ಆಡದೇ ಕೊಹ್ಲಿ ನಂಬರ್-1 – ವೈಭವ್ ಗೆ ನೋ ಚಾನ್ಸ್ ಎಂದ ಗಂಭೀರ್
POWER ಇದ್ರೂ ಪಡಿಕ್ಕಲ್ ಬೇಡ್ವಾ?

ಆಡದೇ ಕೊಹ್ಲಿ ನಂಬರ್-1 – ವೈಭವ್ ಗೆ ನೋ ಚಾನ್ಸ್ ಎಂದ ಗಂಭೀರ್POWER ಇದ್ರೂ ಪಡಿಕ್ಕಲ್ ಬೇಡ್ವಾ?

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ದೇವದತ್ ಪಡಿಕ್ಕಲ್ ಅವ್ರನ್ನು ಆಯ್ಕೆ ಮಾಡದಿದ್ದಕ್ಕೆ ಅಭಿಮಾನಿಗಳು ಸಿಟ್ಟಾಗಿದೆ. ಹಾಗೂ ವಿರಾಟ್ ಕೊಹ್ಲಿ ಆಡದೆಯೇ ನಂಬರ್ 1 ಪಟ್ಟಕ್ಕೇರಿದ್ದಾರೆ. ಅಭಿಷೇಕ್ ಶರ್ಮಾ ಫುಲ್ ಟ್ರೆಂಡಿಂಗ್ ನಲ್ಲಿದ್ದಾರೆ. ಕ್ರಿಕೆಟ್ ಗೆ ಸಂಬಂಧಪಟ್ಟ ಕೆಲ ಮಾಹಿತಿಗಳು ಇಲ್ಲಿದೆ.

ಇದನ್ನೂ ಓದಿ : 3ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಸರಣಿ ಕ್ಲೀನ್‌ಸ್ವೀಪ್

  • ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಟೀಮ್‌ನಲ್ಲಿ ಕನ್ನಡಿಗ ಕ್ರಿಕೆಟರ್ ದೇವದತ್ ಪಡಿಕ್ಕಲ್ ಅವರನ್ನು ಸೆಲೆಕ್ಟ್ ಮಾಡಿಲ್ಲ. ಪಡಿಕ್ಕಲ್ ಬದಲಿಗೆ ರುತುರಾಜ್ ಗಾಯಕ್ವಾಡ್ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ನೀಡಲಾಗಿದೆ. ದೇವದತ್ ಪಡಿಕ್ಕಲ್ ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದರು.ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರ ದಾಖಲೆ ಮೇಲೆ ದಾಖಲೆ ಬರೆದ್ರೂ ಕೂಡಾ ಆಯ್ಕೆ ಮಾಡಿಲ್ಲ.
  • ಒಂದೇ ದಶಕದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಮಹೇಲ ಜಯವರ್ಧನೆ ಮತ್ತು ಕುಮಾರ್ ಸಂಗಕ್ಕಾರ ನಂತರದ ಸ್ಥಾನಗಳಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ 6ನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್‌ನಲ್ಲಿ ದಾಖಲೆಗಳ ವಿಚಾರ ಬಂದಾಗ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಹೆಸರುಗಳು ಸದಾ ಮುಂಚೂಣಿಯಲ್ಲಿರುತ್ತವೆ. ಇದೀಗ ಕೊಹ್ಲಿ ಈ ಸಾಧನೆಗಳ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟಕ್ಕೇರಿದರೆ, ಸಚಿನ್ ಟಾಪ್ 5 ನಿಂದ ಜಾರಿದ್ದಾರೆ.
  • ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ, ರೋಹಿತ್ ಶರ್ಮಾ ಅವರ ವೇಗದ ಶತಕದ ದಾಖಲೆಯನ್ನು ಮುರಿದಿದ್ದಾರೆ. 2017 ರಲ್ಲಿ ಇಂದೋರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈಗ, ಅಭಿಷೇಕ್ ಶರ್ಮಾ 30 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಭಾರತ ಪರ ಅತಿ ವೇಗದ ಟಿ20 ಅಂತರರಾಷ್ಟ್ರೀಯ ಶತಕ ಸಿಡಿಸಿದ ದಾಖಲೆಯನ್ನು ಮುರಿದಿದ್ದಾರೆ.
  • ಮತ್ತೊಂದೆಡೆ ಅಭಿಷೇಕ್ ಶರ್ಮಾ ಎಬಿಡಿ ದಾಖಲೆಯನ್ನೂ ಬ್ರೇಕ್ ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವೇಗದ ಶತಕ ಬಾರಿಸೋ ಮೂಲಕ ಅಭಿಷೇಕ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಪೂರ್ಣ ಸದಸ್ಯತ್ವ ಪಡೆದಿರುವ ದೇಶಗಳ ಆಟಗಾರರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರ ದಾಖಲೆ ಮುರಿದಿದ್ದಾರೆ.  ಎಬಿ ಡಿ, ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಬಾರಿಸಿದ್ದರು.
  • ಟೀಂ ಇಂಡಿಯಾ ಮಾಜಿ ಆಟಗಾರ ಬದರಿನಾಥ್ ಭಾರತ T20 ತಂಡದಲ್ಲಿ ಓಪನರ್‌ಗಳನ್ನು ಪದೇ ಪದೇ ಬದಲಾಯಿಸುವ ಆಯ್ಕೆ ಸಮಿತಿಯ ನಡೆಯನ್ನು ಟೀಕಿಸಿದ್ದಾರೆ. ವೈಭವ್‌ ಚಾನ್ಸ್‌ಗಾಗಿ ಕಾಯಬೇಕು. ಸಂಜು, ವಿಶ್ವಕಪ್ ಗೆದ್ದುಕೊಟ್ಟ ಆಟಗಾರ. ಭಾರತದ ಪರ ಮುಂದಿನ 10 ಪಂದ್ಯಗಳಲ್ಲಿ ಅಭಿಷೇಕ್‌ ಮತ್ತು ಸಂಜು ಇನ್ನಿಂಗ್ಸ್ ಆರಂಭಿಸಬೇಕು. ಆ ಬಳಿಕವೂ ಸಂಜು ವಿಫಲರಾದ್ರೆ ಮಾತ್ರ ಅವರನ್ನು ಕೈಬಿಡಬೇಕು. ಅದನ್ನು ಬಿಟ್ಟು ಪ್ರತಿ ಸರಣಿಯಲ್ಲೂ ಬದಲಾಯಿಸುತ್ತಾ ಪ್ರಯೋಗ ಮಾಡುವುದು ಸಂಜುಗೆ ಮಾಡುವ ಅನ್ಯಾಯ ಎಂದು ಬದ್ರಿನಾಥ್ ಹೇಳಿದ್ದಾರೆ.
  • ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡದಿರಲು ಸಂಜು ಸ್ಯಾಮ್ಸನ್ ಅವರ ಹಿಂದಿನ ಅತ್ಯುತ್ತಮ ಪ್ರದರ್ಶನವೇ ಕಾರಣ ಎಂದು ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ. ಯುವ ಆಟಗಾರ ವೈಭವ್ ತಮ್ಮ ಸರದಿಗಾಗಿ ಕಾಯಲೇಬೇಕು, ಅವಕಾಶ ಸಿಕ್ಕಾಗ ದೀರ್ಘಕಾಲ ತಂಡದಲ್ಲಿ ಮುಂದುವರಿಯಲು ಬೆಂಬಲ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
  • ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕ‌ರ್ ಅಧಿಕಾರಾವಧಿ ಈ ತಿಂಗಳ ಕೊನೆಗೆ ಮುಕ್ತಾಯಗೊಳ್ಳಲಿದೆ. BCCI ಅವರಿಗೆ ವಿಸ್ತರಣೆ ನೀಡುವ ಮುನ್ಸೂಚನೆ ಕಾಣಿಸುತ್ತಿಲ್ಲ. ಹೀಗಾಗಿ ಅಗರ್ಕರ್ ನಿರ್ಗಮನ ಬಹುತೇಕ ಖಚಿತ ಎನ್ನಲಾಗಿದೆ. ಇದೀಗ ಅಗರ್ಕ‌ರ್ ಸ್ಥಾನಕ್ಕೆ ಮಾಜಿ ಕ್ರಿಕೆಟಿಗರಾದ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಹೆಸರು ಮುಂಚೂಣಿಯಲ್ಲಿವೆ. BCCI ಇಬ್ಬರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದೆ.
  • ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಯಮರಾಜನಾಗಿ ಕಾಣಿಸಿಕೊಂಡಿದ್ದಾರೆ. ಯಮರಾಜನಂತೆ ವೇಷ ಧರಿಸಿರುವ ಫೋಟೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಮಾಡಿ, ಡೆತ್ ಓವರ್‌ಗಳಲ್ಲ! ಬ್ಯಾಟಿಂಗ್ ಮಾಡಲು ಅಲ್ಲ, ನೇರವಾಗಿ ಜೀವನದ ಸ್ಕೋರ್‌ಕಾರ್ಡ್ ಪರಿಶೀಲಿಸಲು ಬರುತ್ತಿದ್ದೇನೆ ಕ್ಯಾಪ್ಶನ್‌ ನೀಡಿದ್ದಾರೆ. ಅಂದ್ಹಾಗೆ ಸೆಹ್ವಾಗ್‌ ಈ ವೇಷ ಧರಿಸಿದ್ದು ಒಟಿಟಿಯಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿರುವ ರೈಸ್ ಆಂಡ್ ಫಾಲ್ ಸೀಸನ್ 2 ಎಂಬ ರಿಯಾಲಿಟಿ ಶೋನ ಪ್ರಚಾರಕ್ಕಾಗಿ.
  • ಕ್ರಿಕೆಟರ್ ಪೃಥ್ವಿ ಶಾ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಮಾರ್ಚ್ 8 ರಂದು ಅಕೃತಿ ಅಗರ್ವಾಲ್ ಮತ್ತು ಪೃಥ್ವಿ ಶಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ನಡುವೆ ಬಿರುಕು ಮೂಡಿದ್ದು ಒಮ್ಮತದಿಂದಲೇ ದೂರವಾಗುತ್ತಿದ್ದೇವೆ ಎಂದು ಇಬ್ಬರೂ ಮಾಹಿತಿ ನೀಡಿದ್ದಾರೆ. ನಮ್ಮಿಬ್ಬರ ದಾರಿಗಳು ಬೇರೆ ಬೇರೆಯಾಗಿದ್ದು, ಇದನ್ನು ಅರಿತುಕೊಂಡ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಆಕೃತಿ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.
  • 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಿವೆ. ಮಳೆಯಿಂದಾಗಿ ಬಾಂಗ್ಲಾದೇಶ-ಚೀನಾ ಪಂದ್ಯ ರದ್ದಾಗಿದ್ದು, ರ್ಯಾಂಕಿಂಗ್ ಕಾರಣ ಒಂದೂ ಪಂದ್ಯವನ್ನಾಡದೇ, ಚೀನಾ ಹೊರಬಿದ್ದಿದೆ. ಬಾಂಗ್ಲಾದೇಶ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮತ್ತೊಂದೆಡೆ, ಮಳೆಯಿಂದಾಗಿ 11 ಓವರ್‌ಗಳಿಗೆ ಸೀಮಿತಗೊಂಡ ಪಾಕಿಸ್ತಾನ-ಥೈಲ್ಯಾಂಡ್ ಪಂದ್ಯದಲ್ಲಿ ಪಾಕಿಸ್ತಾನ ರೋಚಕ ಜಯ ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

Shantha Kumari

Leave a Reply

Your email address will not be published. Required fields are marked *