ಟೀಮ್ ಇಂಡಿಯಾ ಆಟಗಾರರ ಭಾರತ ಪರ್ಯಟನೆ – ಸ್ಟೇಡಿಯಂಗಳು ಫುಲ್ ಹೌಸ್ ಆಗಲು ಕ್ರಿಕೆಟರ್ಸ್ ಟೂರ್..!

ಟೀಮ್ ಇಂಡಿಯಾ ಆಟಗಾರರ ಭಾರತ ಪರ್ಯಟನೆ – ಸ್ಟೇಡಿಯಂಗಳು ಫುಲ್ ಹೌಸ್ ಆಗಲು ಕ್ರಿಕೆಟರ್ಸ್ ಟೂರ್..!

ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಭಾರತ ಪರ್ಯಟನೆ ಮಾಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಆಟಗಾರರು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಬೇರೆ ತಂಡಗಳಿಗೆ ಹೋಲಿಸಿದರೆ, ಟೀಮ್ ಇಂಡಿಯಾ ಆಟಗಾರರ ಪ್ರಯಾಣವೇ ಜಾಸ್ತಿ. ಅಷ್ಟೇ ಅಲ್ಲ, ಉಳಿದ ತಂಡಗಳಿಗಿಂತಲೂ ಟೀಂ ಇಂಡಿಯಾದ ಟ್ರಾವೆಲಿಂಗ್​ ಶೆಡ್ಯೂಲ್​ ಫುಲ್ ಡಿಫರೆಂಟ್ ಆಗಿದೆ. ಯಾಕೆ, ಈ ರೀತಿ ಟೀಮ್ ಇಂಡಿಯಾ ಆಟಗಾರರು ದೇಶ ಸುತ್ತಬೇಕು. ಬೇರೆ ಬೇರೆ ಗ್ರೌಂಡ್‌ನಲ್ಲಿ ಆಟವಾಡಬೇಕು ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ:ಸೋತ ಪಾಕಿಸ್ತಾನ ಪರವಾಗಿ Sorry ಕೇಳಿದ ಅಬ್ದುಲ್ಲಾ ಶಫೀಕ್ – ಪಾಕ್ ತಂಡದ ಫಿಟ್‌ನೆಸ್ ಬಗ್ಗೆ ಮಾಜಿ ನಾಯಕ ವಾಸಿಂ ಅಕ್ರಮ್ ಟೀಕೆ

ಈ ಬಾರಿಯ ವರ್ಲ್ಡ್​​ಕಪ್​​ನಲ್ಲಿ ಟೀಂ ಇಂಡಿಯಾ ತನ್ನ ಪ್ರತಿ ಮ್ಯಾಚ್​​ನ್ನ ಬೇರೆ ಬೇರೆ ಗ್ರೌಂಡ್​​ನಲ್ಲಿ ಆಡುತ್ತಿದೆ. ಒಂದೇ ಗ್ರೌಂಡ್​​ನಲ್ಲಿ ಎರಡೆರಡು ಮ್ಯಾಚ್​​ಗಳನ್ನ ಆಡುತ್ತಿಲ್ಲ. ಬೇರೆಲ್ಲಾ ಟೀಂಗಳು ಒಂದೇ ಗ್ರೌಂಡ್​​ನಲ್ಲಿ ಎರಡೆರಡು ಪಂದ್ಯಗಳನ್ನ ಆಡುತ್ತಿವೆ. ಆದ್ರೆ ನಮ್ಮವರು ಮಾತ್ರ ಪ್ರತಿ ಮ್ಯಾಚ್​​ಗೂ ಬೇರೆ ಬೇರೆ ಸಿಟಿಯಲ್ಲಿರುವ ಗ್ರೌಂಡ್​​ಗಳಿಗೆ ಹೋಗಲೇಬೇಕು. ಪ್ರತಿ ಮ್ಯಾಚ್ ಮುಗಿದಾಗಲೂ ಆ ದಿನ ರಾತ್ರಿ ಮಾತ್ರ ಪಂದ್ಯ ನಡೆದ ನಗರದ ಸಿಟಿಯಲ್ಲಿ ಉಳಿದುಕೊಂಡಿರ್ತಾರೆ. ಮರುದಿನ ಬ್ಯಾಗ್​ ಪ್ಯಾಕ್ ಮಾಡಿ ವಿಮಾನ ಏರಿ.. ಮತ್ತೊಂದು ಸಿಟಿಯಲ್ಲಿ ಲ್ಯಾಂಡ್​​ ಆಗಿ.. ಹೋಟೆಲ್​​ಗೆ ಹೋಗಿ ಗ್ರೌಂಡ್​​ಗೆ ಎಂಟ್ರಿ ಕೊಡ್ತಾರೆ. ಟೂರ್ನಿಯುದ್ದಕ್ಕೂ ಟೀಂ ಇಂಡಿಯಾದ ಶೆಡ್ಯೂಲ್​​ ಇದೇ ರೀತಿ ಇದೆ. ಈಗ ರೌಂಡ್ ರಾಬಿನ್​ ಸ್ಟೇಜ್​ನಲ್ಲಿ ಟೀಂ ಇಂಡಿಯಾ ಆಡುತ್ತಿರುವ ಎಲ್ಲಾ 9 ಮ್ಯಾಚ್​ಗಳು ಕೂಡ 9 ಸ್ಟೇಡಿಯಂಗಳಲ್ಲಿ ನಡೀತಿದೆ. ಆದರೆ, ಬೇರೆ ಟೀಂಗಳದ್ದು ಹಾಗಲ್ಲ.. ಒಂದೇ ಗ್ರೌಂಡ್​ನಲ್ಲಿ ಮೇಲಿಂದ ಮೇಲೆ ಎರಡು, ಮೂರು ಮ್ಯಾಚ್​ಗಳನ್ನ ಆಡ್ತಿವೆ. ಆದ್ರೆ ಟೀಂ ಇಂಡಿಯಾ ವರ್ಲ್ಡ್​​ಕಪ್ ಮ್ಯಾಚ್​ಗಳನ್ನಾಡೋಕೆ ಭಾರತ ಪರ್ಯಟನೆ ನಡೆಸ್ತಿದೆ. ದೇಶದ ಉದ್ದಗಲಕ್ಕೂ ಟೀಂ ಇಂಡಿಯಾದ ಆಟಗಾರರು ಪ್ರಯಾಣ ಮಾಡ್ತಿದ್ದಾರೆ. ಟೀಂ ಇಂಡಿಯಾ ಪ್ಲೇಯರ್ಸ್​​ಗಳ ಪ್ರಯಾಣಕ್ಕೆ ಅಂತಾನೆ ಪ್ರತ್ಯೇಕ ಪ್ರೈವೇಟ್ ಜೆಟ್​​ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ನಡೆದ ಮರುದಿನ ಮಧ್ಯಾಹ್ನ ಊಟದ ಬಳಿಕ ಟೀಂ ಇಂಡಿಯಾ ಫ್ಲೈಟ್ ಟೇಕಾಫ್ ಆಗುತ್ತೆ.

ಆದ್ರೆ ಎಲ್ಲಾ ಕಡೆಗೂ ಈ ಪ್ರೈವೇಟ್ ಜೆಟ್ ಪ್ರಯಾಣ ಅಷ್ಟೊಂದು ಸುಲಭವಾಗಿಲ್ಲ. ಹಿಮಾಚಲಪ್ರದೇಶದ ಧರ್ಮಶಾಲಾ ಮತ್ತು ಅಸ್ಸಾಂನ ಗುವಾಹಟಿಗೆ ಪ್ರತ್ಯೇಕ ಪ್ರೈವೇಟ್​ ಜೆಟ್​ ವ್ಯವಸ್ಥೆ ಮಾಡಲಾಗುತ್ತೆ. ಇತರೆ ಸಿಟಿಗಳಿಗೆ ತೆರಳುವ ಪ್ರೈವೇಟ್​ ಜೆಟ್​ಗೂ.. ಗುವಾಹಟಿ ಮತ್ತು ಧರ್ಮಶಾಲಾಗೆ ಹೋಗೋ ಪ್ರೈವೇಟ್​ ಜೆಟ್​ಗೂ ವ್ಯತ್ಯಾಸವಿದೆ. ಯಾಕಂದ್ರೆ, ಧರ್ಮಶಾಲಾ ಮತ್ತು ಗುವಾಹಟಿ ಬೆಟ್ಟ ಪ್ರದೇಶಗಳಾಗಿರೋದ್ರಿಂದ ಅದಕ್ಕೆ ಸೂಕ್ತವಾದ ವಿಮಾನದ ವ್ಯವಸ್ಥೆ ಮಾಡಲಾಗಿದೆ.

ಹಾಗಿದ್ರೆ ಟೀಂ ಇಂಡಿಯಾದ ಪ್ರತಿ ಮ್ಯಾಚ್​​ಗಳನ್ನ ಕೂಡ ಬೇರೆ ಬೇರೆ ಸ್ಟೇಡಿಯಂನಲ್ಲಿ ನಿಗದಿ ಮಾಡಿರೋದ್ಯಾಕೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಅದಕ್ಕೆ ಕಾರಣ ಇಷ್ಟೇ.. ಟೀಂ ಇಂಡಿಯಾ ಆಡುವ ಪಂದ್ಯಗಳಿಗೆ ಮಾತ್ರ ಸ್ಟೇಡಿಯಂಗಳು ಫುಲ್ ಹೌಸ್ ಆಗ್ತಿವೆ. ಟೀಂ ಇಂಡಿಯಾದ ಆಟ ಎಲ್ಲರಿಗೂ ನೋಡೋಕೆ ಸಿಗಲಿ.. ಹಣ ಹರಿದು ಬರಲಿ ಅನ್ನೋ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಐಸಿಸಿ,, ಬಿಸಿಸಿಐಗೆ ಈ ವರ್ಲ್ಡ್​​ಕಪ್​ ಟೂರ್ನಿಯಿಂದ ಲಾಭವಾಗಬೇಕಿದ್ರೆ ಟೀಂ ಇಂಡಿಯಾ ಆಟಗಾರರು ಪ್ರತಿ ಪಂದ್ಯದ ಬಳಿಕವೂ ಗಂಟು ಮೂಟೆ ಕಟ್ಟಲೇಬೇಕು. ಬೇರೆ ನಗರಗಳಲ್ಲಿ ಟೀಂ ಇಂಡಿಯಾದ ಮ್ಯಾಚ್ ನೋಡೋಕೆ ಮಾತ್ರ ಜನ ಸೇರ್ತಾರೆ. ಈಗ ಬೆಂಗಳೂರಿನಲ್ಲಿ ಭಾರತೀಯ ತಂಡ ನೆದರ್​ಲ್ಯಾಂಡ್​​ನ್ನ ಎದುರಿಸಲಿದೆ. ನೆದರ್​​ಲ್ಯಾಂಡ್ ವಿರುದ್ಧವಾದ್ರೂ ಪರ್ವಾಗಿಲ್ಲ, ನಮ್ಮ ಪ್ಲೇಯರ್ಸ್​​ ಆಟ ನೋಡಿದ್ರೆ ಸಾಕು ಅಂತಾ ಜನ ಸ್ಟೇಡಿಯಂಗೆ ಬಂದೇ ಬರ್ತಾರೆ.

ಹೀಗಾಗಿ ಟೀಂ ಇಂಡಿಯಾದ ಮ್ಯಾಚ್​ಗಳು ಮಾತ್ರ ಬೇರೆ ಬೇರೆ ಸ್ಟೇಡಿಯಂಗಳಲ್ಲಿ ನಡೀತಿದೆ. ಈ ಎಲ್ಲಾ ಕಾರಣಗಳಿಂದ ಟೀಂ ಇಂಡಿಯಾದ ಶೆಡ್ಯೂಲ್​ ಕೂಡ ಡಿಫರೆಂಟ್​ ಆಗಿದೆ.

Sulekha