ಇಂಡಿಯಾ To ಭಾರತ್ – ದೇಶದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದೇಕೆ?

ಇಂಡಿಯಾ To ಭಾರತ್ – ದೇಶದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದೇಕೆ?

ದೇಶದ ಹೆಸರೇ ಬದಲಾಗಿಬಿಡುತ್ತಾ? ಇಂಥದ್ದೊಂದು ಪ್ರಶ್ನೆ ಈಗ 140 ಕೋಟಿ ಭಾರತೀಯರನ್ನ ಕೂಡ ಕಾಡುತ್ತಿದೆ. ಅದಕ್ಕೆ ಕಾರಣ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖವಾಗಿರುವ ಒಂದು ಪದ. ಸೆಪ್ಟೆಂಬರ್ 9ರಿಂದ ನಡೆಯಲಿರುವ ಜಿ20 ಶೃಂಗಸಭೆಗೆ ಕೇಂದ್ರ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಆಹ್ವಾನಿಸಿದೆ. ಈ ಆಹ್ವಾನ ಪತ್ರಿಕೆಯಲ್ಲಿ ದಿ ಪ್ರೆಸಿಡೆಂಟ್ ಆಫ್ ಭಾರತ್ ಅಂತಾ ಉಲ್ಲೇಖಿಸಲಾಗಿದ್ದು, ಈಗ ಇಡೀ ದೇಶದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ.

ಇದೇ ಮೊದಲ ಬಾರಿಗೆ ಸರ್ಕಾರ ಅಧಿಕೃತವಾಗಿ ಇಂಡಿಯಾದ ಬದಲು ಭಾರತ ಅಂತಾ ಉಲ್ಲೇಖಿಸಿದೆ. ಈ ಮೂಲಕ ದೇಶದ ಹೆಸರನ್ನ ಇಂಡಿಯಾ ಬದಲು ಅಧಿಕೃತವಾಗಿ ಭಾರತ ಅಂತಾ ಮಾತ್ರ ಬಳಕೆ ಮಾಡಲು ಮೋದಿ ಸರ್ಕಾರ ನಿರ್ಧರಿಸಿದಂತಿದೆ. ಜಿ-20 ಶೃಂಗಸಭೆಯಲ್ಲಿ ವಿದೇಶಿ ಗಣ್ಯರಿಗೆ ನೀಡಲಾಗುವ ಬುಕ್​ಲೆಟ್​ನಲ್ಲಿ ಕೂಡ ಭಾರತ್ ಅಂತಾನೆ ಉಲ್ಲೇಖಿಸಲಾಗಿದೆ. ಈ ಮೂಲಕ ಈ ಬಾರಿಯ ಜಿ20 ಶೃಂಗಸಭೆಯಲ್ಲಿ ರಿಪಬ್ಲಿಕ್ ಆಫ್ ಭಾರತ ಅನ್ನೋ ಪದವನ್ನೇ ಹೈಲೈಟ್​​ ಮಾಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಚಂದ್ರನಲ್ಲಿ ಭೂಮಿ ಖರೀದಿಗೆ ಫುಲ್‌ ಡಿಮ್ಯಾಂಡ್‌! – 2 ಎಕರೆ ಜಮೀನು ಖರೀದಿಸಿ ಇಬ್ಬರು ಹೆಣ್ಣುಮಕ್ಕಳ ಹೆಸರಿಗೆ ನೋಂದಾಯಿಸಿದ ಎನ್‌ಆರ್‌ಐ

ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಮತ್ತು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಭಾರತ ಪದ ಬಳಕೆಯನ್ನ ಸ್ವಾಗತಿಸಿದ್ದು, ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ ಜೆರ್ಸಿಯಲ್ಲೂ ಭಾರತ್​ ಪದವನ್ನ ಬಳಸುವಂತೆ ಒತ್ತಾಯಿಸಿದ್ದಾರೆ. ಆದ್ರೆ, ಈ ಭಾರತ್ ಪದ ಬಳಕೆ ಈಗ ಮಹಾಮೈತ್ರಿ ನಾಯಕರನ್ನ ರೊಚ್ಚಿಗೆಬ್ಬಿಸಿದೆ. ನಮ್ಮ ಮೈತ್ರಿಗೆ ಇಂಡಿಯಾ ಅಂತಾ ಹೆಸರಿಟ್ಟಿರೋದು ಈಗ ಪ್ರಧಾನಿ ಮೋದಿಯ ನಿದ್ದೆಗೆಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ನಮ್ಮನ್ನ ಸೋಲಿಸುತ್ತೆ ಅನ್ನೋ ಭಯ ಶುರುವಾಗಿದೆ. ಹೀಗಾಗಿ ಭಾರತ್ ಅನ್ನೋ ಪದ ಈಗ ಬಿಜೆಪಿಗೆ ನೆನಪಾಗಿದೆ ಅಂತಾ ಕಾಂಗ್ರೆಸ್ ಸೇರಿದಂತೆ ಮಹಾಮೈತ್ರಿ ನಾಯಕರು ಜರಿದಿದ್ದಾರೆ.

ಒಂದು ವೇಳೆ ನಮ್ಮ ಮೈತ್ರಿಗೆ ಭಾರತ್ ಅಂತಾ ಹೆಸರಿಟ್ರೆ ಆಗ ಬಿಜೆಪಿ ದೇಶದ ಹೆಸರನ್ನ ಮತ್ತೆ ಇಂಡಿಯಾ ಬದಲಾಯಿಸುತ್ತಾ ಅಂತಾ ದೆಹಲಿ ಸಿಎಂ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಇನ್ನು ಭಾರತ್ ಅನ್ನೋ ಹೆಸರನ್ನ ಬಳಕೆ ಮಾಡಲು ಆರ್​ಎಸ್​ಎಸ್​ ಮೋದಿ ಸರ್ಕಾರಕ್ಕೆ ಸಲಹೆ ನೀಡಿದೆ. ಮೋಹನ್ ಭಾಗವತ್​ರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತಾ ಕಾಂಗ್ರೆಸ್ ಆರೋಪಿಸಿದೆ. ಹೀಗಾಗಿ ಭಾರತ ವಿಚಾರದಲ್ಲಿ ಈಗ ಇಂಡಿಯಾ ಮತ್ತು ಎನ್​ಡಿಎ ನಾಯಕರ ಮಧ್ಯೆ ಹೊಸ ಸಮರ ಶುರುವಾಗಿದ್ದು, ಈ ನೇಮ್​ ಕಾಲಿಂಗ್ ಪಾಲಿಟಿಕ್ಸ್ ಮುಂದೆ ಯಾವ ಹಂತ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

suddiyaana