ಭುವಿ Vs ಪ್ರಿನ್ಸ್ Vs ಮಯಾಂಕ್! – ಬುಮ್ರಾಗೆ ವಿಶ್ವಕಪ್ ಬ್ಯಾಕಪ್ ಯಾರು?
NZ ಟೂರ್ ನಲ್ಲೇ ಸಲ್ಯೂಷನ್

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಆಲ್ ಫಾರ್ಮೆಟ್ ಲಾಂಗ್ ಸಿರೀಸ್ನಲ್ಲಿ ಆಲ್ರೆಡಿ 2 ಟಿ-20ಐ ಪಂದ್ಯಗಳು ಮುಗಿದಿವೆ. ಎರಡೂ ಮ್ಯಾಚಸ್ ಒಂದೇ ಗ್ರೌಂಡ್ನಲ್ಲಿ ನಡೆದಿದ್ದು ಈಗ ಮೂರನೇ ಪಂದ್ಯ ಮಂಗಳವಾರ ವೆಲ್ಲಿಂಗ್ಟನ್ ಮೈದಾನದಲ್ಲಿ ನಡೆಯಲಿದೆ. ಸರಣಿಯನ್ನ ಗೆಲ್ಬೇಕು ಅಂದ್ರೆ ಭಾರತಕ್ಕೆ ಈ ಮ್ಯಾಚ್ ತುಂಬಾನೇ ಮುಖ್ಯ. ಅಟ್ ದಿ ಸೇಮ್ ಟೈಂ ನ್ಯೂಜಿಲೆಂಡ್ ಟೂರ್ನಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಮಸ್ಯೆಗಳಿಗೂ ಸಲ್ಯೂಷನ್ ಸಿಗಲಿದೆ. ಜಸ್ಪ್ರೀತ್ ಬುಮ್ರಾಗೆ ಬ್ಯಾಕಪ್ ರೆಡಿ ಮಾಡಲು ಬಿಸಿಸಿಐ ಭರ್ಜರಿ ಪ್ಲ್ಯಾನ್ ಕೂಡ ರೆಡಿ ಮಾಡಿದೆ.
ಇದನ್ನೂ ಓದಿ : ಇಶಾನ್ ಔಟ್.. ವೈಭವ್ ಓಪನರ್ – ಭುವಿ ಬೌಲಿಂಗ್ ಮೇಲೆ BCCI ಕಣ್ಣು
ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್ ಗಳನ್ನ ಹೊಂದಿದ್ದು ಮೂರೂ ಮಾದರಿಯಲ್ಲೂ ಪ್ಲೇಯರ್ಸ್ ಬ್ಯುಸಿ ಇದ್ದಾರೆ. ಬ್ಯಾಟಿಂಗ್ನಲ್ಲಿ ಎಲ್ಲವೂ ಚೆನ್ನಾಗಿ ಕಾಣ್ತಿದ್ರೂ ಬೌಲಿಂಗ್ನಲ್ಲಿ ಮಾತ್ರ ತುಂಬಾನೇ ಎಕ್ಸ್ಪೆನ್ಸಿವ್ ಆಗ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಌಂಡ್ ಜಸ್ಪ್ರೀತ್ ಬುಮ್ರಾ ಆಬ್ಸೆನ್ಸ್ನ ಪಂದ್ಯಗಳಲ್ಲಿ ಬೌಲರ್ಗಳ ಸ್ಟ್ರಗಲ್ ಎದ್ದು ಕಾಣ್ತಿದೆ. ಆದ್ರೆ ನ್ಯೂಜಿಲೆಂಡ್ ವಿರುದ್ಧದ 10 ಪಂದ್ಯಗಳ ಸೀಮಿತ ಓವರ್‌ಗಳ ಸರಣಿಯು ತಂಡಕ್ಕೆ ಫಾಸ್ಟ್ ಬೌಲರ್ನ ಸಮಸ್ಯೆಗೆ ಸಲ್ಯೂಷನ್ ನೀಡುವ ನಿರೀಕ್ಷೆ ಇದೆ.
ಏಕದಿನ ವಿಶ್ವಕಪ್ ಗೆ ಬುಮ್ರಾ ಬ್ಯಾಕಪ್ ಫೈನಲ್ ಆಗ್ತಾರಾ?
ಸದ್ಯ ಭಾರತದ ಮುಂದಿನ ಅತಿದೊಡ್ಡ ಟಾರ್ಗೆಟ್ಟೇ 2027ರ ಏಕದಿನ ವಿಶ್ವಕಪ್. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರೋ ಟೂರ್ನಮೆಂಟ್ಗೆ ಬ್ಯಾಟಿಂಗ್ನಲ್ಲಿ ಆಲ್ಮೋಸ್ಟ್ ಪ್ಲೇಯರ್ಸ್ ಫೈನಲ್ ಆಗಿದ್ದಾರೆ. ಆದ್ರೆ ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಬಿಟ್ರೆ ಉಳಿದವ್ರು ಯಾರು ಅಥವಾ ಬುಮ್ರಾಗೆ ಬ್ಯಾಕಪ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅದೂ ಅಲ್ದೇ 2023 ರ ವಿಶ್ವಕಪ್ ಫೈನಲ್ ನಂತರ ಬುಮ್ರಾ ಕೇವಲ ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವರ್ಕ್ ಲೋಡ್ ಮತ್ತು ಫಿಟ್ನೆಸ್ಗಾಗಿ ಅವ್ರನ್ನ ಹೊರಗಿಡಲಾಗಿದೆ. ಆದ್ರೆ ಮುಂದಿನ ವರ್ಷದ ವಿಶ್ವಕಪ್ ತಂಡದಲ್ಲಿ ಬುಮ್ರಾ ಅವಕಾಶ ಪಡೆದ್ರೂ ಒಂದ್ವೇಳೆ ಇಂಜುರಿಯಾದ್ರೆ ಬ್ಯಾಕಪ್ನಲ್ಲಿ ಸ್ಟ್ರಾಂಗ್ ಪೇಸ್ ಬೌಲರ್ ಬೇಕೇಬೇಕು. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಸಿರೀಸ್ನಲ್ಲಿ ವೇಗದ ಬೌಲರ್‌ಗಳಲ್ಲಿ ಅರ್ಶ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್ ಮತ್ತು ಮಾಯಾಂಕ್ ಯಾದವ್, ಸೀಮ್ ಬೌಲಿಂಗ್ ಆಲ್‌ರೌಂಡರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಶಿವಂ ದುಬೆ ಇದ್ದಾರೆ. 36 ವರ್ಷದ ಭುವನೇಶ್ವರ್ ಕುಮಾರ್ ಮೇಲೆಯೂ ಎಲ್ಲರ ಕಣ್ಣುಗಳಿವೆ. 4 ವರ್ಷಗಳ ಬಳಿಕ ತಂಡಕ್ಕೆ ಕಂ ಬ್ಯಾಕ್ ಮಾಡಿರೋದ್ರಿಂದ ಏಕದಿನ ಸರಣಿಗಳಿಗೂ ಭುವಿ ಸೆಲೆಕ್ಟ್ ಆಗ್ಬೇಕು ಅಂದ್ರೆ ನ್ಯೂಜಿಲೆಂಡ್ನಲ್ಲಿ ಟಿ-20ಐ ಸಿರೀಸ್ನಲ್ಲಿ ಸದ್ದು ಮಾಡಲೇಬೇಕಿದೆ. ಮತ್ತೊಂದೆಡೆ ಅರ್ಷದೀಪ್ ಸಿಂಗ್ 100 ಟಿ-20ಐ ಪಂದ್ಯಗಳನ್ನ ಆಡಿದ್ರೂ ಕೂಡ ಏಕದಿನದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. 2022 ರಲ್ಲಿ ಆಕ್ಲೆಂಡ್‌ನಲ್ಲಿ ಪಾದಾರ್ಪಣೆ ಮಾಡಿದ ನಂತರ ಕೇವಲ 18 ODI ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. ಪ್ರಸ್ತುತ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ವಿಶ್ವಕಪ್‌ಗೆ ಭಾರತದ ಮೊದಲ ಆಯ್ಕೆಯ ವೇಗದ ಬೌಲರ್ಗಳಾಗಿ ಕಾಣ್ತಿದ್ದಾರೆ. ಆದ್ರೆ ಗೇಮ್ ಚೇಂಜರ್ ಆಗಿ ಯಾರು ಕಾಣಿಸಿಕೊಳ್ತಾರೆ ನೋಡ್ಬೇಕಿದೆ. ಈಗಾಗಲೇ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಬೌಲರ್ಗಳ ಎಕ್ಸ್ಪೆರಿಮೆಂಟ್ ಟೈಂ ಎಲ್ಲಾ ಮುಗಿದಿದೆ ಅಂದಿದ್ದಾರೆ. ಇನ್ನು ಹರ್ಷಿತ್ ರಾಣಾ ಆಡದೇ ಇದ್ರೆ ಕೆಳ ಕ್ರಮಾಂಕದ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸೋಕೆ ಅನ್ಶುಲ್ ಕಾಂಬೋಜ್ 8ನೇ ಸ್ಥಾನ ಪಡೆಯುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಅವರ ಇಂಜುರಿ ನಡುವೆ ಅವ್ರಿಂದ 10 ಓವರ್‌ಗಳ ಬೌಲಿಂಗ್ ಸಾಧ್ಯನಾ ಅನ್ನೋದೇ ಇಲ್ಲಿರೋ ಪ್ರಶ್ನೆ. ಹೀಗಾಗಿ ಆಲ್‌ರೌಂಡರ್ ರೋಲ್ನಲ್ಲಿ ನಿತೀಶ್ ರೆಡ್ಡಿ ಮುಂಚೂಣಿಯಲ್ಲಿದ್ದಾರೆ. ಒಟ್ನಲ್ಲಿ ಭಾರತದ ಮಟ್ಟಿಗೆ ಬೌಲಿಂಗ್ನಲ್ಲಿ ಸಾಕಷ್ಟು ಆಪ್ಶನ್ಸ್ ಇದ್ರೂ ಫೈನಲ್ ಮಾಡೋ ಥರ ಇಂಪ್ಯಾಕ್ಟ್ ಮಾಡ್ತಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20ಐ ಸರಣಿ ಮತ್ತು 5 ಪಂದ್ಯಗಳ ಏಕದಿನ ಸರಣಿ ಮುಗಿಯೋ ಹೊತ್ತಿಗೆ ಒಂದು ಕ್ಲಾರಿಟಿ ಅಂತೂ ಸಿಗಲಿದೆ.

ನೋಡಿರಿ
