ಭಾರತ ಅತೀ ಹೆಚ್ಚು ಸುಂಕ ವಿಧಿಸುತ್ತೆ.. ಈ ಕ್ರಮವನ್ನ ನಾನು ಒಪ್ಪಲ್ಲವೆಂದ ಟ್ರಂಪ್

ನಮಗೆ ಭಾರತದೊಂದಿಗೆ ‘ಉತ್ತಮ ಬಾಂಧವ್ಯ’ ಇದೆ, ಆದರೆ, ಆ ದೇಶದೊಂದಿಗೆ ಅವರಿಗೆ ಇರುವ ‘ಏಕೈಕ ಸಮಸ್ಯೆ’ ಎಂದರೆ ‘ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿರುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಟ್ರಂಪ್ ಅವರು ಭಾರತದೊಂದಿಗಿನ ಅಮೆರಿಕದ ಸಂಬಂಧದ ಕುರಿತು ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಜೊತೆಗಿನ ಇತ್ತೀಚಿನ ಭೇಟಿ ಉಲ್ಲೇಖಿಸಿ ಮಾತನಾಡಿರುವ ಅವರು, ನನಗೆ ಭಾರತದೊಂದಿಗೆ ಉತ್ತಮ ಬಾಂಧವ್ಯವಿದೆ, ಆದರೆ, ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿರುವುದು ನನಗಿರುವ ಸಮಸ್ಯೆಯಾಗಿದೆ ಎಂದು ಹೇಳಿದರು.
ಭಾರತ ಗಣನೀಯವಾಗಿ ಸುಂಕ ತಗ್ಗಿಸಲಿದೆ ಎಂದು ಭಾವಿಸುತ್ತೇನೆ. ಆದರೆ, ಏಪ್ರಿಲ್ 2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸುವಷ್ಟೇ ಸುಂಕವನ್ನು ನಾವೂ ವಿಧಿಸಲಿದ್ದೇವೆ ಎಂದು ತಿಳಿಸಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್-ಆರ್ಥಿಕ ಕಾರಿಡಾರ್ ಕುರಿತು ಮಾತನಾಡಿ, ವ್ಯಾಪಾರ-ವಹಿವಾಟಿನಲ್ಲಿ ನಮಗೆ ಹಾನಿ ಮಾಡಲು ಬಯಸುವ ಇತರ ದೇಶಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಪ್ರಬಲ ರಾಷ್ಟ್ರಗಳ ಗುಂಪು ಇದಾಗಿದೆ ಎಂದು ಹೇಳಿದರು.
ಸ್ನೇಹ ರಾಷ್ಟ್ರಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ನಮಗೆ ಇಷ್ಟವಿಲ್ಲ. ಆದರೆ, ಉತ್ತಮ ಗೆಳೆಯನಾದರೂ ಭಾರತದ ಸುಂಕದ ಕ್ರಮ ಒಪ್ಪುವಂತದ್ದಲ್ಲ. ಕೆಲವು ಸಂದರ್ಭಗಳಲ್ಲಿ ನಮಗೆ ಸ್ನೇಹಪರವಾಗಿರದವರು ಸ್ನೇಹಪರವಾಗಿರಬೇಕಾದ ಯುರೋಪಿಯನ್ ಒಕ್ಕೂಟದಂತೆ ನಮ್ಮನ್ನು ವ್ಯಾಪಾರದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಭಾರತ ಮತ್ತು ಇತರೆ ಎಲ್ಲಾ ರಾಷ್ಟ್ರಗಳು ನಮ್ಮನ್ನು ಮಿತ್ರ ರಾಷ್ಟ್ರವೆಂದು ಬಯಸುತ್ತಾರೆ. ನಾನೂ ಇತರರಿರೂ ಅದೇ ರೀತಿ ಹೇಳಬಲ್ಲೆ. ಆದರೆ, ವಿಚಾರದಲ್ಲಿ ಭಾರತವನ್ನು ಒಪ್ಪಲ್ಲ. ಏ.2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸಲಿರುವ ಸುಂಕಕ್ಕೆ ಅನುಗುಣವಾಗಿ ಅಮೆರಿಕಾ ಭಾರತದ ಉತ್ಪನ್ನಗಳಿಗೂ ಸುಂಕ ವಿಧಿಸುತ್ತದೆ ಎಂದು ಪುನರುಚ್ಛರಿಸಿದ್ದಾರೆ.