ಭಾರತೀಯ ಸೇನೆ ಬಲ ಹೆಚ್ಚಿಸಲಿದೆ ಅಪಾಚೆ ಹೆಲಿಕಾಪ್ಟರ್ – ವಿಶ್ವದ ಅತ್ಯಾಧುನಿಕ ಹೆಲಿಕಾಪ್ಟರ್ ಪಾಕ್‌ ಗಡಿಯಲ್ಲಿ ನಿಯೋಜನೆ!

ಭಾರತೀಯ ಸೇನೆ ಬಲ ಹೆಚ್ಚಿಸಲಿದೆ ಅಪಾಚೆ ಹೆಲಿಕಾಪ್ಟರ್ – ವಿಶ್ವದ ಅತ್ಯಾಧುನಿಕ ಹೆಲಿಕಾಪ್ಟರ್ ಪಾಕ್‌ ಗಡಿಯಲ್ಲಿ ನಿಯೋಜನೆ!

ಆಪರೇಷನ್‌ ಸಿಂಧೂರ್‌ ಬಳಿಕ ಭಾರತೀಯ ಸೇನೆ ಹೈ ಅಲರ್ಟ್‌ ಆಗಿದೆ. ಗಡಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗ್ತಿದೆ. ಇದೀಗ ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲು ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ ಸೇರ್ಪಡೆಗೊಳ್ಳುತ್ತಿದೆ.

ಇದನ್ನೂ ಓದಿ:‌ RCB ವೇಗಿ ಯಶ್ ದಯಾಳ್‌ಗೆ ಕೋರ್ಟ್ ರಿಲೀಫ್ – ಬಂಧನಕ್ಕೆ ಹೈಕೋರ್ಟ್ ತಡೆ

ಹೌದು ಬಹುನಿರೀಕ್ಷಿತ ಅಪಾಚೆ ಹೆಲಿಕಾಪ್ಟರ್‌ ಅಮೆರಿಕದಿಂದ ಭಾರತಕ್ಕೆ ತರಲು ದಿನಾಂಕ ನಿಗದಿಯಾಗಿದೆ. ಅಪಾಚೆ ಹೆಲಿಕಾಪ್ಟರ್‌ ಜುಲೈ 21ರಂದು ಭಾರತೀಯ ವಾಯಪಡೆಗೆ ಸೇರ್ಪಡೆಯಾಗಲಿದೆ ಎಂದು ವರದಿಯಾಗಿದೆ.

AH-64E ಗಳ ಸುಧಾರಿತ ದಾಳಿ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯ ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಇಳಿಯಲಿವೆ.  ಟ್ಯಾಂಕ್ಸ್ ಇನ್ ದಿ ಏರ್ ಎಂದೂ ಕರೆಯಲ್ಪಡುವ ಈ ಅಡ್ವಾನ್ಸ್‌ಡ್ ಅಟ್ಯಾಕ್ ಹೆಲಿಕಾಪ್ಟರ್‌ಗಳು ಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಅತ್ಯಾಧುನಿಕ ಹೆಲಿಕಾಪ್ಟರ್‌ ಈ ಹೆಲಿಕಾಪ್ಟರ್‌ಗಳನ್ನು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗುವುದು ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

Shwetha M