NZ ಟೂರ್ ನಲ್ಲಿ BCCI ಬ್ಲಂಡರ್! – ODIಗೆ ಗಿಲ್ ಬಿಟ್ಟು ಶ್ರೇಯಸ್ ಕ್ಯಾಪ್ಟನ್
ಪ್ರಾಕ್ಟೀಸ್ ಇಲ್ಲದೇ ಪಲ್ಟಿ ಹೊಡೆದ್ರಾ?

NZ ಟೂರ್ ನಲ್ಲಿ BCCI ಬ್ಲಂಡರ್! – ODIಗೆ ಗಿಲ್ ಬಿಟ್ಟು ಶ್ರೇಯಸ್ ಕ್ಯಾಪ್ಟನ್ಪ್ರಾಕ್ಟೀಸ್ ಇಲ್ಲದೇ ಪಲ್ಟಿ ಹೊಡೆದ್ರಾ?

ಟೀಂ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್ ಫಿಕ್ಸ್ ಆಗಿದೆ. ಅದ್ರಲ್ಲೂ ನೆಕ್ಸ್​ಟ್ ಮಂತ್ ಎಂಡ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಲ್ ಫಾರ್ಮೆಟ್ ಲಾಂಗ್ ಸಿರೀಸ್ ಇದೆ. ಟಿ-20ಐ, ಒಡಿಐ ಅದಾದ್ಮೇಲೆ ಟೆಸ್ಟ್. ಹೀಗೆ ಒಂದೂವರೆ ತಿಂಗಳು ಕಂಪ್ಲೀಟ್ ಪಂದ್ಯಗಳೇ. ಆದ್ರೆ ಈ ಶೆಡ್ಯೂಲ್​ನಲ್ಲಿ ಬಿಸಿಸಿಐ ಒಂದು ಎಡವಟ್ಟು ಮಾಡಿದೆ. ಪ್ರಾಕ್ಟೀಸ್​ಗೂ ಟೈಂ ಕೊಡದೇ ಡೇಟ್ ಫೈನಲ್ ಮಾಡಿದೆ. ಇದ್ರ ಎಫೆಕ್ಟ್​ ಈಗ ಕ್ಯಾಪ್ಟನ್ಸಿಗೂ ತಟ್ಟಿದೆ. ನಾಯಕತ್ವವನ್ನೇ ಬದಲಿಸಬೇಕಿದೆ. ಒಂದ್ಕಡೆ ಏಕದಿನ ವಿಶ್ವಕಪ್ ಮತ್ತೊಂದ್ಕಡೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್.

ಇದನ್ನೂ ಓದಿ : ಸೆ.28ರಿಂದ 3 ದಿನ ಬ್ಯಾಂಕ್ ಬಂದ್! – SBI ಗ್ರಾಹಕರಿಗೆ ಮಹತ್ವದ ಸೂಚನೆ

ಭಾರತ ಕ್ರಿಕೆಟ್ ತಂಡ ನೆಕ್ಸ್​ಟ್ ವೀಕ್​ನಿಂದ ಟಿ-20 ಹಾಗೇ ಏಕದಿನ ಎರಡೂ ಫಾರ್ಮೆಟ್​ಗಳಲ್ಲೂ ಬ್ಯುಸಿ ಆಗಲಿದೆ. ಒಂದ್ಕಡೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಏಷ್ಯನ್ ಗೇಮ್ಸ್​ನಲ್ಲಿ ಟಿ-20 ಮಾದರಿ ಪಂದ್ಯಗಳನ್ನ ಆಡಿದ್ರೆ ಮತ್ತೊಂದೆಡೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳೀತಾರೆ. ಅದಾದ್ಮೇಲೆ ವಿಂಡೀಸ್ ವಿರುದ್ಧ ಟಿ-20ಐ ಸರಣಿಯೂ ಇದೆ. ಹೀಗೆ ವಿಂಡೀಸ್ ಸರಣಿ ಮುಗಿದ್ಮೇಲೆ ಭಾರತಕ್ಕೆ ಎದುರಾಗೋ ಅತಿದೊಡ್ಡ ಟಾಸ್ಕ್ ಅಂದ್ರೆ ನ್ಯೂಜಿಲೆಂಡ್ ಪ್ರವಾಸ. ಇದೇ ವರ್ಷದ ಆರಂಭದಲ್ಲಿ ಅಂದ್ರೆ ಜನವರಿಯಲ್ಲಿ ನ್ಯೂಜಿಲೆಂಡ್ ತಂಡವು ಭಾರತಕ್ಕೆ ಪ್ರವಾಸ ಕೈಗೊಂಡಿದ್ದರೆ, ವರ್ಷದ ಕೊನೆಯಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಇದೇ ಪ್ರವಾಸವೇ ಈಗ ಪ್ರೆಶರ್ ಕ್ರಿಯೇಟ್ ಮಾಡಿದೆ.

ನ್ಯೂಜಿಲೆಂಡ್ ವಿರುದ್ಧ ಮೂರೂ ಮಾದರಿಯಲ್ಲೂ ಭಾರತ ಫೈಟ್!

ಭಾರತ ತಂಡವು ಅಕ್ಟೋಬರ್ 22 ರಿಂದ ನ್ಯೂಜಿಲೆಂಡ್‌ನಲ್ಲಿ ಸುದೀರ್ಘ ಪಂದ್ಯಗಳನ್ನಾಡಲಿದೆ.  ಒಟ್ಟು 5 ಟಿ20ಐ, 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳು ನಡೆಯಲಿದೆ. ಡಿಸೆಂಬರ್ 1ರವೆರೆಗೆ ಪಂದ್ಯಗಳು ಶೆಡ್ಯೂಲ್ ಆಗಿದೆ. ಮೊದ್ಲಿಗೆ ಪಂದ್ಯಗಳ ಶೆಡ್ಯೂಲ್ ಹೇಗಿದೆ ನೋಡೋಣ.

ಟೀಂ ಇಂಡಿಯಾ ಫುಲ್ ಬ್ಯುಸಿ!

ಅಕ್ಟೋಬರ್ 22, 24, 27, 30 ಹಾಗೇ ನ.1 ರಂದು ಟಿ-20ಐ ಪಂದ್ಯಗಳು

ನವೆಂಬರ್ 4, 7, 10, 13, 15 ರಂದು 5 ಪಂದ್ಯಗಳ ಏಕದಿನ ಸರಣಿ

ನ.19ರಿಂದ 23 ಹಾಗೂ ನ.27ರಿಂದ ಡಿ.1ರವರೆಗೆ ಟೆಸ್ಟ್ ಪಂದ್ಯಗಳು

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯ ಹಾಗೇ ಮೊದಲ ಟೆಸ್ಟ್ ಪಂದ್ಯಕ್ಕೆ ಕೇವಲ ನಾಲ್ಕು ದಿನಗಳ ಗ್ಯಾಪ್ ಅಷ್ಟೇ ಇದೆ. ಹೀಗಾಗಿ ವೈಟ್ ಬಾಲ್ ಫಾರ್ಮೆಟ್​ನಿಂದ ಟೆಸ್ಟ್ ಫಾರ್ಮೆಟ್​​ ಮೈಂಡ್​ಸೆಟ್​ಗೆ ಆಟಗಾರರು ಬರೋಕೆ ಸ್ವಲ್ಪ ಟೈಂ ಬೇಕಾಗುತ್ತೆ. ಌಂಡ್ ಪ್ರಾಕ್ಟೀಸ್​ಗೂ ಹೆಚ್ಚಿನ ಟೈಂ ಸಿಗಲ್ಲ,. ಯಾವುದೇ ಅಭ್ಯಾಸ ಪಂದ್ಯಗಳು ಅಥವಾ ಪ್ರಾಂತೀಯ ತಂಡದ ವಿರುದ್ಧ ಅಭ್ಯಾಸ ಪಂದ್ಯವಿಲ್ಲ. ಏಕದಿನ ತಂಡದಲ್ಲಿ ಆಡುವ ಸಾಕಷ್ಟು ಆಟಗಾರರು ಟೆಸ್ಟ್ ತಂಡದಲ್ಲೂ ಆಡ್ತಾರೆ. ಌಂಡ್ ಎರಡೂ ಮಾದರಿಗೂ ಕ್ಯಾಪ್ಟನ್ ಕೂಡ ಶುಭ್​ಮನ್ ಗಿಲ್ ಒಬ್ರೇ ಆಗಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಪ್ರವಾಸದ ಏಕದಿನ ಸರಣಿಗೆ ಕ್ಯಾಪ್ಟನ್ಸಿ ಡಿವೈಡ್ ಮಾಡೋ ಚಾನ್ಸಸ್ ಇದೆ. ಮೊದಲ ಮೂರು ಪಂದ್ಯಗಳನ್ನ ಗಿಲ್ ಲೀಡ್ ಮಾಡಿದ್ರೆ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳೋ ಸಾಧ್ಯತೆಗಳಿವೆ. ಆಗ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಕೆಲ ಪ್ಲೇಯರ್​ಗಳಿಗೆ ರೆಸ್ಟ್ ನೀಡೋ ಸಾಧ್ಯತೆಗಳೂ ಇವೆ. ಶುಭಮನ್ ಗಿಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಎರಡೂ ಫಾರ್ಮೆಟ್​​ನಲ್ಲಿ ಆಡ್ತಾರೆ. ಹೀಗಾಗಿ ಡಿವೈಡ್ ಮಾಡಬೇಕಾದ ಅನಿವಾರ್ಯತೆ ಇದೆ. ಌಂಡ್ ಇಲ್ಲಿ ಬರೀ ಪ್ಲೇಯರ್ಸ್ ಅಷ್ಟೇ ಅಲ್ಲ ಮುಖ್ಯ ಕೋಚ್ ಗೌತಮ್ ಗಂಭೀರ್, ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್, ಸಹಾಯಕ ಕೋಚ್ ಸೀತಾಂಶು ಕೊಟಕ್ ಮತ್ತು ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ ಅವರನ್ನು ಎರಡು ಗುಂಪುಗಳಾಗಿ ಡಿವೈಡ್ ಮಾಡಲಾಗುತ್ತೆ.  ಕೊನೆಯ ಎರಡು ಏಕದಿನ ಪಂದ್ಯಗಳ ವೇಳೆ ಸಹಾಯಕ ಸಿಬ್ಬಂದಿಯ ಇಬ್ಬರು ಸದಸ್ಯರು ಮೌಂಟ್ ಮೌಂಗನುಯಿಯಲ್ಲಿಯೇ ಉಳಿಯಲಿದ್ದಾರೆ, ಆದರೆ ಉಳಿದ ಇಬ್ಬರು ಟೆಸ್ಟ್ ತಂಡದೊಂದಿಗೆ ಕೆಲಸ ಮಾಡಲು ಮುಂಚಿತವಾಗಿ ಮೊದಲ ಟೆಸ್ಟ್ ನಡೆಯುವ ವೆಲ್ಲಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ. ಹೀಗೆ ಮ್ಯಾನೇಜ್​ಮೆಂಟ್ ಒಂದು ರೀತಿ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಅಷ್ಟಕ್ಕೂ ಇಲ್ಲಿ ಟೀಂ ಡಿವೈಡ್ ಮಾಡಿದ್ರೆ ಅಥವಾ ಮಾಡದೇ ಇದ್ರೆ ಆಗುವ ಎಫೆಕ್ಟ್​ ಏನು ಅನ್ನೋದನ್ನ ನೋಡೋಣ.

ಪ್ರಾಕ್ಟೀಸ್ ಇಲ್ಲದಿದ್ರೆ ಪಲ್ಟಿ!

ಏಕದಿನ ಮತ್ತು ಟೆಸ್ಟ್ ಪಂದ್ಯಗಳ ನಡುವೆ ಉಳಿಯೋದೇ ನಾಲ್ಕು ದಿನ

ಆಟಗಾರರನ್ನ ಡಿವೈಡ್ ಮಾಡಿದ್ರೆ ಕೊನೆಯ 2 ಪಂದ್ಯಗಳಿಗೆ ಸಮಸ್ಯೆ

ಏಕದಿನ ಪಂದ್ಯಗಳಿಗೆ ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸುವ ಸಮಸ್ಯೆ

2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಸರಣಿ ಗೆಲ್ಲೋದು ತುಂಬಾ ಮುಖ್ಯ

2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಹಿನ್ನೆ ಟೆಸ್ಟ್ ಸರಣಿಯೂ ಮುಖ್ಯ

ಈಗಾಗ್ಲೇ ಪ್ರಾಕ್ಟೀಸ್ ಇಲ್ಲದೆ ಸಾಕಷ್ಟು ಪಂದ್ಯಗಳಲ್ಲಿ ಮುಗ್ಗರಿಸಿರುವ ಭಾರತ

ಐರ್ಲೆಂಡ್, ಇಂಗ್ಲೆಂಡ್ ಹಾಗೂ ಜಪಾನ್ ವಿರುದ್ಧದ ಪಂದ್ಯಗಳಲ್ಲಿ ಸ್ಟ್ರಗಲ್

ಹೀಗೆ ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಓವರ್ ಸೀಸ್ ಪಂದ್ಯಗಳು ಕಬ್ಬಿಣದ ಕಡಲೆಯಾಗುತ್ತಿವೆ. ಹೀಗಿರುವಾಗ ಕೇರ್​ಲೆಸ್ ಮಾಡಿದ್ರೆ ನ್ಯೂಜಿಲೆಂಡ್ ವಿರುದ್ಧದ ಮಲ್ಟಿ ಸಿರೀಸ್​ ಕೂಡ ಕೈಜಾರಬಹುದು. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಮತ್ತು ವಿಶ್ವಟೆಸ್ಟ್ ಚಾಂಪಿಯನ್ ಶಿಪ್​ನಲ್ಲೂ ಹೊಡೆತ ತಿನ್ನಬೇಕಾಗುತ್ತೆ.

Shantha Kumari

Leave a Reply

Your email address will not be published. Required fields are marked *