ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಅಫ್ಘಾನ್ ಸುಸ್ತು – 403ರನ್‌ಗಳ ಬಿಗ್ ಟಾರ್ಗೆಟ್ ನೀಡಿದ ಗಿಲ್ ಪಡೆ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಎರಡನೇ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಫ್ಘಾನ್‌ಗೆ ಬಿಗ್ ಟಾರ್ಗೆಟ್ ನೀಡಿದೆ. ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾದ ಆಟಗಾರರು 402 ರನ್‌ಗಳಿಸಿ ಆಲ್‌ಔಟ್ ಆಗಿದ್ದಾರೆ. ಈ ಮೂಲಕ ಅಫ್ಘಾನ್‌ಗೆ 403 ರನ್‌ಗಳ ಬಿಗ್ ಟಾರ್ಗೆಟ್‌ನ್ನ ಟೀಂ ಇಂಡಿಯಾ ನೀಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತರೂ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆಯಿತು.. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದಾರೆ. ಅಫ್ಘನ್ ಬೌಲರ್ಗಳ ಬೆವರಿಳಿಸಿ ಕೇವಲ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ಸೂಪರ್ ಡೂಪರ್ ಬ್ಯಾಟಿಂಗ್ ಮುಂದುವರೆಸಿದ ಗಿಲ್ 77 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದರು. ನಾಯಕನಾದ ಬಳಿಕ ಗಿಲ್ ಅವರ ಮೊದಲ ಏಕದಿನ ಶತಕವೂ ಇದಾಗಿದೆ. ಈ ಪಂದ್ಯದಲ್ಲಿ ಗಿಲ್ 110 ಬಾಲ್‌ನಲ್ಲಿ 154 ರನ್‌ಗಳಿಸಿ, ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು.
ಏಕದಿನ ವೃತ್ತಜೀವನದ ಎರಡನೇ ಶತಕ ಸಿಡಿಸಿದ ಗಿಲ್
ಇಶಾನ್ ಕಿಶನ್ ಕೂಡ ತಮ್ಮ ಏಕದಿನ ವೃತ್ತಜೀವನದ ಎರಡನೇ ಶತಕವನ್ನು ಬಾರಿಸಿದರು. ಕಿಶನ್ ಕೇವಲ 71 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ತಮ್ಮ ಶತಕ ಪೂರೈಸಿದರು. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಇಶಾನ್ ಕಿಶನ್ 52 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಂದರೆ ಆರಂಭದಲ್ಲಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಕಿಶನ್, ಅರ್ಧಶತಕದ ನಂತರ ಕೇವಲ 19 ಎಸೆತಗಳಲ್ಲಿ 100 ರನ್‌ಗಳ ಗಡಿ ದಾಟಿದರು. ಶತಕದ ಬಳಿಕ ಕಿಶನ್ 79 ಎಸೆತಗಳಲ್ಲಿ ಏಳು ಸಿಕ್ಸರ್‌ಗಳು ಮತ್ತು 14 ಬೌಂಡರಿಗಳ ಸಹಿತ 125 ರನ್ ಬಾರಿಸಿ ಔಟಾದರು.
ಕೆಎಲ್ ರಾಹುಲ್ ಗೋಲ್ಡನ್ ಡಕೌಟ್
ಸಾಕಷ್ಟು ನೀರಿಕ್ಷೆ ಮೂಡಿಸಿದ್ದ ಕೆಎಲ್ ರಾಹುಲ್ ಗೋಲ್ಡನ್ ಡಕೌಟ್ ಆದ್ರು. ಗ್ರಿಸ್‌ಗಿಳಿದ ಮೊದಲ ಬಾಲ್‌ನಲ್ಲೇ ಔಟ್ ಆದ ನಿರಾಸೆಯಿಂದ ಪೆವಿಲಿಯನ್ ಸೇರಿದ್ರು. ಇನ್ನೂ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 4 ರನ್, ರೋಹಿತ್ ಶರ್ಮಾ 48 , ಶ್ರೇಯಸ್ ಅಯ್ಯರ್ 26 , ಸುಂದರ್ 19 ಸೇರಿದಂತೆ ಉಳಿದ ಆಟಗಾರರು ಒಂದಂಕಿ ರನ್‌ಗಳಿಸಿ ಔಟ್ ಆದ್ರು. ಈ ಮೂಲಕ ಅಫ್ಘಾನ್ ಗೆಲುವಿಗೆ 403 ರನ್‌ಗಳ ಟಾರ್ಗೆಟ್ ನೀಡಿದ್ದಾರೆ.

ನೋಡಿರಿ

