ಭಾರತ ಸೇನೆಗೆ ಗೇಮ್ ಚೇಂಜರ್ ಎಂಟ್ರಿ! ಫಿರಂಗಿ ಶಕ್ತಿಗೆ ಆನೆ ಬಲ..
7000 ಕೋಟಿ, ಏನಿದು ATAGS ಒಪ್ಪಂದ?

ಭಾರತ ಸೇನೆಗೆ ಗೇಮ್ ಚೇಂಜರ್ ಎಂಟ್ರಿ! ಫಿರಂಗಿ ಶಕ್ತಿಗೆ ಆನೆ ಬಲ..7000 ಕೋಟಿ, ಏನಿದು ATAGS ಒಪ್ಪಂದ?

ದೇಶಿಯವಾಗಿ ತಯಾರಿಸಿರೋ  7,000 ಕೋಟಿ ರೂ. ಮೌಲ್ಯದ ಆರ್ಟಿ ಬಂದೂಕುಗಳನ್ನು ಮುಂದಿನ ವಾರ ಭಾರತೀಯ ಸೇನೆಗೆ ಸೇರಲಿದೆ.  ಗಡಿ ರಕ್ಷಣೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮೋದಿ ಸಂಪುಟ ಸ್ಥಳೀಯ ATAGS ಒಪ್ಪಂದಕ್ಕೆ ಅನುಮೋದನೆ ನೀಡಿದೆ. 327 ಟೋವಿಂಗ್ ಟ್ರಕ್‌ಗಳನ್ನು ಒಳಗೊಂಡಿರುವ ATAGS  ಒಪ್ಪಂದವನ್ನು ಅಂಗೀಕರಿಸಲಾಗಿದೆ.  ಮುಂದಿನ ವಾರ  DRDOನ  ಅಭಿವೃದ್ಧಿ ಪಾಲುದಾರರಾದ ಕಲ್ಯಾಣಿ ಗ್ರೂಪ್‌ನ ಭಾರತ್ ಫೋರ್ಜ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಎಂಬ 2 ಖಾಸಗಿ ಭಾರತೀಯ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಒಟ್ಟು 307 ಹೊವಿಟ್ಜರ್‌ಗಳು ಮತ್ತು 327 ಟೋವಿಂಗ್ ವಾಹನಗಳನ್ನು ಒಳಗೊಂಡಿರುವ ಒಪ್ಪಂದದ ಶೇ. 60ರಷ್ಟು ಕಡಿಮೆ ಬಿಡ್ಡರ್ ಆಗಿ ಹೊರಹೊಮ್ಮಿದ ಭಾರತ್ ಫೋರ್ಜ್‌ಗೆ ಮತ್ತು ಶೇ. 40ರಷ್ಟು ಟಾಟಾಗಳಿಗೆ ಹೋಗುತ್ತದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ 155 ಎಂಎಂ ಆರ್ಟಿಲರಿ ಗನ್ ಆಗಿರುವ ATAGS ತನ್ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉನ್ನತ ಫೈರ್‌ಪವರ್‌ನೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಜ್ಜಾಗಿದೆ.

ಎಟಿಎಜಿಎಸ್ ಅಂದರೆ ಏನು?

ಎಟಿಎಜಿಎಸ್ ಅಂದರೆ .. ಅಡ್ವಾನ್ಸ್ಡ್‌ ಟೋವ್ಡ್‌ ಆರ್ಟಿಲರಿ ಗನ್‌ ಸಿಸ್ಟಮ್‌. ಅಂದರೆ, ಸಾಗಿಸಬಲ್ಲ ಸುಧಾರಿತ ಆರ್ಟಿಲರಿ ಗನ್‌ ವ್ಯವಸ್ಥೆ. ಇದನ್ನು ನಿರ್ಮಾಣ ಮಾಡಿದ್ದು DRDO ಇದರ ವಿಶೇಷವೇನೆಂದರೆ, ಇದು ಉಡಾಯಿಸುವ ಗುಂಡು ಅತ್ಯಂತ ದೂರದವರೆಗೆ ಹೋಗಿ ಮುಟ್ಟುತ್ತದೆ. ವಿಶ್ವದಲ್ಲಿಯೇ ಇಷ್ಟು ದೂರದವರೆಗೆ ಗುಂಡನ್ನು ಉಡಾಯಿಸಬಲ್ಲ ಮತ್ಯಾವುದೇ ಹೋವಿಟ್ಜರ್‌ ಗನ್‌ಗಳಿಲ್ಲ.  ಇದು ಟ್ರಕ್‌ನಿಂದ ಎಳೆವ ಟೋವ್ಡ್‌ ಗನ್ ಆಗಿದೆ. ಹಾಗಿದ್ದರೂ ಶೆಲ್ ಅನ್ನು ಹಾರಿಸಿದ ನಂತರ, ಅದು ಬೋಫೋರ್ಸ್‌ನಂತೆ ಮುಂದೆ ಸ್ವಲ್ಪ ದೂರ ಹೋಗುತ್ತದೆ. ಶೆಲ್‌ ಹಾಕಿದ ಬಳಿಕ, ಅಕ್ಕಪಕ್ಕ ಇದ್ದ ಸೈನಿಕರು ದೂರ ಓಡಬೇಕು. ಈ ಬಂದೂಕಿನ ಕ್ಯಾಲಿಬರ್ 155 ಎಂಎಂ. ಅಂದರೆ ಈ ಆಧುನಿಕ ಫಿರಂಗಿಯಿಂದ 155 ಎಂಎಂ ಶೆಲ್‌ಗಳನ್ನು ಹಾರಿಸಬಹುದು. ATAGS ಅನ್ನು ಹೊವಿಟ್ಜರ್ ಎಂದೂ ಕರೆಯುತ್ತಾರೆ.

 ಮೇಕ್‌ ಇನ್‌ ಇಂಡಿಯಾದ ಪ್ರಮುಖ ಭಾಗ

ಎಟಿಎGಎಸ್ ಅನ್ನು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಮುಖ ಭಾಗವಾಗಿದೆ. ಭಾರತದಲ್ಲಿ ಆಂತರಿಕವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಉತ್ಪಾದನೆಯೊಂದಿಗೆ ರಕ್ಷಣಾ ವಲಯದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಸರ್ಕಾರದ ಪ್ರೋತ್ಸಾಹದ ಭಾಗವಾಗಿ ATAGS ಅಭಿವೃದ್ಧಿಯಾಗಿದೆ.

ಭಾರತೀಯ ಫಿರಂಗಿದಳದಲ್ಲಿ ಗೇಮ್-ಚೇಂಜರ್:

ಡಿಆರ್‌ಡಿಓ ಅಭಿವೃದ್ಧಿ ಮಾಡಿರುವ ಮೇಡ್‌ ಇನ್‌ ಇಂಡಿಯಾ ಹೋವಿಟ್ಜರ್‌ ಗನ್ಸ್‌ ವಿಶೇಷ ಏಕೆಂದರೆ ಈ ಎಟಿಎಜಿಎಸ್ ಹಾರಿಸುವ ಮದ್ದುಗುಂಡು 45 ಕಿಲೋಮೀಟರ್‌ ದೂರದವರೆಗೆ ಹೋಗಿ ಬೀಳುತ್ತದೆ. ವಿಶ್ವದ ಯಾವುದೇ ಎಟಿಎಜಿಎಸ್ ಗನ್‌ಗಳ ವ್ಯಾಪ್ತಿ ಇಷ್ಟು ದೂರವಿಲ್ಲ. ATAGS ಗಾಗಿ ಅಭಿವೃದ್ಧಿ ಪ್ರಕ್ರಿಯೆಯು 2013 ರಲ್ಲಿ ಪ್ರಾರಂಭವಾಯಿತು. ಇದು ಪ್ರಸ್ತುತ ಭಾರತೀಯ ಸೇನೆಯು ಬಳಸುತ್ತಿರುವ ಅದರ ವಿದೇಶಿ ಗನ್‌ಗಳನ್ನು ಇದು ಬದಲಾವಣೆ ಮಾಡಿದೆ

ಇಂಡಿಯಾ ಮೇಡ್ ATAGS 25 ಲೀಟರ್ಗಳಷ್ಟು ಹೆಚ್ಚಿದ ಚೇಂಬರ್ ಸಾಮರ್ಥ್ಯವನ್ನು ಹೊಂದಿದೆ.  ಇದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಗನ್ ಸಿಸ್ಟಮ್ಗಿಂತ ಹೆಚ್ಚಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ, 45 ಕಿಮೀ ವ್ಯಾಪ್ತಿಯನ್ನು ಹೊಂದಲು ವಿನ್ಯಾಸಗೊಳಿಸಲಾದ ಬಂದೂಕುಗಳು 48 ಕಿಮೀ ವ್ಯಾಪ್ತಿಯನ್ನು ಸಾಧಿಸಿವೆ. ATAGS 155mm/52 ಕ್ಯಾಲಿಬರ್ ಗನ್ ಆಗಿದ್ದು ಅದು ಶಕ್ತಿಯುತ ಆಯುಧವಾಗಿದೆ.  60 ಸೆಕೆಂಡುಗಳಲ್ಲಿ 5 ಸುತ್ತುಗಳು / 150 ಸೆಕೆಂಡುಗಳಲ್ಲಿ 10 ಸುತ್ತುಗಳು / 60 ನಿಮಿಷಗಳಲ್ಲಿ 60 ಸುತ್ತುಗಳನ್ನ ಹಾರಿಸಬಹುದು..ಇದು ಪಾಕ್ ಮತ್ತು ಭಾರತದ ಗಡಿ ಪ್ರದೇಶದಲ್ಲಿ ನಿಯೋಜನೆಗೊಳ್ಳಲಿದೆ.. ಇದ್ದಕ್ಕೆ ವಿದೇಶಗಳಲ್ಲೂ ಬೇಡಿಕೆಯಿದ್ದು, ಭಾರತದ ಸ್ವದೇಶಿ ಯುದ್ಧ ಉಪಕರಣಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ.

 

Kishor KV