗಳ ಟೀಂ ಸೋಲಿಸ್ತು ಅಂದ್ರೆ ಅದು ನಿಜಕ್ಕೂ ಗ್ರೇಟ್ ಅಚೀವ್​​ಮೆಂಟ್ ಆಗಲಿದೆ. ಯಾಕಂದ್ರೆ ಪೇಪರ್​ನಲ್ಲಿ ನೋಡೊವಾಗ ನಮ್ಮದು ಆಸ್ಟ್ರೇಲಿಯಾದಷ್ಟು ಸ್ಟ್ರಾಂಗ್ ಟೀಂ ಅಲ್ಲ. ಯಾಕಂದ್ರೆ, ಆಸಿಸ್​ನಲ್ಲಿ ಎಕ್ಸ್​​​ಪೀರಿಯನ್ಸ್ ಮತ್ತು ಯುವಕರ ಪಡೆ ಆಡ್ತಾ ಇದೆ. ಟೀಂ ಇಂಡಿಯಾದಲ್ಲಿರೋ ಬಹುತೇಕ ಪ್ಲೇಯರ್ಸ್​ಗಳು ಯಂಗ್​ಸ್ಟರ್ಸ್​ಗಳೇ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ 3-0 ಲೀಡ್​ನಲ್ಲಿ ಸೀರಿಸ್​ ಗೆದ್ರೆ ಅದು ನಿಜಕ್ಕೂ ದೊಡ್ಡ ಸಾಧನೆಯಾಗಲಿದೆ.

Sulekha